PSI Recruitment Scam ಸಚಿವ ಅಶ್ವಥ್‌ ನಾರಾಯಣ್ ಸಹೋದರ ಹಗರಣದಲ್ಲಿ ಭಾಗಿ!

Published : May 02, 2022, 03:54 PM ISTUpdated : May 02, 2022, 05:16 PM IST
PSI Recruitment Scam ಸಚಿವ ಅಶ್ವಥ್‌ ನಾರಾಯಣ್  ಸಹೋದರ ಹಗರಣದಲ್ಲಿ ಭಾಗಿ!

ಸಾರಾಂಶ

ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ   ಸಚಿವ ಡಾ ಅಶ್ವಥ ನಾರಾಯಣ ಸಿ ಎನ್ ಅವರ ತಮ್ಮ ಸತೀಶ್ ಅವರ ಪಾತ್ರವಿದೆ ಎಂಬ ಆರೋಪ ಕೇಳಿಬಂದಿದೆ.  ಅಭ್ಯರ್ಥಿ ದರ್ಶನ್ ಗೌಡರಿಂದ 80 ಲಕ್ಷ ರೂಪಾಯಿ ಹಣ ಪಡೆದಿದ್ದರು ಎಂದು ಕೆಪಿಸಿಸಿ ವಕ್ತಾರ ವಿ ಎಸ್ ಉಗ್ರಪ್ಪ ನೇರ ಆರೋಪ ಮಾಡಿದ್ದಾರೆ.

ಬೆಂಗಳೂರು (ಮೇ.2): ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ (PSI Recruitment Scam ) ಉನ್ನತ ಶಿಕ್ಷಣ ಸಚಿವ ಡಾ ಅಶ್ವಥ ನಾರಾಯಣ ಸಿ ಎನ್ (minister C N Ashwath Narayan ) ಅವರ ತಮ್ಮ ಸತೀಶ್ ಅವರ ಪಾತ್ರವಿದೆ. ಅವರು ಅಭ್ಯರ್ಥಿ ದರ್ಶನ್ ಗೌಡರಿಂದ 80 ಲಕ್ಷ ರೂಪಾಯಿ ಹಣ ಪಡೆದಿದ್ದರು ಎಂದು ಕೆಪಿಸಿಸಿ ವಕ್ತಾರ ವಿ ಎಸ್ ಉಗ್ರಪ್ಪ (VS Ugrappa) ನೇರ ಆರೋಪ ಮಾಡಿದ್ದಾರೆ.

ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣದ ಸಿಐಡಿ (cid) ತನಿಖೆ ತೀವ್ರವಾಗಿದ್ದು ದಿನಕ್ಕೊಂದು ಹೊಸ ವಿಷಯಗಳು ಸ್ಫೋಟವಾಗುತ್ತಿದೆ. ಅಕ್ರಮದಲ್ಲಿ ಪ್ರಭಾವಿ ಸಚಿವರೊಬ್ಬರ ಕೈವಾಡವಿದೆ ಎಂದು ಹೇಳಲಾಗುತ್ತಿದ್ದು, ಕಾಂಗ್ರೆಸ್ ನಾಯಕರು ಪ್ರಮುಖ ಅಸ್ತ್ರವಾಗಿ ತೆಗೆದುಕೊಂಡು ಆರೋಪಿಸುತ್ತಲೇ ಬಂದಿದ್ದರು. 

ಇದೀಗ ಉನ್ನತ ಶಿಕ್ಷಣ, ಐಟಿ-ಬಿಟಿ ಸಚಿವ ಡಾ ಅಶ್ವಥ್ ನಾರಾಯಣ ಅವರೇ ಪ್ರಭಾವ ಬೀರಿದ್ದಾರೆ, ಅವರ ತಮ್ಮ ಸತೀಶ್ ಗೌಡ ಅಭ್ಯರ್ಥಿ ದರ್ಶನ್ ಗೌಡರಿಂದ ಹಣ ಪಡೆದಿದ್ದಾರೆ ಎಂಬ ಗಂಭೀರ ಆರೋಪವನ್ನು ವಿ ಎಸ್ ಉಗ್ರಪ್ಪ ಮಾಡಿದ್ದಾರೆ. ಈ ಪ್ರಕರಣ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದು ಕುತೂಹಲವಾಗಿದೆ.

