ಕನಕಗಿರಿ (ಜು.29): ಪಟ್ಟಣದ ಎಪಿಎಂಸಿಯಲ್ಲಿನ ಖಾಸಗಿ ಅಂಗಡಿಯೊಂದರ ಮುಂದೆ ರೈತರು ರಸಗೊಬ್ಬರ ಪಡೆಯಲು ಹರಸಾಹಸಪಟ್ಟರು.
ಸೋಮವಾರ ನಡೆಯುವ ವಾರದ ಸಂತೆಗೆ ಬಂದಿದ್ದ ನೂರಾರು ರೈತರು ತರಕಾರಿ, ಕಿರಾಣಿ ಜತೆಗೆ ಯೂರಿಯಾ ಗೊಬ್ಬರವನ್ನು ಮುಗಿಬಿದ್ದು ಖರೀದಿಸಿದರು. ಕೃಷಿ ಇಲಾಖೆ ಪರವಾನಗಿ ನೀಡಿದ ಮೂರು ಅಂಗಡಿಗಳು ಬೆಳಗ್ಗೆಯಿಂದ ಸಂಜೆ ವರೆಗೂ ರೈತರು ಸರದಿಯಲ್ಲಿ ನಿಂತು ಗೊಬ್ಬರು ಖರೀದಿಸಿದರು.
ಗ್ರಾಮೀಣ ಭಾಗದ ರೈತರು ನಾಗರ ಪಂಚಮಿ ಹಬ್ಬ ಮರೆತು ಯೂರಿಯಾ ಖರೀದಿಗೆ ಆಗಮಿಸಿದ್ದರು. ಪ್ರತಿ ಪಹಣಿಗೆ ಎರಡೇ ಚೀಲ ಯೂರಿಯಾ ಕೊಡುತ್ತಿದ್ದರಿಂದ ಹೆಚ್ಚುವರಿ ಭೂಮಿ ಇರುವವರೆಗೆ ಸಮಸ್ಯೆಯಾಗಿದ್ದು, ದೊಡ್ಡ ರೈತರನ್ನು ಗುರುತಿಸಿ ಹೆಚ್ಚುವರಿ ಗೊಬ್ಬರ ವಿತರಿಸಬೇಕೆಂದು ಕೃಷಿ ಇಲಾಖೆಗೆ ರೈತರು ಆಗ್ರಹಿಸಿದ್ದಾರೆ.
ಅಗತ್ಯಕ್ಕೆ ತಕ್ಕಂತೆ ಯೂರಿಯಾ ಗೊಬ್ಬರ ಬಂದಿದ್ದು, ರೈತರು ಅವಶ್ಯವಿದ್ದಷ್ಟು ಮಾತ್ರ ಗೊಬ್ಬರ ಖರೀದಿಸಬೇಕು. ಯೂರಿಯಾ ಭೂಮಿಯ ಫಲವತ್ತತೆ ಮತ್ತು ಪರಿಸರಕ್ಕೆ ಹಾನಿಕಾರವಾಗಿದೆ. ನ್ಯಾನೋ ಬಳಸಿ ಪರಿಸರ ಉಳಿಸಲು ರೈತರು ಸಹಕರಿಸಬೇಕು ಎಂದು ಗಂಗಾವತಿಯ ಸಹಾಯಕ ಕೃಷಿ ನಿರ್ದೇಶಕ ಸಂತೋಷ ಪಟ್ಟದಕಲ್ಲು ಇದ್ದರು.
ನಾಗರ ಪಂಚಮಿ ಮರೆತು ಯೂರಿಯಾ ಖರೀದಿಗೆ ಇಡೀ ದಿನ ಕಳೆದ ರೈತರು

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