
ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷ್ಯಾನೆಟ್ ಸುವಣ೯ನ್ಯೂಸ್, ಬಾಗಲಕೋಟೆ.
ಬಾಗಲಕೋಟೆ, (ಮೇ.12): ಮುತಾಲಿಕರನ್ನ ಒದ್ದು ಒಳಗೆ ಹಾಕಿ ಎಂದಿದ್ದ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ವಿರುದ್ಧ ಪ್ರಮೋದ್ ಮುತಾಲಿಕ್ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೇ ಬಿಜೆಪಿಗೂ-ಶ್ರೀರಾಮ ಸೇನೆಗೂ ಸಂಬಂಧವಿಲ್ಲ ಎಂದು ಗುಡುಗಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ಮುತಾಲಿಕ್, ಬಿಜೆಪಿಗೂ-ಶ್ರೀರಾಮ ಸೇನೆಗೂ ಸಂಬಂಧವಿಲ್ಲ ಎಂದ ಪ್ರಮೋದ ಮುತಾಲಿಕ್ ಸ್ಪಷ್ಟಪಡಿಸಿದರು. ಬಿಜೆಪಿಯಲ್ಲಿ ಆರ್ ಎಸ್ ಎಸ್,ಭಜರಂಗದಳಿವೆ. ನಾವು ಬಿಜೆಪಿ ಅಲ್ಲ,ನಮಗೆ ಬಿಜೆಪಿ ಸಂಬಂದವಿಲ್ಲ. ನಾವು ಯಾವುದೇ ಪಕ್ಷಕ್ಕೆ ಸೇರಿದವರಲ್ಲ,ನಾವು ಸ್ವತಂತ್ರರು. ಬಿಜೆಪಿಗರನ್ನ ಹಿಗ್ಗಾ-ಮುಗ್ಗಾ ಬೈಯಿತಾ ಇದ್ದೀನಿ.ಕುಮಾರಸ್ವಾಮಿಯವರೇ ನಾನು ಯಾರದೇ ಮುಲಾಜಿನಲ್ಲಿಲ್ಲ. ನನಗೆ ದೇಶ ಮುಖ್ಯ,ಹಿಂದುತ್ವ ಮುಖ್ಯವಾಗಿದೆ, ಬಿಜೆಪಿಯವರ ಬಾಲ ಹಿಡಿದುಕೊಂಡು ಅಲ್ಲಾಡೋವ್ನು ನಾನಲ್ಲ ಎಂದರು.
ಎಚ್‌ಡಿಕೆ ವಿರುದ್ಧ ಗುಡುಗು
ಈಗಾಗಲೇ ಬಾದಾಮಿಯಲ್ಲಿ ನಮ್ಮ ಕಾರ್ಯಕರ್ತರು ಅವರ ಮೇಲೆ ಕೇಸ್ ದಾಖಲು ಮಾಡಲು ಅರ್ಜಿ ಸಲ್ಲಿಸಿದ್ದಾರೆ. ನನ್ನ ಮೇಲಿನ ಹೇಳಿಕೆ ಹೆಚ್ಡಿಕೆಗೆ ಶೋಭೆ ತರುವಂತದ್ದಲ್ಲ. ಇಷ್ಟು ಕೆಳಮಟ್ಟಕ್ಕೆ ಇಳಿದು ಮಾತನಾಡ್ತಾರೆ ಅಂದ್ರೆ ಹೇಗೆ ಅವರ ನಾಲಿಗೆ, ವರ್ತನೆ, ರೀತಿ ಒಂದೊಂದೇ ಹೊರಗೆ ಬರ್ತಿವೆ ಎಂದು ಕಿಡಿಕಾರಿದರು.
