ಮಧ್ಯ ಕರ್ನಾಟಕದ ಜಲಪಾತ್ರೆ ವಾಣಿ ವಿಲಾಸ ಸಾಗರ ಜಲಾಶಯ 89 ವರ್ಷಗಳ ನಂತರ ಭರ್ತಿಯಾಗಿದೆ. ಗುರುವಾರ ಸಂಜೆ ಆರು ಗಂಟೆ ವೇಳೆ ಕೋಡಿಯಿಂದ ನೀರು ಹಳ್ಳಕ್ಕೆ ಧುಮುಕಿದೆ. ಬೆಳಗ್ಗೆಯಿಂದಲೇ ಕೋಡಿ ಬೀಳುವುದ ನೋಡಲು ಕಾತುರರಾಗಿದ್ದ ಜನ ಇದಕ್ಕಾಗಿ ಸಂಜೆ ವರೆಗೂ ಕಾಯಬೇಕಾಯಿತು.
ಹಿರಿಯೂರು (ಸೆ.02): ಮಧ್ಯ ಕರ್ನಾಟಕದ ಜಲಪಾತ್ರೆ ವಾಣಿ ವಿಲಾಸ ಸಾಗರ ಜಲಾಶಯ 89 ವರ್ಷಗಳ ನಂತರ ಭರ್ತಿಯಾಗಿದೆ. ಗುರುವಾರ ಸಂಜೆ ಆರು ಗಂಟೆ ವೇಳೆ ಕೋಡಿಯಿಂದ ನೀರು ಹಳ್ಳಕ್ಕೆ ಧುಮುಕಿದೆ. ಬೆಳಗ್ಗೆಯಿಂದಲೇ ಕೋಡಿ ಬೀಳುವುದ ನೋಡಲು ಕಾತುರರಾಗಿದ್ದ ಜನ ಇದಕ್ಕಾಗಿ ಸಂಜೆ ವರೆಗೂ ಕಾಯಬೇಕಾಯಿತು.
ಸದಾ ಬರಿದಾಗಿ ಗೋಚರಿಸುತ್ತಿದ್ದ 30 ಟಿಎಂಸಿ ಸಾಮರ್ಥ್ಯದ ವಾಣಿ ವಿಲಾಸ ಸಾಗರ ಜಲಾಶಯಕ್ಕೆ ಭದ್ರಾ ಮೇಲ್ದಂಡೆ ಯೋಜನೆಯಡಿ ಕಳೆದ ಮೂರು ವರ್ಷಗಳಲ್ಲಿ ಬರೋಬ್ಬರಿ 15 ಟಿಎಂಸಿ ಯಷ್ಟುನೀರು ಲಿಫ್ಟ್ ಮಾಡಿ ಹರಿಸಲಾಗಿತ್ತು. ಈ ವರ್ಷ ಲಿಫ್ಟ್ ಮಾಡಬೇಕೆನ್ನುವಷ್ಟರಲ್ಲಿ ಚಿಕ್ಕಮಗಳೂರು ಭಾಗದಲ್ಲಿ ಮಳೆಯಾಗಿ ಅಪಾರ ಪ್ರಮಾಣದಲ್ಲಿ ವೇದಾವತಿ ನದಿಗೆ ನೀರು ಹರಿದಿತ್ತು.
