ಯುಗಾದಿ ಹಬ್ಬಕ್ಕೆ ಊರಿಗೆ ತೆರಳಲು ಮುಂದಾಗಿರುವ ಜನರಿಗೆ ಬಿಗ್ ಶಾಕ್ ಎದರಾಗಿದೆ. ಬಸ್ ಬುಕ್ ಮಾಡಲು ಮುಂದಾಗುತ್ತಿರುವ ಜನರು ದುಬಾರಿ ದರದಿಂದ ಹೈರಾಣುಗುತ್ತಿದ್ದಾರೆ. ಸದ್ಯ ನಿಮ್ಮ ಊರಿಗೆ ಬಸ್ ದರ ಎಷ್ಟಾಗಿದೆ ಗೊತ್ತಾ?
ಬೆಂಗಳೂರು(ಮಾ.25) ಯುಗಾದಿ ಹಬ್ಬ ಆಗಮಿಸುತ್ತಿದೆ. ಕರ್ನಾಟಕದೆಲ್ಲೆಡೆ ಹಬ್ಬದ ತಯಾರಿ ಶುರುವಾಗಿದೆ. ಇತ್ತ ಯುಗಾದಿ ಹಬ್ಬ ಸೇರಿದಂತೆ ಸಾಲು ಸಾಲು ರಜೆ ಇರುವ ಹಿನ್ನಲೆಯಲ್ಲಿ ಬೆಂಗಳೂರಿನಿಂದ ಜನರು ತಮ್ಮ ತಮ್ಮ ಊರಿಗೆ ತೆರಳಲು ಮುಂದಾಗುತ್ತಿದ್ದಾರೆ. ಆದರೆ ಬಸ್ ಟಿಕೆಟ್ ಬುಕ್ ಮಾಡಲು ಮುಂದಾಗಿರುವ ಜನರಿಗೆ ಬಿಗ್ ಶಾಕ್ ಎದುರಾಗಿದೆ. ಕಾರಣ ಖಾಸಗಿ ಬಸ್ ದರ ದುಪ್ಪಟ್ಟಾಗಿದೆ. ಮೂರು ಪಟ್ಟು ದರ ಏರಿಕೆ ಮಾಡಲಾಗಿದ್ದು, ಜನರು ಕಂಗಾಲಾಗಿದ್ದಾರೆ. ಜನಸಾಮಾನ್ಯರಿಂದ ದುಪ್ಪಟ್ಟು ಹಣ ವಸೂಲಿ ಮಾಡಲು ಖಾಸಗಿ ಬಸ್ ಮಾಲೀಕರು ಮುಂದಾಗಿದ್ದಾರೆ. ಪ್ರತಿ ಹಬ್ಬ, ರಜೆಗಳ ವೇಳೆ ಸರ್ಕಾರ ಈ ಕುರಿತು ಸ್ಪಷ್ಟ ಸೂಚನೆ ನೀಡಿದರೂ ಯಾರೂ ಕಿಮ್ಮತ್ತು ನೀಡಿಲ್ಲ.
ಖಾಸಗಿ ಬಸ್ ದರ ಮೂರು ಪಟ್ಟು ಹೆಚ್ಚಿಸಲಾಗಿದೆ. ಶುಕ್ರವಾರ ರಾತ್ರಿಯಿಂದಲೇ ಜನರು ಹಬ್ಬ ಹಾಗೂ ರಜೆಗಳ ಕಾರಣ ಊರಿಗೆ ತೆರಳುತ್ತಿದ್ದಾರೆ. ಖಾಸಗಿ ಬಸ್ ದರ ನೋಡಿ ಜನರು ಇದೀಗ ಪ್ರಯಾಣವನ್ನೇ ರದ್ದು ಮಾಡುವ ಪರಿಸ್ಥಿತಿಗೆ ತಲುಪಿದ್ದಾರೆ. ಸದ್ಯ ನಿಮ್ಮ ಊರಿಗೆ ಖಾಸಗಿ ಬಸ್ ದರ ಎಷ್ಟು ಏರಿಕೆ ಮಾಡಿದ್ದಾರೆ?
ತಿರುಪತಿ ದರ್ಶನಕ್ಕೆ ತೆರಳುವ ಭಕ್ತರೇ ಗಮನಿಸಿ, ದರ್ಶನ ಟಿಕೆಟ್, ರೂಂ ನಿಯಮದಲ್ಲಿ ಬದಲಾವಣೆ
ಬೆಂಗಳೂರು-ದಾವಣಗೆರೆ
ಪ್ರಸ್ತುತ ದರ=450-1300
ಹಬ್ಬದ ದರ=750-5500
ಬೆಂಗಳೂರು-ಧಾರವಾಡ
ಪ್ರಸ್ತುತ ದರ = 600-1100
ಹಬ್ಬದ ದರ =1069-5500
ಬೆಂಗಳೂರು- ಹುಬ್ಬಳ್ಳಿ
ಪ್ರಸ್ತುತ ದರ=475-1100
ಹಬ್ಬದ ದರ=1200-4200
ಬೆಂಗಳೂರು-ಬೆಳಗಾವಿ
ಪ್ರಸ್ತುತ ದರ=389-1200
ಹಬ್ಬದ ದರ=1129-5500
ಬೆಂಗಳೂರು-ಮಂಗಳೂರು
ಪ್ರಸ್ತುತ ದರ=650-1300
ಹಬ್ಬದ ದರ=1200-4500
ಬೆಂಗಳೂರು-ಕಲ್ಬುರ್ಗಿ
ಪ್ರಸ್ತುತ ದರ=750-1000
ಹಬ್ಬದ ದರ=1200-2200
ಬೆಂಗಳೂರು-ರಾಯಚೂರು
ಪ್ರಸ್ತುತ ದರ=650-990
ಹಬ್ಬದ ದರ=1100-2990
ಬೆಂಗಳೂರು-ಹಾಸನ
ಪ್ರಸ್ತುತ ದರ=463-1000
ಹಬ್ಬದ ದರ=750-1600
ಬೆಂಗಳೂರು-ಯಾದಗಿರಿ
ಪ್ರಸ್ತುತ ದರ=699-900
ಹಬ್ಬದ ದರ=1300-2200
ಬೆಂಗಳೂರು-ಶಿವಮೊಗ್ಗ
ಪ್ರಸ್ತುತ ದರ =500-990
ಹಬ್ಬದ ದರ =1199-1800
ಪ್ರತಿ ಬಾರಿ ಹಬ್ಬ ಹಾಗೂ ಸೀಸನ್ ವೇಳೆ ಬಸ್ ದರ ಏರಿಕೆ ಮಾಡಿದ್ದಾರೆ. ಯುಗಾದಿ, ಗೌರಿ- ಗಣೇಶ, ದಸರಾ, ದೀಪಾವಳಿ,ಸಂಕ್ರಾಂತಿ ಹೀಗೆ ಹಬ್ಬಗಳ ಸೀಜನ್ ಬಂತು ಅಂದರೆ ಖಾಸಗಿ ಬಸ್ ಮಾಲೀಕರಿಗೆ ಹಬ್ಬವೋ ಹಬ್ಬ.
ಹಿರಿಯ ನಾಗರಿಕರಿಗೆ 5 ವಿಶೇಷ ಸೌಲಭ್ಯ ಘೋಷಿಸಿದ ಭಾರತೀಯ ರೈಲ್ವೆ; ಸೀನಿಯರ್ಸ್ ಫುಲ್ ಹ್ಯಾಪಿ