ಮುತಾಲಿಕ್ ರನ್ನ ಒದ್ದು ಒಳಗಡೆ ಹಾಕ್ಬೇಕು HD Kumaraswamy
ಮುಸ್ಲಿಂ ವೋಟ್ ಗಾಗಿ ನಮ್ಮನ್ನೆಲ್ಲಾ ಇವರು ಕೆಣಕುತ್ತಿದ್ದಾರೆ. ಕಾಂಗ್ರೆಸ್-ಜೆಡಿಎಸ್ ನವರು ಎಲೆಕ್ಷನ್ ಹತ್ತಿರ ಬಂದಂಗೆ ಹಿಂದೂಗಳನ್ನು ಕೆಣಕುತ್ತಾರೆ. ಮುಸ್ಲಿಂ ವೋಟ್ ಗಳನ್ನು ಹೆಚ್ಚು ಪಡೆಯೋಕೆ ಕಾಂಗ್ರೆಸ್-ಜೆಡಿಎಸ್ ಈ ನೀಚ ಕೃತ್ಯ ಮಾಡ್ತಿವೆ. ಹಿಂದುಗಳ ಮೇಲೆ ಹೀಗೆ ಮಾಡುತ್ತ ಹೋಗುತ್ತಾರೆ. ಹಿಂದೂಗಳೇ ಇವರಿಗೆ ಪಾಠ ಕಲಿಸ್ತಾರೆ.ನೀವು ಮುಸ್ಲಿಂ ವೋಟ್ ಗಳಿಂದ ಮಾತ್ರ ಗೆಲ್ಲೋಕೆ ಸಾಧ್ಯವಿಲ್ಲ ನೆನಪಿಟ್ಕೊಳ್ಳಿ. ಹಿಂದೂಗಳೇ ನಿಮ್ಮನ್ನ ಧೂಳಿಪಟ ಮಾಡುತ್ತಾರೆ, ಕಾಂಗ್ರೆಸ್ ನವರನ್ನು ಈಗಾಗಲೇ ಧೂಳಿಪಟ ಮಾಡಿದ್ದಾರೆ.
ಜೆಡಿಎಸ್ ನ ಅಪ್ಪ-ಮಕ್ಕಳು ಕೂಡಾ ನಿಶ್ಚಿತವಾಗಿ ಮನೆಗೆ ಹೋಗ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಮಸೇನೆನೋ, ರಾವಣ ಸೇನೆನೋ ಎಂಬ ಕುಮಾರಸ್ವಾಮಿ ವ್ಯಂಗ್ಯದ ವಿಚಾರವಾಗಿ ಮುತಾಲಿಕ್ ಮಾತನಾಡಿ, ಶ್ರೀರಾಮಸೇನೆ 17 ವರ್ಷಗಳಿಂದ ದೇಶ ಹಿತಕ್ಕೆ, ಹಿಂದುತ್ವದ ಕಾರ್ಯವನ್ನು ನಿರಂತರವಾಗಿ ಮಾಡುತ್ತ ಬಂದಿದ್ದೇವೆ. ರಾವಣ ರೀತಿಯ ಕಾರ್ಯ ಮಾಡ್ತಿರೋದು ರಾಜಕಾರಣಿಗಳು. ನೀವು ರಾವಣನ ವಂಶಸ್ಥರು, ರಾವಣನ ರೀತಿ ವರ್ತನೆ ಮಾಡ್ತಿದಿರಿ ಎಂದರಲ್ಲದೆ, ನೀವು ಗೆದ್ದಾಗ, ಗೆಲ್ಲದೇ ಇದ್ದಾಗ, ಅಧಿಕಾರದಲ್ಲಿ ಇದ್ದಾಗ-ಇಲ್ದೇ ಇದ್ದಾಗ. ನಿಮ್ಮದು ರಾವಣನ ರೀತಿಯಲ್ಲಿಯೇ ನಡುವಳಿಕೆ ಇರುತ್ತೆ ಎಂದರು.
ರಾಕ್ಷಸರ ರೀತಿಯಲ್ಲಿ ನಿಮ್ಮ ನಡುವಳಿಕೆ ಇದೆ. ನೀವು ಬೂಟಾಟಿಕೆಯ ರಾಜಕಾರಣ ಮಾಡ್ತಿದಿರಿ. ನೀವು ರಾವಣನ ವಂಸ್ಥಸ್ತರಿದಿರಿ, ಅದಕ್ಕೆ ನಿಮ್ಮನ್ನ ಯಾವ ಸ್ಥಾನದಲ್ಲಿ ಇಡಬೇಕೋ, ಜನ ನಿಮ್ಮನ್ನ ಅಲ್ಲೇ ಇಟ್ಟಿದ್ದಾರೆ.ಜಾತ್ಯಾತೀತ ಅಲ್ಲ ನೀವು, ಜಾತೀಯ ವಾದಿಗಳು ನೀವು. ಒಕ್ಕಲಿಗರನ್ನು ಹೊರಗೆ ಬಿಟ್ಟು ಎಲೆಕ್ಷನ್ ಗೆ ಬನ್ನಿ. ನಿಮಗೆ ೧೦ ವೋಟ್ ಗಳು ಬೀಳೋದಿಲ್ಲ, ಯಾವುದೇ ದೇಶ,ದರ್ಮದ ಬಗ್ಗೆ ಸಮಾಜದ ಬಗ್ಗೆ ಜನರ ಬಗ್ಗೆ, ಬಡವರ ಬಗ್ಗೆ ಏನೇನೋ ಕಾಳಜಿ ಇಲ್ಲಾ ನಿಮಗೆ ಎಂದು ಎಚ್.ಡಿಕೆ ವಿರುದ್ಧ ಮುತಾಲಿಕ್ ಗರಂ ಆದರು.
