72 ತಾಸಲ್ಲಿ ಮನೆ ಬಾಗಿಲಿಗೆ ಪಿಂಚಣಿ ತಲುಪಿಸುವ ಬದಲಾವಣೆ ತಂದಿದ್ದೇವೆ: ಸಚಿವ ಅಶೋಕ್‌

By Govindaraj S  |  First Published Dec 18, 2022, 2:20 AM IST

ಜನರ ಕಲ್ಯಾಣಕ್ಕಾಗಿ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ. ಯೋಜನೆಗಳನ್ನು ಜನರಿಗೆ ತಲುಪಿಸುವ ಕಾರ್ಯ ಮಾಡುತ್ತಿದ್ದೇವೆ. 72 ಗಂಟೆಗಳಲ್ಲಿ ಫಲಾನುಭವಿ ಮನೆ ಬಾಗಿಲಿಗೆ ಪಿಂಚಣಿ ತಲುಪಿಸುವ ಬದಲಾವಣೆ ತಂದಿದ್ದೇವೆ ಎಂದು ಕಂದಾಯ ಸಚಿವ ಆರ್‌.ಅಶೋಕ ಹೇಳಿದರು. 


ಹಾವೇರಿ (ಡಿ.18): ಜನರ ಕಲ್ಯಾಣಕ್ಕಾಗಿ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ. ಯೋಜನೆಗಳನ್ನು ಜನರಿಗೆ ತಲುಪಿಸುವ ಕಾರ್ಯ ಮಾಡುತ್ತಿದ್ದೇವೆ. 72 ಗಂಟೆಗಳಲ್ಲಿ ಫಲಾನುಭವಿ ಮನೆ ಬಾಗಿಲಿಗೆ ಪಿಂಚಣಿ ತಲುಪಿಸುವ ಬದಲಾವಣೆ ತಂದಿದ್ದೇವೆ ಎಂದು ಕಂದಾಯ ಸಚಿವ ಆರ್‌.ಅಶೋಕ ಹೇಳಿದರು. ಶಿಗ್ಗಾಂವಿ ತಾಲೂಕು ಬಾಡ ಗ್ರಾಮದಲ್ಲಿ ‘ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬಾಡದಲ್ಲಿ 30 ಸಾವಿರಕ್ಕೂ ಅಧಿಕ ಫಲಾನುಭವಿಗಳಿಗೆ ವಿವಿಧ ಸೌಲಭ್ಯ ವಿತರಣೆ ಮಾಡುತ್ತಿದ್ದೇವೆ. ಇಷ್ಟೂಜನ ಜಿಲ್ಲಾಧಿಕಾರಿ ಕಚೇರಿಗೆ ಹೋದರೆ ಎಷ್ಟು ಶ್ರಮವಾಗುತ್ತದೆ ಎಂಬುದನ್ನು ಅರಿತು ಅಧಿಕಾರಿಗಳೇ ಜನರ ಬಳಿಗೆ ಬರುವ ಕಾರ್ಯಕ್ರಮ ನಡೆಸುತ್ತಿದ್ದೇವೆ. ಜನರ ಕಷ್ಟಜಿಲ್ಲಾಧಿಕಾರಿಗಳಿಗೆ ಗೊತ್ತಾಗಬೇಕು. 

ಅದಕ್ಕಾಗಿ ರಾಜ್ಯಾದ್ಯಂತ ‘ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’ ಕಾರ್ಯಕ್ರಮ ನಡೆಸಲಾಗುತ್ತಿದೆ. ಇದರಿಂದ ಸಮಸ್ಯೆಗೆ ಪರಿಹಾರ ಸಿಗುತ್ತಿದೆ. ಸರ್ಕಾರಕ್ಕೂ ಉತ್ತಮ ಹೆಸರು ಬಂದಿದೆ ಎಂದರು. ಬಡವನ ಕಷ್ಟನಮಗೆ ಗೊತ್ತಾಗಬೇಕು. ಆಗ ಮಾತ್ರ ಸಮಸ್ಯೆಗೆ ಪರಿಹಾರ ನೀಡಲು ಸಾಧ್ಯ. ಅದಕ್ಕಾಗಿ ನಾನು ಗ್ರಾಮ ವಾಸ್ತವ್ಯ ಮಾಡುತ್ತಿದ್ದೇನೆ. ಬಡವರ ಮನೆಯಲ್ಲಿ ಊಟ ಮಾಡುತ್ತಿದ್ದೇನೆ. ಎಲ್ಲ ಪರಿವರ್ತನೆ ತರುವಂತ ಪ್ರಯತ್ನವೇ ಗ್ರಾಮ ವಾಸ್ತವ್ಯ. ನಾನು ವಾಸ್ತವ್ಯ ಮಾ​ಡುವ ಶಾಲೆಯ ಮಕ್ಕಳಿಗೆ ಏನು ಸಮಸ್ಯೆ ಇದೆ ಎಂಬುದು ನನಗೆ ಗೊತ್ತಾಗಬೇಕು. ಅದಕ್ಕಾಗಿ ಶಾಲೆಯಲ್ಲಿ ಉಳಿಯುತ್ತಿದ್ದೇನೆ. ಗ್ರಾಮ ವಾಸ್ತವ್ಯ ಕಾರ್ಯಕ್ರಮ ಒಂದು ಪಾಠಶಾಲೆ. ಇಲ್ಲಿ ಕಲಿತದ್ದನ್ನು ಬದಲಾವಣೆಯಲ್ಲಿ ತರುತ್ತಿದ್ದೇನೆ ಎಂದು ಹೇಳಿದರು.

