ರಾಜಧಾನಿ ಸೇರಿ ವಿವಿಧೆಡೆ 3 ದಿನ ಭಾರಿ ಮಳೆ : ಅಲರ್ಟ್

By Suvarna NewsFirst Published Nov 11, 2021, 3:06 PM IST
Highlights
  • ರಾಜಧಾನಿ ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇನ್ನು 3 ದಿನ ಭಾರಿ ಮಳೆ
  • 3 ದಿನ ಭಾರಿ ಮಳೆ - ಹವಾಮಾನ ಇಲಾಖೆ ಮುನ್ನೆಚ್ಚರಿಕೆ 

ಬೆಂಗಳೂರು (ನ.11):  ರಾಜಧಾನಿ ಬೆಂಗಳೂರು (Bengaluru) ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇನ್ನು 3 ದಿನ ಭಾರಿ ಮಳೆಯಾಗಲಿದೆ (Heavy rain) ಎಂದು ಹವಾಮಾನ ಇಲಾಖೆ (weather Department) ಮುನ್ನೆಚ್ಚರಿಕೆ ನೀಡಿದೆ. 

ಕಳೆದ ಕೆಲದಿನಗಳಿಂದ ಬೆಂಗಳೂರಿನಲ್ಲಿ ಮಳೆಯಾಗುತ್ತಿದ್ದು ಇದೀಗ ಬಂಗಾಳ ಕೊಲ್ಲಿಯಲ್ಲಿ (Bea of Bengal) ಪ್ರಭಲ ವಾಯು ಭಾರ ಕುಸಿತದಿಂದ ವಿವಿಧ ಜಿಲ್ಲೆಗಳಲ್ಲಿ  ಮತ್ತೆ ಮಳೆಯಾಗಲಿದೆ ಎಂದು  ರಾಜ್ಯ ಹವಾಮಾನ ಇಲಾಖೆಯಿಂದ (KSNDMC) ಮುನ್ಸೂಚನೆ ದೊರಕಿದೆ. 

ಅಲ್ಲದೇ ಹಲವು ಪ್ರದೇಶಗಳಲ್ಲಿ ಅತಿ ಹೆಚ್ಚಿನ ಮಳೆ ಸುರಿಯುವ ಸಾಧ್ಯತೆ ಇದ್ದು, ಬೆಂಗಳೂರಿಗೆ ಆರೆಂಜ್ ಅಲರ್ಟ್ (orange Alert) ಘೋಷಣೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಭಾರಿ ಮಳೆ ಉಂಟಾಗುವ ನಿರೀಕ್ಷೆ ಇದ್ದು, ಇಂದು ಮತ್ತು ನಾಳೆ ರಾಜಧಾನಿ ಬೆಂಗಳೂರಿನ ಜನತೆ ಮುನ್ನೆಚ್ಚರಿಕೆ ವಹಿಸಬೇಕಿದೆ. 

ಕೃಷಿ ಮೇಳಕ್ಕೆ ಅಡ್ಡಿ : ಬೆಂಗಳೂರಿನ ಜಿಕೆವಿಕೆ ಕ್ಯಾಂಪಸ್‌ನಲ್ಲಿ ಕೃಷಿ ಮೇಳ ನಡೆಯುತ್ತಿದ್ದು ಇದಕ್ಕೆ ವರುಣನ ಅಡ್ಡಿಯಾಗಿದೆ. 

ಜಿಕೆವಿಕೆ  (GKVK)ಕ್ಯಾಂಪಸ್ ನಲ್ಲಿ( campus) ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಗ್ರಾಹಕರಿಲ್ಲದೆ ಸ್ಟಾಲ್ ಗಳು ಖಾಲಿ ಖಾಲಿಯಾಗಿವೆ. ಒಟ್ಟು 550 ಸ್ಟಾಲ್ ಗಳಿಗೆ ಅವಕಾಶ ನೀಡಲಾಗಿತ್ತು. ಮೊದಲ ದಿನವೇ 20 ಸಾವಿರ ಜನರು ಭೇಟಿ ಕೊಡುವ ನಿರೀಕ್ಷೆ ಇತ್ತು. ಮಳೆ ಎಫೆಕ್ಟ್ ನಿಂದ ಕೃಷಿ ಮೇಳಕ್ಕೆ ಹೊಡೆತ ಬಿದ್ದಂತಾಗಿದೆ. 

