
ಮಂಡ್ಯ (ಜು.30): ಒಂದೆಡೆ ಕಾವೇರಿ ನೀರು ನಿರ್ವಹಣಾ ಸಮಿತಿ ತಮಿಳುನಾಡಿಗೆ ನಿತ್ಯ 4 ಟಿಎಂಸಿ ನೀರು ಹರಿಸುವಂತೆ ಸೂಚಿಸಿದೆ. ಆದರೆ ಜಿಲ್ಲೆಯ ಕೃಷ್ಣರಾಜಸಾಗರ ಜಲಾಶಯದಲ್ಲಿ ಇರುವುದು ಕೇವಲ 8 ಟಿಎಂಸಿ ನೀರು ಮಾತ್ರ. ಕಾವೇರಿ ನೀರು ನಿರ್ವಹಣಾ ಸಮಿತಿ ಶಿಫಾರಸ್ಸಿನಂತೆ ತಮಿಳುನಾಡಿಗೆ 15 ದಿನ ನೀರು ಹರಿಸಿದರೆ 4 ಟಿಎಂಸಿಯಷ್ಟು ನೀರು ಖಾಲಿ ಆಗಲಿದೆ. ಆಗ ಉಳಿಯೋದು ಕೇವಲ 4 ಟಿಎಂಸಿ ನೀರು ಮಾತ್ರ.
ಇದನ್ನೂ ಓದಿ:ಕಾವೇರಿ ನೀರು ವಿವಾದ:ಕರ್ನಾಟಕ ಬಂದ್ ಆಗುತ್ತಾ? ನಾಳೆ ಹೈವೋಲ್ಟೇಜ್ ಮೀಟಿಂಗ್, ಕನ್ನಡ ಸಂಘಟನೆಗಳಿಂದ ಬಿಗ್ ಅಪ್ಡೇಟ್!
ಈ ಆದೇಶ ಪಾಲನೆಯಾಗುವ ಸನ್ನಿವೇಶ ಸೃಷ್ಟಿಯಾದರೆ ಕುಡಿಯುವ ನೀರಿಗೂ ಹಾಹಾಕಾರ ಎದುರಾಗುವ ಆತಂಕ ಸೃಷ್ಟಿಯಾಗಿದೆ. ಪ್ರಸ್ತುತ ಕೃಷ್ಣರಾಜಸಾಗರ ಜಲಾಶಯದಲ್ಲಿ 91.94 ಅಡಿ ನೀರು ದಾಖಲಾಗಿದೆ. ಜಲಾಶಯಕ್ಕೆ ಕೇವಲ 2842 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, 1747 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಅಣೆಕಟ್ಟೆಯಲ್ಲಿರುವ ನೀರಿನಲ್ಲಿ ಬಳಕೆಗೆ ಸಿಗುವುದು ಕೇವಲ 8.747 ಟಿಎಂಸಿ ಅಡಿ ನೀರು ಮಾತ್ರ ಎನ್ನಲಾಗಿದೆ.
ಕಬಿನಿ 75% 2284 2275.79
ಹೇಮಾವತಿ 65% 2922 2906.60
ತುಂಗಭದ್ರಾ 33% 1633 1608.70
ಸೂಪಾ(ಮೀ.) 36% 564 536.10
ಕೆಆರ್‌ಎಸ್ 35% 124.80 91.94
ಘಟಪ್ರಭಾ 62% 2175 2147.67
ಲಿಂಗನಮಕ್ಕಿ 30% 1819.12 1774.15
ಭದ್ರಾ 53% 2158 2126.41
ಹಾರಂಗಿ 96% 2859 2857.88
ಆಲಮಟ್ಟಿ(ಮೀ.) 96% 519.60 519.29
ನಾರಾಯಣಪುರ(ಮೀ.) 94% 492.25 491.81
ಮಲಪ್ರಭಾ 40% 2079.50 2058.30
ಮಡಿಕೇರಿ: ಕೊಡಗಿನ ಹಾರಂಗಿ ಜಲಾಶಯದಿಂದ ನೀರು ಬಿಡುಗಡೆ ಮಾಡಲಾಗಿದೆ. ಕುಶಾಲನಗರ ಸಮೀಪದ ಹಾರಂಗಿ ಜಲಾಶಯದಲ್ಲಿ 8.5 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಈಗ 8.1 ಟಿಎಂಸಿ ನೀರು ಸಂಗ್ರಹವಾಗಿದೆ. 2859 ಅಡಿ ಗರಿಷ್ಠ ಮಟ್ಟದ ಹಾರಂಗಿ ಜಲಾಶಯದಲ್ಲಿ ಸದ್ಯ 2858 ಅಡಿ ನೀರು ಸಂಗ್ರಹವಾಗಿದ್ದು, 1825 ಕ್ಯೂಸೆಕ್ ನೀರನ್ನು ಜಲಾಶಯದಿಂದ ಬಿಡುಗಡೆ ಮಾಡಲಾಗುತ್ತಿದೆ. ಜಲಾಶಯ ಭರ್ತಿಯಾಗಿದ್ದರೂ ಕೊಡಗಿನಲ್ಲೇ ತೀವ್ರ ಮಳೆ ಕೊರತೆ ಕಂಡು ಬಂದಿದೆ. ಕಳೆದ ವರ್ಷ ಈ ಅವಧಿಗೆ ಜಿಲ್ಲೆಯಲ್ಲಿ 2099 ಮಿಲಿ ಮೀಟರ್ ಮಳೆ ಆಗಿತ್ತು. ಆದರೆ ಈ ವರ್ಷ ಕೇವಲ 871 ಮಿಲಿ ಮೀಟರ್ ಮಳೆಯಾಗಿದೆ. ಅಂದರೆ 1150ಕ್ಕೂ ಹೆಚ್ಚು ಮಿಲಿ ಮೀಟರ್ ಮಳೆ ಕೊರತೆಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