ಪ್ರಿಯಾಂಕ ಖರ್ಗೆಗೆ ಪ್ರಚಾರದ ಹುಚ್ಚು MINISTER SUNIL KUMAR

ಈ ವಿಚಾರದಲ್ಲಿ ಸಚಿವ ಅಶ್ವಥ್ ನಾರಾಯಣ ಮೌನವಾಗಿದ್ದಾರೆ. ಅವರ ಜಿಲ್ಲೆಯಲ್ಲಿ ಪಿಎಸ್ ಐ ನೇಮಕಾತಿ ಪರೀಕ್ಷೆಯಲ್ಲಿ ಮಾಗಡಿ ತಾಲ್ಲೂಕಿನಲ್ಲಿ ಮೂರರಿಂದ ಐವರು ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಇದರಲ್ಲಿ ಅವರ ಪಾಲ್ಗೊಳ್ಳುವಿಕೆ ಸ್ಪಷ್ಟವಾಗಿದೆ. ಹೀಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಶ್ವಥ್ ನಾರಾಯಣ ಅವರ ರಾಜೀನಾಮೆ ಪಡೆಯಬೇಕು ಎಂದು ಒತ್ತಾಯಿಸಿದ್ದಾರೆ. 

ಅಶ್ವಥ್ ನಾರಾಯಣ ಗಂಡಸ್ಥನದ ಬಗ್ಗೆ ಮಾತನಾಡಿದ್ದೀರಿ. ನಿಮಗೆ ತಾಕತ್, ಧಮ್ ಇದ್ದರೆ ನ್ಯಾಯಾಂಗ ತನಿಖೆಗೆ ಒಪ್ಪಿಸಿ. ಹೈಕೋರ್ಟ್ ಸಿಟ್ಟಿಂಗ್ ಜಡ್ಜ್ ನೇತೃತ್ವದಲ್ಲಿ ಒಪ್ಪಿಸಿ. ನೈತಿಕತೆ ಇದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಅಶ್ವಥ್ ನಾರಾಯಣ್ ರಾಜೀನಾಮೆಗೆ ಉಗ್ರಪ್ಪ ಆಗ್ರಹಿಸಿದ್ದಾರೆ.

ಹಗರಣದಲ್ಲಿ ಪ್ರಭಾವಿ ಮಂತ್ರಿಗಳೇ ಭಾಗಿ!: ಪಿ ಎಸ್ ಐ ನೇಮಕಾತಿಯಲ್ಲಿನ  ಬಾರಿ ಅಕ್ರಮ ದಂಧೆ ಸರಕಾರದಲ್ಲಿ ನಡಿತಾ ಇದೆ ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೆಷಕ್ ಪಿ ಎಚ್ ನೀರಲಕೇರಿ ಅವರು ಸರಕಾರದ ವಿರುದ್ದ ಆಕ್ರೋಶ ಹೊರ ಹಾಕಿದ್ದಾರೆ. ವಿದ್ಯಾರ್ಥಿಗಳಿಗೆ ಬ್ಲೂಟೂಥ್, ಮತ್ತು ವಿದ್ಯಾವಂತ ಅಭ್ಯರ್ಥಿಗಳ ಪಕ್ಕ ಮೊತ್ತೊಬ್ಬ ವಿದ್ಯಾರ್ಥಿ  ಕುಳಿತುಕ್ಕೊಂಡು ಅವನು ಮಾರ್ಕ ಮಾಡಿದ್ದನ್ನೇ ಇವರು ಮಾರ್ಕ ಮಾಡಬೇಕು, ಒಂದು ಅಭ್ಯರ್ಥಿಯಿಂದ 80 ಲಕ್ಷ ಪಡೆದುಕೊಂಡು ಆಯ್ಕೆ ಮಾಡಿದ್ದಾರೆ ಎಂದು ಪ್ರತಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಕಳೆದ 21 ದಿನದ ಹಿಂದೆ ಪ್ರಕರಣ ಬೆಳಕಿಗೆ ಬಂದಿದೆ. ದಿವ್ಯಾ ಎಂಬುವಳು ಬಿಜೆಪಿಯ ಅಪ್ಪಟ ಕಾರ್ಯಕರ್ತೆ, ಅವಳ ಹಿಂದೆ ಯಾವ ಶಾಸಕರು ಇದಾರೆ ಎಂಬುದು ತನಿಕೆಯಾಗಬೇಕು. ಸಿಐಡಿ ಮೇಲೆ ಪ್ರಭಾವ ಬೀರಿ ಸಚಿವ ಅಶ್ವಥ್ ನಾರಾಯಣ  ಸಹೋದರನನ್ನ ಬಿಡಿಸಿ ಕಳಿಸಿದ್ದಾರೆ. ಸಿಐಡಿಯಿಂದ ಪಾರದರ್ಶಕವಾದ ತನಿಖೆ ಆಗ್ತಾ ಇಲ್ಲ , ಇದರಲ್ಲಿ ಸಿಐಡಿ ಪೇರ್ ಆಗಿ ವಿಚಾರಣೆಗೆ ಸರಕಾರ ಬಿಡ್ತಾ ಇಲ್ಲ. ಹೋಮ್‌ ಮಿನಿಸ್ಟರ್ ಕಚೇರಿ ಸಿಎಂ ಕಚೇರಿಯ ಸಿಬ್ಬಂದಿಗಳು ಬಾಗಿಯಾಗಿದ್ದಾರೆ. ಸರಕಾರ ಮರು ಪರೀಕ್ಷೆ ಮಾಡಲು ತಿರ್ಮಾನ ಮಾಡಿದ್ದಾರೆ. ಪರೀಕ್ಷೆ ಮಾಡುವ ಬದಲು ಯಾರು ಭಾಗಿಯಾಗಿದ್ದಾರೆ. ಅವರನ್ನ‌ ಬಂದಿಸಬೇಕು, ತನಿಖೆಯನ್ನ ಸರಕಾರ ತಪ್ಪು ದಾರಿಗೆ ತೆಗೆದುಕ್ಕೊಂಡು ಹೊಗುತ್ತಿದೆ.

