ನಿಖಿಲ್ ಕುಮಾರಸ್ವಾಮಿ ಅವರು, ಜೆಡಿಎಸ್ ಹಾಗೂ ಬಿಜೆಪಿ ನಾಯಕರ ಕೋರ್ ಕಮಿಟಿ ಸಭೆ ನಡಿತಾ ಇತ್ತು. ಸುದ್ದಿಗೋಷ್ಟಿ ವೇಳೆ ಮೂಗಿನಿಂದ ರಕ್ತ ಸೋರಿಕೆಯಾಗಿದೆ. ಯಾರು ಆತಂಕ ಪಡುವ ಅವಶ್ಯಕತೆ ಇಲ್ಲ. ಇಲ್ಲಿ ಆಗಾಗ ಬಂದು ಹೆಲ್ತ್ ಚೆಕಪ್ ಮಾಡಿಸಿಕೊಳ್ತಿದ್ರು. ಅದ್ರೆ ಇತ್ತೀಚಿನ ಕೆಲಸದ ಒತ್ತಡಗಳು ಇತ್ತು. ಕಳೆದ 15 ದಿನಗಳಿಂದ ನಿರಂತರ ಓಡಾಟ ಇತ್ತು. ಬೆಳಗ್ಗೆ 4.30 ಕ್ಕೆ ಎದ್ದೆಳ್ತಾ ಇದ್ರು. ಮೆಡಿಕಲ್ ಚೆಕಪ್ ನಡೀತಾ ಇದೆ ಸುರಕ್ಷಿತವಾಗಿದ್ದಾರೆ.
ಬೆಂಗಳೂರು(ಜು.28): ಮೂಗಿನಿಂದ ರಕ್ತ ಸೋರಿಕೆಯಾದ ಹಿನ್ನಲೆಯಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನ ಜಯನಗರ ಅಪೊಲೊ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು(ಭಾನುವಾರ) ನಗರದಲ್ಲಿ ನಡೆಸಿದ ಸುದ್ದಿಗೋಷ್ಟಿ ವೇಳೆ ಕುಮಾರಸ್ವಾಮಿ ಅವರ ಮೂಗಿನಿಂದ ರಕ್ತ ಸೋರಿಕೆಯಾಗಿತ್ತು. ಹೀಗಾಗಿ ತಕ್ಷಣ ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು.
undefined
ಈ ಬಗ್ಗೆ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರು, ಜೆಡಿಎಸ್ ಹಾಗೂ ಬಿಜೆಪಿ ನಾಯಕರ ಕೋರ್ ಕಮಿಟಿ ಸಭೆ ನಡಿತಾ ಇತ್ತು. ಸುದ್ದಿಗೋಷ್ಟಿ ವೇಳೆ ಮೂಗಿನಿಂದ ರಕ್ತ ಸೋರಿಕೆಯಾಗಿದೆ. ಯಾರು ಆತಂಕ ಪಡುವ ಅವಶ್ಯಕತೆ ಇಲ್ಲ. ಇಲ್ಲಿ ಆಗಾಗ ಬಂದು ಹೆಲ್ತ್ ಚೆಕಪ್ ಮಾಡಿಸಿಕೊಳ್ತಿದ್ರು. ಅದ್ರೆ ಇತ್ತೀಚಿನ ಕೆಲಸದ ಒತ್ತಡಗಳು ಇತ್ತು. ಕಳೆದ 15 ದಿನಗಳಿಂದ ನಿರಂತರ ಓಡಾಟ ಇತ್ತು. ಬೆಳಗ್ಗೆ 4.30 ಕ್ಕೆ ಎದ್ದೆಳ್ತಾ ಇದ್ರು. ಮೆಡಿಕಲ್ ಚೆಕಪ್ ನಡೀತಾ ಇದೆ ಸುರಕ್ಷಿತವಾಗಿದ್ದಾರೆ. ಆರೋಗ್ಯವಾಗಿದ್ದಾರೆ. ಗಾಬರಿ ಪಡುವಂತ ತೊಂದರೆ ಇಲ್ಲ. ಯಾರು ಆತಂಕಪಡಬೇಡಿ ಎಂದು ಹೇಳಿದ್ದಾರೆ.
ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮೂರನೇ ಬಾರಿ ಹೃದಯ ಶಸ್ತ್ರಚಿಕಿತ್ಸೆ ಆಗಿದೆ. ರಾತ್ರಿ 12 ತನಕ ಪುಸ್ತಕ ಓದ್ತಾ ಇರ್ತಾರೆ. ಈಗ ಎಕೋ, ಸೇರಿ ಹಲವು ಪರೀಕ್ಷೆಗಳು ನಡೆದಿವೆ. ಇವತ್ತು ರಾತ್ರಿನೇ ಮತ್ತೆ ಹೊರಡಬಹುದು. ನಾಳೆ ಪಾರ್ಲಿಮೆಂಟ್ ಇದೆ ಬೆಳಗ್ಗೆ ಹೋಗಬೇಕು. ನಾಳೆ ಬೆಳಗ್ಗೆ ಹೊರಡಬೇಕಿತ್ತು. ಹೊರಡವು ವಿಮಾನದ ಸಮಯ ಸ್ವಲ್ಪ ತಡವಾಗಬಹುದು ಎಂದು ತಿಳಿಸಿದ್ದಾರೆ.
