ಸಿಎಂ ಸಿದ್ದರಾಮಯ್ಯ ಟಿಪ್ಪು ಹಾಗೆ ಒಬ್ಬ ಮತಾಂಧ: ವಿಪಕ್ಷ ನಾಯಕ ಆರ್. ಅಶೋಕ್

By Sathish Kumar KHFirst Published Dec 23, 2023, 10:10 PM IST
Highlights

ಸಿಎಂ ಸಿದ್ದರಾಮಯ್ಯ ಟಿಪ್ಪು ಹಾಗೆ ಒಬ್ಬ ಮತಾಂಧರಾಗಿದ್ದಾರೆ. ಮುಸ್ಲಿಮರಲ್ಲಿ ಜಯಂತಿ ಮಾಡುವ ಸಂಪ್ರದಾಯ ಇಲ್ಲ. ಆದರೂ ಸಿದ್ದರಾಮಯ್ಯ ಟಿಪ್ಪು ಜಯಂತಿ‌ ಮಾಡಿದರು.

ಬೆಂಗಳೂರು (ಡಿ.23):  ಸಿಎಂ ಸಿದ್ದರಾಮಯ್ಯ ಟಿಪ್ಪು ಹಾಗೆ ಒಬ್ಬ ಮತಾಂಧರಾಗಿದ್ದಾರೆ. ಮುಸ್ಲಿಮರಲ್ಲಿ ಜಯಂತಿ ಮಾಡುವ ಸಂಪ್ರದಾಯ ಇಲ್ಲ. ಆದರೂ ಸಿದ್ದರಾಮಯ್ಯ ಟಿಪ್ಪು ಜಯಂತಿ‌ ಮಾಡಿದರು. ರಾಜ್ಯದಲ್ಲಿ ಗೊಂದಲ, ಗಲಾಟೆ ಆಗಬೇಕು ಅನ್ನೋದು ಸಿದ್ದರಾಮಯ್ಯ ಉದ್ದೇಶ, ಅದರಲ್ಲಿ ಬೇಳೆ ಬೇಯಿಸಿಕೊಳ್ಳೋದು ಅವರ ಉದ್ದೇಶವಾಗಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದರು.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯಗೆ ಧರ್ಮ ಒಡೆಯುವ ಚಾಳಿ. ಕಳೆದ ಒಂದು ತಿಂಗಳಿಂದ ರಾಜ್ಯದ ಘನತೆಗೆ ಪೆಟ್ಟು ಬೀಳುವ ಪ್ರಕರಣಗಳು ನಡೀತಿವೆ. ಈಗ ಮಕ್ಕಳಲ್ಲಿ ಧರ್ಮಭೇದ ಭಾವ ಮೂಡಿಸುವ ಕೆಲಸಕ್ಕೆ ಸರ್ಕಾರ ಮುಂದಾಗಿದೆ. ಸಿದ್ದರಾಮಯ್ಯ ಟಿಪ್ಪು ಹಾಗೆ ಒಬ್ಬ ಮತಾಂಧ. ಮುಸ್ಲಿಮರಲ್ಲಿ ಜಯಂತಿ ಮಾಡುವ ಸಂಪ್ರದಾಯ ಇಲ್ಲ. ಆದರೂ ಸಿದ್ದರಾಮಯ್ಯ ಟಿಪ್ಪು ಜಯಂತಿ‌ ಮಾಡಿದ್ರು. ರಾಜ್ಯದಲ್ಲಿ ಗೊಂದಲ, ಗಲಾಟೆ ಆಗಬೇಕು ಅನ್ನೋದು ಸಿದ್ದರಾಮಯ್ಯ ಉದ್ದೇಶ, ಅದರಲ್ಲಿ ಬೇಳೆ ಬೇಯಿಸಿಕೊಳ್ಳೋದು ಅವರ ಉದ್ದೇಶವಾಗಿದೆ ಎಂದು ಕಿಡಿಕಾರಿದರು.

