Covid Crisis: 'ಕೋವಿಡ್‌ ನಾಲ್ಕನೇ ಅಲೆ ಎದುರಿಸಲು ಉತ್ತರ ಕನ್ನಡ ಜಿಲ್ಲೆ ಸಿದ್ಧತೆ!

By Govindaraj SFirst Published May 3, 2022, 2:30 AM IST
Highlights

ಉಸ್ಸಪ್ಪಾ... ಸಾಕಾಯ್ತು ಈ ಕೊರೊನಾ‌ ಕಾಟ ಅನ್ನೋವಾಗ್ಲೇ ಇದೀಗ ಮತ್ತೆ ಕೊರೊನಾ ನಾಲ್ಕನೇ ಅಲೆಯ ರೂಪದಲ್ಲಿ ಕಾಡುವ ಭೀತಿ ಪ್ರಾರಂಭವಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲೂ ಜನರು ಕೋವಿಡ್ ನಿಯಮ ಪಾಲನೆ ಮಾಡದೇ ಬೇಕಾಬಿಟ್ಟಿ ಓಡಾಡುತ್ತಿದ್ದು, ಕೊರೊನಾ ಸೋಂಕನ್ನು ಮತ್ತೆ ಆಹ್ವಾನಿಸುವಂತಿದೆ. 

ಭರತ್‌ರಾಜ್ ಕಲ್ಲಡ್ಕ, ಏಷಿಯಾನೆಟ್ ಸುವರ್ಣ ನ್ಯೂಸ್, ಕಾರವಾರ

ಉತ್ತರ ಕನ್ನಡ (ಮೇ.03): ಉಸ್ಸಪ್ಪಾ... ಸಾಕಾಯ್ತು ಈ ಕೊರೊನಾ (Coronavirus)‌ ಕಾಟ ಅನ್ನೋವಾಗ್ಲೇ ಇದೀಗ ಮತ್ತೆ ಕೊರೊನಾ ನಾಲ್ಕನೇ ಅಲೆಯ (Corona 4th Wave) ರೂಪದಲ್ಲಿ ಕಾಡುವ ಭೀತಿ ಪ್ರಾರಂಭವಾಗಿದೆ. ಬೆಂಗಳೂರಿನಲ್ಲಿ (Bengaluru) ಮತ್ತೆ ಕೊರೊನಾ ಪ್ರಕರಣಗಳು (Corona Cases) ಕಾಣಿಸಿರುವ ಹಿನ್ನೆಲೆ ರಾಜ್ಯ ಸರ್ಕಾರ (Karnataka Govt) ಕೋವಿಡ್ ಮಾರ್ಗ ಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಸೂಚಿಸಿದೆ. ಆದರೆ, ಜನರು ಮಾತ್ರ ಕ್ಯಾರೇ ಅನ್ನದೇ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಉತ್ತರ ಕನ್ನಡ (Uttara Kannada) ಜಿಲ್ಲೆಯಲ್ಲೂ ಜನರು ಕೋವಿಡ್ ನಿಯಮ ಪಾಲನೆ ಮಾಡದೇ ಬೇಕಾಬಿಟ್ಟಿ ಓಡಾಡುತ್ತಿದ್ದು, ಕೊರೊನಾ ಸೋಂಕನ್ನು ಮತ್ತೆ ಆಹ್ವಾನಿಸುವಂತಿದೆ. ಈ ಕುರಿತ ಒಂದು ಸ್ಟೋರಿ ಇಲ್ಲಿದೆ. 

ಹೋದ್ಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷಿ ಅನ್ನೋ ರೀತಿಯಲ್ಲಿ ಮಹಾಮಾರಿ ಕೊರೊನಾ ಮತ್ತೆ ಜನರನ್ನು ಕಾಡುವ ಭೀತಿ ಎದುರಾಗಿದೆ. ರಾಜ್ಯ ಇನ್ನೇನು ಕೋವಿಡ್ ಕಾಟದಿಂದ ಮುಕ್ತವಾಯಿತು ಅನ್ನೋವಷ್ಟರಲ್ಲಿ ಮತ್ತೆ ಈ ಮಹಾಮಾರಿ ಸೋಂಕು ನಿಧಾನಗತಿಯಲ್ಲಿ ಹರಡಲು ಪ್ರಾರಂಭಿಸಿದೆ. ಈಗಾಗಲೇ ಕೊರೊನಾ ಸೋಂಕು ಬೆಂಗಳೂರಿಗೆ ಪ್ರವೇಶ ಮಾಡಿದೆಯಾದ್ರೂ, ತಜ್ಞರ ಮಾಹಿತಿ ಪ್ರಕಾರ ಜೂನ್-ಜುಲೈ ತಿಂಗಳಲ್ಲಿ ನಾಲ್ಕನೇ ಅಲೆ ಮತ್ತೆ ವಕ್ಕರಿಸುವ ಸಾಧ್ಯತೆಯಿದೆ.‌ ಈಗಾಗಲೇ ರಾಜ್ಯ ಸರ್ಕಾರ ಕೂಡಾ ಕೆಲವೊಂದಿಷ್ಟು ನಿಯಮಗಳನ್ನು ಜಾರಿಗೆ ತಂದಿದ್ದು, ಕೋವಿಡ್ ನಿಯಮಗಳನ್ನು ಜನರು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂದು ಮನವಿ ಕೂಡಾ ಮಾಡಿದೆ. 

