ಮದುವೆ ಮಂಟಪದಲ್ಲೇ ಮಂಗಳಮುಖಿಯರ ಗ್ಯಾಂಗ್ ವಾರ್! ಇವರಿಗೆ ಹೇಳೋರು ಕೇಳೋರು ಯಾರೂ ಇಲ್ವ?

By Ravi Janekal  |  First Published Nov 11, 2024, 7:00 PM IST

ಚಾಮರಾಜನಗರದ  ಕಲ್ಯಾಣ ಮಂಟಪ ಮಾಲೀಕರಿಗೆ ಈಗ ಹೊಸತೊಂದು ತಲೆ ನೋವು  ಶುರುವಾಗಿದೆ.  ಮದುವೆಗೆ  ಆಗಮಿಸುವ  ವಧು ವರರಿಗೆ  ಮತ್ತು  ಅವರ  ಸಂಬಂಧಿಕರಿಗೆ  ಈ   ಪಜೀತಿ ತಪ್ಪಿದಲ್ಲ ಹಾಗಿದ್ರೆ ಏನಪ್ಪ ಈ ಸಮಸ್ಯೆ ಅಂತೀರಾ ಸ್ಟೋರಿ ಓದಿ.


ಚಾಮರಾಜನಗರ (ನ.11) - ಚಾಮರಾಜನಗರದ  ಕಲ್ಯಾಣ ಮಂಟಪ ಮಾಲೀಕರಿಗೆ ಈಗ ಹೊಸತೊಂದು ತಲೆ ನೋವು  ಶುರುವಾಗಿದೆ.  ಮದುವೆಗೆ  ಆಗಮಿಸುವ  ವಧು ವರರಿಗೆ  ಮತ್ತು  ಅವರ  ಸಂಬಂಧಿಕರಿಗೆ  ಈ   ಪಜೀತಿ ತಪ್ಪಿದಲ್ಲ ಹಾಗಿದ್ರೆ ಏನಪ್ಪ ಈ ಸಮಸ್ಯೆ ಅಂತೀರಾ ಸ್ಟೋರಿ ಓದಿ.

ಅಬ್ಬಬ್ಬಾ ಅದೇನು ಆರ್ಭಟ ಅದೇನು ರೋಷಾವೇಶ! ಸೀರೆ, ನೈಟಿ ಎತ್ತಿ ಕಟ್ಟಿ ಒಬ್ಬರ ಮೇಲೊಬ್ಬರ ನಡುವೆ ಮಾರಾಮಾರಿ ಈ 51 ಸೆಕೆಂಡ್ ವಿಡಿಯೋನ ಯಾರೇ ನೋಡಿದ್ರೂ ಬೆಚ್ಚಿ ಬೀಳದೆ ಇರೋದಿಲ್ಲ ಹಾಗಂತ ಇದ್ಯಾವುದು ಹೆಂಗಳೆಯರ ಜಡೆ ಜಗಳ ಅಲ್ವೇ ಅಲ್ಲ, ಬದಲು ಮಂಗಳ ಮುಖಿಯರ ಗ್ಯಾಂಗ್ ವಾರ್ ಇದು! 

Latest Videos

undefined

ನಡು ರಸ್ತೆಯಲ್ಲೇ ಮಂಗಳಮುಖಿಯರು ಬೀದಿ ಕಾಳಗ ನಡೆಸಿದ್ದಾರೆ. ಹೌದು ನಿನ್ನೆ ರಾತ್ರಿ 9.30 ರ ವೇಳೆ ಚಾಮರಾಜನಗರ ಸತ್ತಿ ರಸ್ತೆಯಲ್ಲಿರುವ ಶ್ರೀ ಶಿವಕುಮಾರ ಭವನದ ಮುಂದೆ 30 ಕ್ಕೂ ಹೆಚ್ಚು ಮಂಗಳಮುಖಿಯರು ಪರಸ್ಪರ ಹೊಡೆದಾಡಿ ಕೊಂಡು ಸಾರ್ವಜನಿಕರು ಬೆಚ್ಚಿ ಬೀಳುವಂತೆ ಮಾಡಿದ್ದಾರೆ.

ವಿವಾಹಿತ ಪುರುಷರೇ ಗಮನಿಸಿ, ಪತ್ನಿಗೆ ಕಿರಿಕಿರಿ ಉಂಟುಮಾಡುವ ಈ 5 ತಪ್ಪುಗಳನ್ನು ಮಾಡಲೇಬೇಡಿ!