ಬಿಜೆಪಿ ಉಪಾಧ್ಯಕ್ಷ ಸ್ಥಾನಕ್ಕೂ ಯತ್ನಾಳ್‌ ಪರಿಗಣಿಸದ ಹೈಕಮಾಂಡ್: ಪದಾಧಿಕಾರಿಗಳ ಪಟ್ಟಿ ಇಲ್ಲಿದೆ ನೋಡಿ..

ಲೋಕಸಭಾ ಚುನಾವಣೆಗೆ ಅಲ್ಪಸಂಖ್ಯಾತ ಮತ ಪಡೆಯಲು ಹೀಗೆ ಹೇಳಿದ್ದಾರೆ. ಇದರಲ್ಲಿ ಡೌಟ್ ಬೇಡ. ಅವರ ಗ್ಯಾರಂಟಿ ಎಲ್ಲಾ ಕೈ ಕೊಟ್ಟಿದೆ. ಸಿದ್ದರಾಮಯ್ಯ ಅವರಿಗೆ ಅರುಳು‌ಮರುಳು ಶುರುವಾಗಿದೆ. ವಿಧಾನಸಭೆಯಲ್ಲಿ ಅಭಿವೃದ್ಧಿ ಬಗ್ಗೆ ಮಾತಾಡಲೇ ಇಲ್ಲ. ಪಾಕಿಸ್ತಾನದಲ್ಲಿ ಇರುವ ಆಹಾರ ಪದ್ಧತಿಯನ್ನು ಇಲ್ಲಿ ಜಾರಿಗೆ ತರಲು ಮುಂದಾಗಿದ್ದಾರೆ. ಗೋ ಮಾಂಸ ಭಕ್ಷಣೆಗೆ ಇವರು ಪ್ರೇರೇಪಣೆ ಕೊಡ್ತಿದಾರೆ. ಹಿಂದೂಗಳ ಭಾವನೆಗಳಿಗೆ ಚುಚ್ಚಿ ವಿಕೃತ ಆನಂದ ಪಡೆಯುತ್ತಾರೆ. ಆಯಾಯಾ ದೇಶಗಳಲ್ಲಿ ಆಯಾಯಾ ಆಹಾರ ಪದ್ಧತಿ ಇದೆ. ಅವರವರ ಸಂಸ್ಕೃತಿ, ಪದ್ಧತಿ ಅದು. ಹಾಗೆ ಭಾರತದ ಸಂಸ್ಕೃತಿ, ಆಹಾರ ಪದ್ಧತಿ ತಿರುಚುವ ಕೆಲಸಕ್ಕೂ ಕಾಂಗ್ರೆಸ್ ಕೈ ಹಾಕಿದೆ. ಇದು ಅವರ ವಿಕೃತ ಮನೋಭಾವ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಮಾತನಾಡಿ, ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ. ಹೀಗಾಗಿ, ಆಗಿಂದಾಗ್ಗೆ ಒಂದೊಂದು ಘೋಷಣೆ ಮಾಡುತ್ತಿದ್ದಾರೆ. ಈಗ ಹಿಜಾಬ್‌ ಮೇಲಿನ ನಿಷೇಧವವನ್ನು ರದ್ದುಗೊಳಿಸಲಾಗುವುದು ಎಂದು ಹೇಳಿದ ಸಿದ್ದರಾಮಯ್ಯ ಎರಡನೇ ಟಿಪ್ಪಿ ಆಗಿ ಕಾಣಿಸುತ್ತಿದ್ದಾರೆ. ಅಂದು ಬ್ರಿಟಿಷರು ಭಾರತ ಆಳಲು ಹಿಂದು, ಮುಸ್ಲಿಂ, ಕ್ರೈಸ್ತ ಹಾಗೂ ಸಿಖ್ ಎಂದು ಧರ್ಮಗಳನ್ನು ಒಡೆದು 200 ವರ್ಷ ಭಾರತವನ್ನು ಆಳಿದರು. ಈಗ ಸಿದ್ದರಾಮಯ್ಯ ಅದೇ ಮಾದರಿಯಲ್ಲಿ 5 ವರ್ಷ ರಾಜ್ಯ ಆಳಲು ಮುಂದಾಗಿದ್ದಾರೆ. ಕೆಲಸ ಇಲ್ಲದ ರಾಜ ಮಾಡುವುದು ಒಂದು ಘೋಷಣೆ ಮಾತ್ರ. ಅದೇ ರೀತಿ ಸಿದ್ದರಾಮಯ್ಯ ಗೆ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ. ಹೀಗಾಗಿ ಈ ರೀತಿ ಘೋಷಣೆ ಮಾಡಿದ್ದಾರೆ. ಹಿಜಾಬ್ ವಿಷಯದ ಬಗ್ಗೆ ಚರ್ಚೆ ಆಗಲೆಂದೇ ಹಿಜಾಬ್ ನಿಷೇಧ ವಾಪಸ್ ಪಡೆಯುವುದಾಗಿ ಅವರು ಹೇಳಿದ್ದಾರೆ. ಹೀಗಾಗಿ, ಸಿದ್ದರಾಮಯ್ಯ ಎರಡನೇ ಟಿಪ್ಪು ಆಗಿ ಕಾಣ್ತಾ ಇದ್ದಾರೆ ಎಂದು ಹೇಳಿದರು.

