ಬೆಳಗಾವಿಯ ಸುವರ್ಣಸೌಧದಲ್ಲಿ ಸಾವರ್ಕರ್ ಫೋಟೋ ಅನಾವರಣ ಮಾಡಲಾಗಿತ್ತು. ಈಗ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿಯೂ ಕೂಡ ಸರ್ಕಾರದಿಂದ ಸಾವರ್ಕರ್ ಭಾವಚಿತ್ರವನ್ನು ಅಳವಡಿಕೆ ಮಾಡಲಾಗಿದೆ.
ಬೆಳಗಾವಿ (ಡಿ.29): ದೇಶದ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರಾದ ವೀರ್ ಸಾವರ್ಕರ್ ಫೋಟೋವನ್ನು ಅಳವಡಿಕೆ ಮಾಡುವ ವಿಚಾರ ರಾಜಕೀಯ ತಿರುವು ಪಡೆದುಕೊಂಡಿತ್ತು. ಇತ್ತೀಚೆಗೆ ಬೆಳಗಾವಿಯ ಸುವರ್ಣಸೌಧದಲ್ಲಿ ಸಾವರ್ಕರ್ ಫೋಟೋ ಅನಾವರಣ ಮಾಡಲಾಗಿತ್ತು. ಈಗ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿಯೂ ಕೂಡ ಸರ್ಕಾರದಿಂದ ಸಾವರ್ಕರ್ ಭಾವಚಿತ್ರವನ್ನು ಅಳವಡಿಕೆ ಮಾಡಲಾಗಿದೆ.
ರಾಜ್ಯದಲ್ಲಿ ಹಲವು ತಿಂಗಳಿಂದ ವೀರ್ ಸಾವರ್ಕರ್ ಭಾವಚಿತ್ರ ಅಳವಡಿಕೆ ಮತ್ತು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾವಚಿತ್ರದ ಪ್ರದರ್ಶನ ಕುರಿತು ಪರ ವಿರೋಧ ವ್ಯಕ್ತವಾಗುತತಿತ್ತು. ಆಧರೆ, ಇತ್ತೀಚೆಗೆ ಬೆಳಗಾವಿಯ ಸುವರ್ಣ ಸೌಧದ ವಿಧಾನಸಭೆ ಸಭಾಂಗಣದಲ್ಲಿಯೇ ಸರ್ಕಾರದ ವತಿಂದ ವೀರ್ ಸಾವರ್ಕರ್ ಫೋಟೋ ಅನಾವರಣ ಮಾಡಲಾಗಿತ್ತು. ಇದೀಗ ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ವೀರ್ ಸಾವರ್ಕರ್ ಫೋಟೋ ಅನಾವರಣಕ್ಕೆ ನಿರ್ಧಾರ ಮಾಡಲಾಗಿದೆ. ಹಿಂಡಲಗಾ ಜೈಲಿನಲ್ಲಿ ಪರಿಶೀಲನೆಗೆ ಆಗಮಿಸಿರುವ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಜೈಲಿನೊಳಗೆ ವೀರ್ ಸಾವರ್ಕರ್ ಫೋಟೋ ಅನಾವರಣಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ.
ವೀರ ಸಾವರ್ಕರ್ ಪೈಂಟಿಂಗ್ ಮಾಡಿರೋದು ನಂಗೆ ಹೆಮ್ಮೆ: ಹಿರಿಯ ಚಿತ್ರ ಕಲಾವಿದ ಡಾ ಸುಭಾಷ್ ಕಮ್ಮಾರ್ ಹೇಳಿಕೆ
ಹಿಂದೂಪರ ಸಂಘಟನೆಗಳ ಒತ್ತಾಯ: ಈ ಮೊದಲು ಹಿಂಡಲಗಾ ಜೈಲಿನಲ್ಲಿ ವೀರ್ ಸಾವರ್ಕರ್ ಫೋಟೋ ಇತ್ತು. ಬಳಿಕ ಕೆಲ ವರ್ಷಗಳ ಹಿಂದೆ ತೆರವುಗೊಳಿಸಲಾಗಿತ್ತು. ವೀರ್ ಸಾವರ್ಕರ್ ಭಾವಚಿತ್ರ ಅಳವಡಿಕೆಗೆ ಹಿಂದೂಪರ ಸಂಘಟನೆಗಳು ಪಟ್ಟು ಹಿಡಿದಿದ್ದವು. ಈ ಹಿನ್ನೆಲೆಯಲ್ಲಿ ಹಿಂದೂಪರ ಸಂಘಟನೆಗಳ ಒತ್ತಾಯಕ್ಕೆ ಮಣಿದು ಸಾವರ್ಕರ್ ಫೋಟೋ ಅಳವಡಿಸಲಾಗಿತ್ತು. ಬಳಿಕ ಮತ್ತೆ ಸಾವರ್ಕರ್ ಫೋಟೋ ತೆರವು ಮಾಡಿದ್ದರೆಂದು ಸ್ಥಳೀಯರ ಮಾಹಿತಿ ನೀಡಿದ್ದರು. ಇಂದು ಜೈಲಿನಲ್ಲಿ ವೀರ್ ಸಾವರ್ಕರ್ ಪೋಟೋ ಪುನರ್ ಅನಾವರಣ ಮಾಡಿ ಪೂಜೆ ಸಲ್ಲಿಕೆಗೆ ನಿರ್ಧಾರ ಮಾಡಲಾಗಿದೆ.
