ಗೆದ್ದ ಬಳಿಕ ಮತ್ತೆ ರಾಮನಗರ ಎಂದು ನಾಮಕರಣ: ಕುಮಾರಸ್ವಾಮಿ

By Girish Goudar  |  First Published Jul 10, 2024, 11:26 AM IST

ಈಗ ಅವರು ಜಿಲ್ಲೆಯ ಹೆಸರು ಬದಲಾಯಿಸಬಹುದು. ರಾಜ್ಯದಲ್ಲಿ ಮತ್ತೆ ನಾನು ಅಧಿಕಾರಕ್ಕೆ ಬಂದೇ ಬರುತ್ತೇನೆ, ಆಗ ನಾನು ಅವರು ಇಟ್ಟಿರೋ ಹೆಸರು ಕಿತ್ತೆಸೆಯುತ್ತೇನೆ ಎಂದು ಗುಡುಗಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ 
 


ನವದೆಹಲಿ(ಜು.10):  ರಾಮನಗರ ಜಿಲ್ಲೆಗೆ ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡುವ ಪ್ರಯತ್ನಕ್ಕೆ ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಎಚ್.ಡಿ. ಕುಮಾರಸ್ವಾಮಿ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.  ಈಗ ಅವರು ಜಿಲ್ಲೆಯ ಹೆಸರು ಬದಲಾಯಿಸಬಹುದು. ರಾಜ್ಯದಲ್ಲಿ ಮತ್ತೆ ನಾನು ಅಧಿಕಾರಕ್ಕೆ ಬಂದೇ ಬರುತ್ತೇನೆ, ಆಗ ನಾನು ಅವರು ಇಟ್ಟಿರೋ ಹೆಸರು ಕಿತ್ತೆಸೆಯುತ್ತೇನೆ ಎಂದು ಗುಡುಗಿದ್ದಾರೆ. 

ನವದೆಹಲಿಯಲ್ಲಿ ಮಂಗಳವಾರ ಸುದ್ದಿಗಾರರ ಜತೆಗೆ ಮಾತನಾಡಿ, ಕಾಂಗ್ರೆಸ್ ಸರ್ಕಾರ ಬಂದ ಮೇಲೆ ರಾಮನಗರ ಜಿಲ್ಲೆ ಹೆಸರು ಬದಲಾವಣೆ ಮಾಡಲು ಹೊರಟಿದ್ದಾರೆ. ಇದನ್ನು ಯಾಕೆ ಮಾಡುತ್ತಿದ್ದಾರೆ ಎಂಬುದು ಅವರಿಗೇ ಗೊತ್ತಿಲ್ಲ. ಬೆಂಗಳೂರಿಗೆ ಸೇರ್ಪಡೆಯಾದರೆ ಮೂಟೆಗಟ್ಟಲೇ ಹಣವನ್ನು ತುಂಬಿಸಿಕೊಳ್ಳಬಹುದು ಎಂಬ ಉದ್ದೇಶ ಇರಬಹುದು. ನಾನು ರಾಮನಗರದ ನಾಲ್ಕೂ ತಾಲೂಕುಗಳನ್ನು ಬೆಂಗಳೂರಿಗೆ ಸೇರಿಸುತ್ತೇನೆ. ಭೂಮಿ ಮಾರಾಟ ಮಾಡ ಬೇಡಿ ಎಂದು ಅವರು ಹೇಳಿದ್ದರು ಎಂದು ಡಿಕೆಶಿ ಹೆಸರು ಹೇಳದೇ ಕುಮಾರಸ್ವಾಮಿ ಕಿಡಿಕಾರಿದರು. 

Latest Videos

undefined

ರಾಮನಗರ ಮರುನಾಮಕರಣದ ಬಗ್ಗೆ ಸದ್ಯಕ್ಕೆ ಏನೂ ಹೇಳಲ್ಲ: ಸಿಎಂ ಸಿದ್ದರಾಮಯ್ಯ

ರಾಮದೇವರಿಗೆ ಅಪಚಾರ: 

ರಾಮನಗರ ಜಿಲ್ಲೆ ಮಾಡಿದ್ದ ಉದ್ದೇಶ ಆ ವ್ಯಕ್ತಿಗೆ ಏನು ಗೊತ್ತಿದೆ? ಜಿಲ್ಲೆಯ ಹೆಸರಲ್ಲಿ ರಾಮನ ಹೆಸರು ಇರುವುದು ಒಂದು ಭಾಗ ಅಷ್ಟೆ. ಆ ಜಿಲ್ಲೆಗೆ ತನ್ನದೇ ಆದ ಇತಿಹಾಸ ಇದೆ. ಪುರಾಣ, ಐತಿಹ್ಯವಿದೆ. ಆ ಹೆಸರಲ್ಲಿ ರಾಮನ ಹೆಸರೂ ಇದೆ. ಈಗ ಹೆಸರು ಬದಲಾವಣೆಗೆ ಮುಂದಾಗುವ ಮೂಲಕ ರಾಮದೇವರಿಗೆ ಇವರು ಅಪಚಾರ ಮಾಡಲು ಹೊರಟಿದ್ದಾರೆ ಎಂದರು.

click me!