ಮತ್ತೆ ಮುನ್ನಲೆಗೆ ಮೀಸಲಾತಿ ಹೋರಾಟ, ವೀರಶೈವ ಲಿಂಗಾಯತರ ಮೀಸಲಾತಿಗಾಗಿ ಮೋದಿ, ಶಾ ಭೇಟಿಗೂ ರೆಡಿ ಎಂದ ಶ್ರೀಗಳು

Published : Jul 09, 2023, 06:29 PM IST
ಮತ್ತೆ ಮುನ್ನಲೆಗೆ ಮೀಸಲಾತಿ ಹೋರಾಟ, ವೀರಶೈವ ಲಿಂಗಾಯತರ ಮೀಸಲಾತಿಗಾಗಿ ಮೋದಿ, ಶಾ ಭೇಟಿಗೂ ರೆಡಿ ಎಂದ ಶ್ರೀಗಳು

ಸಾರಾಂಶ

 ಕೇಂದ್ರದ ಓಬಿಸಿ ಪಟ್ಟಿಗೆ ಸೇರಿಸಲು ಆಗ್ರಹಿಸಿ ಕಲಬುರಗಿಯಲ್ಲಿ ಐತಿಹಾಸಿಕ ಸಭೆ.  ಮೂವರು ಜಗದ್ಗುರುಗಳು, ಮೂವರು ರಾಜ್ಯದ ಸಚಿವರು, ಓರ್ವ ಕೇಂದ್ರ ಸಚಿವರು ಸಭೆಯಲ್ಲಿ ಭಾಗಿ

ವರದಿ: ಶರಣಯ್ಯ ಹಿರೇಮಠ, ಏಷ್ಯಾನೆಟ್ ಸುವರ್ಣ ನ್ಯೂಸ್ 

ಕಲಬುರಗಿ (ಜು.9): ವೀರಶೈವ ಲಿಂಗಾಯತರ ಮೀಸಲಾತಿಗಾಗಿ ಮೋದಿ, ಅಮಿತ್ ಶಾ ಭೇಟಿಗೂ ರೆಡಿ ಎಂದು  ಶ್ರೀಶೈಲ ಜಗದ್ಗುರುಗಳಾದ ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯರು ಹೇಳಿದ್ದಾರೆ. ವೀರಶೈವ ಲಿಂಗಾಯತ ಸಮುದಾಯದ ಎಲ್ಲಾ ಒಳಪಂಗಡಗಳನ್ನ ಕೇಂದ್ರದ ಓಬಿಸಿ ಒಟ್ಟಿಗೆ ಸೇರ್ಪಡೆ ಮಾಡಬೇಕೆಂದು ಒತ್ತಾಯಿಸಿ ಕಲಬುರ್ಗಿ ಎಲ್ಲಿಂದ ನಡೆದ ವೀರಶೈವ ಲಿಂಗಾಯತ ಸಮಾಜದ ಬೃಹತ್ ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀಶೈಲ ಜಹದ್ಗುರುಗಳು, ವೀರಶೈವ ಲಿಂಗಾಯತ ಸಮಾಜದ ಪರಿಸ್ಥಿತಿ ಏನಿದೆ ಅನ್ನೋದನ್ನ ಜಸ್ಟಿಸ್ ಚನ್ನಪ್ಪ ರೆಡ್ಡಿ ಆಯೋಗ ಸ್ಪಷ್ಟವಾಗಿ ತಿಳಿಸಿದೆ.

