ಸಜ್ಜನರ ಒಗ್ಗಟ್ಟಿಂದ ಉಗ್ರರ ಆಟ ನಡೆಯಲ್ಲ: ಪುತ್ತಿಗೆಶ್ರೀ

By Kannadaprabha NewsFirst Published Mar 20, 2023, 8:10 AM IST
Highlights

ಭಯೋತ್ಪಾದನೆಯಿಂದ ಜಗತ್ತು ಇಂದು ತೊಂದರೆಗೆ ಸಿಲುಕಿದೆ. 700 ಕೋಟಿ ಜನಸಂಖ್ಯೆಈ ಜಗತ್ತಿನಲ್ಲಿ ಭಯೋತ್ಪಾದಕರು ಲಕ್ಷದ ಲೆಕ್ಕದಲ್ಲಿದ್ದಾರೆ. ಬಹುಸಂಖ್ಯೆಯಲ್ಲಿರುವ ಶಿಷ್ಟರು ಒಂದಾದರೆ ಭಯೋತ್ಪಾದನೆ ನಡೆಯುವುದಿಲ್ಲ ಎಂದು ಉಡುಪಿ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.

ಬೆಂಗಳೂರು (ಮಾ.20) : ಭಯೋತ್ಪಾದನೆಯಿಂದ ಜಗತ್ತು ಇಂದು ತೊಂದರೆಗೆ ಸಿಲುಕಿದೆ. 700 ಕೋಟಿ ಜನಸಂಖ್ಯೆಈ ಜಗತ್ತಿನಲ್ಲಿ ಭಯೋತ್ಪಾದಕರು ಲಕ್ಷದ ಲೆಕ್ಕದಲ್ಲಿದ್ದಾರೆ. ಬಹುಸಂಖ್ಯೆಯಲ್ಲಿರುವ ಶಿಷ್ಟರು ಒಂದಾದರೆ ಭಯೋತ್ಪಾದನೆ ನಡೆಯುವುದಿಲ್ಲ ಎಂದು ಉಡುಪಿ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ(Sugunendra teertha swamiji) ಹೇಳಿದರು.

ಜಯನಗರದ ಶಾಲಿನಿ ಮೈದಾನ(Jayanagara shalini ground)ದಲ್ಲಿ ಭಾನುವಾರ ಚಿತ್ರ ನಿರ್ದೇಶಕಿ ಮತ್ತು ಸಮಾಜ ಸೇವಕಿ ರೂಪಾ ಅಯ್ಯರ್‌ ನೇತೃತ್ವದಲ್ಲಿ ಆಯೋಜಿಸಿದ್ದ ‘ಸಂತ ಸಮಾವೇಶ’ ಮತ್ತು ‘108 ಹೋಮ ಕುಂಡಗಳ ಸಾಮೂಹಿಕ ಹವನ ಮಹಾ ಚಂಡಿಕಾ ಯಾಗ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

 

ಒಮಾನ್‌ನಲ್ಲಿ ಪುತ್ತಿಗೆ ಶ್ರೀಗಳ ಧರ್ಮಸಂವಾದ

ದುಷ್ಟರು ಸಮಾವೇಶ ಮಾಡುತ್ತಾರೆ. ಆದರೆ ಸಜ್ಜನರು ಒಂದೆಡೆ ಸೇರುತ್ತಿಲ್ಲ. ನಾವು ಒಂದೆಡೆ ಸೇರಿ ಸಮಾಲೋಚನೆ ಮಾಡಿದರೆ ದುಷ್ಟರ ಆಟ ನಡೆಯುವುದಿಲ್ಲ. ಆಳುವವರ ದೃಷ್ಟಿಕೋನ ಸಜ್ಜನರ ರಕ್ಷಣೆ-ದುಷ್ಟರ ದಮನ ಆಗಿರಬೇಕು ಎಂದರು.

