₹14000 ಕೋಟಿ ವಸೂಲಿ ಲೆಕ್ಕ ಕೊಡ್ರಪ್ಪ, ಸರ್ಕಾರ ಇಕ್ಕಟ್ಟಿಗೆ ಸಿಲುಕಿಸಿದ ವಿಜಯ್ ಮಲ್ಯ ಹೈಕೋರ್ಟ್ ಅರ್ಜಿ

Published : Nov 04, 2025, 05:13 PM IST
Vijay Mallya

ಸಾರಾಂಶ

₹14000 ಕೋಟಿ ವಸೂಲಿ ಲೆಕ್ಕ ಕೊಡ್ರಪ್ಪ, ಸರ್ಕಾರ ಇಕ್ಕಟ್ಟಿಗೆ ಸಿಲುಕಿಸಿದ ವಿಜಯ್ ಮಲ್ಯ ಹೈಕೋರ್ಟ್ ಅರ್ಜಿ, ವಿವಿದ ವಿಚಾರಣೆಗೆ ಮಲ್ಯ ಹಾಜರಾಗಿಲ್ಲ ಎಂಬ ಹೈಕೋರ್ಟ್ ಪ್ರಶ್ನೆಗೂ ಮಲ್ಯ ಪರ ವಕೀಲರು ವಾದ ಮುಂದಿಟ್ಟಿದ್ದಾರೆ. ಲಂಡನ್‌ನಲ್ಲೇ ಕುಳಿತ ಮಲ್ಯ ಹಾಕಿದ ಗೂಗ್ಲಿ ಇದೀಗ ಗಿರಗಿರ ತಿರುಗುತ್ತಿದೆ.

ಬೆಂಗಳೂರು (ನ.04) ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ವಿಜಯ್ ಮಲ್ಯ ವಿರುದ್ದ ದೇಶದ ಹಲವು ಕೋರ್ಟ್‌ಗಳಲ್ಲಿ ಪ್ರಕರಣಳಿವೆ. ಮತ್ತೊಂದೆಡೆ ಕೇಂದ್ರ ಸರ್ಕಾರ ವಿಜಯ್ ಮಲ್ಯ ಲಂಡನ್‌ನಿಂದ ಗಡೀಪಾರು ಮಾಡಲು ಕಾನೂನು ಹೋರಾಟ ನಡೆಸುತ್ತಿದೆ. ವಂಚನೆ ಪ್ರಕರಣಗಳಿಂದ ವಿಲನ್ ಆಗಿರುವ ವಿಜಯ್ ಮಲ್ಯ, ಕೆಲ ತಿಂಗಳ ಹಿಂದೆ ಪಾಡ್‌ಕಾಸ್ಟ್ ಮೂಲಕ ಪ್ರತ್ಯಕ್ಷರಾಗಿ ಹಲವರ ಪಾಲಿಗೆ ಹೀರೋ ಆಗಿದ್ದರು. ಇದೀಗ ಎಲ್ಲವೂ ಅದರ ಪಾಡಿಗೆ ನಡೆಯುತ್ತಿದೆ ಅನ್ನೋವಷ್ಟರಲ್ಲೇ ವಿಜಯ್ ಮಲ್ಯ ಲಂಡನ್‌ನಲ್ಲಿ ಕುಳಿತು ಕರ್ನಾಟಕ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಮಲ್ಯ ಹಾಕಿದ ಗೂಗ್ಲಿಗೆ ಕೇಂದ್ರ ಸರ್ಕಾರ ಇಕ್ಕಟ್ಟಿಗೆ ಸಿಲುಕಿತಾ ಅನ್ನೋ ಚರ್ಚೆಗಳು ಶುರುವಾಗಿದೆ.

ಬ್ಯಾಂಕ್ ಲೆಕ್ಕ ಕೋರಿ ವಿಜಯ್ ಮಲ್ಯ ರಿಟ್ ಅರ್ಜಿ

ವಿಜಯ್ ಮಲ್ಯ ಸಾಲ, ಬ್ಯಾಂಕ್‌ಗಳು ಆಸ್ತಿ ಜಪ್ತಿ, ಖಾತೆ ಫ್ರೀಜ್ ಮಾಡಿ ವಸೂಲಿ ಮಾಡಿರುವ ಮೊತ್ತ, ಎಲ್ಲಾ ಸೇರಿ ಲೆಕ್ಕ ಪತ್ರ ಕೊಡಿ ಎಂದು ವಿಜಯ್ ಮಲ್ಯ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ. ವಿಜಯ್ ಮಲ್ಯ 6,200 ಕೋಟಿ ರೂಪಾಯಿ ಸಾಲ ಪಡೆದಿದ್ದರು. ಆದರೆ ಬ್ಯಾಂಕ್‌ಗಳು ಬಡ್ಡಿ ಎಲ್ಲಾ ಸೇರಿ 14,000 ಕೋಟಿ ವಸೂಲಿ ಮಾಡಿದ್ದಾರೆ. ಇದರ ಸರಿಯಾದ ಲೆಕ್ಕ ಕೊಡಿ ಎಂದು ವಿಜಯ್ ಮಲ್ಯ ರಿಟ್ ಅರ್ಜಿ ಸಲ್ಲಿಸಿದ್ದಾರೆ.