6 ಜಿಲ್ಲೆಗಳಿಗೆ ಮಳೆ 

ಬೆಂಗಳೂರು: ರಾಜ್ಯದ ದಕ್ಷಿಣ ಒಳನಾಡಿನ ಹೆಚ್ಚಿನ ಜಿಲ್ಲೆಗಳು, ಕರಾವಳಿ ಮತ್ತು ಉತ್ತರ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಇಂದಿನಿಂದ  ಮೂರು ದಿನಗಳ ಕಾಲ ಭರ್ಜರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ  (Indian Meteorological Department) ಮುನ್ಸೂಚನೆ ನೀಡಿದೆ. ಬಂಗಾಳ ಕೊಲ್ಲಿಯಲ್ಲಿ ವಾಯಭಾರ ಕುಸಿತ ಉಂಟಾಗಿದೆ. ಆಗ್ನೇಯ ಬಂಗಾಳ ಕೊಲ್ಲಿಯಲ್ಲಿನ ಮೇಲ್ಮೈ  ಸುಳಿಗಾಳಿ ಪ್ರಬಲ ವಾಯುಭಾರ ಕುಸಿತವಾಗಿ ರೂಪುಗೊಂಡಿದೆ.  ಇದು  ತಮಿಳುನಾಡು (tamilnadu) ಕರಾವಳಿಗೆ (Coastal) ಅಪ್ಪಳಿಸುವ ಸಂಭವ ಇದೆ. ಜತೆಗೆ ಮನ್ನಾರ್‌ ಕೊಲ್ಲಿಯಲ್ಲಿನ ಟ್ರಫ್‌ ಪ್ರಭಾವ ರಾಜ್ಯದ ಹವಾಮಾನದ ಮೇಲಾಗಲಿದೆ ಎಂದು ಹೇಳಿದೆ.

ನವೆಂಬರ್‌ 11 ಮತ್ತು 13ರಂದು ಬೆಂಗಳೂರು ನಗರ ಸೇರಿದಂತೆ ದಕ್ಷಿಣ ಒಳನಾಡಿನ ತುಮಕೂರು, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಕೊಡಗು, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ನೀಡಲಾಗಿದೆ. ನ.13ಕ್ಕೆ ದಾವಣಗೆರೆ, ಚಿತ್ರದುರ್ಗದಲ್ಲಿಯೂ ಭಾರಿ ಮಳೆಯಾಗಲಿದೆ.

ನ.12ರಂದು ಪಶ್ಚಿಮ ಘಟ್ಟದ ಜಿಲ್ಲೆಗಳಾದ ಕೊಡಗು, ಚಿಕ್ಕಮಗಳೂರು, ಬೆಳಗಾವಿ, ಚಾಮರಾಜನಗರ ಜಿಲ್ಲೆ ಮತ್ತು ಮೈಸೂರಿಗೆ ಯೆಲ್ಲೋ ಅಲರ್ಟ್‌ ನೀಡಲಾಗಿದೆ. ಉಳಿದಂತೆ ಕರಾವಳಿ ಮತ್ತು ಉತ್ತರ ಒಳನಾಡಿನ ಗದಗ, ಹಾವೇರಿ, ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಉಳಿದಂತೆ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

  • ರಾಜಧಾನಿಯಲ್ಲಿ ಇನ್ನೆರಡು ದಿನಗಳು ಮಳೆಯ ಕಾಟ
  • ರಾಜ್ಯ ಹವಾಮಾನ ಇಲಾಖೆಯಿಂದ ಮುನ್ಸೂಚನೆ
  • ಬಂಗಾಳ ಕೊಲ್ಲಿಯಲ್ಲಿ ಪ್ರಭಲ ವಾಯು ಭಾರ ಕುಸಿತ 
  • ಈ ಹಿನ್ನೆಲೆಯಲ್ಲಿ ಭಾರಿ ಮಳೆ ಉಂಟಾಗುವ ನಿರೀಕ್ಷೆ
  • ಇಂದು ಮತ್ತು ನಾಳೆ ರಾಜಧಾನಿ ಬೆಂಗಳೂರಿನಲ್ಲಿ ಭಾರಿ ಮಳೆ ಆಗಲಿದೆ 
  • ಬೆಂಗಳೂರಿಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ
  • ಜಿಕೆವಿಕೆ ಕ್ಯಾಂಪಸ್ ನಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆ
  • ಗ್ರಾಹಕರಿಲ್ಲದೆ ಸ್ಟಾಲ್ ಗಳು ಖಾಲಿ ಖಾಲಿ - ಒಟ್ಟು 550 ಸ್ಟಾಲ್ ಗಳಿಗೆ ಅವಕಾಶ ನೀಡಲಾಗಿತ್ತು
  • ಮೊದಲ ದಿನವೇ 20 ಸಾವಿರ ಜನರು ಭೇಟಿ ಕೊಡುವ ನಿರೀಕ್ಷೆ ಇತ್ತು - ಮಳೆ ಎಫೆಕ್ಟ್ ನಿಂದ ಕೃಷಿ ಮೇಳಕ್ಕೆ ಹೊಡೆತ
click me!