ಆಗಿದ್ದೇನು?

 ಚಾಮರಾಜನಗರದ ಮಂಗಳಮುಖಿಯರು ಮೈಸೂರಿಗೆ ತೆರಳಿ ಕಲ್ಯಾಣ ಮಂಟಪ ಪ್ರವೇಶಿಸಿ ಹಣ ಪಡೆದು ಬಂದಿದ್ದಾರೆ. ಈ ವಿಚಾರ ಮೈಸೂರಿನ ಮಂಗಳಮುಖಿಯರಿಗೆ ತಿಳಿದಿದೆ ಈ ಹಿನ್ನಲೆ ರೊಚ್ಚಿಗೆದ್ದ ಮೈಸೂರಿನ ಮಂಗಳಮುಖಿಯರ ಗುಂಪು ನಿನ್ನೆ ರಾತ್ರಿ ಕಂಠಪೂರ್ತಿ ಕುಡ್ಕೊಂಡು ಚಾಮರಾಜನಗರಕ್ಕೆ ಬಂದು ಚಾಮರಾಜನಗರದ ಮಂಗಳಮುಖಿಯರ ಜತೆ ಬೀದಿ ಕಾಳಗ ನಡೆಸಿದ್ದಾರೆ. ಇಷ್ಟು ಸಾಲದೆಂದು ಬಟ್ಟೆ ಬಿಚ್ಚಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹೈ ಡ್ರಾಮ ಸೃಷ್ಠಿ ಮಾಡಿದ್ದಾರೆ. ಇದರಿಂದ ಮದುವೆಗೆ ಆಗಮಿಸಿದ ಮಹಿಳೆಯರು ಮುಜುಗರಕ್ಕೆ ಒಳಗಾಗಬೇಕಾಯಿತು. ಇನ್ನು ಗಲಾಟೆಯ ದೃಶ್ಯವನ್ನ ಮೊಬೈಲ್ ನಲ್ಲಿ ಸೆರೆ ಹಿಡಿದವರ ಬೆನ್ನಟ್ಟಿ ವಿಡಿಯೋವನ್ನು ಸಹ ಮಂಗಳಮುಖಿಯರು ಡಿಲೀಟ್ ಮಾಡಿಸಿದ್ದಾರೆ.

'ಮಿಸ್ಟರ್ ಸಿದ್ದರಾಮಯ್ಯ ರೈತರ ಭೂಮಿ ವಾಪಸ್ ಕೊಟ್ರೆ ಸರಿ ಇಲ್ಲದಿದ್ರೆ.., ಸಿಎಂಗೆ ಡೆಡ್‌ಲೈನ್ ಕೊಟ್ಟ ಕೋಡಿಹಳ್ಳಿ ಚಂದ್ರಶೇಖರ್!

ಯಾವುದೇ ಮದ್ವೆ ಇದ್ರು ನೇರವಾಗಿ ಮಂಗಳಮುಖಿಯರು ಚೌಟ್ರಿಗೆ ನುಗ್ಗಿ ಹಣ ಪೀಕ್ತಾಯಿದ್ದಾರೆ. ಇಂತಿಷ್ಟೇ ಹಣ ಕೊಡ್ಬೇಕೆಂದು ಧಮ್ಕಿ ಹಾಕ್ತಾಯಿದ್ದು ಇದರಿಂದ ರೋಸಿ ಹೋಗಿರುವ ಚೌಟರಿ ಮಾಲೀಕರು ಮಂಗಳಮುಖಿಯರ ಪ್ರವೇಶಕ್ಕೆ ನಿಷೇಧ ಎಂಬ ಬೋರ್ಡನ್ನ ಸಹ ಹಾಕಿಸಲು ನಿರ್ಧಾರ ಮಾಡಿದ್ದಾರೆ. ಗಲಾಟೆ ನಡೆದು ರಂಪ ರಾಮಾಯಣ ಆದ್ರು ಪೊಲೀಸರು ಯಾವುದೇ ಕೇಸ್ ಹಾಕದೆ ಬಿಟ್ಟು ಕಳಿಸಿದ್ದು ಪೊಲೀಸರ ವಿರುದ್ಧ ಸಾರ್ವಜನಿಕರು ಅಸಮಾಧಾನ, ಆಕ್ರೋಶ ವ್ಯಕ್ತಪಡಿಸಿದ್ದಾರೆ.

click me!