ಉರಿಗೌಡ, ನಂಜೇಗೌಡ ಸಿನಿಮಾ ವಿವಾದ: ಮುನಿರತ್ನಗೆ ಚುಂಚಶ್ರೀ ಬುಲಾವ್‌ !

By Kannadaprabha News  |  First Published Mar 20, 2023, 7:35 AM IST

ರಾಜ್ಯ ರಾಜಕಾರಣದಲ್ಲಿ ಕುತೂಹಲ ಮೂಡಿಸಿರುವ ಉರಿಗೌಡ-ನಂಜೇಗೌಡ ಕುರಿತ ಚಲನಚಿತ್ರ ಮಾಡುವ ವಿಚಾರ ಇದೀಗ ಒಕ್ಕಲಿಗ ಸಮುದಾಯದ ಮಠವಾದ ಆದಿಚುಂಚನಗಿರಿ ಮಠದ ಅಂಗಳ ತಲುಪಿದೆ.


ಬೆಂಗಳೂರು (ಮಾ.20) : ರಾಜ್ಯ ರಾಜಕಾರಣದಲ್ಲಿ ಕುತೂಹಲ ಮೂಡಿಸಿರುವ ಉರಿಗೌಡ-ನಂಜೇಗೌಡ ಕುರಿತ ಚಲನಚಿತ್ರ ಮಾಡುವ ವಿಚಾರ ಇದೀಗ ಒಕ್ಕಲಿಗ ಸಮುದಾಯದ ಮಠವಾದ ಆದಿಚುಂಚನಗಿರಿ ಮಠದ ಅಂಗಳ ತಲುಪಿದೆ.

ಉದ್ದೇಶಿತ ಚಲನಚಿತ್ರ ಕುರಿತು ಮಾತುಕತೆ ನಡೆಸಲು ಆದಿಚುಂಚನಗಿರಿ ಮಠಾಧೀಶ ಡಾ.ನಿರ್ಮಲಾನಂದನಾಥ ಸ್ವಾಮೀಜಿ(Dr nirmalananda swamiji) ಅವರು ಚಿತ್ರದ ನಿರ್ಮಾಪಕರೂ ಆಗಿರುವ ತೋಟಗಾರಿಕೆ ಸಚಿವ ಮುನಿರತ್ನ(Muniratna) ಅವರನ್ನು ಸೋಮವಾರ ಕರೆದಿದ್ದಾರೆ. ಈ ಭೇಟಿಯ ನಂತರವೇ ಚಿತ್ರ ನಿರ್ಮಾಣದ ಭವಿಷ್ಯ ನಿರ್ಧಾರವಾಗುವ ಸಾಧ್ಯತೆ ಇದೆ.

Tap to resize

Latest Videos

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಮುನಿರತ್ನ, ಈಗಾಗಲೇ ಸಚಿವರಾದ ಆರ್‌.ಅಶೋಕ,(R Ashok) ಡಾ.ಸಿ.ಎನ್‌.ಅಶ್ವತ್ಥನಾರಾಯಣ(Dr CN Ashwath Narayana) ಅವರು ಉರಿಗೌಡ-ನಂಜೇಗೌಡ(Urigowda-Nanjegowda)ರ ಇತಿಹಾಸ ಬಗ್ಗೆ ಮಾತನಾಡಿದ್ದಾರೆ. ನಾನು ಒಬ್ಬ ನಿರ್ಮಾಪಕನಾಗಿ ಅವರ ಚಿತ್ರ ಮಾಡುವ ಉದ್ದೇಶ ಹೊಂದಿದ್ದೀನಿ. ಇದಕ್ಕೆ ಸಂಬಂಧಿಸಿದಂತೆ ಆದಿಚುಂಚನಗಿರಿ ಶ್ರೀಗಳು ಚರ್ಚೆ ಮಾಡಲು ತಮ್ಮನ್ನು ಕರೆದಿದ್ದಾರೆ. ನಾಳೆ (ಸೋಮವಾರ) ಬೆಳಗ್ಗೆ ಶ್ರೀಗಳನ್ನು ಭೇಟಿ ಮಾಡುತ್ತೇನೆ ಎಂದು ತಿಳಿಸಿದರು.

ಇತಿಹಾಸದ ಬಗ್ಗೆ ಮಾತನಾಡುವವರು ಅದಕ್ಕೆ ಜಾತಿ ಬಣ್ಣ ಕೊಡಬಾರದು. ಸಿನಿಮಾ ಈಗ ಚರ್ಚೆಯಲ್ಲಿದೆ. ಶ್ರೀಗಳನ್ನು ಭೇಟಿ ಮಾಡುವವರೆಗೂ ಚಿತ್ರದ ಬಗ್ಗೆ ನಾನು ಹೆಚ್ಚಿಗೆ ಮಾತನಾಡುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

 

‘ಉರಿಗೌಡ, ನಂಜೇಗೌಡ’ ಸಿನಿಮಾಕ್ಕೆ ಕುಮಾರಸ್ವಾಮಿ ಕೆಂಡ..!

click me!