ಗುತ್ತಿಗೆದಾರರ ಬಿಲ್ ಬಾಕಿ ಉಳಿಸಿಕೊಳ್ಳುತ್ತಿದೆ ಎಂದು ಬಿಜೆಪಿ ಸರ್ಕಾರದ ಮೇಲೆ ಹರಿಹಾಯುತ್ತಿದ್ದ ಕಾಂಗ್ರೆಸ್ಸೇ ಇದೀಗ ಅಧಿಕಾರಕ್ಕೆ ಬಂದಿದೆ. ಈ ಸರ್ಕಾರವೂ ಸಿವಿಲ್ ಗುತ್ತಿಗೆದಾರರ ಬಾಕಿ ಹಣವನ್ನು ಬಿಡುಗಡೆ ಮಾಡುತ್ತಿಲ್ಲ. ಉತ್ತರ ಕರ್ನಾಟಕ ವ್ಯಾಪ್ತಿಯಲ್ಲಿ ಎಂಡಿಆರ್ (ಮೇಜರ್ ಡಿಸ್ಟ್ರಿಕ್ಟ್ ರೋಡ್) ಕೆಲಸ ನಿರ್ವಹಿಸಿರುವ ಗುತ್ತಿಗೆದಾರರಿಗೆ ಕೊಡಬೇಕಿರುವ .32 ಸಾವಿರ ಕೋಟಿ ಬಿಲ್ ಬಾಕಿ ಉಳಿದಿದೆ!
ಶಿವಾನಂದ ಗೊಂಬಿ
ಹುಬ್ಬಳ್ಳಿ (ಆ.3) : ಗುತ್ತಿಗೆದಾರರ ಬಿಲ್ ಬಾಕಿ ಉಳಿಸಿಕೊಳ್ಳುತ್ತಿದೆ ಎಂದು ಬಿಜೆಪಿ ಸರ್ಕಾರದ ಮೇಲೆ ಹರಿಹಾಯುತ್ತಿದ್ದ ಕಾಂಗ್ರೆಸ್ಸೇ ಇದೀಗ ಅಧಿಕಾರಕ್ಕೆ ಬಂದಿದೆ. ಈ ಸರ್ಕಾರವೂ ಸಿವಿಲ್ ಗುತ್ತಿಗೆದಾರರ ಬಾಕಿ ಹಣವನ್ನು ಬಿಡುಗಡೆ ಮಾಡುತ್ತಿಲ್ಲ. ಉತ್ತರ ಕರ್ನಾಟಕ ವ್ಯಾಪ್ತಿಯಲ್ಲಿ ಎಂಡಿಆರ್ (ಮೇಜರ್ ಡಿಸ್ಟ್ರಿಕ್ಟ್ ರೋಡ್) ಕೆಲಸ ನಿರ್ವಹಿಸಿರುವ ಗುತ್ತಿಗೆದಾರರಿಗೆ ಕೊಡಬೇಕಿರುವ .32 ಸಾವಿರ ಕೋಟಿ ಬಿಲ್ ಬಾಕಿ ಉಳಿದಿದೆ!
