ತಹಶಿಲ್ದಾರ್ ಕಚೇರಿ ಎದುರು ಕುಡಿದು ಮಕಾಡೆ ಮಲಗಿದ್ದ ಗ್ರಾಮಲೆಕ್ಕಾಧಿಕಾರಿ ಅಮಾನತು!

By Suvarna News  |  First Published May 12, 2022, 9:41 PM IST

• ಸವದತ್ತಿ ತಹಶಿಲ್ದಾರ್ ಕಚೇರಿ ಎದುರು ಕುಡಿದು ಮಕಾಡೆ ಮಲಗಿದ್ದ ಗ್ರಾಮಲೆಕ್ಕಾಧಿಕಾರಿ

• ಘಟನೆ ಬಗ್ಗೆ ಬೆಳಗಾವಿ ಡಿಸಿಗೆ ವರದಿ ನೀಡಿದ್ದ ಸವದತ್ತಿ ತಹಶಿಲ್ದಾರ್

• ತಹಶಿಲ್ದಾರ್ ವರದಿ ಆಧರಿಸಿ ಡಿಸಿ ನಿತೇಶ್ ಪಾಟೀಲ್‌ರಿಂದ ಅಮಾನತು ಆದೇಶ
 


ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ

ಬೆಳಗಾವಿ (ಮೇ. 12): ಕರ್ತವ್ಯ ವೇಳೆ ಕಂಠಪೂರ್ತಿ ಕುಡಿದು ಸವದತ್ತಿ ತಹಶಿಲ್ದಾರ್ ಕಚೇರಿ (Tahasildar Office) ಎದುರು ಮಕಾಡೆ ಮಲಗಿದ್ದ ಗ್ರಾಮಲೆಕ್ಕಾಧಿಕಾರಿ (village accountant) ಸಂಜು ಬೆಣ್ಣಿ (Sanju Benni) ಅಮಾನತುಗೊಳಿಸಿ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ (Nitesh Patil) ಆದೇಶ ಹೊರಡಿಸಿದ್ದಾರೆ. ಬೆಳಗಾವಿ ಜಿಲ್ಲೆ ಸವದತ್ತಿ ತಹಶಿಲ್ದಾರ್ ಕಚೇರಿ ಎದುರು ಗ್ರಾಮಲೆಕ್ಕಾಧಿಕಾರಿ ಎಸ್.ಬಿ.ಬೆಣ್ಣಿ ಕಂಠಪೂರ್ತಿ ಕುಡಿದು ಮಲಗಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. 

Tap to resize

Latest Videos

ಈ ಮೊದಲು ಸವದತ್ತಿ ತಾಲೂಕಿನ ಗೊರವನಕೊಳ್ಳ ಗ್ರಾಮದ ಗ್ರಾಮಲೆಕ್ಕಾಧಿಕಾರಿ ಆಗಿದ್ದ ಎಸ್.ಬಿ.ಬೆಣ್ಣಿ‌ ಅಲ್ಲಿಯೂ ಕಂಠಪೂರ್ತಿ ಕುಡಿದು ದುರ್ವರ್ತನೆ ತೋರುತ್ತಿದ್ದ ಬಗ್ಗೆ ಗ್ರಾಮಸ್ಥರು ದೂರು ನೀಡಿದ್ರು. ಹೀಗಾಗಿ ಗ್ರಾಮಲೆಕ್ಕಾಧಿಕಾರಿ ಎಸ್.ಬಿ.ಬೆಣ್ಣಿಯನ್ನು‌ ತಹಶಿಲ್ದಾರ್ ಕಚೇರಿಗೆ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಆದರೂ ತಹಶಿಲ್ದಾರ್ ಕಚೇರಿಯಲ್ಲಿಯೂ ಕರ್ತವ್ಯ ವೇಳೆ ಮದ್ಯಪಾನ ಮಾಡಿ ಬೇಜವಾಬ್ದಾರಿ ಪ್ರದರ್ಶಿಸುತ್ತಿದ್ದರು. ಕ್ರಮ ಕೈಗೊಳ್ಳದ ಸವದತ್ತಿ ತಹಶಿಲ್ದಾರ್ ಪ್ರಶಾಂತ ಪಾಟೀಲ್ ವಿರುದ್ಧವೂ ಆಕ್ರೋಶ ವ್ಯಕ್ತವಾಗಿತ್ತು. 

ಮಾಧ್ಯಮಗಳ ವರದಿ ಪ್ರಸಾರವಾಗುತ್ತಿದ್ದಂತೆ ಬೆಳಗಾವಿ ಡಿಸಿಗೆ ಘಟನೆಯ ಬಗ್ಗೆ ವರದಿ ನೀಡಿದ್ದರು. ಗ್ರಾಮಲೆಕ್ಕಾಧಿಕಾರಿ ಸಂಜು ಬೆಣ್ಣಿ ಸಮಯಕ್ಕೆ ಸರಿಯಾಗಿ ಕಚೇರಿಗೆ ಬರುತ್ತಿಲ್ಲ‌. ಮುಂಚೆಯೇ ಕಚೇರಿಗೆ ಬಂದು ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಿ ಕಚೇರಿ ವೇಳೆ ಮೇಲಾಧಿಕಾರಿಗಳ ಅನುಮತಿ ಪಡೆಯದೇ ಕೇಂದ್ರ ಸ್ಥಾನ ಬಿಡುತ್ತಾರೆ. ಮೇಲಾಧಿಕಾರಿಗಳ ಆದೇಶ ಪಾಲಿಸುತ್ತಿಲ್ಲ. ಮೇ 10ರಂದು ಕಚೇರಿಗೆ ಸರಿಯಾಗಿ ಬರದೇ ಹಾಜರಾತಿ ಪುಸ್ತಕದಲ್ಲಿ ಗೈರು ಎಂದು ನಮೂದಿಸಿದಾಗ ಅದರ ಮೇಲೆ ಸಹಿ ಮಾಡಿ ಮಧ್ಯಾಹ್ನ ಕಂಠಪೂರ್ತಿ ಕುಡಿದು ಕಚೇರಿ ಮುಂಭಾಗದಲ್ಲಿ ಬಿದ್ದು ದುರ್ವರ್ತನೆ ತೋರಿರುತ್ತಾರೆ. 

ಕುಡಿಯೋದೇ ನನ್ನ ವೀಕ್ನೆಸ್ಸು, ತಹಶಿಲ್ದಾರ್ ಕಚೇರಿ ಎದುರು ಟೈಟ್ ಆಗಿ ಮಲಗಿದ ಗ್ರಾಮ ಲೆಕ್ಕಾಧಿಕಾರಿ!

ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ವಿಡಿಯೋ ವೈರಲ್ ಮಾಡಿದ್ದಾರೆ ಎಂದು ವರದಿ ನೀಡಿದ್ರು. ಈ ವರದಿ ಆಧರಿಸಿ ಗ್ರಾಮಲೆಕ್ಕಾಧಿಕಾರಿ ಎಸ್.ಬಿ.ಬೆಣ್ಣಿಯವರ ವಿರುದ್ಧ ಇಲಾಖೆ ವಿಚಾರಣೆ ಬಾಕಿ ಉಳಿಸಿ ಸೇವೆಯಿಂದ ಅಮಾನತುಗೊಳಿಸಿ ಬೆಳಗಾವಿ ಡಿಸಿ ನಿತೇಶ್ ಪಾಟೀಲ್ ಆದೇಶ ಹೊರಡಿಸಿದ್ದಾರೆ.

click me!