ನಮ್ಮ ಸಂಪರ್ಕದಲ್ಲಿರುವ ಬಿಜೆಪಿಯವರ ಬಗ್ಗೆ ಯಾವುದೇ ಮಾಹಿತಿ ನೀಡಲ್ಲ: DK Shivakumar

By Kannadaprabha NewsFirst Published Jan 25, 2022, 10:08 AM IST
Highlights

ಬಿಜೆಪಿಯ ಯಾವ್ಯಾವ ಸಚಿವರು ನಿತ್ಯ ಸಿದ್ದರಾಮಯ್ಯ ಅವರೊಂದಿಗೆ ದೂರವಾಣಿ ಸಂಪರ್ಕದಲ್ಲಿದ್ದಾರೆ ಎಂದು ಸಚಿವರನ್ನೇ ಕೇಳಿ. ಗೌಪ್ಯತೆ ಕಾಪಾಡುವುದು ರಾಜಕಾರಣದ ಒಂದು ಭಾಗ. ಹೀಗಾಗಿ ನನ್ನನ್ನೂ ಸೇರಿ ನಮ್ಮ ಪಕ್ಷದವರ ಸಂಪರ್ಕದಲ್ಲಿರುವ ವಿಧಾನಪರಿಷತ್‌ ಸದಸ್ಯರು, ಶಾಸಕರು, ಸಚಿವರ ಮಾಹಿತಿ ಬಿಟ್ಟುಕೊಡಲು ಆಗುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಬೆಂಗಳೂರು (ಜ.25): ಬಿಜೆಪಿಯ ಯಾವ್ಯಾವ ಸಚಿವರು ನಿತ್ಯ ಸಿದ್ದರಾಮಯ್ಯ (Siddaramaiah) ಅವರೊಂದಿಗೆ ದೂರವಾಣಿ ಸಂಪರ್ಕದಲ್ಲಿದ್ದಾರೆ ಎಂದು ಸಚಿವರನ್ನೇ ಕೇಳಿ. ಗೌಪ್ಯತೆ ಕಾಪಾಡುವುದು ರಾಜಕಾರಣದ ಒಂದು ಭಾಗ. ಹೀಗಾಗಿ ನನ್ನನ್ನೂ ಸೇರಿ ನಮ್ಮ ಪಕ್ಷದವರ ಸಂಪರ್ಕದಲ್ಲಿರುವ ವಿಧಾನಪರಿಷತ್‌ ಸದಸ್ಯರು, ಶಾಸಕರು, ಸಚಿವರ ಮಾಹಿತಿ ಬಿಟ್ಟುಕೊಡಲು ಆಗುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ (DK Shivakumar) ಹೇಳಿದ್ದಾರೆ.

ತನ್ಮೂಲಕ ಬಿಜೆಪಿ (BJP) ಸಚಿವರು ಡಿ.ಕೆ.ಶಿವಕುಮಾರ್‌ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ. ಸೀಟು ಹಂಚಿಕೆ ಬಗ್ಗೆ ಚರ್ಚೆಯಾಗುತ್ತಿದೆ ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ (Basanagouda Patil Yatnal) ಅವರ ಆರೋಪಕ್ಕೆ ಪರೋಕ್ಷವಾಗಿ ಸಮ್ಮತಿ ಸೂಚಿಸಿದ್ದಾರೆ. ಈ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ ಹಾಗೂ ಇತರೆ ಪಕ್ಷಗಳ ನಾಯಕರು ನಮ್ಮ ಜತೆ ಸಂಪರ್ಕದಲ್ಲಿರುವ ವಿಚಾರವನ್ನು ನಾವು ಬಹಿರಂಗವಾಗಿ ಮಾತನಾಡಲು ಸಾಧ್ಯವಿಲ್ಲ. ವಿಧಾನಪರಿಷತ್‌ ಸದಸ್ಯರು, ಶಾಸಕರು, ಸಚಿವರ ವಿಚಾರ ಇಲ್ಲಿ ಚರ್ಚೆ ಮಾಡಲಾಗುವುದಿಲ್ಲ. ಅವರ ಪಕ್ಷದಲ್ಲಿ ಏನಾಗುತ್ತಿದೆ ಎಂಬುದು ಅವರಿಗೆ ಚೆನ್ನಾಗಿ ಗೊತ್ತಿದೆ. ಹೀಗಾಗಿ ಬಿಜೆಪಿಯವರು ಹಾಗೂ ಬಿಜೆಪಿ ಸಚಿವರನ್ನೇ ಕೇಳಿ ಎಂದು ಸೂಚ್ಯವಾಗಿ ಹೇಳಿದರು.

