ಸಿದ್ದರಾಮಯ್ಯ ಸಿಎಂ ಆಗ್ತಿದ್ದಂತೆ ಅರ್ಬನ್ ನಕ್ಸಲ್ ಚಟುವಟಿಕೆ ಆರಂಭ: ಸಿಟಿ ರವಿ

By Gowthami KFirst Published May 30, 2023, 3:07 PM IST
Highlights

ಸಿದ್ದರಾಮಯ್ಯ ಮುಖ್ಯಮಂತ್ರಿ ಆಗ್ತಾ ಇದ್ದಂತೆ ಅರ್ಬನ್ ನಕ್ಸಲರು ಬಿಲದಿಂದ ಹೊರ ಬಂದಿದ್ದಾರೆ. ಮತ್ತೆ ಚಿಕ್ಕಮಗಳೂರು ಭಾಗದಲ್ಲಿ  ನಕ್ಸಲ್ ಚಟುವಟಿಕೆ ಹೆಚ್ಚಾಗುವ ಸಾಧ್ಯತೆಯೂ ಇದೆ ಎಂದು ಸಿಟಿ ರವಿ ಹೇಳಿದ್ದಾರೆ.

ಬೆಂಗಳೂರು (ಮೇ.30): ಸಿದ್ದರಾಮಯ್ಯ ಮುಖ್ಯಮಂತ್ರಿ ಆಗ್ತಾ ಇದ್ದಂತೆ ಅರ್ಬನ್ ನಕ್ಸಲರು ಬಿಲದಿಂದ ಹೊರ ಬಂದಿದ್ದಾರೆ. ಈಗ ಮತ್ತೆ ಚಿಕ್ಕಮಗಳೂರು ಭಾಗದಲ್ಲಿ ಇನ್ನು ಕೆಲವೆಡೆ ನಕ್ಸಲ್ ಚಟುವಟಿಕೆ ಹೆಚ್ಚಾಗುವ ಸಾಧ್ಯತೆಯೂ ಇದೆ. ಛತ್ತಿಸಘಡದಲ್ಲಿ ಚಟುವಟಿಕೆ ಆದಂತೆ ಇಲ್ಲಿ ಹಾಗೆ ಆಗಬಹುದು. ಈಗ ಅವರು ಹೊರ ಬಂದಿದ್ದಾರೆ. ನಮ್ಮ ಸರ್ಕಾರ ಇದ್ದಾಗ ಬಾಲ ಮುದುರಿಕೊಂಡು ಇದ್ರು. ಅವರಿಗೆ ಬುಲೆಟ್ ಮೇಲೆ ನಂಬಿಕೆ ಬ್ಯಾಲೆಟ್ ಮೇಲೆ ಅಲ್ಲ. ಈಗ ಪಠ್ಯ ಬದಲಾವಣೆ ಮಾಡಿ ಎಂದು ಮುಂದೆ ಬಂದಿದ್ದಾರೆ. ತಮ್ಮ ಬೆಳೆ ಬೇಯಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ಮಾಜಿ ಶಾಸಕ ಸಿಟಿ ರವಿ ಗಂಭೀರ ಆರೋಪ ಮಾಡಿದ್ದಾರೆ.

ಹೆಡಗೆವಾರ್ ಅವರ ದೇಶ ಪ್ರೇಮ. ಸಂಘದ ದೇಶ ಪ್ರೇಮ ಯಾರು ಪ್ರಶ್ನೆ ಮಾಡೋಕೆ ಆಗಲ್ಲ. ನಾವು ಕಾದು ನೋಡ್ತೇವೆ. ನಮಗೂ ಏನ್ ಮಾಡಬೇಕು ಗೊತ್ತಿದೆ. ಅನುಭವ ಕೂಡ ಪಾಠ ಕಲಿಸಿದೆ. ಈಗ ನಗರ ನಕ್ಸಲ್ ಆಕ್ಟಿವ್ ಆಗಿದ್ದಾರೆ. ರಾಜ್ಯದ ಹಿತ ದೃಷ್ಟಿಯಿಂದ ಇದು ಅಪಾಯಕಾರಿ. ಸಿದ್ದರಾಮಯ್ಯ ಅನುಭವದ ಆಧಾರದ ಮೇಲೆ ಆಡಳಿತ ಮಾಡ್ತಾರೆ ಎಂದು ನಂಬಿದ್ದೇವೆ. 2018 ರಲ್ಲಿ ಮಾಡಿದಂತೆ ಮಾಡಿದ್ರೆ, 2024 ರಿಸಲ್ಟ್ ಉತ್ತರ ನೀಡತ್ತೆ.‌‌ ಮಿದುಳನ್ನೇ ನಗರ ನಕ್ಸಲ್ ಗೆ ಒಪ್ಪಿಸಿದ್ರೆ ನಾವು ಸುಮ್ನೆ ಇರಲ್ಲ. ನಾವು ಸೋತಿರಬಹದು. ಸೀಟ್ ಕಡಿಮೆ ಆಗಿರಬಹುದು. ಆದ್ರೆ ನಮಗೂ 36% ಓಟ್ ಹಾಕಿದ್ದಾರೆ. ಈ ಚುನಾವಣೆ ಲೈಫ್ ಟೈಮ್ ಅಲ್ಲ. ಮತ್ತೆ ಮತ್ತೆ ಚುನಾವಣೆ ಬರ್ತಾ ಇರುತ್ತದೆ ನೆನಪಿರಲಿ ಎಂದು ಎಚ್ಚರಿಕೆ ನೀಡಿದ್ದಾರೆ.