ಪ್ರಿಯಾಂಕ ಖರ್ಗೆ ಸಿಎಂ ಬದಲಾವಣೆ ಹೇಳಿಕೆಗೆ ಸುಧಾಕರ್ ತಿರುಗೇಟು!

ಇಷ್ಟೆಲ್ಲ ಅಕ್ರಮ ಆದರೂ ಸರಕಾರ ಯಾಕೆ ಕಣ್ಣು ಮುಚ್ಚಿ ಕುಳತಿದೆ. ಸರಕಾರ ಆಡಳಿತ ವಿಫಲವಾಗಿದೆ. ಗೃಹ ಸಚಿವರ ಅರಗ ಜ್ಞಾನೇಂದ್ರ ಭಾಗಿಯಾಗದೆ ಈ ಪ್ರಕರಣ ನಡೆದಿಲ್ಲ.  ಅಶ್ವಥ್ ನಾರಾಯಣ ಸಹೋದರನನ್ನ ಸಿಐಡಿ ವಿಚಾರಣೆ ಮಾಡುತ್ತಿದ್ದರು..ಆದರೆ ಅಶ್ವಥ್ ನಾರಾಯಣ ಅವರು ಅಧಿಕಾರ ದುರ್ಬಳಕೆಯಿಂದ ಅವರ ಸಹೋದರನನ್ನ  ಬಿಡುಗಡೆ ಗೊಳಿಸಿದ್ದಾರೆ. ಸರಕಾರದ ಮಂತ್ರಿಗಳು ಭಾಗಿಯಾಗಿದ್ದಾರೆ. ಸರಕಾರ ಪ್ರಕರಣ ಮುಚ್ಚಿಹಾಕಲು ಮರುಪರೀಕ್ಷೆ ಮಾಡ್ತಾ ಇದೆ. ಆದರೆ ಈ ಪ್ರಕರಣವನ್ನ ಕ್ಲಿಯರ್ ಮಾಡದೆ ಪರುಪರೀಕ್ಷೆ ಮಾಡಬಾರದು ಎಂದು ಆಗ್ರಹಿಸಿದ್ದಾರೆ. ಸರಕಾರದಲ್ಲಿ ಅಕ್ರಮಗಳನ್ನ‌ ಎತ್ತಿ ಹಿಡಿಯಲು ಇದೊಂದು ಪ್ರಕರಣ ಸಾಕು. ಅಶ್ವಥ್ ನಾರಾಯಣ ಮತ್ತು ಗೃಹ ಸಚಿವರು ನೈತಿಕ‌ಹೊಣೆ ಹೊತ್ತು ರಾಜಿನಾಮೆ‌ ಕೊಡಬೇಕು ಎಂದು ಆಗ್ರಹ ಮಾಡಿದ್ದಾರೆ.
"

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್