ಮಲ್ಯ ಮೇಲಿದೆ ನಿಂದನೆ ಕೇಸ್, ಹಾಜರಾಗಿಲ್ಲ ಯಾಕೆ ಎಂದು ಕೋರ್ಟ್ ಪ್ರಶ್ನೆ

ವಿಜಯ್ ಮಲ್ಯ ಪರ ಹಿರಿಯ ವಕೀಲ ಸಜನ್ ಪೂವಯ್ಯ ವಾದ ಮಂಡನೆ ಮುಂದಿಟ್ಟಿದ್ದಾರೆ. ನೀವು ಕಂಪನಿ ಕೋರ್ಟ್ ಗೆ ಅರ್ಜಿ ಏಕೆ ಸಲ್ಲಿಸಿಲ್ಲ, ಸುಪ್ರೀಂ ಕೋರ್ಟ್ ನ ನ್ಯಾಯಾಂಗ ನಿಂದನೆ ಕೇಸ್ ನಲ್ಲಿ‌ ಮಲ್ಯ ಹಾಜರಾಗಿಲ್ಲ. ವಿವಿದೆಡೆ ವಿಜಯ್ ಮಲ್ಯ ಪ್ರಕರಣದಲ್ಲಿ ಕೋರ್ಟ್‌ಗೆ ಹಾಜರಾಗಿಲ್ಲ. ಈಗ ರಿಟ್ ಅರ್ಜಿ ಸಲ್ಲಿಸಿದರೆ ಹೇಗೆ ಎಂದು ಕೋರ್ಟ್ ಪ್ರಶ್ನಿಸಿದೆ. ಆದರೆ ಸಜನ್ ಪೂವಯ್ಯ ಸಮರ್ಥ ವಾದ ಮಂಡಿಸಿದ್ದಾರೆ.

ರಿಟ್ ಅರ್ಜಿಯಲ್ಲಿ ಬ್ಯಾಂಕ್ ಗಳಿಂದ ಲೆಕ್ಕಪತ್ರ ಹೇಗೆ ಕೇಳುತ್ತೀರೆಂದು ಕೋರ್ಟ್ ಪ್ರಶ್ನಿಸಿದೆ. ಇದಕ್ಕೆ ಪ್ರತಿವಾದ ಮುಂದಿಟ್ಟ ಸಜನ್ ಪೂವಯ್ಯ, ಸಾಲ ವಸೂಲಿ ಪ್ರಾಧಿಕಾರ ಹೈಕೋರ್ಟ್ ಅಧೀನದಲ್ಲಿ ಬರುತ್ತದೆ. ಬ್ಯಾಂಕ್‌ಗಳು ಒಂದೊಂದು ಹೇಳುತ್ತಾರೆ, ಅಫಿಷಿಯಲ್ ಲಿಕ್ವಿಡೇಟರ್ ಮತ್ತೊಂದು ಹೇಳುತ್ತಾರೆ. ಒಂದು ಕಾಲದಲ್ಲಿ ಯುಬಿಹೆಚ್ ಎಲ್ ಕಂಪನಿ ವಿಶ್ವದಲ್ಲಿ ಪ್ರಸಿದ್ಧ ಕಂಪನಿಯಾಗಿತ್ತು. ಡಾ. ವಿಜಯ್ ಮಲ್ಯ ಯುಬಿಹೆಚ್ ಎಲ್ ನಿರ್ದೇಶಕರಾಗಿದ್ದರು. ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸುವುದು ಅವರ ಸಾಂವಿಧಾನಿಕ ಹಕ್ಕೆಂದು ಸಜನ್ ಪೂವಯ್ಯ ವಾದ ಮಂಡಿಸಿದ್ದಾರೆ.