Tap to resize

Latest Videos

undefined

ಅರಣ್ಯ ನಿವಾಸಿಗಳ ಬೃಹತ್ ಹೋರಾಟ: ಸರ್ಕಾರಕ್ಕೆ ಎಚ್ಚರಿಕೆ

ಪ್ರವಾಹದಿಂದ ಹಾನಿಯಾದ ಬೆಳೆಗೆ 6,590 ಕೋಟಿ ರು.: ನಿಮ್ಮ ಸಾಧನೆಯೇನು ಎಂದು ವಿರೋಧ ಪಕ್ಷದವರು ಕೇಳುತ್ತಾರೆ. ಪ್ರವಾಹದಿಂದ ಹಾನಿಯಾದ ಬೆಳೆಗೆ 6,590 ಕೋಟಿ ರು.ಗಳನ್ನು ನೇರವಾಗಿ ರೈತರ ಖಾತೆಗೆ ಜಮಾ ಮಾಡಲಾಗಿದೆ. ಇದು ಸಾಧನೆಯಲ್ಲವೇ ಎಂದು ಅವರು ಪ್ರಶ್ನಿಸಿದರು. ಇದುವರೆಗೆ ಮಳೆಯಿಂದ ಹಾನಿಯಾದ 3,03368 ಮನೆಗಳಿಗೆ 3,594 ಕೋಟಿ ರು.ಗಳನ್ನು ನೀಡಿದ್ದೇವೆ. ನರೇಂದ್ರ ಮೋದಿ ಅವರು ಇದುವರೆಗೆ ರಾಜ್ಯಕ್ಕೆ 16,840 ಕೋಟಿ ರು.ಗಳನ್ನು ಕೊಟ್ಟಿದ್ದಾರೆ. ಇದರ ಉಪಯೋಗವನ್ನು ಜನರಿಗೆ ತಲುಪಿಸುವ ಕಾರ್ಯ ಮಾಡುತ್ತಿದ್ದೇವೆ. ಬಗರ್‌ ಹುಕುಂ ಸಾಗುವಳಿದಾರರಿಗೆ ಅರ್ಜಿ ಹಾಕಲು ಒಂದು ವರ್ಷ ಕಾಲಾವಕಾಶ ನೀಡಲಾಗಿದೆ. 

ಎಸ್ಸಿ, ಎಸ್ಟಿ ಜನರು ಮನೆ ಕಟ್ಟಿಕೊಳ್ಳಲು ಮೊದಲು 2 ವರ್ಷ ಆಗುತ್ತಿತ್ತು. ಇದಕ್ಕಾಗಿ ದಲಿತರು, ತುಳಿತಕ್ಕೊಳಗಾದವರಿಗೆ ತಕ್ಷಣ ಮನೆ ಕಟ್ಟಿಕೊಡಲು ಭೂಪರಿವರ್ತನೆ ಮಾಡಲು ಈಗ ಕ್ರಮ ಕೈಗೊಳ್ಳಲಾಗುತ್ತಿದೆ. 4 ಗುಂಟೆವರೆಗೆ ಜಿಲ್ಲಾಧಿಕಾರಿಗಳಿಗೇ ಭೂಪರಿವರ್ತನೆ ಮಾಡಿಕೊಡಲು ಅವಕಾಶ ಮಾಡಿಕೊಟ್ಟಿದ್ದೇವೆ. ಖಾತಾ ಬದಲಾವಣೆ 7 ದಿನದೊಳಗೆ ಆಗುವಂತೆ ಕ್ರಮ ವಹಿಸಲಾಗಿದೆ ಎಂದರು. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್‌. ಅಶೋಕ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ವಿವಿಧ ಯೋಜನೆಯ ಫಲಾನುಭವಿಗಳಿಗೆ ನೆರವಿನ ಚೆಕ್‌ ವಿತರಿಸಿದರು.