ಸಿದ್ದರಾಮಯ್ಯನವರ ಜತೆ ಯಾವೆಲ್ಲಾ ಸಚಿವರು ನಿತ್ಯ ದೂರವಾಣಿ ಮೂಲಕ ಮಾತನಾಡುತ್ತಿದ್ದಾರೆ ಎಂಬುದನ್ನು ಆ ಸಚಿವರನ್ನೇ ಕೇಳಿ. ನನ್ನ ಬಳಿ ಮಾತನಾಡುವವರ ಗೌಪ್ಯತೆ ನಾನು ಕಾಪಾಡಬೇಕಾಗುತ್ತದೆ. ಇದು ರಾಜಕಾರಣದ ಒಂದು ಭಾಗ. ಪ್ರತಿಯೊಬ್ಬ ನಾಯಕರು ತಮ್ಮ ರಾಜಕೀಯ ಭವಿಷ್ಯ ರೂಪಿಸಿಕೊಳ್ಳುವ ಬಗ್ಗೆ ಚಿಂತನೆ ನಡೆಸುತ್ತಾರೆ. ಜನ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಯಾವ ರೀತಿ ಸಂದೇಶ ನೀಡುತ್ತಾರೆ ಎಂಬುದರ ಮೇಲೆ ಅವರು ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.

Karnataka Politics ಜೆಡಿಎಸ್‌ನ ಮತ್ತೊಂದು ಪ್ರಮುಖ ವಿಕೆಟ್ ಪತನ, ಕಾಂಗ್ರೆಸ್‌ಗೆ ಬಂತು ಬಲ

ಮೇಕೆದಾಟು ಗುದ್ದಲಿ ಪೂಜೆ ಮಾಡಿದರೆ ಭವ್ಯ ಸ್ವಾಗತ: ಸಚಿವ ವಿ.ಸೋಮಣ್ಣ (V.Somanna) ಅವರು ಹೇಳಿದಂತೆ ಬಿಜೆಪಿ ಸರ್ಕಾರದ ಅವಧಿಯಲ್ಲೇ ಮೇಕೆದಾಟು ಯೋಜನೆಗೆ ಗುದ್ದಲಿ ಪೂಜೆ ಮಾಡಿದರೆ ಖುದ್ದು ನಾನೇ ಭವ್ಯ ಸ್ವಾಗತ ಕೋರುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ನಾವೇ ಮೇಕೆದಾಟು ಯೋಜನೆ ಮಾಡುತ್ತೇವೆ. ಕಾಂಗ್ರೆಸ್ಸಿನವರಿಗೆ ಅವಕಾಶ ನೀಡುವುದಿಲ್ಲ ಎಂಬ ವಿ.ಸೋಮಣ್ಣ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸೋಮಣ್ಣ ಅವರನ್ನು ಅಭಿನಂದಿಸುತ್ತೇನೆ. ಈ ವಿಚಾರದಲ್ಲಿ ತಡ ಮಾಡುವುದು ಬೇಡ. ಹೇಗಿದ್ದರೂ ಕೇಂದ್ರ, ರಾಜ್ಯ ಎರಡೂ ಕಡೆ ಬಿಜೆಪಿಯ ಡಬಲ್‌ ಇಂಜಿನ್‌ ಸರ್ಕಾರ ಇದೆ. ಜತೆಗೆ ಬಿಜೆಪಿಯ 25 ಮಂದಿ ಸಂಸದರಿದ್ದಾರೆ. ಒಂದೇ ದಿನದಲ್ಲಿ ಅನುಮತಿ ಪಡೆಯುವ ಸಾಮರ್ಥ್ಯವಿರುವ ಬಲಿಷ್ಠ ಸರ್ಕಾರವಿದೆ. ಅವರು ಈ ಕೆಲಸ ಮಾಡಲಿ. ಯೋಜನೆಯ ಗುದ್ದಲಿ ಪೂಜೆಗೆ ಹೋಗಿ ಆ ಕಾರ್ಯಕ್ರಮಕ್ಕೆ ಸೋಮಣ್ಣ ಹಾಗೂ ಬಿಜೆಪಿಯವರನ್ನು ನಾನೇ ಭವ್ಯವಾಗಿ ಸ್ವಾಗತ ಮಾಡುತ್ತೇನೆ ಎಂದರು.