ರಾಜ್ಯಾದ್ಯಂತ ಎಲ್ಲಾ ಮಹಿಳೆಯರಿಗೆ ಬಸ್‌ ನಲ್ಲಿ ಫ್ರೀ, ಯಾವುದೇ ಕಂಡೀಶನ್ ಇಲ್ಲ: ಸಾರಿಗೆ ಸಚಿವ ರೆಡ್ಡಿ

ನಾನು ಕಳೆದ ಬಾರಿಗಿಂತ 9 ಸಾವಿರ ಮತ ಹೆಚ್ಚು ತಗೊಂಡಿದ್ದೇನೆ. ಸೋತಿದ್ದಕ್ಕೆ ಯಾರನ್ನೂ ದೂರಲ್ಲ. ನಾನು ಈಗ ಪ್ರಧಾನ ಕಾರ್ಯದರ್ಶಿ, ಪಕ್ಷ ಅವಕಾಶ ನೀಡಿದೆ. ರಾಜ್ಯಾಧ್ಯಕ್ಷ ಹುದ್ದೆ ಇನ್ನೊಂದು ಮತ್ತೊಂದಕ್ಕೆ ನಾನು ಬೇಡಿಕೆ ಇಡುವವ ಅಲ್ಲ. ಅದು ನನ್ನ ಮನಸ್ಸಿಗೆ ಒಪ್ಪಲ್ಲ. ಲೋಕಸಭಾ ಚುನಾವಣೆಯಲ್ಲಿ 28 ಸ್ಥಾನ ಗೆಲ್ಲಬೇಕು. ಭಾರತ ಗೆಲ್ಲಲು ಕೇಂದ್ರದಲ್ಲಿ ಬಿಜೆಪಿ ಗೆಲ್ಲಬೇಕು. ಕೆಲವರು 2028 ಕ್ಕೆ ಭಾರತವನ್ನು ಇಸ್ಲಾಂ ರಾಷ್ಟ್ರ ಮಾಡುವ ಗುರಿ ಇಟ್ಟಿದ್ದಾರೆ. ಇಂತಹ ಸಮಯದಲ್ಲಿ ಭಾರತಕ್ಕೆ ಬಿಜೆಪಿ ಅಗತ್ಯ. ರಾಷ್ಟ್ರದ ಹಿತಕ್ಕೆ ಬಿಜೆಪಿ ಮತ್ತೆ ಗೆಲ್ಲಬೇಕು ಎಂದಿದ್ದಾರೆ.

ಬಿಜೆಪಿ ಸರ್ಕಾರದ ಕಾಮಗಾರಿ, ಯೋಜನೆಗಳ ಕಡಿತ: ಸರ್ಕಾರದ ವಿರುದ್ಧ ಸಿಟಿ ರವಿ ಆಕ್ರೋಶ

ಸಿದ್ದರಾಮಯ್ಯ ಸುಲಭವಾಗಿ ಅಧಿಕಾರ ಬಿಡೋರು ಜಗ್ಗೋರು ಅಲ್ಲ. ಡಿಕೆಶಿ ಮತ್ತು ಸಿದ್ದರಾಮಯ್ಯ ನಡುವೆ ಯಾವ ಮಾತು ಕತೆ ಆಗಿದೆ ಗೊತ್ತಿಲ್ಲ. ಈಗ ಹನಿಮುನ್ ಪೀರಿಯಡ್, ನಾವು ಯಾಕೆ ಈಗಲೇ ಮಾತಾಡೋಣ. ಹನಿಮೂನ್ ಪಿರಿಯಡ್ ಆದ್ರಿಂದ ಸ್ವಲ್ಪ ಪ್ರೀತಿಯಿಂದ ಒಬ್ಬರಿಗೊಬ್ಬರು ತಿವಿದಿರಬಹುದು. ನೋಡೊಣ ಸಂಸಾರ ಆರಂಭ ಆಗಲಿ. ಗರತಿ ಯಾರು ಇನ್ನೊಂದು ಯಾರು ಗೊತ್ತಾಗತ್ತೆ. ಫ್ರೀ ಯೋಜನೆ ಎಲ್ಲಾರಿಗೂ ನೀಡ್ತೇವೆ ಎಂದಿದ್ದರು. ಈಗ ಅವರಿಗೆ ಇಲ್ಲ ಇವರಿಗೆ ಇಲ್ಲ ಅಂದ್ರೆ ಹೇಗೆ? ಖಂಡಿತ ಉಚಿತ, ನಿಶ್ಚಿತ ಎಂದೆಲ್ಲಾ ಪ್ರಾಸಬದ್ದವಾಗಿ ಮಾತಾಡಿದ್ದು ಯಾರು? ಈಗ ಫ್ರೀ ಯೋಜನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

click me!