ಮೈಸೂರಲ್ಲಿ ಫಿಲ್ಮ್‌ ಸಿಟಿ, ಚಾಮುಂಡಿ ಬೆಟ್ಟಕ್ಕೆ ರೋಪ್‌ವೇ ಈಗ್ಲೂ ಮಾಡ್ತೀನಿ: ಸಿಎಂ ಸಿದ್ದರಾಮಯ್ಯ ವಾಗ್ದಾನ

By Sathish Kumar KHFirst Published Dec 23, 2023, 9:06 PM IST
Highlights

ಮೈಸೂರಿನಲ್ಲಿ ಫಿಲ್ಮ್ ಸಿಟಿ ಮಾಡ್ತೀನಿ ಎಂದು ಬಜೆಟ್‌ನಲ್ಲೇ ಹೇಳಿದ್ದೀನಿ. ಅದರಂತೆ ಮೈಸೂರಿನಲ್ಲೇ ಫಿಲ್ಮ್ ಸಿಟಿ ಮಾಡ್ತೀವಿ. ಹೊರಗಡೆ ಎಲ್ಲೂ ಮಾಡಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಮೈಸೂರು (ಡಿ.23): ನಾನು ಈ ಹಿಂದೆಯೂ ಹೇಳಿದಂತೆ ಮೈಸೂರಿನಲ್ಲಿ ಫಿಲ್ಮ್ ಸಿಟಿ ಮಾಡ್ತೀನಿ ಎಂದು ಬಜೆಟ್‌ನಲ್ಲೇ ಹೇಳಿದ್ದೀನಿ. ಅದರಂತೆ ಮೈಸೂರಿನಲ್ಲೇ ಫಿಲ್ಮ್ ಸಿಟಿ ಮಾಡ್ತೀವಿ. ಹೊರಗಡೆ ಎಲ್ಲೂ ಮಾಡಲ್ಲ. ನಾನು ಹಿಂದೆಯೇ ಚಾಮುಂಡಿ ಬೆಟ್ಟ ರೋಪ್ ವೇ ಮಾಡೋಣ ಅಂತ ಹೇಳಿದ್ದೆ. ಈಗಲೂ ರೋಪ್ ವೇ ಮಾಡಲು ನಾನು ಸಿದ್ಧವಾಗಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಮೈಸೂರಿನಲ್ಲಿ ನಡೆಸ ಹೋಟೆಲ್ ಮಾಲೀಕರ ಪತ್ತಿನ ಸಹಕಾರ ಸಂಘದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೈಸೂರಿನಲ್ಲಿ ಫಿಲ್ಮ್ ಸಿಟಿ ಮಾಡ್ತೀನಿ ಎಂದು ಬಜೆಟ್‌ನಲ್ಲೇ ಹೇಳಿದ್ದೀನಿ. ಅದರಂತೆ ಮೈಸೂರಿನಲ್ಲೇ ಫಿಲ್ಮ್ ಸಿಟಿ ಮಾಡ್ತೀವಿ. ಹೊರಗಡೆ ಎಲ್ಲೂ ಮಾಡಲ್ಲ. ಚಾಮುಂಡಿ ಬೆಟ್ಟ ರೋಪ್ ವೇ ಮಾಡೋಣ ಅಂತ ಹೇಳಿದ್ದೆ. ಆದರೆ ಪರಿಸರ ವಾದಿಗಳು ಬಿಡಲಿಲ್ಲ. ರೋಪ್ ವೇ ಮಾಡಲು ನಾನು ಈಗಲೂ ಸಿದ್ಧ. ಆದರೆ ಯಾರೂ ತಡೆಯಬಾದರು ಎಂದು ಹೇಳಿದರು.

Latest Videos

ಬಿಜೆಪಿ ಉಪಾಧ್ಯಕ್ಷ ಸ್ಥಾನಕ್ಕೂ ಯತ್ನಾಳ್‌ ಪರಿಗಣಿಸದ ಹೈಕಮಾಂಡ್: ಪದಾಧಿಕಾರಿಗಳ ಪಟ್ಟಿ ಇಲ್ಲಿದೆ ನೋಡಿ..

ಬೆಂಗಳೂರು ಮೈಸೂರು ಹೈವೇ ಮಾಡಿದ್ದು ನಾವೇ. ನಾನು ಮಹದೇವಪ್ಪ ಸೇರಿಕೊಂಡು ಮಾಡಿದ್ದು. ನಿಮ್ಮ  ಎಂಪಿ (ಸಂಸದ ಪ್ರತಾಪ್‌ ಸಿಂಹ) ಬುರುಡೆ ಹೊಡೆಯುತ್ತಾನೆ. ಅವನ ಕ್ಷೇತ್ರ ಇರೋದು ಸಿದ್ದಲಿಂಗಪುರದವರೆಗೆ ಮಾತ್ರ. ಅಲ್ಲಿಂದ ಆಚೆ ಇರೋದು ಯಾರು? ಅವ್ನು ಸುಮ್ನು ಬುರುಡೆ ಹೊಡಿತಾನೆ. ನೀವು ಚಪ್ಪಾಳೆ ತಟ್ತೀರಿ. ನಾನು ಬೆನ್ನು ತಟ್ಟಿಕೊಳ್ತಾ ಇಲ್ಲ. ನಾನು ಹೋದ ಮೇಲೆ ಮೈಸೂರು ಅಭಿವೃದ್ಧಿ ಆಗಿಲ್ಲ. ಮತ್ತೆ ಬಂದಿದ್ದೇನೆ ನಾನು ಮೈಸೂರು ಅಭಿವೃದ್ಧಿ ಮಾಡೇ ಮಾಡ್ತೀವಿ. ಅದು ನನ್ನ ಜವಾಬ್ದಾರಿ. ಯಾರು ಏನೇ ವಿರೋಧ ಮಾಡಿದ್ರು ನಾವು ಹೇಳಿದಂತೆ ಮಾಡುತ್ತೇವೆ ಎಂದು ಹೇಳಿದರು. 