ಹೆಚ್‌ಡಿಕೆ ಪೆನ್‌ಡ್ರೈವ್ ಸತ್ಯಾಸತ್ಯತೆ ತನಿಖೆ ಮಾಡ್ತೇವೆ: ಸಚಿವ ಎಂ ಬಿ ಪಾಟೀಲ್

ಆ ಆಯೋಗದ ವರದಿ ಆಧಾರದ ಮೇಲೆ ಸಮುದಾಯಕ್ಕೆ ಓಬಿಸಿ ಸ್ಥಾನಮಾನ ಸಿಗಬೇಕು.  ವೀರಶೈವ ಲಿಂಗಾಯತ ಸಮಾಜ ರಾಜ್ಯ ಸರ್ಕಾರದ ಓಬಿಸಿ ಪಟ್ಟಿಯಲ್ಲಿದೆ. ಆದರೆ ಕೇಂದ್ರ ಸರ್ಕಾರದ ಓಬಿಸಿ ಪಟ್ಟಿಯಲ್ಲಿ ಇಲ್ಲ. ಇದರಿಂದ ಈ ಸಮುದಾಯಕ್ಕೆ ತೀವ್ರ ಅನ್ಯಾಯವಾಗುತ್ತಿದೆ.‌ ಈ ಸಮುದಾಯ ಸುಮಾರು 16 ಒಳಪಂಗಡಗಳನ್ನು ಓಬಿಸಿ ಪಟ್ಟಿಗೆ ಸೇರಿಸಿ ಇನ್ನುಳಿದ ಪಂಗಡಗಳನ್ನು ಕೈ ಬಿಟ್ಟಿದೆ. ಅಂತಹ ಕೈ ಬಿಟ್ಟ ಒಳಪಂಗಡಗಳನ್ನ ಕೇಂದ್ರದ ಓಬಿಸಿ ಪಟ್ಟಿಗೆ ಸೇರಿಸಿಕೊಳ್ಳಬೇಕು ಅನ್ನೋದು ನಮ್ಮ ಹಕ್ಕೋತ್ತಾಯ ಎಂದು ಶ್ರೀಶೈಲ ಜಗದ್ಗುರುಗಳು ಹೇಳಿದರು. 

ಈ ಕುರಿತಾಗಿ ಜೂನ್  2  ರಂದು ಬೆಂಗಳೂರಿನಿಂದ ಹೋರಾಟ ಪ್ರಾರಂಭವಾಗಿದೆ.‌ ಜೂನ್ 15 ರಂದು ಹುಬ್ಬಳ್ಳಿಯಲ್ಲಿ ಸ್ವರೂಪ ತಂದು ಕೊಡಲಾಗಿದೆ. ಇವತ್ತು ಕಲಬುರಗಿಯಲ್ಲಿ ಸಭೆ ಮಾಡುವ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರದ ಗಮನಕ್ಕೆ ತರುವ ಕೆಲಸ ಮಾಡಲಾಗಿದೆ.‌ ಇದರ ಮೊದಲ ಭಾಗವಾಗಿ ಜನರಲ್ಲಿ ಜಾಗೃತಿ ಮೂಡಿಸುವದ್ರ ಜೊತೆಗೆ ಸರ್ಕಾರದ ಗಮನ ಸೆಳೆಯಬೇಕಾಗಿದೆ ಎಂದರು.

ಭಾರತದ ಮೊದಲ ಮಹಿಳಾ ಸರಣಿ ಹಂತಕಿ ಬೆಂಗಳೂರಿನ ಸೈನೈಡ್ ಮಲ್ಲಿಕಾ! 10 ವರ್ಷ

ಸಚಿವ , ಶಾಸಕರ ಪಕ್ಷಾತೀತ ಸಭೆ
ಜುಲೈ 11 ರಂದು ಬೆಂಗಳೂರಿನಲ್ಲಿ ಸಮಾಜದ ಎಲ್ಲಾ ಸಚಿವರು , ಶಾಸಕರು , ಪರಿಷತ್ ಸದಸ್ಯರ ಸಭೆ ಕರೆಯಲಾಗಿದೆ. ಸಭೆಯ ನಂತರ ನಿಯೋಗದೊಂದಿಗೆ ಮುಖ್ಯಮಂತ್ರಿ ಗೆ ಭೇಟಿ ಮಾಡಿ ರಾಜ್ಯ ಸರ್ಕಾರದಿಂದ ಶಿಫಾರಸ್ಸು ಮಾಡುವ ಕೆಲಸ‌ ಮಾಡುವಂತೆ ಕೋರಲಾಗುವುದು ಎಂದರು. 

ಅದಾದ ಬಳಿಕ ಲೋಕಸಭೆಯ ಸದಸ್ಯರ ಸಭೆಯನ್ನ ಕರೆದು ಕೇಂದ್ರ ಸರ್ಕಾರದಿಂದ ಆದೇಶ ಹೊರಡಿಸುವ ಜವಾಬ್ದಾರಿ ಅವರಿಗೆ ನೀಡಲಾಗುತ್ತೆ.‌ ಪ್ರಸಂಗ ಬಂದ್ರೆ ಗೃಹ ಸಚಿವ ಅಮಿತ್ ಷಾ , ಪ್ರಧಾನಿ ಮೋದಿಯನ್ನು ಕೂಡ  ಭೇಟಿ ಮಾಡಲಾಗುವುದು ಎಂದರು.‌

ಜಗದ್ಗುರು ತ್ರೀಮೂರ್ತಿಗಳ ಬೆಂಬಲ
ಕಲಬುರಗಿಯಲ್ಲಿಂದು ನಡೆದ ವೀರಶೈವ ಲಿಂಗಾಯತ ಸಮುದಾಯದ ಸಭೆಯಲ್ಲಿ ಕಾಶಿ, ಶ್ರೀಶೈಲ ಮತ್ತು ಉಜ್ಜಯಿನಿ ಪೀಠ ಸೇರಿ ಮೂವರು ಜಗದ್ಗುರುಗಳು ಪಾಲ್ಗೊಂಡು ಸಮಾಜದ ಹೋರಾಟಕ್ಕೆ ಶಕ್ತಿ ತುಂಬಿದರು. 