ಉತ್ತರ ಕರ್ನಾಟಕದ 13 ಜಿಲ್ಲೆಗಳಲ್ಲಿ ನೂರಾರು ಜನ ಲೋಕೋಪಯೋಗಿ ಇಲಾಖೆಯಡಿ ಬರುವ ಎಂಡಿಆರ್ ರಸ್ತೆಗಳ ಕಾಮಗಾರಿಗಳನ್ನು ಮಾಡಿದ್ದಾರೆ. ಬಿಜೆಪಿ ಸರ್ಕಾರವಿದ್ದಾಗಲಿಂದಲೂ ಕೆಲಸ ನಡೆಯುತ್ತಲೇ ಇದೆ. ಹಾಗೆ ನೋಡಿದರೆ ಬಿಜೆಪಿ ಸರ್ಕಾರ ಗುತ್ತಿಗೆದಾರರ ಹಣವನ್ನು ಬಿಡುಗಡೆಯೇ ಮಾಡಿಲ್ಲ ಅಂತೇನೂ ಇಲ್ಲ. ತಿಂಗಳಿಗೆ, ಎರಡ್ಮೂರು ತಿಂಗಳಿಗೊಮ್ಮೆಯೋ ಬಿಲ್ ಹಣ ಕೊಡುತ್ತಿತ್ತು. ಅದು ಕೆಲವೇ ಕೆಲ ಕೋಟಿ ಆಗಿರುತ್ತಿತ್ತು. ಅಷ್ಟರಲ್ಲೇ ಮತ್ತಷ್ಟುಗುತ್ತಿಗೆದಾರರ ಬಿಲ್ ಬಂದು ಸೇರಿಕೊಳ್ಳುತ್ತಿತ್ತು. ಬಿಲ್ ಮೊತ್ತ ಮಾತ್ರ ಹಾಗೆ ಉಳಿಯುತ್ತಲೇ ಬಂದಿದೆ.
ಎಂಜಿನಿಯರ್ ವೃತ್ತಿ ಬಿಟ್ಟು ಲಕ್ಷ ಲಕ್ಷ ದುಡಿಯೋ ಈತನ ಬ್ಯಸಿನೆಸ್ ಯಾವ್ದು?
ಬಿಡುಗಡೆಯಾಗಿಲ್ಲ:
ಗುತ್ತಿಗೆದಾರರ ಬಿಲ್ ವಿಷಯ ಬಿಜೆಪಿ ಸರ್ಕಾರಕ್ಕೆ ಬಹುವಾಗಿ ಕಾಡಿತ್ತು. ಕಮಿಷನ್ ದಂಧೆ ಕುರಿತು ಆಗೆಲ್ಲ ಬಹಳಷ್ಟುಟೀಕೆಗಳು ಕೇಳಿ ಬಂದಿದ್ದವು. ಇದೇ ಬಾಕಿ ವಿಷಯವಾಗಿ ಗುತ್ತಿಗೆದಾರನೊಬ್ಬ ಆತ್ಮಹತ್ಯೆ ಮಾಡಿಕೊಂಡ. ಇದನ್ನು ಖಂಡಿಸಿ ಕಾಂಗ್ರೆಸ್ ಸಾಕಷ್ಟುಪ್ರತಿಭಟನೆಯನ್ನೂ ನಡೆಸಿತ್ತು. ಆಗ ಕೆ.ಎಸ್. ಈಶ್ವರಪ್ಪ ತಮ್ಮ ಸಚಿವಗಿರಿ ಕಳೆದುಕೊಂಡರು. ಗುತ್ತಿಗೆದಾರರ ವಿಷಯ ಆ ಸರ್ಕಾರವನ್ನು ಬಹುವಾಗಿ ಕಾಡಿತ್ತು.
ಆಗೆಲ್ಲ ತಮ್ಮ ಪರವಾಗಿ ಹೋರಾಟ ಮಾಡಿದ್ದ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ತಮಗೆ ಬರಬೇಕಾದ ಬಾಕಿ ಹಣ ಬರುತ್ತದೆ ಎಂದೆಲ್ಲ ಗುತ್ತಿಗೆದಾರರು ಕನಸು ಕಂಡಿದ್ದರು. ಆದರೆ ಸರ್ಕಾರ ಬಂದು ಎರಡ್ಮೂರು ತಿಂಗಳು ಕಳೆದರೂ ಹಣ ಮಾತ್ರ ಬರುತ್ತಿಲ್ಲ. ಇದಕ್ಕಾಗಿ ಸರ್ಕಾರಕ್ಕೆ ಸಾಕಷ್ಟುಸಲ ಮನವಿ ಸಲ್ಲಿಸಿದರೂ ಪ್ರಯೋಜನ ಆಗುತ್ತಿಲ್ಲ. ಇದರಿಂದಾಗಿ ಸಿವಿಲ್ ಗುತ್ತಿಗೆದಾರರೆಲ್ಲರೂ ಸಂಕಷ್ಟಸ್ಥಿತಿ ಎದುರಿಸುವಂತಾಗಿದೆ.
