ಆಲ್ದೂರು ವ್ಯಾಪ್ತಿಯಲ್ಲಿ ಮೆಸ್ಕಾಂ ಅಧಿಕಾರಿಗಳ ನಿರ್ಲಕ್ಷಕ್ಕೆ 2 ಆನೆಗಳು ಬಲಿಯಾಗಿರುವುದು ವನ್ಯಪ್ರಾಣಿಪ್ರೀಯರ ಆಕ್ರೋಶ ಕಾರಣವಾಗಿದೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು : ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ ಒಂದು ವರ್ಷದ ಅವಧಿ ಒಳಗೆ ಎರಡು ಕಾಡಾನೆಗಳು ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿವೆ. ಮೊನ್ನೆ ಚಿಕ್ಕಮಗಳೂರು ತಾಲೂಕಿನ ತುಡಕೂರು ಬಳಿ ಪ್ಲಾಂಟರ್ಸ್ ಕೋರ್ಟ್ ಸಮೀಪ ಕಾಫಿ ತೋಟದಲ್ಲಿ ವಿದ್ಯುತ್ ಸ್ಪರ್ಷದಿಂದ ಬೀಟಮ್ಮ ಗುಂಪಿನ ಸಲಗವೊಂದು ಸಾವಿಗೀಡಾದ ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಪರಿಸರ, ವನ್ಯಪ್ರಾಣಿ ಪ್ರಿಯರು ಈ ಸಾವಿನ ನೇರ ಹೊಣೆ ಹೊರುವವರು ಯಾರು ಎಂದು ಪ್ರಶ್ನಿಸಿದ್ದಾರೆ.ಮನುಷ್ಯ ಆನೆ ತುಳಿದು ಸತ್ತಾಗ ಆಕ್ರೋಶ, ಪರಿಹಾರಕ್ಕೆ ಹೋರಾಟ, ಆನೆಗಳನ್ನು ಹಿಮ್ಮೆಟ್ಟಬೇಕೆಂಬ ಒತ್ತಾಯಗಳು ಕೇಳಿ ಬರುತ್ತವೆ. ಆದರೆ ವಿದ್ಯುತ್ ಸ್ಪರ್ಷದಂತಹ ಅನಾಹುತದಲ್ಲಿ ಜೀವ ಕಳೆದುಕೊಳ್ಳುವ ಆನೆಗಳ ಸಾವಿಗೆ ಯಾರು ಜವಾಬ್ದಾರರು, ಆನೆ ಸಾವಿಗೆ ನ್ಯಾಯ ಕೊಡಿಸುವವರು ಯಾರು ಎಂದು ಕೇಳಲಾರಂಭಿಸಿದ್ದಾರೆ.
undefined
ಚಿಕ್ಕಮಗಳೂರು: ಕೆರೆ ಒತ್ತುವರಿ ತೆರವಿನ ಆತಂಕ, ಕಾಫಿನಾಡಿನಲ್ಲಿ ಮೊದಲ ಬಲಿ!
ಮೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ 2 ಆನೆ ಸಾವು :
ಆಲ್ದೂರು ವ್ಯಾಪ್ತಿಯಲ್ಲಿ ಮೆಸ್ಕಾಂ ಅಧಿಕಾರಿಗಳ ನಿರ್ಲಕ್ಷಕ್ಕೆ 2 ಆನೆಗಳು ಬಲಿಯಾಗಿವೆ. ಇವರ ನಿರ್ಲಕ್ಷಕ್ಕೆ ಕಠಿಣ ಕ್ರಮ ಜರುಗಿಸಬೇಕು. ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಿಂದ 4 ಆನೆಗಳು ಮಾನವನ ಅತಿರೇಕದ ಬುದ್ದಿವಂತಿಕೆಗೆ ಬಲಿಯಾಗಿರುವುದು ದುರದೃಷ್ಟಕರ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗಿದೆ.ಕಳೆದ ವರ್ಷ ನಮ್ಮ ಮೇಕನಗದ್ದೆಯಲ್ಲಿ ಒಂಟಿಕೊಂಬಿನ ಬಲಿಷ್ಠ ಆನೆ ಸಾವಿಗೆ ನಿಖರ ಕಾರಣ ಇಂದಿಗೂ ತಿಳಿದುಬಂದಿಲ್ಲ ಎಂದು ಕೆಲವರು ಆರೋಪಿಸಿದ್ದಾರೆ.