ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರದ ಕೆಪಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನಕ್ಕೆ ಚಿತ್ರನಟಿ ಪೂಜಾ ಗಾಂಧಿ ತಮ್ಮ ಪತಿಯೊಂದಿಗೆ ಭೇಟಿ ನೀಡಿದರು. ವಿವಾಹ ನಂತರ ಹನಿಮೂನ್‌ಗೆ ವಿದೇಶಕ್ಕೆ ಹಾರುವ ನಟನಟಿಯರ ಮಧ್ಯೆ; ಕನ್ನಡದ ಕಂಪನ್ನು ಹರಸಿ ಸಾಹಿತಿಗಳ ನೆಲೆಗಳಿಗೆ ಭೇಟಿ ಕೊಡ್ತಿರೋ ಮಳೆ ಹುಡುಗಿ ಪೂಜಾ ಗಾಂಧಿ ವಿಶೇಷವಾಗಿ ಕಾಣುತ್ತಾರೆ.
ಚಿಕ್ಕಮಗಳೂರು (ಡಿ.29): ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರದ ಕೆಪಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನಕ್ಕೆ ಚಿತ್ರನಟಿ ಪೂಜಾ ಗಾಂಧಿ ತಮ್ಮ ಪತಿಯೊಂದಿಗೆ ಭೇಟಿ ನೀಡಿದರು.
ರಾಷ್ಟ್ರಕವಿ ಕುವೆಂಪು ಅವರ ಆಶಯದ ಮಂತ್ರ ಮಾಂಗಲ್ಯ ಪದ್ದತಿಯಲ್ಲಿ ವೈವಾಹಿಕ ಬದುಕಿಗೆ ಕಾಲಿಟ್ಟಿರುವ ಚಿತ್ರನಟಿ ಪೂಜಾ ಗಾಂಧಿ ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನಕ್ಕೆ ಭೇಟಿ ಕೆಲ ಪತಿಯೊಂದಿಗೆ ಸಮಯ ಕಳೆದರು. ಕನ್ನಡದ ಕಂಪನ್ನು ಅರಸಿ ಕೊಟ್ಟಿಗೆಹಾರದವರೆಗೆ ಬಂದಿದ್ದ ಪೂಜಾ ಗಾಂಧಿ ಪ್ರತಿಷ್ಠಾನದ ತುಂಬಾ ಓಡಾಡಿ ಇಲ್ಲಿನ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದರು. ತೇಜಸ್ವಿ ಓದಿನ ಗಾಜಿನ ಮನೆಯಲ್ಲಿ ಕುಳಿತು ಕೆಲಹೊತ್ತು ಇಲ್ಲಿದ್ದ ಪುಸ್ತಕಗಳನ್ನು ಓದಿದರು. ತನ್ನ ಪತಿಯೊಂದಿಗೆ ಪ್ರತಿಷ್ಠಾನದ ಆಯಾಕಟ್ಟಿನ ಸ್ಥಳಗಳಲ್ಲಿ ಸೆಲ್ಪಿ ತೆಗೆಸಿಕೊಂಡರು.
undefined
ಕರ್ನಾಟಕದ ಸಾಹಿತಿಗಳ ನೆಲೆಗಳಿಗೆ ಭೇಟಿ :
ಕುವೆಂಪು ಮತ್ತು ಪೂರ್ಣಚಂದ್ರ ತೇಜಸ್ವಿಯವರ ಸಾಹಿತ್ಯ ಮತ್ತು ವಿಚಾರಗಳಿಂದ ಪ್ರಭಾವಿತರಾಗಿರುವ ಪೂಜಾ ಗಾಂಧಿ ಇತ್ತೀಚೆಗೆ ಯಾವುದೇ ಹೆಚ್ಚಿನ ಆಡಂಬರವಿಲ್ಲದೇ ಮಂತ್ರ ಮಾಂಗಲ್ಯ ಪದ್ಧತಿಯಲ್ಲಿ ತಮ್ಮ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಸರ್ವೇ ಸಾಧಾರಣವಾಗಿ ವಿವಾಹವಾದ ನಂತರ ಬಹುತೇಕ ನಟನಟಿಯರು ಹನಿಮೂನ್ ಮೂಡ್ ನಲ್ಲಿ ವಿದೇಶ ಪ್ರವಾಸಿ ತಾಣಗಳನ್ನು ಅರಸಿ ಹೊರಟರೆ ಅದಕ್ಕೆ ತದ್ವಿರುದ್ಧವಾಗಿ ಪೂಜಾಗಾಂಧಿ ವಿಜಯ್ ಘೋರ್ಪಡೆ ದಂಪತಿಗಳು ಕನ್ನಡದ ಕಂಪನ್ನು ಅರಸಿ ಕರ್ನಾಟಕದ ಸಾಹಿತಿಗಳ ನೆಲೆಗಳಿಗೆ ಹೊರಟಿದ್ದಾರೆ.
