ರಾಜ್ಯಾದ್ಯಂತ ಎಲ್ಲಾ ಮಹಿಳೆಯರಿಗೆ ಬಸ್‌ ನಲ್ಲಿ ಫ್ರೀ, ಯಾವುದೇ ಕಂಡೀಶನ್ ಇಲ್ಲ: ಸಾರಿಗೆ ಸಚಿವ ರೆಡ್ಡಿ

By Gowthami KFirst Published May 30, 2023, 1:29 PM IST
Highlights

ರಾಜ್ಯದ ಎಲ್ಲ ಮಹಿಳೆಯರಿಗೂ ಉಚಿತ ಪ್ರಯಾಣ ಇದಕ್ಕೆ ಯಾವುದೇ ಷರತ್ತುಗಳಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ಬೆಂಗಳೂರು (ಮೇ.29):  KSRTC ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ (ramalinga reddy) ರಾಜ್ಯದ ಎಲ್ಲ ಮಹಿಳೆಯರಿಗೂ ಉಚಿತ ಪ್ರಯಾಣಕ್ಕೆ ಅವಕಾಶ ನೀಡುತ್ತೇವೆ, ಬಿಪಿಎಲ್ ಕಾರ್ಡ್ ಇದ್ರೆ ಮಾತ್ರ ಅಂತ ನಾವು ಗ್ಯಾರಂಟಿಯಲ್ಲಿ ಹೇಳಿರಲಿಲ್ಲ. ಈಗಲೂ ನಾವು ಬಿಪಿಎಲ್ (BPL) ಕಾರ್ಡ್ ಬೇಕು ಎಂದು ಹೇಳುವುದೇ ಇಲ್ಲ ಎಂದಿದ್ದಾರೆ. ಹೀಗಾಗಿ ಎಲ್ಲಾ ಮಹಿಳೆಯರಿಗೂ ಬಸ್‌ನಲ್ಲಿ ಉಚಿತ (Free bus) ಪ್ರಯಾಣವಿದ್ದು, ಇದಕ್ಕೆ ಯಾವುದೇ ಷರತ್ತುಗಳಿಲ್ಲ ಎಂದಿದ್ದಾರೆ. ಪ್ರಯಾಣ ಮಾಡುವಾಗ ಆಧಾರ್ ಕಾರ್ಡ್ ಕಡ್ಡಾಯ ಮಾಡಲಾಗಿದೆ.

ಮುಖ್ಯಮಂತ್ರಿಗಳ ಎಲ್ಲ ಕಾರ್ಯದರ್ಶಿಗಳು ಹಾಗೂ ಎಂಡಿಗಳ ಜೊತೆ ಮಾತುಕತೆ ನಡೆಸಿದ್ದೇನೆ. ಎಲ್ಲ ನಿಗಮಗಳು ಒಂದಷ್ಟು ಗೈಡ್ಲೈನ್ಸ್ ನೀಡಿದ್ದಾರೆ. ಅವೆಲ್ಲವನ್ನೂ ಸಚಿವ ಸಂಪುಟದಲ್ಲಿ ಇಟ್ಟು ತೀರ್ಮಾನ ತೆಗೆದುಕೊಳ್ಳುತ್ತೇವೆ. ನಾಳೆ ಸಿಎಂ ಜೊತೆ ಸಭೆ ಇದೆ ನಂತ್ರ ಹೇಳುತ್ತೇವೆ ಎಂದಿದ್ದಾರೆ. 

ನಾಲ್ಕು ನಿಗಮಗಳಲ್ಲಿ ನೌಕರರ ಸಂಖ್ಯೆ ಕಡಿಮೆ ಇದೆ. ನೇಮಕಾತಿ ಮಾಡಿಕೊಳ್ಳಬೇಕು. ಬಸ್ಸುಗಳ ಸಂಖ್ಯೆ ಕೂಡ ತುಂಬಾ ಕಡಿಮೆ ಇದೆ ಅದನ್ನು ಹೆಚ್ಚಳ ಮಾಡಬೇಕು. ಇಲ್ಲಾಂದ್ರೆ ಕಾಂಗ್ರೆಸ್ ಶಕ್ತಿ ಯೋಜನೆ ಜಾರಿ ಮಾಡಲು ಕಷ್ಟ ಆಗುತ್ತದೆ ಎಂದು  ಸಾರಿಗೆ ಸಚಿವ ರಾಮಲಿಂಗರೆಡ್ಡಿಗೆ ಸಭೆಯಲ್ಲಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಹಿಳೆಯರಿಗೆ ಉಚಿತ ಬಸ್ ಸೇವೆ ವಿಚಾರವಾಗಿ, ಪ್ರತಿ ವರ್ಷ ಅಂದಾಜು 3200 ಕೋಟಿ ಹಣ ಬೇಕಾಗುತ್ತದೆ. ನಾಲ್ಕು ನಿಗಮ ನಷ್ಟದಲ್ಲಿರುವ ಹಿನ್ನೆಲೆ ಸರ್ಕಾರ ಸಹಾಯಧನ ನೀಡಿದ್ರೆ ಯೋಜನೆ ಜಾರಿಗೆ ಅನುಕೂಲವಾಗುತ್ತೆ. ಸರ್ಕಾರ ಹಣ ನೀಡದಿದ್ರೆ ನಿಗಮಗಳು ಇನ್ನಷ್ಟು ಸಾಲದ ಸುಳಿಯಲ್ಲಿ ಸಿಲುಕುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಆರ್ಥಿಕ ಪರಿಸ್ಥಿತಿ, ಕೋವಿಡ್ ವೇಳೆ ಆಗಿರುವ ನಷ್ಟ.ಕೋವಿಡ್ ವೇಳೆ ನೌಕರರ ನೇಮಕ್ಕೆ ತಡೆಯಾಗಿತ್ತು. ಹೊಸ ಬಸ್ ಗಳ ಸಂಚಾರಕ್ಕೆ ಎಲ್ಲೆಲ್ಲ ತೊಂದರೆ ಇದೆ. ಎಲ್ಲ ಮಾಹಿತಿಯನ್ನ ತೆಗೆದುಕೊಳ್ಳಲಾಗಿದೆ. ಹೊಸ ಬಸ್ ಗಳನ್ನ ಎಲ್ಲ ನಿಗಮಗಳಿಗೆ ಸೇರ್ಪಡೆ ಮಾಡುತ್ತೇವೆ. ಪ್ರಯಾಣಿಕ 82 ಲಕ್ಷದ 51 ಸಾವಿರ ಜನ ಪ್ರಯಾಣಿಸುತ್ತಾರೆ. ತಿಂಗಳಿಗೆ 24. ಕೋಟಿ ಜನ ಓಡಾಟ ನಡೆಸುತ್ತಾರೆ ಎಂದು ರೆಡ್ಡಿ ಹೇಳಿದ್ದಾರೆ.