ಕೇಂದ್ರ ಮತ್ತು ರಾಜ್ಯ ಸಚಿವರ ಬೆಂಬಲ
ವೀರಶೈವ ಲಿಂಗಾಯತ ಸಮುದಾಯದ ಈ ಮೀಸಲಾತಿ ಹೋರಾಟದಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ, ರಾಜ್ಯದ ಸಚಿವರಾದ ಈಶ್ವರ ಖಂಡ್ರೆ, ಡಾ. ಶರಣಪ್ರಕಾಶ ಪಾಟೀಲ್, ಶರಣಬಸಪ್ಪಾ ದರ್ಶನಾಪೂರ ಇನ್ನಿತರರು ಪಾಲ್ಗೊಂಡು ಸಮಾಜದ ಹೋರಾಟಕ್ಕೆ ಬೆಂಬಲ ಸೂಚಿಸಿದರು.‌

ರಾಜ್ಯ ಸರಕಾರದಿಂದ ಪ್ರಸ್ತಾವನೆ ಬರಲಿ, ನಮ್ಮ ಕೇಂದ್ರ ಸರಕಾರದ ಮೇಲೆ ಒತ್ತಡ ಹಾಕಿ ಈ ಬೇಡಿಕೆ ಈಡೇರಿಸುವ ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ನೀಡಿದರು. ನಂತರ ಮಾತನಾಡಿದ ರಾಜ್ಯದ ಸಚಿವರಾದ ಡಾ. ಶರಣಪ್ರಕಾಶ ಪಾಟೀಲ್, ಶರಣಬಸಪ್ಪಾ ದರ್ಶನಾಪೂರ, ಈಶ್ವರ ಖಂಡ್ರೆ ಮಾತನಾಡಿ ರಾಜ್ಯ ಮತ್ತು ಕೇಂದ್ರ ಸರಕಾರ ಅಗತ್ಯ ಕ್ರಮ ಕೈಗೊಂಡು ಕೇಂದ್ರದ ಓಬಿಸಿ ಪಟ್ಟಿಯಲ್ಲಿ ವೀರಶೈವ ಲಿಂಗಾಯತರನ್ನು ಸೇರ್ಪಡೆ ಮಾಡಬೇಕು ಎಂದರು. ಈ ಹಿಂದೆ ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಹೋರಾಟ ಮಾಡಿದವರೇ ಇಂದಿನ ಸಭೆಯಲ್ಲಿ ವೀರಶೈವ ಲಿಂಗಾಯತ ಪಂಗಡಗಳ ಒಗ್ಗಟ್ಟಿನ ಮಂತ್ರ ಜಪಿಸಿದ್ದು ವಿಶೇಷವಾಗಿತ್ತು. 

ನಿರಂತರ ಹೋರಾಟದ ನಿರ್ಣಯ: ವೀರಶೈವ ಲಿಂಗಾಯತ ಸಮುದಾಯವನ್ನು ಕೇಂದ್ರದ ಓಬಿಸಿ ಪಟ್ಟಿಗೆ ಸೇರ್ಪಡೆಯಾಗುವವರೆಗೆ ಹೋರಾಟ ಮುಂದುವರೆಸಲು ಮತ್ತು ಈ ಸಂಬಂಧ 11 ರಂದು ಬೆಂಗಳೂರಿನಲ್ಲಿ ಎಲ್ಲಾ ಶಾಸಕ, ಸಚಿವರ ಸಭೆ ಕರೆಯಲು ನಿರ್ಣಯಿಸಲಾಯಿತು. ಸಭೆಯಲ್ಲಿ ನೂರಕ್ಕೂ ಹೆಚ್ಚು ಜನ ಮಠಾಧೀಶರು, ಸಾವಿರಾರು ಜನ ವೀರಶೈವ ಲಿಂಗಾಯತ ಸಮುದಾಯದವರು ಪಾಲ್ಗೊಂಡಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ
ರಾಜ್ಯದಲ್ಲಿ 2.84 ಲಕ್ಷ ಸರ್ಕಾರಿ ಹುದ್ದೆ ಖಾಲಿ: 24,300 ಹುದ್ದೆ ಭರ್ತಿಗೆ ಅಂಕಿತ! ಇಲಾಖಾವಾರು ಮಾಹಿತಿ ಇಲ್ಲಿದೆ!