ನೆನ್ನೆ ಘಟನೆಯಲ್ಲೂ ಆರೂವರೆ ಕೋಟಿ ಚೆಕ್ ಬೌನ್ಸ್ ಮಾಡಿದ್ದು ಮಧು ಬಂಗಾರಪ್ಪ. ಆರು ತಿಂಗಳು ಜೈಲು ಸಜೆಗೆ ಒಳಗಾಗಿರುವುದು ಮಧುಬಂಗಾರಪ್ಪ. ಆದರೆ ಪ್ರತಾಪಸಿಂಹನ ತಮ್ಮನನ್ನ ಬಂಧಿಸಿದ್ದೀರಿ! ಅದೂ ಸಿನಿಮೀಯ ಶೈಲಿಯಲ್ಲಿ ಚೇಸ್ ಮಾಡಿ ಬಂಧಿಸಿದ್ದೀರಿ. ಹೀಗಾಗಿ ನಿಜಕ್ಕೂ ನೀವು ಬ್ರಿಲಿಯಂಟ್ ಪಾಲಿಟಿಕ್ಸ್ ಪುತ್ರ ರಾಜಕೀಯ ಭವಿಷ್ಯಕ್ಕಾಗಿ ಯಾರನ್ನ ಬೇಕಾದರೂ ಬಲಿಕೊಡುವ ತಂದೆಯಿದ್ದರೆ ಅದು ಸಿದ್ದರಾಮಯ್ಯ ಮಾತ್ರ ಎಂದ ಪ್ರತಾಪ್ ಸಿಂಹ
ಮೈಸೂರು (ಡಿ.31): ಕೋಟ್ಯಂತರ ರೂಪಾಯಿ ಮೌಲ್ಯದ ಮರಗಳ್ಳತನ, ಅಕ್ರಮವಾಗಿ ಸಾಗಾಟ ಮಾಡಿರುವ ಅರೋಪ ಹಿನ್ನೆಲೆ ಅರಣ್ಯಾಧಿಕಾರಿಗಳು ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹರ ಸಹೋದರ ವಿಕ್ರಂ ಸಿಂಹರನ್ನು ಬಂಧಿಸಿದ್ದಾರೆ.
ಎಫ್‌ಐಆರ್‌ನಲ್ಲಿ ವಿಕ್ರಂ ಸಿಂಹರ ಹೆಸರು ಉಲ್ಲೇಖಿಸಿಲ್ಲ. ಎಫ್‌ಐಆರ್‌ನಲ್ಲಿ ಹೆಸರೇ ಇಲ್ಲದಿದ್ದರೂ ಕಾಂಗ್ರೆಸ್ ಸರ್ಕಾರ ರಾಜಕೀಯ ಕಾರಣಕ್ಕಾಗಿ ಸಂಸದರ ಸಹೋದರನನ್ನು ಬಂಧಿಸಿದೆ ಮತ್ತು ಆ ಮೂಲಕ ದ್ವೇಷ ರಾಜಕಾರಣ ಮಾಡುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಸಹೋದರನ ಬಂಧನ ವಿಚಾರವಾಗಿ ಸಂಸದ ಪ್ರತಾಪ ಸಿಂಹ ಭಾವುಕವಾಗಿ ಪ್ರತಿಕ್ರಿಯಿಸಿದ್ದಾರೆ.
ಮರಗಳ್ಳತನ ಪ್ರಕರಣ; ಸಂಸದ ಪ್ರತಾಪ್ ಸಿಂಹ ಸಹೋದರ ವಿಕ್ರಂ ಸಿಂಹ ಅರಣ್ಯಾಧಿಕಾರಿಗಳ ವಶಕ್ಕೆ!
