ಸಿದ್ದರಾಮಯ್ಯ ಹಿಂದೂ ಅಸಮಾನತೆ ಹೇಳಿಕೆ : ಆಡಳಿತ-ವಿಪಕ್ಷಗಳ ವಾಕ್ಸಮರ

Kannadaprabha News   | Kannada Prabha
Published : Sep 16, 2025, 07:25 AM IST
vidhan soudha

ಸಾರಾಂಶ

‘ಹಿಂದು ಧರ್ಮದಲ್ಲಿ ಸಮಾನತೆ ಇದ್ದರೆ ಮತಾಂತರಗಳು ಏಕೆ ನಡೆಯುತ್ತಿದ್ದವು?’ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆ ಬಗ್ಗೆ ಆಡಳಿತ-ವಿಪಕ್ಷಗಳ ಮುಖಂಡರ ನಡುವೆ ವಾಕ್ಸಮರ ಮುಂದುವರಿದಿದೆ.

ಕಲಬುರಗಿ : ‘ಹಿಂದೂ ಧರ್ಮ, ಸಮಾಜದ ಕೆಲವು ವರ್ಗಗಳಿಗೆ ಗೌರವಯುತ ಬಾಳು ನೀಡಿಲ್ಲ. ಈ ಅಸಮಾನತೆಯಿಂದಾಗಿಯೇ ಸಿಖ್, ಜೈನ, ಬೌದ್ಧ ಮತ್ತು ಲಿಂಗಾಯತ ಧರ್ಮಗಳು ಭಾರತದಲ್ಲಿ ಪ್ರತ್ಯೇಕ ಧರ್ಮಗಳಾಗಿ ಹುಟ್ಟಿವೆ’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಪಾದಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರ ಜೊತೆ ಅವರು ಮಾತನಾಡಿದ ಅವರು, ‘ಹಿಂದೂ ಸಮಾಜದಲ್ಲಿನ ಅಸಮಾನತೆ ಕುರಿತ ಮುಖ್ಯಮಂತ್ರಿ ಹೇಳಿಕೆ ಧಾರ್ಮಿಕ ಮತಾಂತರವನ್ನು ಉತ್ತೇಜಿಸುತ್ತದೆ’ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕೆಗೆ ಪ್ರತಿಕ್ರಿಯಿಸಿದರು.

‘ವಿಜಯೇಂದ್ರ ಮತ್ತು ಸಿ.ಟಿ.ರವಿ ಅವರಿಗೆ ಹಿಂದೂ ಧರ್ಮದ ಇತಿಹಾಸದ ಬಗ್ಗೆ ಅಷ್ಟಾಗಿ ಅರಿವಿಲ್ಲ. ಚಾತುರ್ವರ್ಣ ವ್ಯವಸ್ಥೆ ಇರುವುದು ಹಿಂದೂ ಧರ್ಮದಲ್ಲಿ ಮಾತ್ರ. ಇನ್ನಿತರ ಯಾವುದೇ ಧರ್ಮದಲ್ಲೂ ಇಂತಹ ಅಸಮಾನತೆ ಇಲ್ಲ’ ಎಂದರು.

‘ಮುಂಬರುವ ಜಾತಿ ಜನಗಣತಿ ವೇಳೆ ವೀರಶೈವ-ಲಿಂಗಾಯತರು ಧರ್ಮದ ಅಂಕಣದಲ್ಲಿ ‘ಹಿಂದೂ’ ಎಂದು ಬರೆಸದೆ ‘ವೀರಶೈವ-ಲಿಂಗಾಯತ’ ಎಂದು ಬರೆಸಬೇಕು ಎಂಬುದಾಗಿ ಇತ್ತೀಚೆಗೆ ನಡೆದ ವೀರಶೈವ-ಲಿಂಗಾಯತರ ಸಭೆಯಲ್ಲಿ ನಿರ್ಣಯವಾಗಿದೆ. ಇದರ ಬಗ್ಗೆ ವಿಜಯೇಂದ್ರ ಏನು ಹೇಳುತ್ತಾರೆ?’ ಎಂದು ಖರ್ಗೆ ಪ್ರಶ್ನಿಸಿದರು.

ಮತಾಂತರಕ್ಕೆ ಕಾನೂನಲ್ಲೇ ಅವಕಾಶ: ಸಚಿವ ತಂಗಡಗಿ

ಕೊಪ್ಪಳ  : ಮತಾಂತರವಾಗಲು ಪ್ರತಿಯೊಬ್ಬರಿಗೂ ಕಾನೂನಿನಲ್ಲಿಯೇ ಅವಕಾಶವಿದೆ. ಹೀಗಿರುವಾಗ ಆಸಕ್ತರು ಏಕೆ ಮತಾಂತರವಾಗಬಾರದು ಎಂದು ಸಚಿವ ಶಿವರಾಜ ತಂಗಡಗಿ ಪ್ರಶ್ನಿಸಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಹಿಂದೂ ಧರ್ಮದಲ್ಲಿ ಸಮಾನತೆ ಇದ್ದರೆ ಏಕೆ ಮತಾಂತರ ನಡೆಯುತ್ತಿದ್ದವು?’ ಎಂಬ ಸಿಎಂ ಹೇಳಿಕೆ ಹಾಗೂ ಅದರ ವಿರುದ್ಧ ಪ್ರತಿಪಕ್ಷ ನಾಯಕರು ನೀಡುತ್ತಿರುವ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿದರು.‘ಮತಾಂತರವಾಗುವುದಕ್ಕೆ ಪ್ರತಿಯೊಬ್ಬರಿಗೂ ಹಕ್ಕಿದೆ. ಆದರೆ, ಒತ್ತಾಯಪೂರ್ವಕವಾಗಿ, ಆಮಿಷವೊಡ್ಡಿ ಮತಾಂತರ ಆಗುವುದು ತಪ್ಪು. ಅದಕ್ಕೆ ನಮ್ಮ ವಿರೋಧವಿದೆ. ಸ್ವಯಂಪ್ರೇರಣೆಯಿಂದ ಮತಾಂತರವಾದರೆ ತಪ್ಪೇನು?. ಪ್ರಜಾಪ್ರಭುತ್ವ ವ್ಯವಸ್ಥೆ ಇರುವ ಈ ದೇಶದಲ್ಲಿ ಕಾನೂನಿನಡಿ ಮತಾಂತರವಾಗಲು ಯಾರೂ ಅಡ್ಡಿಪಡಿಸುವಂತಿಲ್ಲ’ ಎಂದರು.

ಸಿದ್ದು ಮತಾಂತರದ ರಾಯಭಾರಿ: ಅಶೋಕ್‌

ಬೆಂಗಳೂರು : ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತಾಂತರದ ರಾಯಭಾರಿ’ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್‌.ಅಶೋಕ್ ಆರೋಪಿಸಿದ್ದಾರೆ.ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಯಾರೂ ಯೋಚನೆ ಮಾಡದಂಥ ಜಾತಿಗಳನ್ನು ಸಿದ್ದರಾಮಯ್ಯ ಅವರು ಸೃಷ್ಟಿಸಿದ್ದಾರೆ. ಸಂವಿಧಾನದಲ್ಲಿ ಇಲ್ಲದ ಜಾತಿಗಳನ್ನು ಹುಟ್ಟುಹಾಕಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಈ ಜಾತಿ ಗಣತಿ ಸಮೀಕ್ಷೆ ಮೂಲಕ ಮತಾಂತರಕ್ಕೆ ಪ್ರೇರಣೆ ನೀಡಿ ಹಿಂದೂಗಳನ್ನು ತುಳಿಯಲಾಗುತ್ತಿದೆ. ಏನೇ ಮಾಡಿದರೂ ಸಂವಿಧಾನದ ಪ್ರಕಾರ ಮಾಡಲಿ. ಮೀಸಲಾತಿಗೆ ಸಂಬಂಧಿಸಿ ಕೋರ್ಟ್‌ ಆದೇಶವಿದೆ. ಅದರ ಪ್ರಕಾರ ಕ್ರಮ ವಹಿಸಲಿ’ ಎಂದು ಆಗ್ರಹಿಸಿದರು.‘ಸಿದ್ದರಾಮಯ್ಯ ಎಲ್ಲದರಲ್ಲೂ ಮುಸ್ಲಿಂ ಓಲೈಕೆ ಮಾಡುತ್ತಾರೆ. ಹಿಂದೂಗಳ ಮತ ಮಾತ್ರ ಬೇಕು. ಮತ ಸಿಕ್ಕ ನಂತರ ಹಿಂದೂ ಧರ್ಮದಲ್ಲಿ ಲೋಪವಿದೆ ಎನ್ನುತ್ತಿದ್ದಾರೆ. ಮುಸ್ಲಿಮರಲ್ಲಿ ಮಹಿಳೆಯರು ಮಸೀದಿಗೆ ಹೋಗುವಂತಿಲ್ಲ. ಇದು ತಪ್ಪೆಂದು ಅವರಿಗೆ ಅನ್ನಿಸಲಿಲ್ಲ. ಅಂದರೆ ಹಿಂದೂ ಧರ್ಮದ ಬಗ್ಗೆ ಕೆಟ್ಟದಾಗಿ ಮಾತಾಡಿದ್ದಾರೆ. ಕೇವಲ ಹಿಂದೂ ಧರ್ಮವನ್ನು ಟಾರ್ಗೆಟ್‌ ಮಾಡುವ ಬದಲು ಬೇರೆ ಧರ್ಮಗಳ ಬಗ್ಗೆಯೂ ಅವರು ಮಾತಾಡಲಿ’ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸ್ತ್ರಿರೋಗ ತಜ್ಞೆ, ಪುತ್ರನ ದುರಂತ ಅಂತ್ಯ, ರಾತ್ರಿ ಜಗಳವಾಡಿದ ಇಬ್ಬರು ಬೆಳಗ್ಗೆ ಶವವಾಗಿ ಪತ್ತೆ
ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!