Uttara Kannada: ಹಣಕ್ಕಾಗಿ‌ ಮಗುವನ್ನೇ ಮಾರಾಟ ಮಾಡಿದ ತಾಯಿ: ಐವರ ಬಂಧನ

ಆದರೆ ಜನರು ಮಾತ್ರ ಇದಕ್ಕೆ ಕ್ಯಾರೇ ಮಾಡದೆ ತಿರುಗಾಡುತ್ತಿದ್ದಾರೆ. ಪ್ರಮುಖ ಪ್ರವಾಸಿ ಕೇಂದ್ರವಾಗಿರುವ ಉತ್ತರ ಕನ್ನಡ ಜಿಲ್ಲೆಗೆ ಸಾಕಷ್ಟು ವಿವಿಧೆಡೆಯಿಂದ ಆಗಮಿಸುತ್ತಿದ್ದರೂ, ಜನರು ಕೋವಿಡ್ ನಿಮಯ ಪಾಲಿಸದೆ ತಮಗೆ ಬೇಕಾದಂತೆ ಓಡಾಡುತ್ತಿದ್ದಾರೆ. ಕೊನೇ ಪಕ್ಷ ಮಾಸ್ಕ್ ಕೂಡಾ ಧರಿಸದೇ ಜನರು ಮಾರುಕಟ್ಟೆಯಲ್ಲಿ, ಬೀಚ್‌ಗಳಲ್ಲಿ ಗುಂಪು ಗುಂಪಾಗಿ ಓಡಾಡುತ್ತಿದ್ದು ಕೋವಿಡ್ ಸೋಂಕನ್ನು ಮತ್ತೆ ಆಹ್ವಾನಿಸುವಂತಿದೆ. ಇನ್ನು ಈಗಾಗಲೇ ಜಿಲ್ಲೆಯಲ್ಲಿ 1, 2 ಮತ್ತು 3 ನೇ ಅಲೆಯಲ್ಲಿ ಸುಮಾರು 70858 ಜನ್ರಿರಿಗೆ ಸೋಂಕು ತಗುಲಿದ್ದು, ಅದರ ಪೈಕಿ 823 ಜನರನ್ನು ಕೊರೊನಾ ಆಹುತಿ ಪಡೆದುಕೊಂಡಿದೆ. ಉಳಿದವರು ಕೋವಿಡ್ ವಿರುದ್ಧ ಹೋರಾಡಿ ಗುಣಮುಖರಾಗಿದ್ದಾರೆ.

ಹೀಗಾಗಿ ಮತ್ತೆ ಅನಾಹುತ ಎದುರಿಸುವ ಮುನ್ನವೇ ಜನರು ಎಚ್ಚೆತ್ತುಕೊಂಡು ಕೋವಿಡ್ ನಿಯಮ ಪಾಲನೆ ಜತೆಗೆ ಕಡ್ಡಾಯವಾಗಿ ವ್ಯಾಕ್ಸಿನ್ ಹಾಕಿಸಿಕೊಳ್ಳಬೇಕಿದೆ. ನಾಲ್ಕನೇ ಅಲೆಯು ಚಿಕ್ಕ ಮಕ್ಕಳು ಹಾಗೂ ವೃದ್ಧರನ್ನು ಟಾರ್ಗೆಟ್ ಮಾಡುತ್ತದೆ ಎಂದು ತಜ್ಞರು ತಿಳಿಸಿದ್ದು, ಇದಕ್ಕೆ ವ್ಯಾಕ್ಸಿನ್ ಪಡೆಯುವುದೇ ಸೂಕ್ತ ಮದ್ದು. ಆದ್ದರಿಂದ ಸೆಕೆಂಡ್ ಡೋಸ್ ಪಡೆಯದವರು ಶೀಘ್ರದಲ್ಲಿ ಪಡೆಯಬೇಕೆಂದು ಹೇಳ್ತಿದ್ದಾರೆ ಅಧಿಕಾರಿಗಳು. ಇನ್ನು ಜಿಲ್ಲೆಯಲ್ಲಿ ಕೋವಿಡ್ ವ್ಯಾಕ್ಸಿನ್ ಮೊದಲ ಡೋಸ್ ಅನ್ನು ಶೇಕಡಾ 99.5% ಜನರು ಪಡೆದುಕೊಂಡಿದ್ದರೆ, ಸೆಕೆಂಡ್ ಡೋಸ್ ಹಾಕಿಕೊಂಡವರು ಶೇ. 85-90% ಮಾತ್ರ. ಇನ್ನೂ ಕೆಲವರು ವಿದ್ಯಾರ್ಥಿಗಳು ಹಾಗೂ ಹಿರಿಯರು ಕೂಡಾ ಸೆಕೆಂಡ್ ಡೋಸ್ ಪಡೆಯದೇ ಬಾಕಿಯಿದ್ದಾರೆ. 