ಕಾಡನೆ ಮತ್ತು ಸಾಕಾನೆಗಳ ಸಾವಿನ ಸುದ್ದಿಯಿಂದ ಮನಸ್ಸು ಸದಾ ಭಾರವಾಗುತ್ತಿದೆ. ಅರಣ್ಯ ಅಧಿಕಾರಿಗಳಿಗೆ ಕಳೆದ ವರ್ಷವೇ ಅತೀ ಹೆಚ್ಚು ಜವಾಬ್ದಾರಿ ವಹಿಸುವಂತೆ ಮನವರಿಕೆ ಮಾಡಲಾಗಿತ್ತು ಆದರೂ ಇಂಥ ಘಟನೆಗಳು ಮರುಕಳಿಸುವುದು ತುಂಬಾ ದುಃಖಕಾರವಾಗಿದೆ ಎಂದಿದ್ದಾರೆ.ಮೆಸ್ಕಾಂ ಇಲಾಖೆಯ ಅಧಿಕಾರಿಗಳು ಪ್ರತಿ 20 ಮೀಟರ್ ದೂರದಲ್ಲಿ ಕಂಬ ಹಾಕಬೇಕು, ಆದರೆ ಆಲ್ದೂರು ವಲಯದ ವ್ಯಾಪ್ತಿಯಲ್ಲಿ ಎಲ್ಲವೂ ಹಳೆಯ ಕಂಬಗಳು ಇವೆ. ಅದನ್ನು ಬದಲಾವಣೆ ಮಾಡಬೇಕು. ಜಗ್ಗಿದ ವೈರ್ ಮತ್ತು ಹಳೆಯ ಕಂಬಗಳ ಬದಲಾವಣೆ ಮಾಡಿಲ್ಲ. ಈ ಸಂಭಂದ ಮೆಸ್ಕಾಂ ಹಿರಿಯ ಅಧಿಕಾರಿಗಳ ಮೇಲೆ ಪ್ರಕರಣ ದಾಖಲು ಮಾಡಬೇಕು. ಈ ವಿಚಾರದಲ್ಲಿ ಸುಪ್ರೀಂ ಕೋರ್ಟಿನ ನಿರ್ದೇಶನವನ್ನೂ ಮೆಸ್ಕಾಂ ಇಲಾಖೆ ಪಾಲಿಸುತ್ತಿಲ್ಲ ಎನ್ನುವ ಆಕ್ರೋಶ ವ್ಯಕ್ತವಾಗಿದೆ.
ಧಾರಾಕಾರ ಮಳೆಗೆ ನಷ್ಟವಾಯ್ತು ಕಾಫಿ ಬೆಳೆ! ಸಂಕಷ್ಟದಲ್ಲಿ ರೈತರು!
ಹಿರಿಯ ಅಧಿಕಾರಿಗಳ ವಿರುದ್ದ ಆಕ್ರೋಶ
ತನ್ನ ಗುಂಪಿನ ಒಬ್ಬ ಸದಸ್ಯನನ್ನು ಕಳೆದುಕೊಂಡ ಬೀಟಮ್ಮ ಮೃತ ಆನೆಯನ್ನು ಬಿಟ್ಟು ಹೋಗಲಾರದೆ ಕೊಂಬಿನಿಂದ ತಿವಿದು ಎಬ್ಬಿಸಲು ಪಟ್ಟಿರುವ ಪಾಡು ಆ ಆನೆಯ ಕಳೆಬರಹ ನೋಡಿದರೆ ತಿಳಿಯುತ್ತದೆ. ಆಕಸ್ಮಾತ್ ವಿದ್ಯುತ್ ಸ್ಪರ್ಷಕ್ಕೆ ಮನುಷ್ಯರ್ಯಾರಾದರೂ ಬಲಿಯಾಗಿದ್ದರೆ ಪ್ರತಿಭಟನೆಗಳು ನಡೆಯುತ್ತಿದ್ದವು. ಇದೀಗ ತೀರಾ ಕೇಳ ಮಟ್ಟದಲ್ಲಿ ಹಾದು ಹೋಗಿದ್ದ ವಿದ್ಯುತ್ ತಂತಿ ತಗುಲಿ ಆನೆ ಸಾವಿಗೀಡಾಗಿದೆ. ಈ ಬಗ್ಗೆ ಸ್ಥಳೀಯ ರೈತರು, ಬೆಳೆಗಾರರು ನಿವಾಸಿಗಳು ಮೆಸ್ಕಾಂಗೆ ದೂರು ನೀಡಿದರೂ ಕ್ರಮ ಕೈಗೊಳ್ಳದ ಪರಿಣಾಮ ಆನೆಯೊಂದು ಜೀವ ಕಳೆದುಕೊಳ್ಳುವಂತಾಗಿದೆ ಎಂದು ದೂರಲಾಗಿದೆ.ಈ ಘಟನೆಯನ್ನು ಅರಣ್ಯ ಇಲಾಖೆ ಸಹ ಗಂಭೀರವಾಗಿ ಪರಿಗಣಿಸಿದಂತಿಲ್ಲ. ಕಾಡಾನೆಯೊಂದ ಮೃತಪಟ್ಟರೂ ಅದರ ಅಂತ್ಯಕ್ರಿಯೆ ಸಂದರ್ಭದಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ. ಕಳೇಬರವನ್ನು ಸುಡುವ ಸಂದರ್ಭದಲ್ಲಿ ಇಲಾಖೆಯ ಮಾರ್ಗಸೂಚಿಗಳನ್ನು ಪಾಲಿಸಲಾಗಿಲ್ಲ. ಇಷ್ಟೊಂದು ನಿರ್ಲಕ್ಷ್ಯ ವಹಿಸಿರುವುದು ಸರಿಯಲ್ಲ ಎನ್ನುವ ಅಸಮಾಧಾನ ಸಹ ವ್ಯಕ್ತವಾಗಿದೆ.