ರಾಜ್ಯದಲ್ಲಿ ಪಿಎಸ್ಐ ಅಕ್ರಮ ನೇಮಕಾತಿ ಹಗರಣ ಈಗ ರಾಜಕೀಯ ನಾಯಕರ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗಿದೆ. ಒಂದೆಡೆ ಸಿಐಡಿ ಅಧಿಕಾರಿಗಳ ತಂಡ ಪಿಎಸ್ಐ ಅಕ್ರಮ ನೇಮಕಾತಿಯ ಕಿಂಗ್‌ಪಿನ್‌ಗಳು ಹಾಗೂ ಆರೋಪಿತರನ್ನು ಪತ್ತೆ ಹಚ್ಚಿ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ವರದಿ: ಪರಶುರಾಮ್ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್
ಯಾದಗಿರಿ (ಮೇ.03): ರಾಜ್ಯದಲ್ಲಿ ಪಿಎಸ್ಐ ಅಕ್ರಮ ನೇಮಕಾತಿ ಹಗರಣ (PSI Recruitment Scam) ಈಗ ರಾಜಕೀಯ ನಾಯಕರ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗಿದೆ. ಒಂದೆಡೆ ಸಿಐಡಿ ಅಧಿಕಾರಿಗಳ ತಂಡ ಪಿಎಸ್ಐ ಅಕ್ರಮ ನೇಮಕಾತಿಯ ಕಿಂಗ್‌ಪಿನ್‌ಗಳು ಹಾಗೂ ಆರೋಪಿತರನ್ನು ಪತ್ತೆ ಹಚ್ಚಿ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇತ್ತ ರಾಜಕೀಯ ನಾಯಕರು ಒಬ್ಬರ ಮೇಲೆ ಮತ್ತೊಬ್ಬರು ಆರೋಪ ಮಾಡುತ್ತಿದ್ದಾರೆ.
undefined
ಮಾಜಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಅವರ ಆರೋಪಕ್ಕೆ ಯಾದಗಿರಿಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadish Shettar) ವಾಗ್ದಾಳಿ ನಡೆಸಿದ್ದಾರೆ. ಪ್ರಿಯಾಂಕ ಖರ್ಗೆ ಅವರು ಸುಖಾ ಸುಮ್ಮನೆ ಆರೋಪ ಮಾಡುವುದು ಸರಿಯಲ್ಲ. ಆರೋಪ ಮಾಡುವದು ಬಿಟ್ಟು ಸಾಕ್ಷಿ ಸಮೇತ ದೈರ್ಯವಿದ್ದರೆ ಸಿಐಡಿ ಮುಂದೆ ವಿಚಾರಣೆಗೆ ಹಾಜರಾಗಲಿ ಎಂದರು. ಸೂಕ್ತ ದಾಖಲೆಗಳನ್ನು ಇಟ್ಟುಕೊಂಡು ಖರ್ಗೆ ಹೇಳಿಕೆ ಕೊಡಬೇಕು. ಕಿಂಗ್ ಪಿನ್ ಯಾರು ಅಂತ ಗೊತ್ತಿದ್ದರೆ ಯಾರು ಅಂತ ಖರ್ಗೆ ಹೇಳಲಿ.