ಈವರೆಗೆ 350 ಕಡೆ ಡೀಸಿಗಳ ಗ್ರಾಮ ವಾಸ್ತವ್ಯ: ಇದುವರೆಗೆ 350 ಕಡೆ ಜಿಲ್ಲಾಧಿಕಾರಿಗಳು ಗ್ರಾಮ ವಾಸ್ತವ್ಯ ಮಾಡಿದ್ದಾರೆ. 351 ಕಡೆ ಉಪವಿಭಾಗಾಧಿಕಾರಿಗಳು ಗ್ರಾಮ ವಾಸ್ತವ್ಯ ಮಾಡಿದ್ದಾರೆ. 24 ಗಂಟೆ ಇಲ್ಲೇ ಇದ್ದು ಗ್ರಾಮ ವಾಸ್ತವ್ಯ ಪ್ರಾರಂಭ ಮಾಡಿದ್ದೇವೆ. ಅಧಿಕಾರಿಗಳೂ ಶ್ರಮ ವಹಿಸಿ ಕೆಲಸ ಮಾಡುತ್ತಿದ್ದಾರೆ. ತಕ್ಷಣ ಪರಿಹಾರ ಕೊಡಲು ಇದರಿಂದ ಅನುಕೂಲವಾಗಿದೆ ಎಂದು ಅಶೋಕ್‌ ಹೇಳಿದರು.

ಗ್ರಾಮ ಲೆಕ್ಕಿಗರು ಬ್ರಹ್ಮ ಇದ್ದಂತೆ!: ಸಿಎಂ ಬಸವರಾಜ ಬೊಮ್ಮಾಯಿ ಅವರ ತಂದೆ ಎಸ್‌.ಆರ್‌. ಬೊಮ್ಮಾಯಿ ಅವರು ವಿಲೇಜ್‌ ಅಕೌಂಟೆಂಟ್‌ ಅವರನ್ನು ಬ್ರಹ್ಮ ಇದ್ದಂಗೆ ಅವರದ್ದು ಬ್ರಹ್ಮಲಿಪಿ ಎಂದು ಹೇಳಿದ್ದರು. ಅಯ್ಯ ಇದ್ದಿದ್ದನ್ನು ಅಪ್ಪ ಎಂದು ಬರೆದಿದ್ದರೆ ಅದನ್ನು ತಿದ್ದುಪಡಿ ಮಾಡಿ ಸರಿಪಡಿಸಲು ಅವರಿಗೆ 2 ವರ್ಷ ಬೇಕಾಗುತ್ತಿತ್ತು. ಅದನ್ನೆಲ್ಲ ಈಗ ಸರಿಪಡಿಸಿದ್ದೇವೆ. ಈಗ ಎಲ್ಲದಕ್ಕೂ ಕಾಲಮಿತಿ ಹಾಕಿದ್ದೇವೆ ಎಂದು ಕಂದಾಯ ಸಚಿವರು ತಿಳಿಸಿದರು.

ಸೋಮೇಶ್ವರ ಸ್ವಾಮಿ ದೇಗುಲದಲ್ಲಿ ರಥೋತ್ಸವಕ್ಕೂ ಮುನ್ನವೇ ಧರ್ಮ ದಂಗಲ್

ಬೊಮ್ಮಾಯಿ ಅತ್ಯಂತ ಸರಳ ಸಿಎಂ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅತ್ಯಂತ ಸರಳ ಮುಖ್ಯಮಂತ್ರಿ. ನಾನು, ಕಾರ್ಯಕ್ರಮಕ್ಕೆ ಕರೆದರೆ ಮೊದಲು ನಮ್ಮ ಜನರು ಎಂದು ಜನರ ಬಳಿ ಹೋದರು. ಅವರನ್ನು ಮಾತನಾಡಿಸಿ ಅವರಿಗೆ ನೆರವಾಗಿ ನಂತರ ಇಲ್ಲಿಗೆ ಬಂದಿದ್ದಾರೆ. ನೀವು ಮತ ಹಾಕಿದ್ದರಿಂದಲೇ ಅವರು ಮುಖ್ಯಮಂತ್ರಿಯಾಗಿದ್ದಾರೆ. ಅವರನ್ನು ಸಿಎಂ ಮಾಡಿದ್ದು ನೀವು ಎಂದು ಅಶೋಕ್‌ ಹೇಳಿದರು.

click me!