ಭಗವದ್ಗೀತೆ ಮತೀಯ ಗ್ರಂಥವಲ್ಲ:

ಜಗತ್ತಿನಲ್ಲಿ ಎಲ್ಲದಕ್ಕೂ ಆಕಾರ ಗ್ರಂಥ ಭಗವದ್ಗೀತೆಯಾಗಿದೆ. ಭಗವದ್ಗೀತೆಯಿಂದ ಜಗತ್ತನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಬಹುದು. ಶಾಸಕರು, ಸಚಿವರು ಭಗವದ್ಗೀತೆಯ ವಿಷಯಗಳನ್ನು ಅನುಸರಿಸಿದರೆ ಜಗತ್ತು ಸರಿಯಾಗಿ ಮುನ್ನಡೆಯುತ್ತದೆ. ಸಿಂಗಾಪುರದಲ್ಲಿ ಭಗವದ್ಗೀತೆಗೆ ಬಹಳಷ್ಟುಮಹತ್ವ ನೀಡುತ್ತಾರೆ. ಏಕೆಂದರೆ ‘ಭಗವದ್ಗೀತೆ ಹಿಂದೂಗಳ ಮತೀಯ ಗ್ರಂಥವಲ್ಲ. ಜಗತ್ತಿನ ಆಕರ ಗ್ರಂಥ’ ಎಂದು ಅವರು ನಂಬಿದ್ದಾರೆ ಎಂದು ಉದಾಹರಿಸಿದರು.

ರೂಪಾ ಅಯ್ಯರ್‌(Rupa Iyer) ಅವರು ಯಾಗ ನೆರವೇರಿಸಿ ಸಂತರ ಸಮಾವೇಶ ಆಯೋಜಿಸಿರುವುದು ಜಗತ್ತಿನ ಕಲ್ಯಾಣಕ್ಕಾಗಿ. ಜಗತ್ತು ಮುನ್ನಡೆಯುತ್ತಿರುವುದು ಯಜ್ಞದ ಮೂಲಕ. ಯಜ್ಞದಿಂದಾಗಿ ದೇವತೆಗಳು ಸಂತುಷ್ಟರಾಗಿ ಮಳೆ-ಬೆಳೆ ಆಗುತ್ತದೆ. ಜನರು ಸಂತೋಷದಿಂದ ಇರುತ್ತಾರೆ. ಯಾವುದೇ ಕಾನೂನು ಕಟ್ಟಳೆಗಳಿಂದ ಜನರನ್ನು ಸಂತುಷ್ಟರನ್ನಾಗಿ ಮಾಡಲು ಸಾಧ್ಯವಿಲ್ಲ. ಇಂತಹ ಒಳ್ಳೆಯ ಕಾರ್ಯದಿಂದ ಆರಂಭ ಮಾಡುತ್ತಿರುವ ರೂಪ ಅಯ್ಯರ್‌ ಅವರ ರಾಜಕೀಯ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು.

ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಸಂತ ಎಲ್ಲರ ಸ್ವಂತ’ ಆದಾಗ ಭಾರತಕ್ಕೆ ಉಜ್ವಲ ಭವಿಷ್ಯವಿದೆ. ಮತಾಂತರ ಮಾಡಲಾಗುತ್ತಿದೆ ಎಂದು ಹೇಳುವುದಕ್ಕಿಂತ ‘ಅಪ್ಪಿಕೊಳ್ಳುವ-ಒಪ್ಪಿಕೊಳ್ಳುವ’ ಸಂಸ್ಕೃತಿ ನಮ್ಮ ಎಲ್ಲ ಸಂತರಿಗೆ ಬರಬೇಕು. ಎಲ್ಲಿಗೆ ಹೋಗಲು ಸಾಧ್ಯವಿಲ್ಲವೋ ಅಲ್ಲಿಗೆ ಹೋಗಿ ಅಪ್ಪಿದರೆ ಯಾರೂ ಮತಾಂತರ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಓಂಕಾರೇಶ್ವರ ಮಠದ ಮಧುಸೂದಾನಂದಪುರಿ ಸ್ವಾಮೀಜಿ, ಬಿಜಿಎಸ್‌ ಮತ್ತು ಎಸ್‌ಜೆಬಿ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿದೇಶಕ ಡಾ.ಪ್ರಕಾಶನಾಥ ಸ್ವಾಮೀಜಿ, ದೆಹಲಿಯ ಗುರುವನ ¶ೌಂಡೇಷನ್‌ ಅಧ್ಯಕ್ಷ ಹರೀಶ್‌ ಮಧ್ಯಸ್ಥ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾ ಅಧ್ಯಕ್ಷ ಅಶೋಕ್‌ ಹಾರನಹಳ್ಳಿ, ಸಂಸ್ಕಾರ ಭಾರತೀ ಅಧ್ಯಕ್ಷರೂ ಆಗಿರುವ ನಟ ಸುಚೇಂದ್ರ ಪ್ರಸಾದ್‌ ಮತ್ತಿತರರು ಹಾಜರಿದ್ದರು.

Udupi: ಪುತ್ತಿಗೆ ಶ್ರೀ ಕೈಯಲ್ಲಿ ಇಸ್ಲಾಂ ಪುಸ್ತಕ! ಈ ವಿವಾದದ ರಹಸ್ಯವೇನು ಗೊತ್ತಾ?

ದೇವಿಯ ಪ್ರೇರಣೆಯಿಂದ ಯಾಗ: ರೂಪಾ ಅಯ್ಯರ್‌

ಪ್ರಸ್ತಾವಿಕವಾಗಿ ಮಾತನಾಡಿದ ರೂಪ ಅಯ್ಯರ್‌, 108 ಯಾಗ ಮಾಡಿಸಬೇಕು ಎಂದು ದೇವಿಯ ಪ್ರೇರಣೆ ಆಯಿತು. ಶ್ರೀರಂಗಪಟ್ಟಣದ ಭಾನುಪ್ರಕಾಶ ಗುರೂಜಿಯವರ ನೇತೃತ್ವದಲ್ಲಿ ವೆಂಕಟೇಶ ಆಚಾರ್ಯರ ಸಾನಿಧ್ಯದಲ್ಲಿ 70 ಋುತ್ವಿಜರಿಂದ 108 ಮಹಾ ಚಂಡಿಕಾ ಯಾಗ ಆಯೋಜಿಸಲಾಯಿತು. ಸಂತರು ಆಗಮಿಸಿ ಆಶೀರ್ವಾದ ನೀಡಿದ್ದಕ್ಕೆ ಜನ್ಮ ಸಾರ್ಥಕವಾಯಿತು ಎಂದು ಸಂತಸ ವ್ಯಕ್ತಪಡಿಸಿದರು.

ಯಾರಿಗೆ ಧರ್ಮ ಪ್ರಜ್ಞೆ ಇರುತ್ತದೆಯೋ ಅವರು ಮಾತ್ರ ಧರ್ಮ ಉಳಿಸಲು ಸಾಧ್ಯ. ನಿತ್ಯವೂ ವಿಷ್ಣು ಸಹಸ್ರನಾಮ, ರಂಗೋಲಿ, ಹಬ್ಬ ಹರಿದಿನಗಳ ಆಚರಣೆ ಸೇರಿದಂತೆ ಧರ್ಮದ ಉಳಿವಿಗೆ ಸ್ತ್ರೀಯರು ಬಹಳಷ್ಟುಶ್ರಮಿಸುತ್ತಿದ್ದಾರೆ. ರೂಪ ಅಯ್ಯರ್‌ ಮುಂದೆ ರಾಜ್ಯಕ್ಕೆ ದೊಡ್ಡ ಆಸ್ತಿ ಆಗಲಿದ್ದಾರೆ.

-ವಿನಯ್‌ ಗುರೂಜಿ

click me!