ವಿಧಾನಸೌಧದಲ್ಲಿರುವವರಿಗೆ ದುಡ್ಡು ಮುಟ್ಟಿದೆ ಎಂದ ಪ್ರಿಯಾಂಕ್ ಖರ್ಗೆಗೆ ಶೆಟ್ಟರ್ ಕಿಡಿ: ವಿಧಾನಸೌಧದಲ್ಲಿರುವರಿಗೆ ದುಡ್ಡು ಮುಟ್ಟಿದೆ ಎಂಬ ಪ್ರಿಯಾಂಕ ಖರ್ಗೆಗೆ ಶೆಟ್ಟರ್ ಕಿಡಿಕಾರಿದರು. ವಿಧಾನಸೌಧದಲ್ಲಿರುವ ಹಣ ಪಡೆದಿರುವ ಬಗ್ಗೆ ಗೊತ್ತಿದ್ದರೆ ಹೆಸರು ಧೈರ್ಯವಾಗಿ ಹೇಳಲಿ. ಸಿಐಡಿ ತನಿಖೆಯಲ್ಲಿ ಯಾವುದಾದರೂ ಒಂದು ಸಣ್ಣ ಸಾಕ್ಷಿ ಕೊಟ್ಟಿದ್ದಿರಾ ಎಂದು ಪ್ರಶ್ನಿಸಿದರು. ಈ ಬಗ್ಗೆ ಸರಕಾರಕ್ಕೆ ಸರಿಯಾದ ಮಾಹಿತಿ ಕೊಡುವ ಕೆಲಸ ಮಾಡಬೇಕು ಎಂದರು.
PSI Recruitment Scam: ಹಗರಣದಲ್ಲಿ ಪ್ರಭಾವಿ ಮಂತ್ರಿಗಳೇ ಭಾಗಿ, ಕಾಂಗ್ರೆಸ್ ಆರೋಪ!
ಪಿಸ್‌ಐ ಅಕ್ರಮ ನೇಮಕಾತಿಯಲ್ಲಿ ಸಚಿವ ಅಶ್ವತ್ಥ್ ನಾರಾಯಣ ಭಾಗಿ ಎಂಬ ಉಗ್ರಪ್ಪ ಆರೋಪ ವಿಚಾರಕ್ಕೆ ಜಗದೀಶ್ ಶೆಟ್ಟರ್ ತಿರುಗೇಟು: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮಾತನಾಡಿ, ಪಿಎಸ್ ಐ ನೇಮಕಾತಿಯಲ್ಲಿ ಭ್ರಷ್ಟಚಾರದ ವಾಸನೆ ಇದೆ ಅಂದ ಕೂಡಲೆ, ತಕ್ಷಣವೇ ಸಿಎಂ, ಹೋಂ ಮಿನಿಷ್ಟರ್ ಸಿಐಡಿ ತನಿಖೆಗೆ ಕೊಟ್ಟಿದ್ದಾರೆ. ಈಗ ಸಿಐಡಿ ತನಿಖೆ ನಡೆಯುತ್ತಿದೆ. ಇದರಲ್ಲಿ ಪಾರ್ಟಿ, ಪಂಗಡ ಯಾವುದು ಬರುವುದಿಲ್ಲ. ಎಲ್ಲಾ ಪಕ್ಷದಲ್ಲಿ ಭೃಷ್ಟಚಾರಿಗಳಿದ್ದಾರೆ. ಅಕ್ರಮದಲ್ಲಿ ಯಾರ್ಯಾರು ಹೆಸರು ಬಂದಿದಾವೋ ಎಲ್ಲರೂ ಅರೆಸ್ಟ್ ಆಗುತ್ತಾರೆ. ಸುಮ್ನೆ ಸಚಿವರ ಹೆಸರು ಹೇಳುವುದು ಅರ್ಥನೆ ಇಲ್ಲ ಎಂದರು.
