Amarnath Yatra: ಸಂಕಷ್ಟದಲ್ಲಿರೋ ಯಾತ್ರಾರ್ಥಿಗಳಿಗೆ ಶಾಸಕ ವಿನಯ್ ಕುಲಕರ್ಣಿ ಸಹಾಯಹಸ್ತ

By Ravi Janekal  |  First Published Jul 9, 2023, 3:04 PM IST

ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ಭೂ ಕುಸಿತದಿಂದಾಗಿ ದೇಶಾದ್ಯಂತ ಅಮರನಾಥಯಾತ್ರೆಗೆ ಹೋದ ಯಾತ್ರಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿಪರೀತ ಚಳಿ ಮಳೆಗೆ ತತ್ತರಿಸಿಹೋಗಿದ್ದಾರೆ. ಇವರಲ್ಲಿ ಧಾರವಾಡ ಜಿಲ್ಲೆಯ ಜನರು ಸಿಲುಕಿದ್ದು ಸಹಾಯಕ್ಕಾಗಿ ಫೋನ್ ಮೂಲಕ ಮನವಿ ಮಾಡಿಕೊಂಡಿದ್ದಾರೆ. 


ಧಾರವಾಡ (ಜು.9) : ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ಭೂ ಕುಸಿತದಿಂದಾಗಿ ದೇಶಾದ್ಯಂತ ಅಮರನಾಥಯಾತ್ರೆಗೆ ಹೋದ ಯಾತ್ರಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿಪರೀತ ಚಳಿ ಮಳೆಗೆ ತತ್ತರಿಸಿಹೋಗಿದ್ದಾರೆ. ಇವರಲ್ಲಿ ಧಾರವಾಡ ಜಿಲ್ಲೆಯ ಜನರು ಸಿಲುಕಿದ್ದು ಸಹಾಯಕ್ಕಾಗಿ ಫೋನ್ ಮೂಲಕ ಮನವಿ ಮಾಡಿಕೊಂಡಿದ್ದಾರೆ. 

ಧಾರವಾಡ ತಾಲೂಕಿನ ಕರಡಿಗುಡ್ಡ ಗ್ರಾಮದಲ್ಲಿನ ವಿಠಲ ಬಾಚಗುಂಡಿ ಹಾಗೂ ಸ್ನೇಹಿತರು ಅಮರನಾಥ ಯಾತ್ರೆಗೆ ಹೋಗಿದ್ದರು. ಈ ವೇಳೆ ಭಾರೀ ಮಳೆಯಿಂದಾಗಿ ಗುಡ್ಡಕುಸಿತವಾಗಿದ್ದು ಯಾತ್ರೆಗೆ ಮುಂದುವರಿಸಲು ಅಪಾಯಕಾರಿಯಾಗಿದೆ ಪರಿಣಾಮವಾಗಿ ಪಂಚತರಣಿಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಯಾತ್ರಾರ್ಥಿಗಳು.

Tap to resize

Latest Videos

Amarnath Yatra: ಇಲ್ಲಿ ಭಾರಿ ಚಳಿ, ಮಳೆ. ನಮಗೆ ಆತಂಕವಾಗ್ತಿದೆ, ರಕ್ಷಿಸಿ ಪ್ಲೀಸ್‌: ಬೇಸ್‌ ಕ್ಯಾಂಪ್‌ನಲ್ಲಿ ಕನ್ನಡಿಗರ ಗೋಳು

ಕಳೆದ 5 ದಿನಗಳಿಂದ ಪಂಚತರಣಿಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಅವರು ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಅವರಿಗೆ ಫೋನ್ ಮೂಲಕ ತಾವು ಸಂಕಷ್ಟದಲ್ಲಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. 

ಸುರಕ್ಷಿತವಾಗಿ ಕರೆತರಲು ಶಾಸಕ ವಿನಯ ಕುಲಕರ್ಣಿ ಸಹಾಯಹಸ್ತ ಚಾಚಿದ್ದು ಮಾಹಿತಿ ತಿಳಿದ ಕೂಡಲೇ ಜಿಲ್ಲೆಯ ಜನರು ಪಂಚತರಣಿಯಲ್ಲಿ ಸಿಲುಕಿರುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಅವರನ್ನು ಸುರಕ್ಷಿತವಾಗಿ ಬೇರೆಡೆಗೆ ಸ್ಥಳಾಂತರ ಮಾಡಲು‌ ಮುಂದಾಗಿದ್ದಾರೆ ಕಾರ್ಯಪ್ರವೃತ್ತರಾಗಿದ್ದಾರೆ.

ಅಮರನಾಥ ಭೂಕುಸಿತ: 80 ಕನ್ನಡಿಗರು ಅತಂತ್ರ, ರಕ್ಷಣೆಗೆ ರಾಜ್ಯ ಸರ್ಕಾರದಿಂದ ತಂಡ ರವಾನೆ

ಈ ವರ್ಷದ ಅಮರನಾಥಯಾತ್ರೆಯು ಜುಲೈ 2ರಿಂದ ಪ್ರಾರಂಭವಾಗಿದೆ. ಸುದೀರ್ಘ ಮೂರು ತಿಂಗಳ ಕಾಲ ನಡೆಯುವ ಈ ಯಾತ್ರೆ ಅಗಸ್ಟ್‌ಗೆ ಕೊನೆಗೊಳ್ಳಲಿದೆ. ಸಾವಿರಾರು ಜನರು ಅಮರನಾಥಯಾತ್ರೆಗೆ ಉತ್ಸಾಹದಿಂದ ಹೊರಟಿದ್ದರು. ಆದರೆ ಕಳೆದ ಗುರುವಾರದಿಂದ ಜಮ್ಮು ಕಾಶ್ಮೀರ ಭಾಗದಲ್ಲಿ ಭಾರೀ ಮಳೆ, ಭೂಕುಸಿತದಿಂದ ಅಮರನಾಥಯಾತ್ರೆಗೆ ತೆರಳಿದ್ದವರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. 

click me!