ಇನ್ನು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಮಾತನಾಡಿ, ಕುಮಾರಸ್ವಾಮಿ ಅವರ ದಿನಚರಿಯಲ್ಲಿ ಸ್ವಲ್ಪ ಸರಿದೂಗಿಸಬೇಕು. ರಾಜಕೀಯ ಒತ್ತಡ ಇದೆ. ಬೆಳಗ್ಗೆ ಬೇಗ ಹೇಳ್ತಾರೆ, ರಾತ್ರಿ ಲೇಟಾಗಿ ಮಲಗ್ತಾರೆ. ಇದನ್ನ ಅವರು ಗಮನಕ್ಕೆ ತೆಗೆದುಕೊಳ್ಳದೇ ಕೆಲಸ ಮಾಡ್ತಿದ್ದಾರೆ. ಇವತ್ತು ನಂಜನಗೂಡು, ಮೈಸೂರಿಗೆ ಬಂದಿದ್ರು. ಅಲ್ಲಿ ಪ್ರೆಸ್ ಮೀಟ್ ಮಾಡಿದ್ರು. ಬೆಂಗಳೂರಿಗೆ ಬಂದು ನಮ್ಮ ಪಕ್ಷದ ಸಭೆಯಲ್ಲಿ ಭಾಗಿಯಾಗಿದ್ರು. ನಂತರ ಮೈತ್ರಿ ಪಕ್ಷದ ಸಭೆಯಲ್ಲಿ ಭಾಗಿಯಾಗಿದ್ದರು . ಈ ವೇಳೆ ಬ್ಲಡ್ ಬಂದಿದೆ. ಇಲ್ಲಿ ಬರೋಷ್ಟರಲ್ಲಿ ಬ್ಲಡ್ ನಿಂತು ಹೋಗಿದೆ. ವೈದ್ಯರು ರೆಸ್ಟ್ ತೆಗೆದುಕೊಳ್ಳಬೇಕು ಅಂತಾ ಹೇಳಿದ್ದಾರೆ. ಬೆಳಗ್ಗೆ ಇಂತಹ ಲಕ್ಷಣಗಳು ಕಾಣಲಿಲ್ಲ. ನಮ್ಮ ಡಾ. ಮಂಜುನಾಥ್ ಅವರು ರೆಸ್ಟ್ ಮಾಡಲು ಸಜೆಸ್ಟ್ ಮಾಡಿದ್ರು. ಸದ್ಯ ಗಾಬರಿ ಪಡುವಂತ ತೊಂದರೆ ಇಲ್ಲ. ಆರೋಗ್ಯ ಸಮಸ್ಯೆ ಇಲ್ಲ, ಚೇತರಿಸಿಕೊಳ್ತಿದ್ದಾರೆ ಎಂದು ತಿಳಿಸಿದ್ದಾರೆ.
ರಾಮನಗರದಿಂದ ಬೆಳೆದವರು ಈಗ ಜಿಲ್ಲೆಯಲ್ಲೇ ಇಲ್ಲ: ಕುಮಾರಸ್ವಾಮಿ ವಿರುದ್ಧ ಡಿಕೆಶಿ ಗರಂ..!