ಮಾನ್ಯ ಸಿದ್ದರಾಮಯ್ಯ ಅವರಿಗೆ ಸಾಷ್ಟಾಂಗ ನಮಸ್ಕಾರಗಳು. ಅವರನ್ನ ನಾನು ಎರಡು ವಿಚಾರಕ್ಕೆ ಶ್ಲಾಘನೆ ಮಾಡಬೇಕು ಅಂದುಕೊಂಡಿದ್ದೇನೆ. ಮೊದಲನೆಯದಾಗಿ ತನ್ನ ಮಗನ ರಾಜಕೀಯ ಭವಿಷ್ಯಕ್ಕಾಗಿ, ತಮ್ಮ ಮಗನನ್ನ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಿಸಲು ಯಾರನ್ನ ಬೇಕಾದರೂ ತುಳಿಯುತ್ತಾರೆ. ಇದನ್ನ ಸಿದ್ದರಾಮಯ್ಯ ಅವರಿಂದ ಕಲಿಯಬೇಕು. ತನ್ನ ಮಗನಿಗೆ ಪ್ರತಾಪ ಸಿಂಹ ಅಡ್ಡಿ ಆಗಿದ್ದಾನೆ ಅಂತಾ ಮುಗಿಸಲು ಮುಂದಾಗಿದ್ದೀರಿ. ನಿಮ್ಮಂತಹ ತಂದೆ ಪ್ರಪಂಚದಲ್ಲೇ ಎಲ್ಲೂ ಸಿಗಲ್ಲ. ಇಂತಹ ತಂದೆ ಎಲ್ಲರಿಗೂ ಸಿಗಲ್ಲ. ನೀವೊಬ್ಬ ಬ್ರಿಲಿಯೆಂಟ್ ಫಾದರ್. ಈ ಕಾರಣಕ್ಕಾಗಿ ನಿಜಕ್ಕೂ ನಿಮ್ಮನ್ನ ಮೆಚ್ಚಿದ್ದೇನೆ.
ಎರಡನೇ ಕಾರಣ, ನೀವು ಬ್ರಿಲಿಯೆಂಟ್ ಪಾಲಿಟಿಷಿಯನ್. ಬೆಳಗಾವಿಯಲ್ಲಿ ಹಿಂದುಳಿದ ಮಹಿಳೆಯನ್ನ ಬೆತ್ತಲೆ ಮಾಡಿ ಮೆರವಣಿಗೆ ಮಾಡಿದ್ದಾರೆ. ಆ ವಿಚಾರವನ್ನ ನೀವು ನನ್ನ ವಿಷಯ ಇಟ್ಟುಕೊಂಡು ಡೈವರ್ಟ್ ಮಾಡಿದ್ದೀರಿ. ಮೀಡಿಯಾ ಅಟೆನ್ಷನ್ ಡೈವರ್ಟ್ ಮಾಡಿದ್ರಿ. ನೀವು, ನಿಮ್ಮ ಸಚಿವ ಸಂಪುಟದ ಸದಸ್ಯರು, ಡಿಸಿಎಂ ಎಲ್ಲರೂ ಪಾರ್ಲಿಮೆಂಟ್ ಪಾಸ್ ಇಟ್ಕೊಂಡು ಮಾತಾಡ್ತೀರಿ. ನಿಮಗೆ 40 ವರ್ಷದ ಅನುಭವವಿದೆ. ನನ್ನ ಹೆಸರು ಇಟ್ಟುಕೊಂಡು, ತನಿಖೆ ನಡೆಸಬೇಕೆಂದು ವಿಷಯ ಹಸ್ತಾಂತರಿಸಿದ್ರಿ. ಇಲ್ಲಿ ನಿಮ್ಮ ಮಗ ಸುಪುತ್ರ ಮಿನಿಟ್ ಕೊಡುವ ಬದಲು ನನ್ನ ವಿರುದ್ಧ ತನಿಖೆ ಆಗಬೇಕು ಅಂತೀರಿ! ನೆನ್ನೆ ಘಟನೆಯಲ್ಲೂ ಆರೂವರೆ ಕೋಟಿ ಚೆಕ್ ಬೌನ್ಸ್ ಮಾಡಿದ್ದು ಮಧು ಬಂಗಾರಪ್ಪ. ಆರು ತಿಂಗಳು ಜೈಲು ಸಜೆಗೆ ಒಳಗಾಗಿರುವುದು ಮಧುಬಂಗಾರಪ್ಪ. ಆದರೆ ಪ್ರತಾಪಸಿಂಹನ ತಮ್ಮನನ್ನ ಬಂಧಿಸಿದ್ದೀರಿ! ಅದೂ ಸಿನಿಮೀಯ ಶೈಲಿಯಲ್ಲಿ ಚೇಸ್ ಮಾಡಿ ಬಂಧಿಸಿದ್ದೀರಿ. ಹೀಗಾಗಿ ನಿಜಕ್ಕೂ ನೀವು ಬ್ರಿಲಿಯಂಟ್ ಪಾಲಿಟಿಕ್ಸ್ ಎಂದಿರುವ ಸಂಸದ ಪ್ರತಾಪ್ ಸಿಂಹ.
