ಪ್ರಾಸಿಕ್ಯೂಷನ್ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ; 'ಇದೇನಾ ನಿಮ್ಮ ಸಂವಿಧಾನ ರಕ್ಷಣೆ?' ಸಿಎಂ ವಿರುದ್ಧ ಹೆಚ್‌ಡಿಕೆ ವಾಗ್ದಾಳಿ!

By Ravi Janekal  |  First Published Aug 18, 2024, 5:37 PM IST

ಮುಡಾ ಹಗರಣ ವಿಚಾರಕ್ಕೆ ಸಿದ್ದರಾಮಯ್ಯನವರ ಮೇಲೆ ರಾಜ್ಯಪಾಲರು ಕೇವಲ ಒಂದು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿದ್ದಕ್ಕೆ ನಿನ್ನೆಯಿಂದ ರಾಜ್ಯದಲ್ಲಿ ಸಂವಿಧಾನ ಬಿಕ್ಕಟ್ಟು, ರಾಜ್ಯ ಸರ್ಕಾರ ಅಸ್ತಿರಗೊಳಿಸಲು ಹೊರಟಿದ್ದಾರೆ ಎಂದೆಲ್ಲ ಪ್ರತಿಭಟನೆ ನಡೆಸ್ತಿರಲ್ಲ ಇದೇನಾ ನಿಮ್ಮ ಸಂವಿಧಾನ ರಕ್ಷಣೆ ಎಂದು ಕಾಂಗ್ರೆಸ್ ವಿರುದ್ಧ ಕೇಂದ್ರ ಸಚಿವ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.


ಬೆಂಗಳೂರು (ಆ.18): ಮುಡಾ ಹಗರಣ ವಿಚಾರಕ್ಕೆ ಸಿದ್ದರಾಮಯ್ಯನವರ ಮೇಲೆ ರಾಜ್ಯಪಾಲರು ಕೇವಲ ಒಂದು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿದ್ದಕ್ಕೆ ನಿನ್ನೆಯಿಂದ ರಾಜ್ಯದಲ್ಲಿ ಸಂವಿಧಾನ ಬಿಕ್ಕಟ್ಟು, ರಾಜ್ಯ ಸರ್ಕಾರ ಅಸ್ತಿರಗೊಳಿಸಲು ಹೊರಟಿದ್ದಾರೆ ಎಂದೆಲ್ಲ ಪ್ರತಿಭಟನೆ ನಡೆಸ್ತಿರಲ್ಲ ಇದೇನಾ ನಿಮ್ಮ ಸಂವಿಧಾನ ರಕ್ಷಣೆ ಎಂದು ಕಾಂಗ್ರೆಸ್ ವಿರುದ್ಧ ಕೇಂದ್ರ ಸಚಿವ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದನ್ನು ವಿರೋಧಿಸಿ ಕಾಂಗ್ರೆಸ್ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿರುವ ವಿಚಾರ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಕುಮಾರಸ್ವಾಮಿ ಅವರು, ಪಾರ್ಲಿಮೆಂಟ್‌ನಲ್ಲಿ ಬಿಜೆಪಿಯವ್ರು ಸಂವಿಧಾನ ಸರ್ವನಾಶ ಮಾಡೋದಕ್ಕೆ ಹೊರಟಿದ್ದಾರೆ ಅಂತಾ ಹೇಳ್ತಿರಲ್ಲ, ಪಾರ್ಲಿಮೆಂಟ್ ಗೆ ಸಂವಿಧಾನದ ಪುಸ್ತಕ ಹಿಡಿದುಕೊಂಡು ಬಂದ್ರಲಪ್ಪ, ಸಂವಿಧಾನ ಪುಸ್ತಕ ಹಿಡಿದು ಪ್ರಮಾಣ ವಚನ ಸ್ವೀಕಾರ ಮಾಡಿದ್ರಲ್ಲಪ್ಪ ಇದೇನ ನೀವು ಸಂವಿಧಾನ, ಕಾನೂನಿಗೆ ಕೊಡುವ ಗೌರವ, ಇದೇನಾ ನಿಮ್ಮ ಸಂವಿಧಾನ ರಕ್ಷಣೆ? ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಹೆಸರು ಕೇಳಿಬಂದಿದೆ ಕಾನೂನು ಪ್ರಕಾರ ರಾಜ್ಯಪಾಲರು ಅನುಮತಿ ನೀಡಿದ್ರಲ್ಲಿ ತಪ್ಪೇನಿದೆ? ತಾವು ತಪ್ಪಿ ಮಾಡಿಲ್ಲ ಎಂದರೆ ರಾಜೀನಾಮೆ ಕೊಟ್ಟು ತನಿಖೆಗೆ ಸಹಕರಿಸಲಿ ಅದುಬಿಟ್ಟು ಬಿಜೆಪಿಯವ್ರು ಜೆಡಿಎಸ್‌ನವರು ಸಂವಿಧಾನ ವಿರೋಧಿಗಳು, ಸಂವಿಧಾನ ರಕ್ಷಣೆ ಅಂತೆಲ್ಲ ನಿನ್ನೆಯಿಂದ ಹೋರಾಟ ಪ್ರಾರಂಭಿಸಿರೋದ್ಯಾಕೆ ಎಂದು ಹರಿಹಾಯ್ದರು.