ಕುವೆಂಪುವರ ಕುಪ್ಪಳ್ಳಿಯ ಕವಿಶೈಲ, ಹಿರೇಕುಡಿಗೆ ಕವಿಮನೆ, ಮಂತ್ರ ಮಾಂಗಲ್ಯದಿಂದ ವಿವಾಹವಾದ ಸಮಾನ ಮನಸ್ಕ ಕಡಿದಾಳು ಪ್ರಕಾಶ್ ಅವರ ಮನೆ, ಕನ್ನಡ ಪರ ಹೋರಾಟಗಾರರ ಮನೆಗಳಿಗೆ ಭೇಟಿ ನೀಡುವ ಮೂಲಕ ನವಜೋಡಿ ವಿಶಿಷ್ಟ ರೀತಿಯ ನಡೆವಳಿಕೆಗಳಿಂದ ಗಮನ ಸೆಳೆಯುತ್ತಿದ್ದಾರೆ.
'ಮುಂಗಾರು ಮಳೆ' ಮನೆಗೆ ಭೇಟಿ ಕೊಟ್ಟ ಮಳೆ ಹುಡುಗಿ; ಸವಿನೆನನಪು ಹಂಚಿಕೊಂಡ ನವವಧು ಪೂಜಾ ಗಾಂಧಿ
ಪುಸ್ತಗಳನ್ನು ಓದುವುದು ಮನಸ್ಸಿಗೆ ತುಂಬಾ ಖುಷಿ :
ಕೊಟ್ಟಿಗೆಹಾರಕ್ಕೆ ಭೇಟಿ ನೀಡಿದಾಗ ತಮ್ಮ ಅನಿಸಿಕೆ ಹಂಚಿಕೊಂಡಿರುವ ಪೂಜಾಗಾಂಧಿ ಆಧುನಿಕ ಕನ್ನಡದ ಮಾಯಾವಿ ತೇಜಸ್ವಿ ಯವರ ಸ್ಮರಣಾರ್ಥ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ಮಿಸಿರುವ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನಕ್ಕೆ ಭೇಟಿ ನೀಡಿರುವುದು ತುಂಬಾ ಹರ್ಷವನ್ನು ಉಂಟುಮಾಡಿದೆ. ಇಲ್ಲಿನ ಸುಂದರ ಪರಿಸರ ನನ್ನ ಮನಸಿಗೆ ಮುದನೀಡಿದೆ. ಇಲ್ಲಿ ಇತ್ತೀಚೆಗೆ ಪ್ರಾರಂಭಿಸಿರುವ ತೇಜಸ್ವಿ ಓದಿನ ಗಾಜಿನ ಮನೆಯು ಅದ್ಭುತ ಪರಿಕಲ್ಪನೆಯಾಗಿದೆ. ಇಲ್ಲಿ ಕುಳಿತುಕೊಂಡು ಹಬೆಯಾಡುವ ಕಾಫಿ ಹೀರುತ್ತಾ ಕನ್ನಡ ಪುಸ್ತಗಳನ್ನು ಓದುವುದು ಮನಸ್ಸಿಗೆ ತುಂಬಾ ಖುಷಿ ನೀಡುತ್ತದೆ. ಓದುಗರು ಅದರಲ್ಲೂ ಯುವ ಪೀಳಿಗೆ ಇಂತಹ ಸ್ಥಳಗಳಿಗೆ ಭೇಟಿ ನೀಡಿ ಸದುಪಯೋಗಪಡಿಸಿಕೊಳ್ಳಬೇಕು ಸಲಹೆ ನೀಡಿದರು.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು