ವಾಟ್ಸಾಪ್ ಗ್ರೂಪ್ ಅಡ್ಮಿನ್ ಗಳೇ ಎಚ್ಚರ. ನಿಮ್ಮ ಗ್ರೂಪ್ ನಲ್ಲಿ ನಡೆಯುವ ಯಾವುದೇ ರೀತಿಯ ಚಟುವಟಿಕೆಗಳಿಗೂ ಕೂಡ ನೀವೇ ಜವಾಬ್ದಾರರಾಗಿರುತ್ತೀರಿ.
ಬೆಂಗಳೂರು : ವಾಟ್ಸಾಪ್ ಗ್ರೂಪ್‌ವೊಂದರಲ್ಲಿ ‘ಪಾಕಿಸ್ತಾನ ಜಿಂದಾಬಾದ್’ ಎಂಬ ಘೋಷ ವಾಕ್ಯದ ಪೋಸ್ಟ್ ಹಾಕಿದ್ದ ಗ್ರೂಪಿನ ಸದಸ್ಯರಿಬ್ಬರಿಗೆ ಜಾಮೀನು ಮತ್ತು ಅಡ್ಮಿನ್‌ಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಲು ಧಾರವಾಡ ಹೈಕೋರ್ಟ್ ಪೀಠ ನಿರಾಕರಿಸಿದೆ.
ಪ್ರಕರಣದಲ್ಲಿ ಬಂಧನದ ಭೀತಿ ಎದುರಿಸುತ್ತಿರುವ ವಾಟ್ಸಾಪ್ ಗ್ರೂಪ್‌ವೊಂದರ ಅಡ್ಮಿನ್ ಮುಸ್ತಫಾ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ಮತ್ತು ಬಂಧನಕ್ಕೆ ಗುರಿ ಯಾಗಿರುವ ಶಬ್ಬೀರ್ ಸಾಬ್ ಹಾಗೂ ಚಾಂದ್ ಪಾಷಾ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಧಾರವಾಡ ಹೈಕೋರ್ಟ್‌ನ ಎರಡು ಪ್ರತ್ಯೇಕ ನ್ಯಾಯಪೀಠಗಳು ತಿರಸ್ಕರಿಸಿವೆ.
undefined
ಪಾಕ್ ಜಿಂದಾಬಾದ್ ಘೋಷಣೆ: ಕೊಪ್ಪಳ ಜಿಲ್ಲೆ ಕನಕಗಿರಿಯ ವಾಟ್ಸಾಪ್ ಗ್ರೂಪ್ ವೊಂದರಲ್ಲಿ ಮುಸ್ತಫಾ ಎಂಬಾತ ಅಡ್ಮಿನ್ ಆಗಿದ್ದರೆ, ಶಬ್ಬೀರ್ ಸಾಬ್ ಮತ್ತು ಚಾಂದ್ ಪಾಷಾ ಸದಸ್ಯರಾಗಿದ್ದರು. ಸದಸ್ಯರಿಬ್ಬರು ತಾವು ಜೊತೆಗಿರುವ ಫೋಟೋ ವೊಂದರ ಮೇಲೆ ‘ಪಾಕಿಸ್ತಾನ ಜಿಂದಾಬಾದ್’ಎಂಬ ಘೋಷ ವಾಕ್ಯ ಬರೆದು 2018ರ ಆ.14ರಂದು ವಾಟ್ಸಾಪ್ ಗ್ರೂಪ್‌ನಲ್ಲಿ ಪೋಸ್ಟ್ ಮಾಡಿದ್ದರು.
ಈ ಕುರಿತು ಹನುಮಗೌಡ ಸಕ್ರಗೌಡ ನಾಯಕ್ ಎಂಬುವರು ಗ್ರೂಪ್ ಅಡ್ಮಿನ್ ಆದ ಮುಸ್ತಾಫಾ ಹಾಗೂ ಇತರರ ವಿರುದ್ಧ ಕನಕಗಿರಿ ಪೊಲೀಸ್ ಠಾಣೆಯಲ್ಲಿ ದೇಶದ್ರೋಹ ಆರೋಪದಡಿಯಲ್ಲಿ ದೂರು ದಾಖಲಿಸಿದ್ದರು.