
ವಿಜಯಪುರ (ನ.4): ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆಯ ಮಧ್ಯೆ ದಲಿತ ಮುಖ್ಯಮಂತ್ರಿ ವಿಷಯವು ಮುನ್ನೆಲೆಗೆ ಬಂದಿದ್ದು, ಮಾಜಿ ಕೇಂದ್ರ ಸಚಿವ ರಮೇಶ್ ಜಿಗಜಿಣಗಿ ಇಂದು ವಿಜಯಪುರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ತೀಕ್ಷ್ಣ ಹೇಳಿಕೆ ನೀಡಿದ್ದಾರೆ.
ದಲಿತರೊಬ್ಬರು ಮುಖ್ಯಮಂತ್ರಿಯಾದರೆ ನನಗಂತೂ ಬಹಳ ಸಂತೋಷ ಆಗುತ್ತದೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75ವರ್ಷಗಳು ಕಳೆದಿವೆ, ನಮ್ಮ ಸುತ್ತಮುತ್ತಲಿನ ರಾಜ್ಯಗಳಲ್ಲಿ ದಲಿತ ಮುಖ್ಯಮಂತ್ರಿಗಳು ಇದ್ದಾರೆ. ಆದರೆ ನಮ್ಮ ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿಯಾಗಲು ಏನು ಧಾಡಿಯಾಗಿದೆ ಎಂದು ಪ್ರಶ್ನಿಸಿದರು.
ಮುನ್ಸಿಪಾಲಿಟಿಯಲ್ಲಿ ದಲಿತರು ಕಸ ಹೊಡೆಯೋಕೆ ಮಾತ್ರ ಇರೋದಾ? ದಲಿತರೇನು ಅಯೋಗ್ಯರಿದ್ದೀವಾ? ರಾಜ್ಯದ ಸಿಎಂ ಆಗಲು ಧಾಡೆ ಆಗೈತಿ? ಕಾಂಗ್ರೆಸ್‌ನಲ್ಲಿ ಮಲ್ಲಿಕಾರ್ಜುನ ಖರ್ಗೆಯಂತಹ ಹಿರಿಯರಿದ್ದಾರೆ. ಅವರನ್ನ ಸಿಎಂ ಮಾಡಲಿಕ್ಕೇನು ಧಾಡೆ ಆಗೈತಿ ನಮ್ಮ ರಾಜ್ಯದಲ್ಲಿ ಖಂಡಿತವಾಗಿಯೂ ದಲಿತ ಸಿಎಂ ಆಗುತ್ತಾರೆ ಎಂದರು.
ಪಕ್ಷ ಯಾವುದೇ ಇರಲಿ ದಲಿತ ಸಿಎಂ ಬೇಕು:
ಯಾವ ಪಕ್ಷದಿಂದಾಗಲಿ ದಲಿತ ಸಿಎಂ ಆಗಲೇಬೇಕು. ದಲಿತ ಸಿಎಂ ಮಾಡಿದರೆ ಮಾತ್ರ ಮಾಡದಿದ್ದರೆ ಜನತೆ ಬೈಯ್ಕೊಂಡು ಹೋಗುತ್ತಾರೆ. ಬಿಜೆಪಿಯಿಂದ ದಲಿತ ಸಿಎಂ ಆಗುತ್ತಾರೆ ಎಂಬುದನ್ನು ಕೇಳೋಕೆ ಹೋಗಬೇಡಿ. ಬಿಜೆಪಿಯಿಂದಾಗಲಿ, ಯಾವ ಪಕ್ಷದಿಂದಾಗಲಿ ಆದರೆ ಖಂಡಿತ ಆಗುತ್ತದೆ ಎಂದು ಸ್ಪಷ್ಟಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