ಸಚಿವದ್ವಯರ ಉಪಸ್ಥಿತಿ: ಇನ್ನು ಹಿಂಡಲಗಾ ಜೈಲಿನೊಳಗೆ ಗೃಹ ಸಚಿವ ಅರಗ ಜ್ಞಾನೇಂದ್ರ ಅವರ ಜೊತೆಗೆ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಕೂಡ ಕೈಜೋಡಿಸಿದ್ದಾರೆ. ಜೈಲಿನೊಳಗೆ ತೆರಳಿದ ಸಚಿವದ್ವಯರು, ಬಿಜೆಪಿ ನಾಯಕರು, ಕಾರ್ಯಕರ್ತರು ಹೋಗಿ ಸಾವರ್ಕರ್ ಭಾವಚಿತ್ರ ಅನಾವರಣ ಮಾಡಿ ಪೂಜೆ ಸಲ್ಲಿಸಲಿದ್ದಾರೆ. ಆದರೆ, ಜೈಲಿನೊಳಗೆ ಮಾಧ್ಯಮಗಳಿಗೆ ಪ್ರವೇಶ ನೀಡಲು ಪೊಲೀಸರು ನಕಾರ ಮಾಡಿದ್ದಾರೆ.
ಹಿಂಡಲಗಾ ಜೈಲಿಗೂ ಸಾವರ್ಕರ್‌ಗೂ ನಂಟು: ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ವಿಚಾರಣಾಧೀನ ಕೈದಿಯಾಗಿ ಸೆರೆವಾಸದಲ್ಲಿದ್ದ ವೀರ್ ಸಾವರ್ಕರ್ ಅವರನ್ನು 100 ದಿನ ಹಿಂಡಲಗಾ ಜೈಲಿನಲ್ಲಿ ಸೆರೆ ಇಡಲಾಗಿತ್ತು. ವೀರ್ ಸಾವರ್ಕರ್ ಅವರು 1950ರ ಏಪ್ರಿಲ್ 4ರಂದು ಬೆಳಗಾವಿ ಹಿಂಡಲಗಾ ಜೈಲು ಸೇರಿದ್ದರು. ಪಾಕಿಸ್ತಾನ ಪ್ರಧಾನಿ ಲಿಯಾಕತ್ ಅಲಿ ಖಾನ್ ಭಾರತ ಭೇಟಿ ವಿರೋಧಿಸಿದ್ದ ಕಾರಣಕ್ಕಾಗಿ ಜೈಲಿಗೆ ಕಳುಹಿಸಲಾಗಿತ್ತು. ಈ ವೇಳೆ ಸಾವರ್ಕರ್ ಬಂಧಿಸಿ ಬೆಳಗಾವಿ ಜೈಲಿಗೆ ಕಳುಹಿಸಿದ್ದ ಪೊಲೀಸರು.
ಫೋಟೋ ವಿವಾದ: ಕಾಂಗ್ರೆಸ್ ಧರಣಿ, ಸಭೆಗೆ ಬಹಿಷ್ಕಾರ
100 ಹಿಂಡಲಗಾ ಜೈಲುವಾಸ: ಇನ್ನು 100 ದಿನ ಜೈಲು ವಾಸದ ಬಳಿಕ ಮುಂಬೈ ಕೋರ್ಟ್ ಗೆ ಸಾವರ್ಕರ್ ಪುತ್ರ ಹೆಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ನಂತರ ಜುಲೈ 13, 1950ರಂದು ಅಧಿಕಾರಿಗಳು ಬಿಡುಗಡೆಗೊಳಿಸಿದ್ದರು. ಬಳಿಕ ಸಾವರ್ಕರ್ ಅವರನ್ನು ಅದ್ಧೂರಿಯಾಗಿ ಸ್ಥಳೀಯ ನಾಯಕರು ಬರಮಾಡಿಕೊಂಡಿದ್ದರು. ಒಟ್ಟಾರೆಯಾಗಿ 1950ರ ಏಪ್ರಿಲ್ 4 ರಿಂದ ಜುಲೈ 13 ವರೆಗೆ ವಿಚಾರಣಾದೀನ ಖೈದಿಯಾಗಿ ಹಿಂಡಲಗಾ ಜೈಲಿನಲ್ಲಿ ಸಾವರ್ಕರ್ ಇಲ್ಲಿದ್ದರು ಎನ್ನುವ ಕಾರಣಕ್ಕಾಗಿ ಭಾವಚಿತ್ರ ಅಳವಡಿಕೆ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.