ಹೊಟ್ಟೆ ಪಾಡಿಗಾಗಿ ರಾಜಕೀಯಕ್ಕೆ ಯಾಕೆ ಬರ್ತೀರಿ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು: ಮಾಜಿ ಸಿಎಂ ಸಿದ್ದರಾಮಯ್ಯ ಹೊಟ್ಟೆಪಾಡಿಗಾಗಿ ರಾಜಕೀಯ ಮಾಡಬಾರದು, ಜನಸೇವೆ ಮಾಡಲು ರಾಜಕೀಯದಲ್ಲಿರಬೇಕೆಂಬ ಹೇಳಿಕೆ ಜಗದೀಶ್ ಶೆಟ್ಟರ್ ಕಿಡಿಕಾರಿದರು. ವಿಚಾರದ ಬಗ್ಗೆ ಶೆಟ್ಟರ್ ಅವರು ಪ್ರತಿಕ್ರಿಯಿಸಿ, ಪಿಎಸ್ಐ ಅಕ್ರಮ ನೇಮಕಾತಿಯಲ್ಲಿ ಕಾಂಗ್ರೆಸ್ ನಾಯಕರು ಇದ್ದಾರೆ. ಹಾಗಾದರೆ ಕಾಂಗ್ರೆಸ್ ಪಕ್ಷದವರು ಹೊಟ್ಟೆ ಪಾಡಿಗಾಗಿ ಬಂದವರಾ ಎಂದು ಪ್ರಶ್ನಿಸಿದರು. ಒಬ್ಬ ವಿರೋಧ ಪಕ್ಷದ ನಾಯಕನಾಗಿ ಜವಾಬ್ದಾರಿಯುತವಾಗಿ ಮತ್ತು ಸರಿಯಾಗಿ ಮಾತನಾಡಬೇಕು. ಅದನ್ನು ಬಿಟ್ಟು ಸರಕಾರ ಹಾಗೂ ಬಿಜೆಪಿಯನ್ನು ಟೀಕೆ ಮಾಡುವ ಸಲುವಾಗಿ ಎನೋ ಹೇಳಿಕೆ ಕೊಡುವದು ಸರಿಯಲ್ಲವೆಂದರು.
ನಾಯಕತ್ವ ಬದಲಾವಣೆ ಮಾಡುವುದಾಗಿ ಬಿ.ಎಲ್.ಸಂತೋಷ ಹೇಳಿಲ್ಲ: ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ನಾಯಕತ್ವ ಬದಲಾವಣೆಯ ಮಾತುಗಳನ್ನಾಡಿದ್ದರು. ವಿಚಾರಕ್ಕೆ ಶೆಟ್ಟರ್ ಪ್ರತಿಕ್ರಿಯೆ ನೀಡಿ, ಬಿ.ಎಲ್. ಸಂತೋಷ ಅವರು ನಾಯಕತ್ವ ಬದಲಾವಣೆ ಬಗ್ಗೆ ಹೇಳಿಲ್ಲ, ದೇಶದಲ್ಲಿ ಪಕ್ಷ ಯಾವ ರೀತಿ ನಡೆಯುತ್ತಿದೆ, ಯುವಕರಿಗೆ ಪಕ್ಷ ಯಾವ ರೀತಿ ಅವಕಾಶ ಕೊಡುತ್ತಿದೆ, ಈ ಹಿನ್ನಲೆ ಇಟ್ಟುಕೊಂಡು ಸಂತೋಷ್ ಅವರು ಹೇಳಿಕೆ ನೀಡಿದ್ದಾರೆ ಇವರ ಎಂದರು.
PSI ನೇಮಕಾತಿ ಹಗರಣ: ಬಂಧಿತ ಉದ್ಯಮಿ ಕಾಶಿನಾಥ್ ಕಾಟೇಗಾಂವ್‌ಗೂ ಕಾಂಗ್ರೆಸ್ ನಂಟು
ಅಜಿತ್ ಪವಾರ್ ವಿರುದ್ಧ ಶೆಟ್ಟರ್ ವಾಗ್ದಾಳಿ: ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರುವರೆಗು ಹೋರಾಟ ಮಾಡುತ್ತೆವೆಂಬ ಮಹಾರಾಷ್ಟ್ರದ ಡಿಸಿಎಂ ಅಜಿತ್ ಪವಾರ್ ಹೇಳಿಕೆಗೆ ಶೆಟ್ಟರ್ ವಾಗ್ದಾಳಿ ನಡೆಸಿದರು. ಮಹಾರಾಷ್ಟ್ರದಲ್ಲಿ ರಾಜಕೀಯ ಅಸ್ಥಿರತೆ ಬಂದಾಗ ಗಡಿ ವಿವಾದ ಮಾತನಾಡುತ್ತಾರೆ. ಈ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ಕೇಸ್ ನಡೆಸಿ ಫೈಟ್ ಮಾಡಿ ಎಂದರು.