ನಿಜವಾಯ್ತು ವರ್ತೆ ಪಂಜುರ್ಲಿ ದೈವದ ನುಡಿ; ತಲೆಮರೆಸಿಕೊಂಡಿದ್ದ ಪಾತಕಿ ಕೋರ್ಟ್‌ ಮುಂದೆ ಹಾಜರು!

By Ravi Janekal  |  First Published May 30, 2024, 7:26 AM IST

'ಕೊಲೆ ಮಾಡಿದವನು ಎಲ್ಲೇ ಅಡಗಿದ್ದರೂ ಒಂದು ವರ್ಷದಲ್ಲೇ ಕಣ್ಣಮುಂದೆ ತಂದು ನಿಲ್ಲಿಸುತ್ತೇನೆ' ಎಂದು ಕುಟುಂಬಸ್ಥರಿಗೆ  ವರ್ತೆ ಪಂಜುರ್ಲಿ ದೈವ ನೀಡಿದ್ದ ಅಭಯ ನಿಜವಾಗಿದೆ.


ಉಡುಪಿ (:ಮೇ.30): 'ಕೊಲೆ ಮಾಡಿದವನು ಎಲ್ಲೇ ಅಡಗಿದ್ದರೂ ಒಂದು ವರ್ಷದಲ್ಲೇ ಕಣ್ಣಮುಂದೆ ತಂದು ನಿಲ್ಲಿಸುತ್ತೇನೆ' ಎಂದು ಕುಟುಂಬಸ್ಥರಿಗೆ  ವರ್ತೆ ಪಂಜುರ್ಲಿ ದೈವ ನೀಡಿದ್ದ ಅಭಯ ನಿಜವಾಗಿದೆ. ಕಳೆದೊಂದು ವರ್ಷದಿಂದ ತಲೆಮರೆಸಿಕೊಂಡಿದ್ದ ಕೊಲೆ ಆರೋಪಿ ತಾನೇತಾನಾಗಿ ಕೋರ್ಟ್ ಮುಂದೆ ಹಾಜರಾಗಿದ್ದಾನೆ. ಆರೋಪಿ ಶರಣಾಗಿರುವುದು ವರ್ತೆ ಪಂಜುರ್ಲಿ ದೈವ ನುಡಿದ ಮಾತು ಕಾರಣವೆಂಬ ಮಾತು ಕೇಳಿಬಂದಿದೆ.

Tap to resize

Latest Videos

undefined

ಹೌದು, ಒಂದೂವರೆ ವರ್ಷದ ಹಿಂದೆ ನಡೆದಿದ್ದ ಕೊಲೆ ಪ್ರಕರಣದಿಂದ ಉಡುಪಿ ಜನತೆ ಬೆಚ್ಚಿಬಿದ್ದಿತ್ತು. ಫೆ.6, 2023ರಂದು ಕಾಪು ಪಾಂಗಾಳದಲ್ಲಿ ಕೋಲದಲ್ಲಿ ನಡೆಯುತ್ತಿದ್ದ ವೇಳೆಯೇ ಸ್ನೇಹಿತರಿಂದ ಯುವಕ, ವರ್ತೆ ಪಂಜುರ್ಲಿ ಭಕ್ತನಾಗಿದ್ದ ಶರತ್ ಶೆಟ್ಟಿ ಎಂಬುವವರನ್ನ ಚೂರಿ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದ ಪಾತಕಿಗಳು.  ಕೊಲೆ ಬಳಿಕ ಅಲ್ಲಿಂದ ಪರಾರಿಯಾಗಿದ್ದರು.

ಮೋದಿ ಮತ್ತೆ ಪ್ರಧಾನಿಯಾಗಲೆಂದು ಗೋಕರ್ಣ ಆತ್ಮಲಿಂಗಕ್ಕೆ ಜೋಶಿ ವಿಶೇಷ ಪೂಜೆ

ಯಾರು ಈ ಶರತ್ ಶೆಟ್ಟಿ?

ವರ್ತೆ ಪಂಜುರ್ಲಿ ದೈವಭಕ್ತನಾಗಿದ್ದ ಶರತ್ ಶೆಟ್ಟಿ ಏಳೆಂಟು ವರ್ಷದವನಿದ್ದಾಗಿನಿಂದಲೂ ವರ್ತೆ ಪಂಜುರ್ಲಿ ದೈವ ಸೇವೆ ಮಾಡುತ್ತಿದ್ದ. ಕುಟುಂಬಕ್ಕೆ ಆಧಾರವಾಗಿದ್ದ. ಭೂ ವ್ಯವಹಾರ ಮಾಡುತ್ತಿದ್ದ ಎನ್ನಲಾಗಿದೆ. ಇದೇ ವಿಚಾರಕ್ಕೆ ಕೊಲೆಯಾಗಿದ್ದ. ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಹತ್ಯೆ ಬಳಿಕ ಎಲ್ಲ ಆರೋಪಿಗಳ ಬಂಧನವಾದರೂ ಮುಖ್ಯ ಆರೋಪಿ ಯೋಗೀಶ್ ಆಚಾರ್ಯ ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ. ಶರತ್ ಶೆಟ್ಟಿ ಕುಟುಂಬಸ್ಥರು ದೈವದ ಮೊರೆ ಹೋಗಿದ್ದರು.

'ಗೆಲ್ಲುತ್ತೀ..' ಪಂಜುರ್ಲಿ ದೈವ ಹೇಳಿದೆ, ಸ್ಪರ್ಧೆಯಿಂದ ಹಿಂದೆ ಸರಿಯೊಲ್ಲ: ರಘುಪತಿ ಭಟ್

ದೈವದ ನೇಮ ವೇಳೆ ಮಗನ ಕೊಲೆ ನಡೆಸಿದ ಆರೋಪಿ ಇನ್ನೂ ಪತ್ತೆಯಾಗದಿರುವ ಬಗ್ಗೆ ದೈವಕ್ಕೆ ದೂರು ನೀಡಿ ಅಳಲು ತೋಡಿಕೊಂಡಿದ್ದ ಕುಟುಂಬ ಈ ವೇಳೆ, ಆರೋಪಿ ಎಲ್ಲೇ ಅಡಗಿದ್ದರೂ ಕಣ್ಣಮುಂದೆ ತಂದು ನಿಲ್ಲಿಸುತ್ತೇನೆ' ಎಂದು ಕುಟುಂಬಸ್ಥರಿಗೆ ನ್ಯಾಯ ಕೊಡಿಸುವುದಾಗಿ ಅಭಯ ನೀಡಿದ್ದ ದೈವ. ಇದೀಗ ಪ್ರಮುಖ ಆರೋಪಿ ಯೋಗೀಶ್ ಆಚಾರ್ಯ ಕೋರ್ಟ್‌ ಮುಂದೆ ಶರಣಾಗಿದ್ದಾರೆ. ನ್ಯಾಯಾಲಯ ಆರೋಪಿಯನ್ನ 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿದೆ.

click me!