‘ನಮ್ಮ ಯಾತ್ರಿ’ ಆ್ಯಪ್‌ಗೆ ಭಾರಿ ಸ್ಪಂದನೆ: 4300 ಚಾಲಕರು ನೋಂದಣಿ!

By Kannadaprabha NewsFirst Published Mar 20, 2023, 7:51 AM IST
Highlights

ಯಾವುದೇ ಮಧ್ಯವರ್ತಿಗಳಿಲ್ಲದೇ, ಚಾಲಕರು ಮತ್ತು ಗ್ರಾಹಕರ ನಡುವೆ ಕಾರ್ಯನಿರ್ವಹಿಸುವ ‘ನಮ್ಮ ಯಾತ್ರಿ’ ಆಟೋ ಬುಕ್ಕಿಂಗ್‌ ಆ್ಯಪ್‌ ಪ್ರಾರಂಭವಾದ ಕೆಲವೇ ತಿಂಗಳಲ್ಲಿ 43 ಸಾವಿರ ಚಾಲಕರು ಮತ್ತು 3.7 ಲಕ್ಷ ಗ್ರಾಹಕರನ್ನು ಹೊಂದಿದ್ದು ಯಶಸ್ವಿಯಾಗಿದೆ ಎಂದು ಜಸ್‌ಪೇ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಮಲ್‌ ಕುಮಾರ್‌ ತಿಳಿಸಿದರು.

ಬೆಂಗಳೂರು (ಮಾ.20) : ಯಾವುದೇ ಮಧ್ಯವರ್ತಿಗಳಿಲ್ಲದೇ, ಚಾಲಕರು ಮತ್ತು ಗ್ರಾಹಕರ ನಡುವೆ ಕಾರ್ಯನಿರ್ವಹಿಸುವ ‘ನಮ್ಮ ಯಾತ್ರಿ’ ಆಟೋ ಬುಕ್ಕಿಂಗ್‌ ಆ್ಯಪ್‌ ಪ್ರಾರಂಭವಾದ ಕೆಲವೇ ತಿಂಗಳಲ್ಲಿ 43 ಸಾವಿರ ಚಾಲಕರು ಮತ್ತು 3.7 ಲಕ್ಷ ಗ್ರಾಹಕರನ್ನು ಹೊಂದಿದ್ದು ಯಶಸ್ವಿಯಾಗಿದೆ ಎಂದು ಜಸ್‌ಪೇ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಮಲ್‌ ಕುಮಾರ್‌(Vimal kumar) ತಿಳಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚಾಲಕರು ತಾವೇ ‘ನಮ್ಮ ಯಾತ್ರಿ’ ಆ್ಯಪ್‌(Namma yatri app) ಬಗ್ಗೆ ವ್ಯಾಪಕವಾಗಿ ಗ್ರಾಹಕರಿಗೆ ಪ್ರಚಾರ ಮಾಡುತ್ತಿದ್ದಾರೆ. ಸಾರ್ವಜನಿಕರು ಸುಲಭವಾಗಿ ಈ ಆ್ಯಪ್‌ ಬಳಸಬಹುದಾಗಿದ್ದು, ಪ್ಲೇಸ್ಟೋರ್‌ನಲ್ಲಿ ಲಭ್ಯವಿದೆ. ಇದರಲ್ಲಿ ಪ್ರಯಾಣಿಕರು ಸಂಚರಿಸುವ ದೂರ, ಪ್ರಯಾಣ ದರ ಹಾಗೂ ಸಮಯ ಎಲ್ಲವೂ ಮುಕ್ತವಾಗಿ ತಿಳಿಯಲಿದ್ದು, ಪ್ರಯಾಣಿಕರಿಗೆ ತುಂಬಾ ಸುರಕ್ಷಿತವಾಗಿದೆ ಎಂದು ಹೇಳಿದರು.

 

ಬೈಕ್‌ಟ್ಯಾಕ್ಸಿ ನಿಷೇಧಕ್ಕಾಗಿ ಬೆಂಗ್ಳೂರಲ್ಲಿ ಆಟೋ ಸೇವೆ ಬಂದ್‌..!

ಆಟೋರಿಕ್ಷಾ ಚಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ರುದ್ರಮೂರ್ತಿ ಮಾತನಾಡಿ, ‘ನಮ್ಮ ಯಾತ್ರಿ’ ಆ್ಯಪ್‌ ನಗರದ ಪ್ರಯಾಣಿಕರಿಗೆ ವರವಾಗಲಿದ್ದು, ಮಧ್ಯವರ್ತಿಗಳಿಲ್ಲದೇ ಜನರ ವಿಶ್ವಾಸವನ್ನು ಗಳಿಸಲಿದೆ. ನಾಗರಿಕರ ಸುರಕ್ಷತೆಗೆ ಆದ್ಯತೆ, ಉತ್ತಮ ಸೇವೆಯ ಜತೆಗೆ ಕೈಗೆಟಕುವ ಬೆಲೆಯಲ್ಲಿ ಸೇವೆ ಸಲ್ಲಿಸಲು ಬದ್ದರಾಗಿದ್ದೇವೆ ಎಂದರು.

ಡಾ ಪ್ರಮೋದ್‌ ವರ್ಮಾ(Dr Pramod Varma) ಮಾತನಾಡಿ, ಯುಪಿಐ(UPI) ನಂತಹ ಡಿಜಿಟಲ್‌ ಆವಿಷ್ಕಾರಗಳು ಮತ್ತು ಮುಕ್ತ ಉಪಕ್ರಮಗಳು ಉತ್ತಮ ಬದಲಾವಣೆ ತರಬಲ್ಲವು. ಆ್ಯಪ್‌ ಮೂಲಕ ಆಟೋ ಚಾಲಕರು ಮತ್ತು ಗ್ರಾಹಕರ ಬದುಕನ್ನು ಸುಧಾರಿಸಲು ಸಾಧ್ಯವಾಗುತ್ತದೆ. ನಗರದಲ್ಲಿ ವಾಹನಗಳ ಸಂಚಾರ ವ್ಯವಸ್ಥೆಯನ್ನು ನಮ್ಮ ಯಾತ್ರಿ ಆ್ಯಪ್‌ ಮೂಲಕ ಸುಲಭವಾಗಿ ನಿರ್ವಹಿಸಬಹುದು. ಒಂದು ವೇಳೆ ನಮ್ಮ ಯಾತ್ರಿ ಯಶಸ್ವಿಯಾದರೆ, ಬೆಂಗಳೂರು ಮಹಾನಗರದಂತೆ ಇತರೆ ಎಲ್ಲಾ ನಗರಗಳಿಗೆ ಇದೇ ರೀತಿಯ ಸೌಲಭ್ಯ ಅಳವಡಿಸಿಕೊಳ್ಳಲು ಮಾದರಿಯಾಗಲಿದೆ ಎಂದು ಹೇಳಿದರು.

ಬೈಕ್‌ ಟ್ಯಾಕ್ಸಿ ವಿರುದ್ಧ ಇಂದು ಆಟೋ ಬಂದ್‌: ಮಧ್ಯರಾತ್ರಿವರೆಗೂ ರಸ್ತೆಗಿಳಿಯಲ್ಲ ಆಟೋ

click me!