ಮೀಸಲಾತಿ ವಿಚಾರವಾಗಿ ಹಲವು ಸಮುದಾಯಗಳ ಹೋರಾಟ| ಎಲ್ಲರೂ ಒಟ್ಟಿಗೆ ಸೇರಿ ಚರ್ಚೆ ಮಾಡಿದರೆ ಒಳ್ಳೆಯ ಪರಿಹಾರ ಸಿಗಬಹುದು| ಮೀಸಲಾತಿ ನೀಡುವ ವಿಚಾರದಲ್ಲಿ ಯಾರಿಗಾದರೂ ಅನ್ಯಾಯವಾದರೆ, ಅದು ಹಿಂಸೆಗೆ ದಾರಿ| ಮೀಸಲಾತಿ ಕುರಿತು ಸದ್ಯಕ್ಕೆ ನಾನು ಏನನ್ನೂ ಸ್ಪಷ್ಟವಾಗಿ ಹೇಳಲಾರೆ: ವಿನಯ್ ಗುರೂಜಿ|
ಬೆಂಗಳೂರು(ಮಾ.01): ರಾಜ್ಯ ಸರ್ಕಾರ ಮೀಸಲಾತಿ ವಿಚಾರದಲ್ಲಿ ಯಾವ ಸಮುದಾಯಕ್ಕೂ ಅನ್ಯಾಯವಾಗದಂತೆ ಸಮಾನ ನ್ಯಾಯ ಸಿಗುವ ತಿರ್ಮಾನ ತೆಗೆದುಕೊಳ್ಳುವ ಅಗತ್ಯವಿದೆ ಎಂದು ಮಹಾತ್ಮ ಗಾಂಧಿ ಸೇವಾ ಟ್ರಸ್ಟ್‌ನ ಸಂಸ್ಥಾಪಕ ವಿನಯ್ ಗುರೂಜಿ ಅಭಿಪ್ರಾಯಪಟ್ಟಿದ್ದಾರೆ.
ಭಾನುವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೀಸಲಾತಿ ವಿಚಾರವಾಗಿ ಹಲವು ಸಮುದಾಯಗಳು ಹೋರಾಟ ಆರಂಭಿಸಿವೆ. ಗಾಂಧಿ ತತ್ವ ಪಾಲಿಸುವ ನಾನು ಯಾವುದೋ ಒಂದು ಸಮುದಾಯಕ್ಕೆ ಮೀಸಲಾತಿ ನೀಡಿ ಎಂದು ಹೇಳಲು ಸಾಧ್ಯವಿಲ್ಲ. ಈ ಸಂಬಂಧ ಮುಖ್ಯಮಂತ್ರಿ, ಶಿಕ್ಷಣ ತಜ್ಞರು, ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳು, ಕಾನೂನು ತಜ್ಞರೊಂದಿಗೆ ಮಾತನಾಡಿದ್ದೇನೆ. ಈ ಎಲ್ಲರೂ ಒಟ್ಟಿಗೆ ಸೇರಿ ಚರ್ಚೆ ಮಾಡಿದರೆ ಒಳ್ಳೆಯ ಪರಿಹಾರ ಸಿಗಬಹುದು. ಮೀಸಲಾತಿ ನೀಡುವ ವಿಚಾರದಲ್ಲಿ ಯಾರಿಗಾದರೂ ಅನ್ಯಾಯವಾದರೆ, ಅದು ಹಿಂಸೆಗೆ ದಾರಿಯಾಗುತ್ತದೆ. ಇನ್ನೂ ಚರ್ಚೆಗಳು ಮುಂದುವರಿದಿರುವುದರಿಂದ ಮೀಸಲಾತಿ ಕುರಿತು ಸದ್ಯಕ್ಕೆ ನಾನು ಏನನ್ನೂ ಸ್ಪಷ್ಟವಾಗಿ ಹೇಳಲಾರೆ ಎಂದರು.
ಮೀಸಲಾತಿ ಹೋರಾಟಕ್ಕೆ ಗೌಡ-ಲಿಂಗಾಯತರ ಎಂಟ್ರಿ ; 2A ಗಾಗಿ ಪಟ್ಟು
ಮೀಸಲಾತಿ ವಿಚಾರದಲ್ಲಿ ಯಾವುದೇ ಹಿಂಸೆಗೆ ಆಸ್ಪದೆ ಕೊಡದೆ ಶಾಂತಿಯುತ ತೀರ್ಮಾನ ಕೈಗೊಳ್ಳಬೇಕು. ಹೀಗಾದಾಗ ಗಾಂಧಿ ಸಿದ್ಧಾಂತದಲ್ಲಿ ಬದುಕುತ್ತಿರುವ ನನಗೆ ಸಂತೋಷವಾಗುತ್ತದೆ. ಎಲ್ಲರಿಗೂ ಸಮಾನ ನ್ಯಾಯ ಸಿಗುವ ಕಾನೂನು ಬರಲಿ ಎಂಬುದು ನನ್ನ ಇಚ್ಛೆ ಎಂದು ಹೇಳಿದರು.