ನೀರಿಲ್ಲದೆ ಕಬ್ಬಿನ ಬೆಳೆ ಒಣಗುತ್ತಿದ್ದುದರಿಂದ ಬೇಸತ್ತ ರೈತನೊಬ್ಬ ಕಬ್ಬಿಗೆ ಬೆಂಕಿ ಹಚ್ಚಿ ಕೊನೆಗೆ ತಾನೂ ಸಜೀವದಹನವಾಗಲು ಯತ್ನಿಸಿದ ಘಟನೆ ಪಟ್ಟಣದ ಚನ್ನೇಗೌಡನದೊಡ್ಡಿಯಲ್ಲಿ ಶುಕ್ರವಾರ ಜರುಗಿದೆ.
ಮದ್ದೂರು (ಆ.5) : ನೀರಿಲ್ಲದೆ ಕಬ್ಬಿನ ಬೆಳೆ ಒಣಗುತ್ತಿದ್ದುದರಿಂದ ಬೇಸತ್ತ ರೈತನೊಬ್ಬ ಕಬ್ಬಿಗೆ ಬೆಂಕಿ ಹಚ್ಚಿ ಕೊನೆಗೆ ತಾನೂ ಸಜೀವದಹನವಾಗಲು ಯತ್ನಿಸಿದ ಘಟನೆ ಪಟ್ಟಣದ ಚನ್ನೇಗೌಡನದೊಡ್ಡಿಯಲ್ಲಿ ಶುಕ್ರವಾರ ಜರುಗಿದೆ.
ಚನ್ನೇಗೌಡನದೊಡ್ಡಿ ಎಚ್.ಕೆ.ವೀರಣ್ಣಗೌಡರ ಕಾಲೇಜು ರಸ್ತೆಯಲ್ಲಿ ಕಿರಾಣಿ ಅಂಗಡಿ ನಡೆಸುತ್ತಿದ್ದ ಶಿವಣ್ಣ ಜಮೀನು ಬಳಿ ಕಣ್ಣೀರು ಹಾಕುತ್ತಾ ಕಬ್ಬಿನ ಬೆಳೆಗೆ ಬೆಂಕಿ ಹಾಕಿದ್ದಾನೆ. ನಂತರ ತಾನು ಜಮೀನಿನೊಳಗೆ ನುಗ್ಗಿ ಸಜೀವ ದಹನವಾಗಲು ಮುಂದಾದಾಗ ಸ್ಥಳಕ್ಕೆ ಧಾವಿಸಿದ ಅಕ್ಕಪಕ್ಕದ ಜಮೀನುಗಳ ರೈತರು ಶಿವಣ್ಣನನ್ನು ತಡೆದು ಸಂತೈಸಿದ್ದಾರೆ.
ಧಾರವಾಡ: ಸಾಲಬಾಧೆಗೆ ಒಂದೂವರೆ ತಿಂಗಳಲ್ಲಿ ಆರು ಜನ ರೈತರ ಆತ್ಮಹತ್ಯೆ
ಶಿವಣ್ಣ ಮತ್ತೊಬ್ಬ ರೈತನಿಂದ 1 ಎಕರೆ ಜಮೀನನ್ನು .12 ಸಾವಿರಕ್ಕೆ ಗುತ್ತಿಗೆ ಪಡೆದುಕೊಂಡಿದ್ದ. ಜಮೀನಿನಲ್ಲಿ .50 ಸಾವಿರ ಖರ್ಚು ಮಾಡಿ ಕಬ್ಬು ಬೆಳೆದಿದ್ದರು. ಕೆಆರ್‌ಎಸ್ ಜಲಾಶಯದಿಂದ ವಿ.ಸಿ.ನಾಲೆ ಮೂಲಕ ನೀರು ಹರಿಸುತ್ತಿದ್ದರೂ ಕೊನೇ ಭಾಗದ ಜಮೀನುಗಳಿಗೆ ಸಕಾಲದಲ್ಲಿ ನೀರು ತಲುಪದ ಹಿನ್ನೆಲೆಯಲ್ಲಿ ಕೈಗೆ ಬಂದ ಕಬ್ಬಿನ ಬೆಳೆ ಒಣಗುತ್ತಿರುವುದನ್ನು ಕಂಡು ಮನನೊಂದ ಶಿವಣ್ಣ ಕಳೆದ ಎರಡ್ಮೂರು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.
ಶುಕ್ರವಾರ ಮುಂಜಾನೆ ಜಮೀನು ಬಳಿ ಧಾವಿಸಿದ ಶಿವಣ್ಣ ಕಬ್ಬಿನ ಬೆಳೆಗೆ ಬೆಂಕಿ ಹಚ್ಚಿ ತಾನೂ ಸಜೀವದಹನವಾಗಲು ತೀರ್ಮಾನಿಸಿದ್ದಾರೆ. ಇದನ್ನು ಕಂಡ ರೈತರಾದ ಕೆಂಪಣ್ಣ, ಕಾಳಪ್ಪ, ತಮ್ಮಣ್ಣ ಹಾಗೂ ಸ್ವಾಮಿ ಅವರು ಬೆಂಕಿಗೆ ಹಾರಲು ಯತ್ನಿಸಿದ ಶಿವಣ್ಣನನ್ನು ಕಂಡು ಸಂತೈಸಿ ಧೈರ್ಯ ತುಂಬಿದ ನಂತರ ಮನೆಗೆ ಕರೆತಂದು ಬಿಟ್ಟಿದ್ದಾರೆ. ಈ ಸಂಬಂಧ ದೂರು ದಾಖಲಾಗಿಲ್ಲ.
ಕಲಬುರಗಿ: ಸಾಲದ ಬಾಧೆಯಿಂದ ವಿಷ ಸೇವಿಸಿ ರೈತ ಆತ್ಮಹತ್ಯೆ