undefined
ಭಾರತ್ ಜೋಡೋ ಯಾತ್ರೆಗೆ ಎಲ್ಲರಿಗೂ ಅವಕಾಶ: ಡಿಕೆಶಿ
ಕಳೆದ ವರ್ಷ 125 ಅಡಿ ತಲುಪಿದ್ದ ನೀರು ಮತ್ತೆ 120 ರ ಒಳಗೆ ಇಳಿದಿತ್ತು. ಅಕಾಲಿಕ ಮಳೆಯೂ ಸೇರಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ ವಿವಿ ಸಾಗರಕ್ಕೆ ಹತ್ತು ಅಡಿಗಳಷ್ಟುನೀರು ಬಂದಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಇಳಿಮುಖವಾಗಿರುವುದರಿಂದ ಮೂರು ಸಾವಿರದಷ್ಟು ಕ್ಯೂಸೆಕ್ಸ್ ನೀರು ಮಾತ್ರ ಕೋಡಿಯಿಂದ ಹೊರ ಹೋಗುತ್ತಿದೆ. ನೀರಿನ ಹರಿವು ಜಾಸ್ತಿಯಾದಲ್ಲಿ ಕ್ರಸ್ಟ್ ಗೇಟ್ ಮೂಲಕ ಅಲ್ಪ ಪ್ರಮಾಣದ ನೀರು ಹೊರ ಹಾಕುವ ಸಾಧ್ಯತೆಗಳು ಕಂಡು ಬರುತ್ತವೆ ಎಂದು ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಭಾರತದ ಭೂಪಟದಂತೆ ಪ್ರತಿಬಿಂಬಿತವಾಗುವ , ಬಯಲು ಸೀಮೆಯ ವರದಾನ ವಾಣಿವಿಲಾಸ ಸಾಗರ ಜಲಾಶಯ 89 ವರ್ಷದ ಬಳಿಕ ಇದೇ ಮೊದಲ ಬಾರಿ ಭರ್ತಿಯಾಗಿ ನಾಡನ್ನು ಪ್ರಸನ್ನಗೊಳಿಸಿರುವುದು ಹರ್ಷ ತಂದಿದೆ. ಈ ಜಲಾಶಯಕ್ಕೆ 89 ವರ್ಷಗಳ ನಂತರ ಬಾಗಿನ ಅರ್ಪಿಸುವ ಸೌಭಾಗ್ಯ ಸಿಗಲಿದೆ. ಇಷ್ಟರಲ್ಲಿಯೇ ಈ ಮಂಗಳ ಕಾರ್ಯವನ್ನು ಸರ್ಕಾರದ ವತಿಯಿಂದ ನೆರವೇರಿಸಲಾಗುವುದು.
-ಗೋವಿಂದ ಕಾರಜೋಳ, ಜಲಸಂಪನ್ಮೂಲ ಸಚಿವರು
ಮಾರಿಕಣಿವೆ ಡ್ಯಾಂನಲ್ಲಿ ಗರಿಷ್ಟ ನೀರು: ಮಧ್ಯ ಕರ್ನಾಟಕದ ಜಲಪಾತ್ರೆ ಮಾರಿಕಣಿವೆ ಡ್ಯಾಂ(ವಾಣಿ ವಿಲಾಸ ಸಾಗರ ಜಲಾಶಯ)ನಲ್ಲಿ 88 ವರ್ಷದ ನಂತರ ಗರಿಷ್ಟಪ್ರಮಾಣದ ನೀರು ಸಂಗ್ರಹವಾಗಿ, ಕೋಡಿ ಬೀಳುವ ಸನಿಹದಲ್ಲಿದೆ. ಶನಿವಾರ ಜಲಾಶಯದಲ್ಲಿ 125.25 ಅಡಿಗಳಷ್ಟುನೀರು ಸಂಗ್ರಹವಾಗಿದೆ. 1934ರಲ್ಲಿ 130 ಅಡಿ ನೀರು ಬಂದು ಜಲಾಶಯ ಭರ್ತಿಯಾದ ನಂತರ ಇದೀಗ ಗರಿಷ್ಟಪ್ರಮಾಣದ ನೀರು ಶೇಖರಣೆಯಾಗಿದೆ. ಇದಕ್ಕೂ ಮೊದಲು 1957ರಲ್ಲಿ 125.05 ಹಾಗೂ ಕಳೆದ ವರ್ಷ ಅಂದರೆ 2021ರಲ್ಲಿ 125.15 ಅಡಿಗಳಷ್ಟು ನೀರು ಜಲಾಶಯಕ್ಕೆ ಹರಿದು ಬಂದಿತ್ತು.