ಡಿ.16 ರಂದು ಬೇಲೂರಿನ ಜಮೀನಿನ ವಿಚಾರಕ್ಕೆ ನನ್ನ ತಮ್ಮನ ಹೆಸರು ಎಳೆದು ತಂದ್ರಿ. ಮರವನ್ನ ಕಡಿದಿದ್ದಾರೆ ಎಂದು ಎಫ್ ಐ ಆರ್ ದಾಖಲು ಮಾಡಲಾಯಿತು. ಪ್ರಕರಣದಲ್ಲಿ ಜಯಮ್ಮ, ರಾಜೇಶ್ ಶೆಟ್ಟಿ ವಿರುದ್ಧ ಎಫ್ ಐಆರ್ ದಾಖಲು ಮಾಡಲಾಗಿದೆ. ರವಿ ಎಂಬವರು ಸಹಾಯ ಮಾಡಿದ್ರು ಪರಾರಿ ಆಗಿದ್ದಾರೆ. ಈವರಗೆ ಮೂವರನ್ನು ಹಿಡಿಯಲು ಆಗಿಲ್ಲ. ಎಲ್ಲಾ ಮರಗಳನ್ನ ಹಾಸನದ ಅರಣ್ಯ ಭವನದಲ್ಲಿ ಇರಿಸಿದ್ದೀರಿ. 24 ನೇ ತಾರೀಖಿನವರಗೆ ನೀವು ಅವರನ್ನ ಬಂಧಿಸಲು ಸಾಧ್ಯವಾಗಿಲ್ಲ. ಹನುಮ ಜಯಂತಿ ಸಂದರ್ಭ ನಾನು ಒಂದು ಹೇಳಿಕೆ ನೀಡಿದ್ದೆ. ಅದಾದ ಎರಡೇ ಗಂಟೆಯಲ್ಲಿ ಪ್ರತಾಪ ಸಿಂಹನ ತಮ್ಮ ಮರಗಳ್ಳತನ ಮಾಡಿದ ಅಂತ ಕಾಂಗ್ರೆಸ್ ನವರು ಪೋಸ್ಟ್ ಹಾಕಿದ್ರು. ಇಲ್ಲೊಂದು ವಿಷಯ ಗಮನಿಸಬೇಕು ಎಫ್ ಐ ಆರ್ ನಲ್ಲಿ ಎಲ್ಲೂ ನನ್ನ ತಮ್ಮನ ಹೆಸರೇ ಇಲ್ಲ. ಆದರೂ ಆತನನ್ನ ಬಂಧಿಸುವ ಮೂಲಕ ಪ್ರತಾಪಸಿಂಹನನ್ನ ಮುಗಿಸುವ ಯತ್ನ ನಡೆಸಿದ್ದೀರಿ. ನಿಜವಾಗ್ಲೂ ನನ್ನ ತಮ್ಮ ತಲೆಮರೆಸಿಕೊಂಡಿದ್ನಾ? ಎರಡುದಿನ ಮೊದಲೇ ನನ್ನ ತಮ್ಮ ಅರಣ್ಯ ಇಲಾಖೆಗೆ ತೆರಳಿ ಹೇಳಿಕೆ ದಾಖಲಿಸಿದ್ದಾನೆ. ಆಗಲೂ ಆತನ ವಿರುದ್ಧ ಎಫ್‌ಐ ಆರ್ ಆಗಿಲ್ಲ. ಎಫ್‌ಐಆರ್ ನಲ್ಲಿ ಹೆಸರೇ ಇಲ್ಲದಿರುವಾಗ ಯಾಕೆ ತಲೆಮರೆಸಿಕೊಳ್ಳಬೇಕು? ಈ ಪ್ರಕರಣದಲ್ಲಿ ತಲೆಮರೆಸಿಕೊಂಡ ಮೂವರನ್ನು ಇನ್ನೂ ಹಿಡಿಯಲಾಗದ ಅರಣ್ಯಾಧಿಕಾರಿಗಳು, ರಾಜಕೀಯ ಒತ್ತಡಕ್ಕೆ ನನ್ನ ಸಹೋದರನನ್ನು ಬಂಧಿಸಿದ್ದಾರೆ. ಪ್ರತಾಪ ಸಿಂಹ ಸಹೋದರ ತಲೆಮರೆಸಿಕೊಂಡಿದ್ದ ಎಂದು ದಾರಿ ತಪ್ಪಿಸುತ್ತಿದ್ದೀರಿ. ನಿಮ್ಮ ಮಗನ ರಾಜಕೀಯ ವಿಷ್ಯಕ್ಕಾಗಿ ಪ್ರತಾಪಸಿಂಹನನ್ನ ಎಲ್ಲಾರೀತಿ ತುಳಿಯುವ ಪ್ರಯತ್ನ ಮಾಡ್ತೀರಿ? ನನ್ನ ಚಾರಿತ್ರ್ಯವಧೆ ಮಾಡ್ತಿದ್ದೀರಿ. ಆ ಮೂಲಕ ನನ್ನ ಕುಟುಂಬದವರನ್ನ ಬೀದಿಗೆ ಎಳೆದು ತರುತ್ತಿದ್ದೀರಿ ನಿಮ್ಮ ಮಗನ ರಾಜಕೀಯ ಭವಿಷ್ಯಕ್ಕಾಗಿ ಕಂಡೋರ ಮಕ್ಕಳನ್ನು ಬಲಿಕೊಡೋದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಚುನಾವಣೆಯಲ್ಲಿ ನನ್ನ ಸೋಲಿಸಲು ಆಗದ್ದಕ್ಕೆ ವೈಯಕ್ತಿಕ ದಾಳಿ: ಸಿಎಂ ಸಿದ್ದರಾಮಯ್ಯ ವಿರುದ್ಧ ಸಂಸದ ಪ್ರತಾಪ್ ಸಿಂಹ ಕಿಡಿ
ಇನ್ನೊಂದು ವಿಚಾರ ನೋಡಿ, ನಿನ್ನೆ ಮೂರು ಗಂಟೆಗೆ ನನ್ನ ಸಹೋದರನನ್ನು ಅರೆಸ್ಟ್ ಮಾಡಿಸಿದ್ದೀರಿ. ಆದರೆ ಈವರಗೆ ಯಾಕೆ ಕೋರ್ಟಿಗೆ ಪ್ರೊಡ್ಯೂಸ್ ಮಾಡಿಲ್ಲ. ಪಿಸಿಎಫ್‌ಗೆ ಕರೆ ಮಾಡಿ ಮಾತನಾಡುತ್ತಿದ್ದೀನಿ. ನಿಮ್ಮ ತಮ್ಮನಿಗೆ ತೊಂದರೆ ಕೊಡಲ್ಲ ಅಂತೀರಿ, ಹಾಗಾದರೆ ಇಷ್ಟೊತ್ತು ಯಾಕೆ ಇಟ್ಕೊಂಡಿದ್ದೀರಿ? ನನ್ನ ಮೇಲೆ ಎರಡು ಕ್ರಿಮಿನಲ್ ಕೇಸ್ ಹಾಕಿದ್ರಿ. ಅಡಿಷನಲ್‌ಎಸ್ ಪಿ ಮೇಲೆ ಕಾರ್ ಹತ್ತಿಸಿದ್ದೆ ಅಂತ. ನಿಮಗೆ ಮಗ ಕ್ಷೇತ್ರ ಬಿಟ್ಟುಕೊಟ್ಟಿದ್ದಾನೆ. ನಿಮ್ಮ ಮಗನನ್ನ ರಿಹ್ಯಾಬಿಲೇಟ್ ಮಾಡಬೇಕಿದೆ. ಅದಕ್ಕಾಗಿ ನೀವು ಏನು ಬೇಕಾದರೂ ಮಾಡಲು ಮುಂದಾಗಿದ್ದೀರಿ. ನಮ್ಮ ವಯೋವೃದ್ಧ ತಾಯಿ, ತಂಗಿ ಅರೆಸ್ಟ್ ಮಾಡಿ. ನಿಮ್ಮಕುಟುಂಬ ರಾಜಕಾರಣವೇ ಮುಂದುವರಿಯಲಿ. ಅದಕ್ಕಾಗಿ ನಮ್ಮ ಕುಟುಂಬ ಮುಗಿಸಲು ರೆಡಿ ಇದ್ದೀರಿ. ನಿಮಗೆ ಬಹಳಷ್ಟು ದಾರಿಗಳಿಲ್ಲ ಸರ್. ನನ್ನನ್ನ ಸೋಲಿಸೋಕೆ ಕೊಡಗು ಮೈಸೂರು ಜನ ಬಿಡಲ್ಲ ಸರ್. ತಾಯಿ ಚಾಮುಂಡಿ, ಕಾವೇರಿ ತಾಯಿ ಬಿಡಲ್ಲ ಸರ್, ಎಲ್ಲಾ ತಂತ್ರಗಾರಿಗೆ ಮಾಡಿ ನನ್ನನ್ನ ಮುಗಿಸೋದಕ್ಕೆ ಅಥವಾ ಜೀವನ ತೆಗೆಯೋದಕ್ಕೆ ಪ್ರಯತ್ನ ಮಾಡಬಹುದು. ಅದನ್ನ ಬಿಟ್ಟರೆ ನಿಮಗೆ ಬೇರೆ ದಾರಿನೇ ಇಲ್ಲ, ಆಲ್ ದಿ ಬೆಸ್ಟ್ ಸರ್ ಎಂದು ಸಂಸದ ಪ್ರತಾಪ್ ಸಿಂಹ ಭಾವುಕರಾಗಿ ನುಡಿದಿದ್ದಾರೆ.