ಕರಾವಳಿ ದೈವದ ಪವಾಡ; ಕಡಿಯಾಳಿ ದೇವಸ್ಥಾನದಲ್ಲಿ ಕಳ್ಳತನಕ್ಕೆ ಬಂದು ಮೂರ್ಛೆಹೋಗಿ, ಸಿಕ್ಕಿಬಿದ್ದ ಕಳ್ಳರು!

Published : Jul 27, 2025, 03:42 PM IST
Kadiyali Mahishamardini Temple

ಸಾರಾಂಶ

ಕರ್ನಾಟಕದ ಕರಾವಳಿಯಲ್ಲಿ ಮತ್ತೊಂದು ದೈವದ ಪವಾಡ ಘಟನೆಯೊಂದು ನಡೆದಿದೆ. ಉಡುಪಿಯ ಕಡಿಯಾಳಿ ಮಹಿಷಮರ್ಧಿನಿ ದೇವಸ್ಥಾನದಲ್ಲಿ ಕಳ್ಳತನಕ್ಕೆ ಯತ್ನಿಸಿದ ಇಬ್ಬರು ಕಳ್ಳರ ಪೈಕಿ ಒಬ್ಬ ಕಳ್ಳ ಮೂರ್ಛೆ ಹೋಗಿ ಬಿದ್ದ ಘಟನೆ ನಡೆದಿದೆ. ಸ್ಥಳೀಯರು ಕಳ್ಳರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಉಡುಪಿ (ಜು.27): ಕರಾವಳಿಯಲ್ಲಿ ದೈವದ ಪವಾಡಗಳನ್ನು ನಾವು ಹಲವು ಬಾರಿ ಕೇಳಿದ್ದೇವೆ. ಇನ್ನು ಮೂಲ ಕರಾವಳಿ ನಿವಾಸಿಗಳಂತೂ ಹಲವ ಪವಾಡಗಳನ್ನು ತಮ್ಮ ಕಣ್ಣಾರೆ ನೋಡಿದ್ದರೆ, ಇನ್ನು ಕೆಲವರು ಅದನ್ನು ಅನುಭವಿಸಿಯೂ ಇರುತ್ತಾರೆ. ಇದೀಗ ಕರಾವಳಿ ಜಿಲ್ಲೆ ಉಡುಪಿಯ ಕಡಿಯಾಳಿ ಮಹಿಷಮರ್ಧಿನಿ ದೇವಸ್ಥಾನದಲ್ಲಿ ಕಳ್ಳತನಕ್ಕೆ ಬಂದಿದ್ದ ಕಳ್ಳರು, ಮೂರ್ಛೆಬದು ಬಿದ್ದಿದ್ದು, ಸ್ಥಳೀಯರಿಗೆ ಸಿಕ್ಕಿಬಿದ್ದಿದ್ದಾರೆ. ಸ್ವತಃ ಸ್ಥಳೀಯರೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಕಡಿಯಾಳಿಯ ಪ್ರಸಿದ್ಧ ಮಹಿಷಮರ್ಧಿನಿ ದೇವಾಲಯದಲ್ಲಿ ಶುಕ್ರವಾರ ತಡರಾತ್ರಿ ಕಳ್ಳತನಕ್ಕೆ ನಡೆದ ಯತ್ನವೊಂದು ಭಕ್ತರಲ್ಲಿ ಆತಂಕ ಮೂಡಿಸಿದ್ದು, ಸ್ಥಳೀಯರ ತಕ್ಷಣದ ಸ್ಪಂದನೆಯಿಂದ ಇಬ್ಬರು ಕಳ್ಳರನ್ನು ಹಿಡಿದಿರುವ ಘಟನೆಯು ಸಂಚಲನ ಎಬ್ಬಿಸಿದೆ. ಶುಕ್ರವಾರ ಸುಮಾರು ರಾತ್ರಿ 3 ಗಂಟೆ ಸಮಯದಲ್ಲಿ ಕಡಿಯಾಳಿ ಮಹಿಷಮರ್ಧಿನಿ ದೇವಾಸ್ಥಾನದ ಮುಖ್ಯ ಬಾಗಿಲಿನ ಬೀಗ ಮುರಿದು ಒಳನುಗ್ಗಲು ಇಬ್ಬರು ಕಳ್ಳರು ಯತ್ನಿಸಿದರು. ಈ ವೇಳೆ ದೇವಾಲಯದ ಕಾವಲುಗಾರರ ಗಮನಕ್ಕೆ ವಿಷಯ ಬಂದು ಅವರು ಬೊಬ್ಬೆ ಹಾಕಿದರು. ಇದರಿಂದ ಕಳ್ಳರು ಅಚಾನಕ್ ಬೆಚ್ಚಿಬಿದ್ದಿದ್ದಾರೆ. ಆಗ, ಕಾವಲುಗಾರನಿಗೆ ಚಾಕು ತೋರಿಸಿ ಜೀವ ಬೆದರಿಕೆ ಒಡ್ಡಿ ಅಲ್ಲಿಂದ ತಪ್ಪಿಸಿಕೊಂಡು ಪರಾರಿಯಾದರು.