ಪಾದಯಾತ್ರೆಗೆ ಬಂದಿದ್ದ 85 ಪೊಲೀಸರಿಗೆ ಕೋವಿಡ್‌ ಸೋಂಕು ಬೋಗಸ್‌: ಮೇಕೆದಾಟು ಪಾದಯಾತ್ರೆಗೆ (Mekedatu Padayatre) ನಿಯೋಜಿಸಲಾಗಿದ್ದ ಪೊಲೀಸರ (Police) ಪೈಕಿ 85 ಮಂದಿಗೆ ಕೋವಿಡ್‌ ಸೋಂಕು (Covid19) ತಗುಲಿದೆ ಎಂಬುದು ಬೋಗಸ್‌. ಯಾವುದೇ ಪೊಲೀಸ್‌ ಅಧಿಕಾರಿಗಳು ನಮ್ಮ ಪಾದಯಾತ್ರೆ ಸಮಯದಲ್ಲಿ ಕರ್ತವ್ಯದಲ್ಲಿ ಇರಲಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಆರೋಪಿಸಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಪಾದಯಾತ್ರೆಗೆ ನಿಯೋಜಿಸಿದ್ದ 85 ಪೊಲೀಸರಿಗೆ ಸೋಂಕು ತಗುಲಿದೆ ಎಂಬುದು ಬೋಗಸ್‌. ಬೇಕಿದ್ದರೆ ಪಾದಯಾತ್ರೆಯ ವಿಡಿಯೋಗಳನ್ನು ತೆಗೆದುಕೊಂಡು ನೋಡಿ. ಯಾವುದೇ ಪೊಲೀಸ್‌ ಅಧಿಕಾರಿಗಳು ನಮ್ಮ ಪಾದಯಾತ್ರೆ ಸಮಯದಲ್ಲಿ ಕರ್ತವ್ಯದಲ್ಲಿ ಇರಲಿಲ್ಲ. ಯಾರೊಬ್ಬರೂ ನಮ್ಮ ಬೆಂಬಲಕ್ಕೆ, ಸಹಾಯಕ್ಕೆ ಬರಲಿಲ್ಲ. 

ಮುಂದಿನ ಎಲೆಕ್ಷನ್‌ಗೆ ಡಿಕೆಶಿ, ಸಿದ್ದು ಬಳಿ ಟಿಕೆಟ್ ಬುಕ್ ಮಾಡಿಕೊಂಡ್ರಾ ಬಿಜೆಪಿ ಶಾಸಕರು?

ಟ್ರಾಫಿಕ್‌ ನಿಯಂತ್ರಣಕ್ಕೂ ನೆರವಾಗಲಿಲ್ಲ. ನನ್ನ ಮೇಲೆ ಕಾರ್ಯಕರ್ತರು ಬೀಳುವಾಗಲೂ ಯಾರೂ ತಡೆಯಲಿಲ್ಲ. ಯಾವುದೇ ಪೊಲೀಸರು ತಮ್ಮ ಕರ್ತವ್ಯವನ್ನು ಅಲ್ಲಿ ನಿಭಾಯಿಸಿಲ್ಲ. ಸರ್ಕಾರ ಕೋವಿಡ್‌ ನಿಬಂರ್‍ಧ ಹೇರಿದಾಗ ಕೋವಿಡ್‌ ಸೋಂಕಿನ ಪ್ರಮಾಣ ಎಷ್ಟಿತ್ತು? ಈಗ ಎಷ್ಟಿದೆ? ಇದೆಲ್ಲವೂ ಪಾದಯಾತ್ರೆ ನಿಲ್ಲಿಸಲು ಸೃಷ್ಟಿಸಿರುವ ಅಂಕಿ-ಅಂಶಗಳು ಅಷ್ಟೆಎಂದರು.

click me!