Latest Videos

undefined

ಮುಡಾ ಹಗರಣ: ಸಿಎಂ ಸಿದ್ದರಾಮಯ್ಯ ಪರ ಬಿಕೆ ಹರಿಪ್ರಸಾದ್ ಬ್ಯಾಟಿಂಗ್!

ಸಿಎಂ ಸಿದ್ದರಾಮಯ್ಯನವರೇ ನಿಮಗೂ ನನಗೂ ಇರುವ ವ್ಯತ್ಯಾಸ ಇದೆ. ಸಿಎಂ ಸಿದ್ದರಾಮಯ್ಯ ಮಂತ್ರಿಮಂಡಲದ ಎಲ್ಲಾ ಸದಸ್ಯರಿಗೆ ಹೇಳ್ತಿದ್ದೇನೆ. ಪಾಪ ಅವರೆಲ್ಲ ನಿನ್ನೆಯಿಂದ ಸಿದ್ದರಾಮಯ್ಯರಿಂದ ಹಿಡಿದು ಎಲ್ಲ ನಾಯಕರು ಕುಮಾರಸ್ವಾಮಿ ಕುಮಾರಸ್ವಾಮಿ ಅಂತ ಧ್ಯಾನ ಮಾಡ್ತಿದ್ದಾರೆ. ನವೆಂಬರ್ ತಿಂಗಳಲ್ಲಿ ಕುಮಾರಸ್ವಾಮಿ ಮೇಲೆ ರಾಜ್ಯಪಾಲರ ಹತ್ತಿರ ಪ್ರಾಸಿಕ್ಯೂಷನ್‌ಗೆ ಕಳಿಸಿದ್ದೀನಿ ಅಂತಾ ಹೇಳಿದ್ರಲ್ಲ? ಯಾರು ಕಳಿಸಿರೋದು? ಪ್ರಾಸಿಕ್ಯೂಷನ್ ಅವಶ್ಯಕತೆ ಇದೆಯಾ?  2006 ರಲ್ಲಿ ನಾನು ಮುಖ್ಯಮಂತ್ರಿ ಆದ ಎರಡೇ ತಿಂಗಳಿಗೆ ನಾನು ಗಣಿಗಾರಿಕೆ ಮಾಲೀಕರ ಹತ್ತಿರ 150 ಕೋಟಿ ಹಣ ಸಂಗ್ರಹ ಮಾಡಿದ್ದೇನೆ ಎಂಬ ಆಪಾದನೆ ಬಂತು. ಅದನ್ನ ಹೈದರಾಬಾದ್‌ಗೆ ಹೋಗಿ ಸಿಡಿ ಲೀಡರ್, ಶ್ರೀನಿವಾಸಪುರದವರೊಬ್ಬರು ಹೋಗಿದ್ರು. ಹೈದರಾಬಾದ್‌ನಲ್ಲಿ ಕೂತು 150 ಕೋಟಿ ಹಗರಣದ ಕ್ಯಾಸೆಟ್ ಮಾಡೋದಕ್ಕೆ ಪ್ರಯತ್ನ ಪಟ್ರು. ಆಮೇಲೆ ವಿಧಾನಸಭೆ ಕಲಾಪ ನಡೆಯುವಾಗ ಸಿಡಿ ತೋರಿಸಿ ಆಪರೇಷನ್ ಸಕ್ಸಸ್ ಅಂದ್ರು. ನನ್ನ ಮೇಲೆ 150 ಕೋಟಿ ಅಪಾದನೆ ಬಂದಾಗ ಅಶೋಕ್, ಲಿಂಬಾವಳಿ, ಜಗದೀಶ್ ಶೆಟ್ಟರ್ ಬಂದು, ಬಳ್ಳಾರಿಯ ಇಬ್ಬರು ಅಧಿಕಾರಿಗಳನ್ನ ವರ್ಗಾವಣೆ ಮಾಡಿದ್ನಲ್ಲಾ ಮತ್ತೆ ಅವರನ್ನ ಅಲ್ಲಿಗೆ ಡಿಟೆಕ್ಷನ್ ಮಾಡಿ 150 ಕೋಟಿ ಆರೋಪ ಮಾಡಿದ್ದಕ್ಕೆ ಕ್ಷಮೆ ಕೇಳ್ತೀವಿ ಅಂದ್ರು. ಅದಕ್ಕೆ ನಾನು Nothing doing ಅಂದೆ ಸಿದ್ದರಾಮಯ್ಯನವರೇ, ಮುಖ್ಯಮಂತ್ರಿಯಾಗಿ ಬದಲಾವಣೆ ಮಾಡಿದ್ದೇನೆ ಬದಲಾವಣೆ ಮಾಡೊಲ್ಲ ಎಂದಿದ್ದೆ.

ಮುಡಾ ಹಗರಣ ರಾಜಕಾರಣಕ್ಕಾಗಿ ಕತೆ ಕಟ್ಟಿದ್ದಲ್ಲ: ಸಿದ್ದರಾಮಯ್ಯ ದಾಖಲೆ ಸಮೇತ ಸಿಕ್ಕಿಬಿದ್ದಿದ್ದಾರೆ: ಆರಗ ಜ್ಞಾನೇಂದ್ರ

ಮುಖ್ಯಮಂತ್ರಿಯಾಗಿ ವರ್ಗಾವಣೆ ಮಾಡಿದ್ದೇನೆ ಬದಲಾವಣೆ ಮಾಡೊಲ್ಲಾ ಅಂದೆ  ನಾನು ಅವತ್ತು ವಿಧಾನಸಭೆಯಲ್ಲಿ ಏನು ಹೇಳಿದ್ದೆ ಕಡತ ತೆಗೆದು ನೋಡಿ. ಮೊನ್ನೆ ಮೈಸೂರು ವಿಡಿಯೋ ಹಾಕಿದ್ರಲ್ಲ ಆಗ ಅದನ್ನ ಯಾಕೆ ಹಾಕಿರಲಿಲ್ಲ ಸಿಡಿ ಶಿವು? 124  ಶಾಸಕರ ಬೆಂಬಲವನ್ನ ಪಡೆದು ನಾನು 150 ಕೋಟಿ ಅರೋಪದ ರಕ್ಷಣೆ ಪಡೆಯಲ್ಲ. ನೀವು ಪ್ರಾರಂಭ ಮಾಡಿ, ವಿರೋಧ ಪಕ್ಷವಾಗಿ ನಾನು ಏಕಾಂಗಿಯಾಗಿ ಎದುರಿಸ್ತಿನಿ ಎದುರಿಸ್ತಿನಿ ಎಂಬ ಪದ ಬಳಿಸಿದ್ದಿನಿ ಸಿದ್ದರಾಮಯ್ಯ ಅವರೇ ಅದೇ ರೀತಿ ಎದುರಿಸಿದ್ದೆ. ನಿಮ್ಮ ಹಾಗೆ ಪ್ರತಿಭಟನೆ ಮಾಡಿ, ಬೆಂಕಿ ಹಚ್ಚಿ ಅಂತಾ ಕಾರ್ಯಕರ್ತರಿಗೆ ಹೇಳಲಿಲ್ಲ. ನನ್ನ ಮೇಲೆ ನಾಲ್ಕು ಡಿನೋಟಿಫಿಕೇಷನ್ ಕೇಸ್ ಎರಡು ಜಂತಕಲ್ ಮೈನಿಂಗ್ ಕೇಸ್ ಹಾಕಿದ್ರಿ  ಜಂತಕಲ್ ಮೈನಿಂಗ್ , 150 ಕೋಟಿ ಆರೋಪದ್ದು ಹೈ ಕೋರ್ಟ್ ನಲ್ಲಿ ಏನು ಆದೇಶ ಕೊಟ್ಟಿದ್ದಾರೆ? ಇದೆಲ್ಲ ಬೋಗಸ್ ಎಂದು ಆ ಪ್ರಕರಣವನ್ನೇ ರದ್ದು ಮಾಡಿದೆ. ಸಾಯಿ ವೆಂಕಟೇಶ್ವರದ್ದು ತನಿಖೆ ಮಾಡ್ಕೊಳ್ಳಿ ಅಂತಾ ಹೈಕೋರ್ಟ್ ಹೇಳಿತ್ತು. 2012ರಲ್ಲಿ ಅಬ್ರಾಹಂ ಅವರು ಎಸ್‌ಎಂ ಕೃಷ್ಣ, ಧರ್ಮಸಿಂಗ್ ಹಾಗೂ ನನ್ನ ಮೇಲೆ ಸುಪ್ರೀಂ ಕೋರ್ಟ್‌ನಲ್ಲಿ ಕೇಸ್ ಹಾಕಿದ್ರು ಎಂದರು.

click me!