Voter List Scam: ಮತಗಳ್ಳತನ ಆರೋಪ; ನಾನು ರಾಹುಲ್ ಗಾಂಧಿಗೆ ಸಪೋರ್ಟ್ ಮಾಡ್ತೇನೆ ಎಂದ ರಮ್ಯಾ

Published : Aug 18, 2025, 12:57 PM IST
Ramya on rahul gandhi statement about voter list scam

ಸಾರಾಂಶ

ರಾಹುಲ್ ಗಾಂಧಿ ಮೇಲಿನ ಮತಗಳ್ಳತನ ಆರೋಪಕ್ಕೆ ನಟಿ ರಮ್ಯಾ ಬೆಂಬಲ ವ್ಯಕ್ತಪಡಿಸಿದ್ದಾರೆ. ಚುನಾವಣಾ ಆಯೋಗದ ನಿಲುವನ್ನು ಪ್ರಶ್ನಿಸಿದ್ದು, ಸಾಕ್ಷ್ಯಗಳ ಹೊರತಾಗಿಯೂ ಕ್ರಮ ಕೈಗೊಳ್ಳದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೆಬ್ಬಾಳ ಫ್ಲೈಓವರ್ ಸಮಸ್ಯೆ ಬಗ್ಗೆಯೂ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರು (ಆ.18): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಮತಗಳ್ಳತನ ಆರೋಪಕ್ಕೆ ನಟಿ ರಮ್ಯಾ ತಮ್ಮ ಬೆಂಬಲ ಸೂಚಿಸಿದ್ದಾರೆ. ರಾಹುಲ್ ಗಾಂಧಿ ಚುನಾವಣೆಯಲ್ಲಿ ಮತದಾರರ ಐಡಿಯಲ್ಲಿ ಫೇಕ್ ಫೋಟೋಗಳಿರುವ ಬಗ್ಗೆ ಸಾಕ್ಷ್ಯ ಸಮೇತ ದಾಖಲೆಗಳನ್ನು ಒದಗಿಸಿದ್ದಾರೆ. ಚುನಾವಣಾ ಆಯೋಗವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸದೇ, ಇತರ ವಿಷಯಗಳತ್ತ ಗಮನ ಹರಿಸಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ವೋಟರ್ ಐಡಿಯಲ್ಲಿ ಫೇಕ್ ಫೋಟೋಗಳು ಹೇಗೆ ಬಂದವು? ಮತದಾರರ ಮಾಹಿತಿ ರಿವಿಲ್ ಮಾಡೋದು ಸರಿಯಲ್ಲ ಅಂತಿದೆ. ಆದ್ರೆ ಇಲ್ಲಿಯವರೆಗೆ ಆಗಿದ್ದಾದ್ರೂ ಏನು? ಈ ಬಗ್ಗೆ ರಾಹುಲ್ ಗಾಂಧಿ ಸಾಕ್ಷ್ಯ ಸಮೇತ ತೋರಿಸಿದ್ದು ತಪ್ಪಾ? ಎಂದು ಪ್ರಶ್ನಿಸಿದರು. ಸಾಕ್ಶ್ಯ ಸಮೇತ ತೋರಿಸಿದರೂ, ಇದು ಮುಂದೆ ಆಗದಂತೆ ಏನು ಕ್ರಮ ಕೈಗೊಳ್ಳಬೇಕು ಎಂದು ಆಯೋಗ ಸ್ಪಷ್ಟವಾಗಿ ಹೇಳಿಲ್ಲ. ಅದರ ಬದಲು ರಾಹುಲ್ ಗಾಂಧಿ ವಿರುದ್ಧವೇ ಆರೋಪಗಳನ್ನ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿರು.

ಇದನ್ನೂ ಓದಿ: 'ಮೂವರು ಅರೆಸ್ಟ್ ಬಳಿಕ ಕೆಟ್ಟ ಕಮೆಂಟ್ ನಿಂತಿವೆ' ದರ್ಶನ್‌ ಫ್ಯಾನ್ಸ್‌ಗೆ ಬಿಸಿ ಮುಟ್ಟಿಸಿದ ನಟಿ ರಮ್ಯಾ

ಇದೇ ವೇಳೆ, ಹೆಬ್ಬಾಳ ಫ್ಲೈಓವರ್‌ನ ಟ್ರಾಫಿಕ್ ಸಮಸ್ಯೆ ಕುರಿತು ಪ್ರತಿಕ್ರಿಯಿಸಿದ ರಮ್ಯಾ, ಹೆಬ್ಬಾಳ್ ಫ್ಲೈಓವರ್ ಅಂದ್ರೇನೆ ತುಂಬಾ ಸಮಯ ಆಗುತ್ತೆ ಅಂತಾರೆ. ಆದರೆ ಅದೇನೂ ಆಗಲ್ಲ. ಟ್ರಾಫಿಕ್ ಸಮಸ್ಯೆ ಕಡಿಮೆ ಆಗುತ್ತೆ ಅಂತ ಅಂದ್ಕೊಂಡಿದ್ದೇನೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸ್ತ್ರಿರೋಗ ತಜ್ಞೆ, ಪುತ್ರನ ದುರಂತ ಅಂತ್ಯ, ರಾತ್ರಿ ಜಗಳವಾಡಿದ ಇಬ್ಬರು ಬೆಳಗ್ಗೆ ಶವವಾಗಿ ಪತ್ತೆ
ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!