ಡಿಸಿ ನಿವಾಸ ನವೀಕರಣ ವೇಳೆ ನಿಯಮ ಉಲ್ಲಂಘನೆ; ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಸರ್ಕಾರ ಆದೇಶ

By Kannadaprabha NewsFirst Published Sep 8, 2023, 5:00 AM IST
Highlights

ಮೈಸೂರು ಜಿಲ್ಲಾಧಿಕಾರಿ ನಿವಾಸದ ನವೀಕರಣ ಹಾಗೂ ಬಟ್ಟೆಬ್ಯಾಗ್‌ ಖರೀದಿಯಲ್ಲಿ ನಿಯಮ ಉಲ್ಲಂಘಿಸಿರುವ ಆರೋಪದಲ್ಲಿ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ಧ ತನಿಖೆಗೆ ರಾಜ್ಯ ಸರ್ಕಾರ ಆದೇಶಿಸಿದೆ.

ಮೈಸೂರು: ಮೈಸೂರು ಜಿಲ್ಲಾಧಿಕಾರಿ ನಿವಾಸದ ನವೀಕರಣ ಹಾಗೂ ಬಟ್ಟೆಬ್ಯಾಗ್‌ ಖರೀದಿಯಲ್ಲಿ ನಿಯಮ ಉಲ್ಲಂಘಿಸಿರುವ ಆರೋಪದಲ್ಲಿ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ಧ ತನಿಖೆಗೆ ರಾಜ್ಯ ಸರ್ಕಾರ ಆದೇಶಿಸಿದೆ.

ಸಿಂಧೂರಿ(Rohini sindhuri IAS)ಯವರು ಮೈಸೂರು ಜಿಲ್ಲಾಧಿಕಾರಿ ಆಗಿದ್ದ ವೇಳೆ ಮಾಡಿದ್ದ ಜಿಲ್ಲಾಧಿಕಾರಿ ನಿವಾಸದ ನವೀಕರಣ ಹಾಗೂ ಬಟ್ಟೆಬ್ಯಾಗ್‌ ಖರೀದಿಯಲ್ಲಿ ನಿಯಮ ಉಲ್ಲಂಘನೆ ಆರೋಪ ಈಗ ಸಾಬೀತಾಗಿದ್ದು, ಸರ್ಕಾರದ ಪ್ರಾಥಮಿಕ ತನಿಖಾ ವರದಿ ಪ್ರಕಾರ ಅವರ ಮೇಲೆ ಶಿಸ್ತುಕ್ರಮ ಕೈಗೊಳ್ಳಲು ಡಿಪಿಎಆರ್‌ ಅಧೀನ ಕಾರ್ಯದರ್ಶಿ ಜೇಮ್ಸ… ಥಾರಖನ್‌ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಇದರನ್ವಯ ಸಮಗ್ರ ವಿಚಾರಣೆಗೆ ನಿವೃತ್ತ ಐಎಎಸ್‌ ಅಧಿಕಾರಿ ಯೋಗೇಂದ್ರ ತ್ರಿಪಾಠಿ ಅವರನ್ನು ನೇಮಿಸಲಾಗಿದೆ. ಬಿಬಿಎಂಪಿ ವಿಶೇಷ ಆಯುಕ್ತ ಉಜ್ವಲ್‌ ಕುಮಾರ್‌ ಘೋಷ್‌ ಅವರನ್ನು ಸರ್ಕಾರದ ಪರವಾಗಿ ಪ್ರಕರಣದ ವಿವರ ಒದಗಿಸಲು ನೇಮಿಸಲಾಗಿದೆ.

 

IAS Vs IPS: ಡಿ. ರೂಪಾ ಮೌದ್ಗಿಲ್‌ಗೆ ಅರ್ಜಿ ವಜಾಗೊಳಿಸಿದ ಹೈಕೋರ್ಟ್‌, ರೋಹಿಣಿ ಸಿಂಧೂರಿಗೆ ಗೆಲುವು

ಜಿಲ್ಲಾಧಿಕಾರಿ ನಿವಾಸ ನವೀಕರಣಕ್ಕೆ ಯಾವ ಅನುಮತಿಯನ್ನೂ ಪಡೆದಿಲ್ಲ. ನವೀಕರಣಕ್ಕೆ ಬಳಿಸಿದ ಹಣಕ್ಕೂ ಆರ್ಥಿಕ ಇಲಾಖೆ ಅನುಮತಿ ಪಡೆದಿಲ್ಲ. ಇದು ನಿಯಮ ಉಲ್ಲಂಘನೆಯಾಗಿದ್ದು, ಇನ್ನು ಬಟ್ಟೆಬ್ಯಾಗ್‌ ಖರೀದಿಯಲ್ಲೂ ಯಾವ ನಿಯಮಾವಳಿ ಪಾಲನೆ ಆಗಿಲ್ಲ. ಆದ್ದರಿಂದ ಶಿಸ್ತುಕ್ರಮ ಜರುಗಿಸಿ ಎಂದು ಶಿಫಾರಸು ಮಾಡಲಾಗಿದೆ.

ಕೆ.ಆರ್‌.ನಗರ ಶಾಸಕರಾಗಿದ್ದ ಮಾಜಿ ಸಚಿವ ಸಾ.ರಾ.ಮಹೇಶ್‌ ಅವರು ರೋಹಿಣಿ ಸಿಂಧೂರಿ ಅವರ ವಿರುದ್ಧ ಈ ಸಂಬಂಧ ಆರೋಪ ಮಾಡಿದ್ದರು. ಅಲ್ಲದೇ ವಿಧಾನಸಭೆಯಲ್ಲೂ ಪ್ರಸ್ತಾಪಿಸಿದ್ದು ಇಲ್ಲಿ ಉಲ್ಲೇಖನೀಯ. 

ಸಿಂಧೂರಿ ಕೇಸ್‌: ರೂಪಾ ಅರ್ಜಿ ವಿಚಾರಣೆಯಿಂದ ಹಿಂದೆ ಸರಿದ ಜಡ್ಜ್‌

 

click me!