ವ್ಯಾಕ್ಸಿನ್ ಪಡೆಯಲು ಬಾಕಿಯಿರುವ ಶಾಲಾ- ಕಾಲೇಜು ವಿದ್ಯಾರ್ಥಿಗಳಿಗಂತೂ ಮತ್ತೆ ವ್ಯಾಕ್ಸಿನ್ ವಿತರಣೆ ಮಾಡಲು ಆರೋಗ್ಯ ಇಲಾಖೆ ನಿರ್ಧರಿಸಿದ್ದು, ಉಳಿದವರು ಕೂಡಾ ನಿಷ್ಕಾಳಜಿ ಮಾಡದೆ ಎಲ್ಲರೂ ಸೆಕೆಂಡ್ ಡೋಸ್‌ನೊಂದಿಗೆ ಬೂಸ್ಟರ್ ಡೋಸ್ ಕೂಡಾ ಕಡ್ಡಾಯವಾಗಿ ಹಾಕಿಸಿಕೊಳ್ಳಬೇಕು ಎಂದು ಆರೋಗ್ಯ ಇಲಾಖೆ ಮನವಿ ಮಾಡಿದೆ. ಈಗಾಗಲೇ ಸಾಕಷ್ಟು ಜನರು ಕೊರೊನಾ ಕಾಟಕ್ಕೆ ಒಳಗಾಗಿ ನರಳಿ ಸಾವನ್ನು ಗೆದ್ದುಕೊಂಡು ಬಂದಿದ್ದಾರೆ. ಮತ್ತೆ ಜನರು ಈ ಸ್ಥಿತಿಯನ್ನು ಎದುರಿಸೋದು ಬೇಡವೆಂದ್ರೆ ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಂಡು ಮಾಸ್ಕ್ ಧರಿಸಿ ತಮ್ಮ ಸುರಕ್ಷತೆ ಮಾಡಿಕೊಳ್ಳಬೇಕಿದೆ. 

Uttara Kannada: ಹೋಬಳಿ ಮಟ್ಟದಲ್ಲೂ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ: ರಾಜ್ಯದಲ್ಲೇ ಪ್ರಥಮ ಪ್ರಯೋಗ

ಇನ್ನು ಈ ಬಗ್ಗೆ ಜನರನ್ನು ಕೇಳಿದ್ರೆ, ಕೋವಿಡ್ ಬಗ್ಗೆ ನಮಗೆ ಭಯಾನೂ ಇದೆ, ಎಚ್ಚರಿಕೆ ಕೂಡಾ ಇದೆ. ಇನ್ನು ಮುಂದಕ್ಕೆ ಜಾಗ್ರತೆ ಮಾಡಿಕೊಂಡು ಮಾಸ್ಕ್ ಹಾಕಿ ಓಡಾಡುತ್ತೇವೆ. ಆದರೆ, ನಮ್ಮ ಜಿಲ್ಲೆಯಲ್ಲಿ ಕೋವಿಡ್ ಕೇಸ್ ಪತ್ತೆಯಾಗದ ಕಾರಣ ಜನರಲ್ಲಿ ಸ್ವಲ್ಪ ನಿರ್ಲಕ್ಷ್ಯವಿದೆ. ಆದರೆ ಜನರೆಲ್ಲರೂ ಕೊರೊನಾ ಮತ್ತೆ ಆಹ್ವಾನಿಸದಂತೆ ಎಚ್ಚೆತ್ತುಕೊಳ್ಳಬೇಕಿದೆ ಅಂತಾರೆ. ಒಟ್ಟಿನಲ್ಲಿ ಮತ್ತೆ ರಾಜ್ಯ ಕೊರೊನಾ ಕಾಟವನ್ನು ಎದುರಿಸುವ ಸಾಧ್ಯತೆಯಿರೋದ್ರಿಂದ ಜನರು ಎಚ್ಚರಿಕೆಯಿಂದಿದ್ದು, ಲಸಿಕೆ ಪಡೆಯೋದು ಮಾತ್ರವಲ್ಲದೇ, ಮಾಸ್ಕ್ ಕೂಡಾ ಧರಿಸಬೇಕಿದೆ. ಒಂದು ವೇಳೆ ನಿರ್ಲಕ್ಷ್ಯ ಮಾಡಿದಲ್ಲಿ ನಾಲ್ಕನೇ ಅಲೆ ನಿರ್ಲಕ್ಷ್ಯ ಮಾಡಿದವರ ಜೀವಕ್ಕೆ ಅಪಾಯ ಮಾಡೋದರಲ್ಲಿ ಎರಡು ಮಾತಿಲ್ಲ. 

click me!