ಲಂಡನ್ ಕೋರ್ಟ್ ಕಾನೂನು ಪ್ರಕ್ರಿಯೆ ಮುಂದಿಟ್ಟ ವಕೀಲರು

ಸುಪ್ರೀಂ ಕೋರ್ಟ್ ನ ನ್ಯಾಯಾಂಗ ನಿಂದನೆ ಕೇಸ್ ನಲ್ಲಿ‌ ಮಲ್ಯ ಹಾಜರಾಗಿಲ್ಲ ಎಂದು ಹೈಕೋರ್ಟ್ ಪ್ರಶ್ನೆಗೆ ಉತ್ತರಿಸಿದ ಸಜನ್ ಪೂವಯ್ಯ, ವಿಜಯ್ ಮಲ್ಯ ಲಂಡನ್ ಕೋರ್ಟ್ ನ ಕಾನೂನು ಪ್ರಕ್ರಿಯೆಗೆ ಒಳಪಟ್ಟಿದ್ದಾರೆ ಎಂದಿದ್ದಾರೆ.

ಹಣಕಾಸು ಸಚಿವರು ಲೋಕಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ ಎಂದ ಪೂವಯ್ಯ

ಮಲ್ಯ 6200 ಕೋಟಿ ಸಾಲ ಕೊಡಬೇಕಿತ್ತು, 14,000 ಕೋಟಿ ವಸೂಲಾಗಿದೆ. ಈ ಲೆಕ್ಕಾಚಾರವನ್ನು ಲೋಕಸಭೆಯಲ್ಲಿ ಹಣಕಾಸಸು ಸಚಿವರು ಮಂಡಿಸಿದ್ದಾರೆ. ಸಂಪೂರ್ಣ ಸಾಲ ತೀರಿದ್ದರೂ ಈಗಲೂ ಪ್ರಕ್ರಿಯೆ ಮುಂದುವರಿಸಲಾಗುತ್ತಿದೆ. ಹೀಗಾಗಿ ಸಾಲ ವಸೂಲಿಯಾದ ಲೆಕ್ಕಪತ್ರ ಕೋರಿ ಡಾ. ವಿಜಯ್ ಮಲ್ಯ ಅರ್ಜಿ ಸಲ್ಲಿಸಿದ್ದಾರೆ ಎಂದು ವಾದ ಮಂಡಿಸಿದ್ದಾರೆ

ಆಕ್ಷೇಪಣೆ ಸಲ್ಲಿಸುವಂತೆ ಬ್ಯಾಂಕ್ ಗಳ ಪರ ವಕೀಲರಿಗೆ ಸೂಚನೆ

ಬ್ಯಾಂಕ್ ಗಳ ಪರ ಹಿರಿಯ ವಕೀಲ ವಿಕ್ರಮ್ ಹುಯಿಲಗೋಳ ವಾದ ಮಂಡಿಸಿದ್ದಾರೆ. ಮಲ್ಯ ದೇಶ ತೊರೆದು ದೇಶಭ್ರಷ್ಟರಾಗಿದ್ದಾರೆ. ಮಲ್ಯ ಮುಗ್ದರಾದರೆ ಭಾರತಕ್ಕೆ ಮರಳಿ ನ್ಯಾಯಾಂಗದ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕಿತ್ತು. ತಮಗೆ ಬೇಕಾದಾಗ ಮಾತ್ರ ಕೋರ್ಟ್ ಮುಂದೆ ಬರುತ್ತಾರೆಂದು ವಾದ ಮಂಡಿಸಿದ್ದಾರೆ. ಪೂವಯ್ಯ ಮಂಡಿಸಿದ ವಾದಕ್ಕೆ ಆಕ್ಷೇಪಣೆ ಸಲ್ಲಿಸುವಂತೆ ಬ್ಯಾಂಕ್ ಗಳ ಪರ ವಕೀಲರಿಗೆ ನ್ಯಾ. ಲಲಿತಾ ಕನ್ನೆಗಂಟಿ ಸೂಚನೆ ನೀಡಿದ್ದಾರೆ. ಇದೇ ವೇಳೆ ವಿಚಾರಣೆಯನ್ನು ನ.12 ಕ್ಕೆ ಮುಂದೂಡಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಾಜ್ಯದಲ್ಲಿ ಮತ್ತೆ ಮಳೆ ಚುರುಕು: ಬೆಂಗಳೂರಲ್ಲಿ ಮಳೆ ಎಚ್ಚರಿಕೆ, 13 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್!
Karnataka News Live 17 September 2026: Bengaluru - ಪತ್ನಿಗೆ ಆಸಿಡ್‌ ಹಾಕಿ ಮಚ್ಚಿನಿಂದ ಮನಬಂದಂತೆ ಕೊಚ್ಚಿದ ಪತಿ; ಬೆಂಗಳೂರಿನಲ್ಲಿ ಭೀಕರ ಘಟನೆ