ಅಪೊಲೊ ಆಸ್ಪತ್ರೆಯ ಡಾ. ಯತೀಶ್ ಮಾತನಾಡಿ, ಕುಮಾರಸ್ವಾಮಿ ಅವರಿಗೆ ಮೂರು ಸಲ ವಾಲ್ ರಿಪ್ಲೇಸ್ ಆಗಿದೆ. ಬ್ಲಡ್ ತಿನ್ನರ್ ಅಂತೆವೇ. ಇಲ್ಲಿ ಬರೋಷ್ಟರಲ್ಲಿ ಬ್ಲಡ್ ನಿಂತು ಹೋಗಿದೆ. ಅವರು ಸಹಜವಾಗಿಯೇ ಇದ್ದಾರೆ. ಅವರ ದಿನನಿತ್ಯ ಸಹಚರಿ ಇದೆ. ಅಡ್ಮಿಟ್ ಮಾಡಿಲ್ಲ, ಮೂಗಲ್ಲಿ ಎರಡು ಡ್ರಾಪ್ ರಕ್ತ ಬಂದಿದೆ. ಆರೋಗ್ಯಕ್ಕೆ ಒತ್ತು ಕೊಡಬೇಕು. ಅವರಿಗೂ ಗೊತ್ತು. ಸದ್ಯ ಸಹಜವಾಗಿಯೇ ಇದ್ದಾರೆ ಎಂದು ತಿಳಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆಸ್ಪತ್ರೆಗೆ ಆಗಮಿಸಿ ಕುಮಾರಸ್ವಾಮಿ ಅವರ ಆರೋಗ್ಯ ವಿಚಾರಿಸಿದ್ದಾರೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರಿಗೆ ಆಯಾಸ, ಕೆಲಸದ ಒತ್ತಡ ಇರಬಹುದು. ವೈದ್ಯರು ಚೆಕಪ್ ಮಾಡ್ತಾ ಇದ್ದಾರೆ. ಆತಂಕ ಪಡುವಂತಹದು ಏನು ಇಲ್ಲ. ನಮ್ಮ ತಂದೆ ಸಹ ಆತಂಕ ಪಡ್ತಾ ಇದ್ದರು. ಹೀಗಾಗಿ ಭೇಟಿ ಮಾಡಿ ವಿಚಾರಿಸಲು ಬಂದೆ. ನಾನು ಕೂಡ ಮಾತನಾಡಿದ್ದೇನೆ, ಆರಾಮವಾಗಿದ್ದಾರೆ. ಸಿಟಿ ಸ್ಕ್ಯಾನ್ ಸೇರಿ ಕೆಲವು ಪರೀಕ್ಷೆಗಳು ಮಾಡ್ತಾ ಇದ್ದಾರೆ. ಯಾರು ಗಾಬರಿ ಪಡುವಂತಹದು ಏನು ಇಲ್ಲ ಎಂದು ಹೇಳಿದ್ದಾರೆ.
ಸಂಸದ ಡಾ. ಸಿ. ಎನ್. ಮಂಜುನಾಥ್ ಮಾತನಾಡಿ, ಕುಮಾರಸ್ವಾಮಿ ಅವರಿಗೆ ಕೆಲವು ಗಂಟೆಗಳ ಹಿಂದೆ ಮೂಗಿನಿಂದ ರಕ್ತ ಸೋರಿತ್ತು. ಇಎನ್ ಟಿ ಪರೀಕ್ಷೆಗಳು ಆಗಿವೆ. ಎಲ್ಲಾ ನಾರ್ಮಲ್ ಇದೆ. ನಾನು ಕೂಡ ಚೆಕ್ ಮಾಡಿದ್ದೆ. ಅವರಿಗೆ ಬ್ಲಡ್ ತಿನ್ನರ್ ಮಾತ್ರೆ ಕೊಡ್ತಿದ್ವಿ. ದಿನಕ್ಕೆ ಎರಡು ಮಾತ್ರೆ ತಗೊಳ್ತಾ ಇದ್ರು. ಈ ಮಾತ್ರೆ ತೆಗೆದುಕೊಳ್ಳುವಾಗ ಮೂಗಿನಿಂದ ರಕ್ತ ಬರಬಹುದು. ಇನ್ನೊಂದು ಗಾಳಿಯಲ್ಲಿ ಟ್ರಾವೆಲ್ ಮಾಡುವಾಗ ಮೂಗು ಡ್ರೈ ಆಗುತ್ತೆ. ಅದರಿಂದಲೂ ಹೀಗೆ ಆಗಬಹುದು. ಇನ್ನೂ ಅರ್ಧ ಗಂಟೆಯಲ್ಲಿ ಮನೆಗೆ ಬಂದು ರೆಸ್ಟ್ ಮಾಡ್ತಾರೆ. ನಾಳೆ ಬೆಳಗ್ಗೆ 5 ಗಂಟೆಗೆ ಮತ್ತೆ ದೆಹಲಿಗೆ ಹೋಗ್ತಾರೆ. ಈ ಹಿಂದೆ ಲಂಡನ್ ಗೆ ಹೋದಾಗ ಹೀಗೆ ಆಗಿತ್ತು. ಕೋಲ್ಡ್ ವೆದರ್ ನಿಂದ ಹೀಗೆ ಆಗಿತ್ತು. ಬ್ಲಡ್ ಪ್ರೆಶರ್ ನಾರ್ಮಲ್ ಇದೆ. ಕೆಲಸದ ಒತ್ತಡ ಇದ್ರೆನೆ ಅವರಿಗೆ ಬಿಪಿ ಕಡಿಮೆ ಆಗೋದು. ಸ್ವಲ್ಪ ಮೆಡಿಸಿನ್ ಕಡಿಮೆ ಮಾಡ್ತೀವಿ ಎಂದು ಹೇಳಿದ್ದಾರೆ.