ಮೈಸೂರಿನ ವಿಜಯನಗರದಲ್ಲಿರುವ ಭಂಟರ ಸಂಘದ ಕಾರ್ಯಕ್ರಮವನ್ನ ನಾನೇ ಉದ್ಘಾಟನೆ ಮಾಡಿದ್ದೀನಿ. ರಜತ ಮಹೋತ್ಸವವನ್ನೂ ನಾನೇ ಉದ್ಘಾಟನೆ ಮಾಡುತ್ತಿದ್ದೇನೆ. ಸುವರ್ಣ ಮಹೋತ್ಸವವನ್ನೂ ನಾನೇ ಮಾಡಬೇಕು ಅಂದುಕೊಂಡಿದ್ದೇನೆ. ನಾನು 100 ವರ್ಷಕ್ಕಿಂತ‌ ಹೆಚ್ಚು ಬದುಕಬೇಕು ಅಂದುಕೊಂಡಿದ್ದೇನೆ. ಏಯ್, ಬಸವೇಗೌಡ ಇನ್ನು 25 ವರ್ಷ ಬದುಕುತ್ತೀನಿ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಂಯ್ಯ ತಾವು ಶತಾಯುಷಿಯಾಗಿ ಬದುಕುವ ಆಸೆ ವ್ಯಕ್ತಪಡಿಸಿದರು.

ಮೈಸೂರು ಪ್ರವಾಸಿಗರ ಸ್ವರ್ಗವಾಗಿದೆ. ಹೋಟೆಲ್ ಉದ್ಯಮ ಬೆಳೆದರೆ ಮೈಸೂರು ಬೆಳೆಯುತ್ತದೆ. ಅತಿಥಿ ದೇವೋ ಭವಃ ಅಂತ ಕರಿತೀವಿ. ರಾಜಕುಮಾರ್ ಅವರು ಅಭಿಮಾನಿಗಳೇ ದೇವರು ಅಂತ ಕರೆಯುತ್ತಿದ್ದರು. ನಾವು ಅತಿಥಿಗಳನ್ನೇ ದೇವರು ಅಂತ ಕರಿತಿದ್ದೀವಿ. ಆ ರೀತಿ‌ನಾವು ಕಾರಣಬೇಕು, ಆತಿಥ್ಯ ನೀಡಬೇಕು. ಹೋಟೆಲ್ ಉದ್ಯಮ ಮಾಡುವುದು ಒಂದು ವೃತ್ತಿಯಾಗಿದೆ. ಮೈಸೂರಲ್ಲಿ ಓದುವಾಗ, ಲಾಯರ್ ಆಗಿದ್ದಾಗ ಪ್ರತಿ‌ದಿನ ಹೋಟೆಲ್‌ಗೆ ಹೋಗುತ್ತಿದ್ದೆನು. ಪ್ರತಿ‌ದಿನ ಒಂದೊಂದು ಹೋಟೆಲ್‌ಗೆ ಹೋಗ್ತಿದ್ದೆ. ಎಲ್ಲೆಲ್ಲಿ ಚೆನ್ನಾಗಿ ತಿಂಡಿ ಸಿಗುತ್ತೆ ಅಲ್ಲೆಲ್ಲ ಹೋಗ್ತಿದ್ದೆನು ಎಂದರು.

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕೇವಲ 10 ರೂ.ಗೆ ಊಟ ಲಭ್ಯ: ಸರ್ಕಾರದಿಂದ ಕ್ಯಾಂಟೀನ್ ಆರಂಭ!

ಇನ್ನು ಮೈಸೂರಿನಲ್ಲಿ ಅತಿ ಹೆಚ್ಚಾಗಿ ಇಂದ್ರಕೆಫೆಗೆ ಹೋಗ್ತಿದ್ದೆ. ರಾತ್ರಿ ವೇಳೆ ನಾನ್ ವೆಜ್ ಹೋಟೆಲ್ ಹುಡುಕಿಕೊಂಡು ಹೋಗ್ತಾ ಇದ್ದೆ. ನಾನು ಚುನಾವಣೆ ಗೆದ್ದಾಗ, ಸೋತಾಗ ಎಲ್ಲಾ ಸಂದರ್ಭದಲ್ಲೂ ಹೋಟೆಲ್‌ಗೆ ಹೋಗುತ್ತಿದ್ದೆನು. ಬಿಜೆಪಿ ಶಾಸಕ ಶ್ರೀವತ್ಸ ನೀನು ಸ್ವಾತಿ ಹೋಟೆಲ್‌ಗೆ ಹೋಗಿ ಬಾ. ಮೈಸೂರಿನ ಸ್ವಾತಿ ಬೇರೆ, ಹಾಸನದ ಸ್ವಾತಿ ಬೇರೆ. ಮೈಸೂರಿನ ಸ್ವಾತಿ ನಾನ್ ವೆಜ್ ಹೋಟೆಲ್ ಅಂತ ಸಿಸಂ ಸಿದ್ದರಾಮಯ್ಯ ಅವರು ಬಿಜೆಪಿ ಶಾಸಕ ಶ್ರೀವತ್ಸ ಅವರ ಕಾಲೆಳೆದರು.

click me!