ಬಿಎಸ್‌ವೈ ವಿರುದ್ಧ ಯತ್ನಾಳ್ ಬಹಿರಂಗ ಆರೋಪ; ಯತ್ನಾಳ್ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಗರಂ

By Ravi Janekal  |  First Published Dec 29, 2023, 2:47 PM IST

ಕ್ಷದೊಳಗೆ ಏನೇ ಭಿನ್ನಾಭಿಪ್ರಾಯ, ದೂರುಗಳಿದ್ದರೂ ಕೇಂದ್ರ ನಾಯಕರ ಜೊತೆ ಮಾತನಾಡಲಿ. ಯಾರೇ ಆಗಲಿ ಪಕ್ಷದ ವಿರುದ್ಧವಾಗಿ ಬಹಿರಂಗವಾಗಿ ಮಾತನಾಡುವುದು ಸರಿಯಲ್ಲ ಎಂದು ಬಿಎಸ್‌ವೈ ವಿರುದ್ಧ ಯತ್ನಾಳ್ ಹೇಳಿಕೆಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅಸಮಾಧಾನ ವ್ಯಕ್ತಪಡಿಸಿದರು.


ದಾವಣಗೆರೆ (ಡಿ.29): ಪಕ್ಷದೊಳಗೆ ಏನೇ ಭಿನ್ನಾಭಿಪ್ರಾಯ, ದೂರುಗಳಿದ್ದರೂ ಕೇಂದ್ರ ನಾಯಕರ ಜೊತೆ ಮಾತನಾಡಲಿ. ಯಾರೇ ಆಗಲಿ ಪಕ್ಷದ ವಿರುದ್ಧವಾಗಿ ಬಹಿರಂಗವಾಗಿ ಮಾತನಾಡುವುದು ಸರಿಯಲ್ಲ ಎಂದು ಬಿಎಸ್‌ವೈ ವಿರುದ್ಧ ಯತ್ನಾಳ್ ಹೇಳಿಕೆಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅಸಮಾಧಾನ ವ್ಯಕ್ತಪಡಿಸಿದರು.

ಅಮಿತ್ ಶಾ, ರಾಜ್ ನಾಥ್ ಸಿಂಗ್, ರಾಷ್ಟ್ರೀಯ ಅಧ್ಯಕ್ಷರಿದ್ದಾರೆ ಏನಾದರೂ ಸಮಸ್ಯೆಗಳಿದ್ದಲ್ಲಿ ಅವರ ಜೊತೆ ಮಾತನಾಡಲಿ. ವಿಜಯೇಂದ್ರ ಅವರನ್ನ ರಾಷ್ಟ್ರೀಯ ನಾಯಕರು ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಅದರ ಬಗ್ಗೆ ವಿರೋಧ ಮಾಡೋದು ತಪ್ಪು. ಈ ಬಗ್ಗೆ ಹೈಕಮಾಂಡ್ ನಾಯಕರು ಕ್ರಮ ಕೈಗೊಳ್ತಾರೆ ಎಂದರು.

Tap to resize

Latest Videos

 