ಸಿದ್ದರಾಮಯ್ಯ ಯುನಿಫಾರಂಗೆ ಹಿಜಾಬ್ ಜೋಡಿಸುತ್ತಾರೋ ಅಥವಾ ಕಡ್ಡಾಯ ಅನ್ನೋದು ತಗೀತಾರೋ?: ಸಿ.ಟಿ.‌ರವಿ‌

ಹುಡುಗರು ಕೇಸರಿ ಶಾಲು ಹಾಕಿಕೊಂಡು ಶಾಲೆಗೆ ಹೋಗುತ್ತಾರೆ: ಹಿಜಾಬ್‌ ರದ್ದತಿ ಹಿಂಪಡೆದ ನಂತರ ನಾಳೆ ಹಿಂದು ಹುಡುಗರು ಕೇಸರಿ ಶಾಲು ಹಾಕಿ ಶಾಲೆಗೆ ಹೋಗಲಿ ಎಂದು ನಾನು ಹೇಳಲ್ಲ‌. ಆ ರೀತಿ ಮಾಡಬಾರದು ಎಂದು ಹೇಳುತ್ತೇನೆ. ಆದರೆ ಹಾಗೆ ಕೇಸರಿ ಶಾಲು ಧರಿಸಿ ಹೋಗುವಂತೆ ಸಿದ್ದರಾಮಯ್ಯ ಪ್ರೇರೆಪಣೆ ನೀಡಿದ್ದಾರೆ. ಸಿದ್ದರಾಮಯ್ಯ ಅವರೇ ಇದಕ್ಕೆ ದಾರಿ ಮಾಡಿಕೊಟ್ಟಿದ್ದಾರೆ. ಹಿಜಾಬ್ ಪರ ಹೋರಾಟ ಮಾಡಿದ್ದ ಮುಸ್ಕಾನ್ ಹಿಜಾಬ್ ಸ್ವಾಗತ ಮಾಡಿದ್ದಾಳೆ. ಯಾಕೆ ವಿಷ ಬೀಜ ಬಿತ್ತೋಕೆ ಶಾಲೆಗೆ ಹೋಗ್ತಾರಾ ಇವರು? ಅಂಬೇಡ್ಕರ್ ಚಿಂತನೆ ಬಿತ್ತಲು ಶಾಲೆಗೆ ಹೋಗಿ‌ ಎಂದು ವಿದ್ಯಾರ್ಥಿನಿ ಮುಸ್ಕಾನ್ ಮೇಲೆ ರವಿಕುಮಾರ್ ವಾಗ್ದಾಳಿ ನಡೆಸಿದರು.

click me!