ಕಾಂಗ್ರೆಸ್‌ ಗ್ಯಾರಂಟಿ: ಉಚಿತ 10 ಕೆಜಿ ಅಕ್ಕಿ ವಿತರಣೆ ವಿಳಂಬ ಸಾಧ್ಯತೆ?

ಗ್ಯಾರಂಟಿ ಯೋಜನೆ ಜಾರಿಯಾಗದಿದ್ದರೆ ಬಿಜೆಪಿ ಪ್ರತಿಭಟನೆ ಮಾಡುವ ವಿಚಾರವಾಗಿ ಮಾತನಾಡಿದ ರೆಡ್ಡಿ ಬಿಜೆಪಿಯವರಿಗೆ ಪ್ರತಿಭಟನೆ ಮಾಡಲು ಅವಕಾಶ ನೀಡಲ್ಲ. ಜನ ಬಿಜೆಪಿಗೆ ರೆಸ್ಟ್ ಮಾಡಲು ಹೇಳಿದ್ದಾರೆ. ಅವರು ಮನೆಯಲ್ಲಿ ರೆಸ್ಟ್ ಮಾಡಲಿ ಎಂದಿದ್ದಾರೆ.

 

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ: ಸರ್ಕಾರ ಸಹಾಯಧನ ನೀಡದಿದ್ರೆ ಸಾಲದ ಸುಳಿಯಲ್ಲಿ ಸಾರಿಗೆ ಇಲಾಖೆ

ಸಭೆಯಲ್ಲಿ ಏನಾಯ್ತು?: ಮಹಿಳೆಯರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣ ಹಿನ್ನೆಲೆ ಇಂದು ಶಾಂತಿನಗರದ ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿಯಲ್ಲಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ನಾಲ್ಕೂ ನಿಗಮಗಳ ಎಂಡಿಗಳ ಜೊತೆ  ಮಾತುಕತೆ ನಡೆಸಿದರು. ಸಭೆಯಲ್ಲಿ BMTC, KSRTC, NWKRTC, KKRTC ಎಂಡಿಗಳು ಭಾಗಿಯಾಗಿದ್ದರು. ನಿಗಮಗಳಲ್ಲಿ ಪ್ರತಿನಿತ್ಯ ಸಂಚರಿಸುತ್ತಿರೋ ಮಹಿಳೆಯರ ಸಂಖ್ಯೆ. ಅವರು ಕ್ರಮಿಸುತ್ತಿರೋ ಸರಾಸರಿ ಕಿಲೋಮೀಟರ್‌ಗಳ ಪ್ರಮಾಣ. ನಿಗಮಗಳು ಪ್ರತಿನಿತ್ಯ ದುಡಿಯುತ್ತಿರೋ ಒಟ್ಟು ಮೊತ್ತವೆಷ್ಟು? ಲಾಭ ನಷ್ಟಗಳ ಬಗ್ಗೆ ಚರ್ಚೆ ನಡೆದಿದೆ. 

ಸಭೆಯಲ್ಲಿ   ಸಾರಿಗೆ ಇಲಾಖೆ ಕಾರ್ಯದರ್ಶಿ  N.V.ಪ್ರಸಾದ್ ಬಿಎಂಟಿಸಿ ಹಾಗೂ ಕೆಎಸ್ಆರ್ಟಿಸಿ ಎಂಡಿ ಜಿ.ಸತ್ಯವತಿ, NWRTC ಎಂಡಿ ಭರತ್, KKRTC ಎಂಡಿ ರಾಚಪ್ಪ ಮತ್ತು ಇತರ ಅಧಿಕಾರಿಗಳು ಭಾಗಿಯಾಗಿದ್ದರು.

 

click me!