ಯತ್ನಾಳ್ ಹುಚ್ಚುನಾಯಿ ಇದ್ದಂತೆ, ನಾಯಿ ನಿಯತ್ತೂ ಇಲ್ಲದ ವ್ಯಕ್ತಿ: ರೇಣುಕಾಚಾರ್ಯ

ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆಕೋರರ ಪೊಲೀಸರನ್ನೇ ಕೊಲ್ಲಲು, ಠಾಣೆಯನ್ನು ಸುಟ್ಟುಹಾಕಲು ಹೊರಟಿದ್ದರು. ಇದು ಚಾರ್ಜ್ ಸೀಟ್ ನಲ್ಲಿ ಉಲ್ಲೇಖವಿದೆ. ಅಂತಹ ಸಮಾಜಘಾತುಕರನ್ನು ಬಿಡುಗಡೆ ಮಾಡುವ ಕಾಂಗ್ರೆಸ್ ಸರ್ಕಾರ, ಕನ್ನಡಕ್ಕಾಗಿ ಹೋರಾಟ ನಡೆಸಿದವರನ್ನ ಬಂಧಿಸುತ್ತದೆ. ಡಿಜೆಹಳ್ಳಿ ಕೆಜಿ ಹಳ್ಳಿ ಹುಬ್ಭಳ್ಳಿ ಗಲಭೆ ದಾಂಧಲೆ ಮಾಡಿದವರ ಕೇಸ್ ವಾಪಸ್ ಪಡೆಯಲು ಹೇಳ್ತಾರೆ. ಆದರೆ ಕನ್ನಡಕ್ಕಾಗಿ ಹೋರಾಟ ಮಾಡಿದವರನ್ನು ಬಂಧಿಸಿ ನ್ಯಾಯಾಂಗ ಬಂಧಕ್ಕೆ ಒಪ್ಪಿಸುತ್ತಾರೆ ರಾಜ್ಯ ಸರ್ಕಾರದ ಕನ್ನಡ ವಿರೋಧಿ ನಡೆಗೆ ಆಕ್ರೋಶ ವ್ಯಕ್ತಪಡಿಸಿದರು. 

ಕನ್ನಡ  ಹೋರಾಟಗಾರನ್ನ ಬಂಧಿಸಿ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವುದು ಖಂಡನೀಯ. ಕನ್ನಡಪರ ಹೋರಾಟಗಾರರ ಬೇಡಿಕೆ ನ್ಯಾಯಯುತವಾಗಿದೆ. ಆದರೆ ಮತ್ತೊಮ್ಮೆ ಹೋರಾಟ ಮಾಡದಂತೆ ರಾಜ್ಯ ಸರ್ಕಾರ ಹೋರಾಟಗಾರರ ಮೇಲೆ ಎಲ್ಲ ಸೆಕ್ಷನ್ ಹಾಕಿದ್ದಾರೆ. ಕನ್ನಡಪರ ಹೋರಾಟಗಾರರನ್ನು 14 ದಿನ ನ್ಯಾಯಾಂಗ ಬಂಧನದಲ್ಲಿಡುವ ಅವಶ್ಯಕತೆ ಇರಲಿಲ್ಲ. ಇಂತಹ ಇಬ್ಬಗೆಯ ನೀತಿ ಬಿಟ್ಟು ಹೋರಾಟಗಾರರನ್ನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಯತ್ನಾಳ್‌ ಬಿಜೆಪಿ ಭ್ರಷ್ಟಾಚಾರದ ದಾಖಲೆ ಕೊಡಲಿ: ಸಿಎಂ ಸಿದ್ದು

ಸಿಎಂ ಸಿದ್ದರಾಮಯ್ಯ ನಮ್ಮ ಬಿಜೆಪಿ ಸರ್ಕಾರವನ್ನ ಬುರುಡೆ ಸರ್ಕಾರ ಅಂತಾ ಟೀಕಿಸ್ತಾರೆ. ಸಿದ್ದರಾಮಯ್ಯನವರಂತಹ ಸುಳ್ಳುಗಾರನಿಲ್ಲ. ಇವರ ಆಡಳಿತ ಅವಧಿಯಲ್ಲಿ ಇವರಿಗೆ ಗ್ಯಾಸ್ ಕೊಡೋ ಯೋಗ್ಯತೆ ಇರಲಿಲ್ಲ. ಅವರಿಗೆ ಮನೆ ಮನೆಗೆ ಗ್ಯಾಸ್ ಸಿಗುವಂತೆ ಮಾಡಿದ್ದು ಕೇಂದ್ರ ಸರ್ಕಾರ. ಪ್ರಧಾನಿ ನರೇಂದ್ರ ಮೋದಿಯವರು 4ಕೋಟಿ ಮನೆಗಳನ್ನ ಕೊಟ್ಟಿದ್ದಾರೆ. ಆದರೂ ಸಿದ್ದರಾಮಯ್ಯ ಅವರು ಬಿಜೆಪಿ ಸರ್ಕಾರವನ್ನು ಬುರುಡೆ ಸರ್ಕಾರ ಅಂತಾರೆ. ತಮ್ಮ ಸರ್ಕಾರದ ನ್ಯೂನತೆಗಳನ್ನ ಮುಚ್ಚಿ ಹಾಕಲು ಈ ರೀತಿ ವಿಷಯಾಂತರ ಮಾಡ್ತಾರೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

click me!