ಜ್ಞಾನವ್ಯಾಪಿ ವಿವಾದದ ಹಿನ್ನೆಲೆಯಲ್ಲಿ ಇಂದು ಕೋರ್ಟ್ ನೀಡಿದ ತೀರ್ಪನ್ನು ಶ್ರೀರಾಮಸೇನೆ ಸ್ವಾಗತಿಸುತ್ತದೆ ಮತ್ತು ಈ ಮೂಲಕ ಮುಂದೆ ಜ್ಞಾನವ್ಯಾಪಿ ದೇಗುಲ ನಮ್ಮದಾಗುತ್ತೇ ಅನ್ನೋ ವಿಶ್ವಾಸ ನಮಗಿದೆ. ಅವರು ಜ್ಞಾನವ್ಯಾಪಿ ವಿಚಾರದಲ್ಲಿ ಕೆಲವೊಬ್ಬರು ಕೋರ್ಟ್ ಗೆ ಹೋಗಿದ್ರು, ವಿಡಿಯೋ ಮಾಡಿ ಅಂದಾಗ ಅದಕ್ಕೆ ಅಡ್ಡಿಪಡಿಸಿದ್ರು. ಆದರೆ ಈಗಿನ ಕೋರ್ಟ್ 17ರವೊಳಗೆ ವಿಡಿಯೋ ಮಾಡಿ ಒಪ್ಪಿಸಬೇಕು ಅಂತ ಹೇಳಿದೆ. ಶ್ರೀರಾಮಸೇನೆ ಸಂಘಟನೆ ಇದನ್ನು ಸ್ವಾಗತ ಮಾಡ್ತಿದ್ದೀವಿ. ಇದಕ್ಕೆ ಅಡ್ಡಿಪಡಿಸುವಂತಹವರಿಗೆ ಈಗ ಭಯ ಯಾಕೆ ಎಂದು ಪ್ರಶ್ನಿಸಿದರು.
ಒಳಗಡೆ ಏನಾದ್ರೂ ತಲವಾರ್ ಇಟ್ಟಿದ್ದಾರಾ,ಬಾಂಬ್ ಇಟ್ಟಿದ್ದಾರಾ, ಪಿಸ್ತೂಲ್ ಇಟ್ಟಿದ್ದಾರಾ ಎಂದು ಕೇಳಿ ಭಯ ಯಾಕೆ ಎಂದರು.
ಇನ್ನು ಮುಕ್ತವಾದ ದೇವಸ್ಥಾನ ಒಡೆದು ಮಸೀದಿ ಕಟ್ಟಿದ್ದೀರಿ. ಸೋ ಅದಕ್ಕೆ ಕೋಟ೯ ಆಜ್ಞೆ ಈಗ ನಿಮ್ಮ ಮುಖಕ್ಕೆ ಹೊಡೆದ ಹಾಗೆ ಹೇಳಿದೆ.
17 ರೊಳಗೆ ಆವರಣದಲ್ಲಿ ಏನೇನಿದೆ, ದೇಶದ್ರೋಹಿ, ಮತಾಂಧ ಔರಂಗಜೇಬ ಏನೇನು ಮಾಡಿದಾ, ಅನ್ನೋದು ಬಟಾ ಬಯಲಾಗಲಿದೆ. ಆ ಜ್ಞಾನವ್ಯಾಪಿ ದೇಗುಲ ನಮ್ಮದಾಗುತ್ತೇ ಅನ್ನೋ ವಿಶ್ವಾಸ ಇದೆ. ಮತ್ತೊಮ್ಮೆ ಕೋಟ೯ ಆಜ್ಞೆಯನ್ನು ಸ್ವಾಗತ ಮಾಡುತ್ತೇನೆ ಎಂದ ಮುತಾಲಿಕ್ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