2003 ರಿಂದ 2018ರ ಅವಧಿಯಲ್ಲಿ ಒಂದೆರೆಡು ಬಾರಿ ಮಾತ್ರ ನೂರರ ಗಡಿ ದಾಟಿದ್ದ ಜಲಾಶಯ ಬರಿದಾಗಿ ಕಂಡಿದ್ದೆ ಹೆಚ್ಚು. ಭದ್ರಾ ಮೇಲ್ದಂಡೆ ಯೋಜನೆಯಡಿ ಕಳೆದ ಮೂರು ವರ್ಷಗಳಲ್ಲಿ ಸರಿ ಸುಮಾರು 16 ಟಿಎಂಸಿಯಷ್ಟುನೀರನ್ನು ಲಿಫ್ಟ್‌ಮಾಡಿ ವಿವಿ ಸಾಗರ ಜಲಾಶಯಕ್ಕೆ ಹರಿಸಿದ ಪರಿಣಾಮ ಜಲಾಶಯದ ನೀರಿನ ಮಟ್ಟಏರಲು ಕಾರಣವಾಗಿತ್ತು. ಈ ಬಾರಿ ಮಳೆ ನೀರು ಭದ್ರೆ ಸೇರಿಕೊಳ್ಳದ ಕಾರಣ ಜಲಾಶಯದ ನೀರಿನ ಸಂಗ್ರಹ ಗರಿಷ್ಟಮಟ್ಟಕ್ಕೆ ಏರಿದೆ. ಕಳೆದ ತಿಂಗಳು ರೈತ ಸಂಘಟನೆಗಳು ಭದ್ರೆಯಿಂದ ನೀರು ಲಿಫ್ಟ್ ಮಾಡಿ ವಿವಿ ಸಾಗರ ಜಲಾಶಯಕ್ಕೆ ಹರಿಸುವಂತೆ ಆಗ್ರಹಿಸಿದ್ದವು.
ಬಿಜೆಪಿ ಧರ್ಮ ರಾಜಕಾರಣದ ವಿರುದ್ಧ ಭಾರತ ಐಕ್ಯತಾ ಯಾತ್ರೆ
ಅಜ್ಜಂಪುರ ಸಮೀಪದ ಬೆಟ್ಟ ದಾವರಕೆರೆ ಬಳಿ ಒಂದು ಮೋಟಾರ್ ಪಂಪ್ ಮೂಲಕ ಡೈಲಿ 700 ಕ್ಯೂಸೆಕ್ ನೀರು ಲಿಫ್ಟ್ ಮಾಡಲು ಮಾತ್ರ ಅವಕಾಶವಿತ್ತು. ಆದರೆ, ಕಳೆದ ಇಪ್ಪತ್ತು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ 1500 ರಿಂದ 4500 ಕ್ಯೂಸೆಕ್ ವರೆಗೆ ವಿವಿ ಸಾಗರ ಜಲಾಶಯಕ್ಕೆ ನೀರು ಹರಿದು ಬಂದಿತ್ತು. ಹಾಗಾಗಿ ಭದ್ರೆ ಲಿಫ್ಟ್‌ಮಾಡುವ ಉಸಾಬರಿಗೆ ಹೋಗಿರಲಿಲ್ಲ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಯಾಗಿರುವ ಹಾಗೂ ಮೇಲ್ಭಾಗದ ಎಲ್ಲ ಕೆರೆಗಳು ಭರ್ತಿ ಆಗಿರುವುದರಿಂದ ಮಳೆಯ ಪ್ರತಿ ಹನಿ ನೀರು ವಿವಿ ಸಾಗರ ಜಲಾಶಯಕ್ಕೆ ಹರಿದು ಬರುತ್ತಿದೆ.