ಉತ್ತರ ಕರ್ನಾಟಕದ 13 ಜಿಲ್ಲೆಗಳಲ್ಲಿ ಕೈಗೊಂಡÜ ಎಂಡಿಆರ್‌ನ .32 ಸಾವಿರ ಕೋಟಿ ಬರಬೇಕಿದ್ದರೆ, ಧಾರವಾಡ ಜಿಲ್ಲೆಯಲ್ಲಿ ಮಾಡಿರುವ ಕೆಲಸದ .190 ಕೋಟಿ ಬಿಲ್ ಬರುವುದು ಬಾಕಿಯುಳಿದಿದೆ. ಈ ವರೆಗೂ ಬಿಲ್ ಕೊಡುವ ಬಗ್ಗೆ ಚಕಾರ ಎತ್ತುತ್ತಿಲ್ಲ.
ಮುಂದುವರೆದ ಭ್ರಷ್ಟಾಚಾರ:
ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿಲ್ ಬಾಕಿ ಬರಬೇಕೆಂದರೆ ಹಣ ಕೊಡಬೇಕು ಎಂದೆಲ್ಲ ಟೀಕೆ ಮಾಡುತ್ತಿದ್ದ ಕಾಂಗ್ರೆಸ್ ಕೂಡ ಭ್ರಷ್ಟಾಚಾರವನ್ನೇ ಮುಂದುವರಿಸಿದೆ. ಬಿಲ್ ಪಾವತಿ ಮಾಡಬೇಕೆಂದರೆ ಇಂತಿಷ್ಟುದುಡ್ಡು ಕೊಡಬೇಕೆಂದು ಬೇಡಿಕೆ ಇಡಲಾಗುತ್ತಿದೆ ಎಂದೆಲ್ಲ ಆರೋಪಗಳು ಕೇಳಿ ಬರುತ್ತಿವೆ. ಸರ್ಕಾರ ಇನ್ಮೇಲಾದರೂ ಸಿವಿಲ್ ಗುತ್ತಿಗೆದಾರರಿಗೆ ಬರಬೇಕಿರುವ ಬಿಲ್ ಹಣವನ್ನು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕೆಂಬುದು ಗುತ್ತಿಗೆದಾರರ ಆಗ್ರಹ.
Karnataka crimes: ಬಾವಿಯಲ್ಲಿ ಸಿವಿಲ್ ಎಂಜಿನಿಯರ್ ಶವ ಪತ್ತೆ!
ಉತ್ತರ ಕರ್ನಾಟಕದಲ್ಲಿ ಕೈಗೊಂಡಿರುವ ಎಂಡಿಆರ್ ಕಾಮಗಾರಿಗಳ .32 ಸಾವಿರ ಕೋಟಿ ಹಣ ಬರಬೇಕಿದೆ. ಜನವರಿಯಿಂದ ಗುತ್ತಿಗೆದಾರರಿಗೆ ಬಿಡಿಗಾಸು ಬಿಡುಗಡೆಯಾಗಿಲ್ಲ. ಸಾಲ ಮಾಡಿ ಕೆಲಸ ಮಾಡಿದ್ದೇವೆ. ಅದರ ಬಡ್ಡಿ ಬೆಳೆಯುತ್ತಿದೆ. ಆದಷ್ಟುಬೇಗನೆ ಬಾಕಿ ಬಿಲ್ ಬಿಡುಗಡೆ ಮಾಡಬೇಕು.
ಸುಭಾಷ ಪಾಟೀಲ, ಅಧ್ಯಕ್ಷರು, ಉತ್ತರ ಕರ್ನಾಟಕ ಸಿವಿಲ್ ಗುತ್ತಿಗೆದಾರರ ಸಂಘ