ಆದರೆ, ಕಾವಲುಗಾರ ತಕ್ಷಣವೇ ಸ್ಥಳೀಯ ಭಕ್ತರಿಗೆ ನಮ್ಮ ದೇವಾಲಯದಲ್ಲಿ ಕಳ್ಳತನ ಮಾಡುವುದಕ್ಕೆ ಯಾರೋ ದುಷ್ಕರ್ಮಿಗಳು ಆಯುಧ ಸಮೇತವಾಗಿ ಬಂದಿದ್ದಾರೆ ಎಂಬ ಮಾಹಿತಿ ನೀಡಿದ್ದು, ದೇವಾಲಯದ ಆವರಣದಲ್ಲಿ ಜನ ಸೇರುವಂತೆ ಮಾಡಿದರು. ಇದಾದ ಕೆಲವೇ ಕ್ಷಣಗಳಲ್ಲಿ ಸ್ಥಳೀಯ ಕಡಿಯಾಳಿ ಗ್ರಾಮಸ್ಥರು ದೇವಸ್ಥಾನದಲ್ಲಿ ಧಾವಿಸಿದ್ದಾರೆ. ಸುಮಾರು ಜನರು ಗುಂಪು ಸೇರಿ ದೇವಸ್ಥಾನದ ಸುತ್ತಲೂ ಕಳ್ಳರಿಗಾಗಿ ಶೋಧ ಕಾರ್ಯವನ್ನು ಮಾಡಿದ್ದಾರೆ.

ದೇವಾಲಯದ ಸುತ್ತಲಿನ ಸ್ಥಳಗಳನ್ನು ಪರಿಶೀಲಿಸಿದಾಗಲೂ ಸಿಗದಿದ್ದಾಗ, ಮತ್ತು ಶೋಧ ಕಾರ್ಯದ ವ್ಯಾಪ್ತಿಯನ್ನು ವಿಸ್ತರಿಸಿ ರಸ್ತೆಗಳಲ್ಲಿ ಹುಡುಕಲು ಮುಂದಾಗಿದ್ದಾರೆ. ಆಗ ಕಡಿಯಾಳಿ ಗ್ರಾಮದ ಪೆಟ್ರೋಲ್ ಬಂಕ್ ಬಳಿ ಓಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಪತ್ತೆ ಹಚ್ಚಿದರು. ಸ್ಥಳೀಯರು ಅವರನ್ನು ಹಿಂಬಾಲಿಸಿಕೊಂಡು ಹೋದರು. ನಾವು ಜನರಿಗೆ ಸಿಕ್ಕಿಬೀಳುತ್ತೇವೆ ಎಂಬ ಭಯದಿಂದ ಓಡುತ್ತಿದ್ದ ವೇಳೆ ಇಬ್ಬರು ಕಳ್ಳರ ಪೈಕಿ ಒಬ್ಬನಿಗೆ ಮೂರ್ಛೆ ಬಂದು ರಸ್ತೆಯಲ್ಲಿಯೇ ಕುಸಿದು ಬಿದ್ದನು. ಈ ವೇಳೆ ಮತ್ತೊಬ್ಬ ಕಳ್ಳನು ತನ್ನ ಸಹಚರನಿಗೆ ಪ್ರಾಥಮಿಕ ಚಿಕಿತ್ಸೆ ನೀಡಲು ಪ್ರಯತ್ನಿಸಿದರೂ, ಆತ ಮೇಲೇಳಲಿಲ್ಲ.

ಇನ್ನೇಕು ಜನರು ತುಂಬಾ ಹತ್ತಿರ ಬಂದು ತಮ್ಮನ್ನು ಹಿಡಿಯುತ್ತಾರೆ ಎನ್ನುವವರೆಗೂ ತನ್ನ ಸಹಚರನನ್ನು ಎಬ್ಬಿಸಲು ಪ್ರಯತ್ನ ಮಾಡಿದರೂ ಫಲಿಸದ ಕಾರಣ, ಆತನನ್ನು ಬಿಟ್ಟು ಇನ್ನೊಬ್ಬ ಕಳ್ಳ ಓಡಲು ಪ್ರಯತ್ನಿಸಿದರು. ಆದರೆ, ಅಷ್ಟರಲ್ಲಾಗಲೇ ಗುಂಪು, ಗುಂಪಾಗಿ ಸೇರಿದ್ದ ಜನರು ನೀನು ಎಲ್ಲಿಯೇ ಹೋದರೂ ಸಿಕ್ಕಿ ಬೀಳುತ್ತೀಯಾ ಎಂದು ಬೆದರಿಕೆ ಹಾಕಿ, ಹಿಂಬಾಲಿಸಿ ಆತನನ್ನು ಹಿಡಿದುಕೊಂಡರು. ಈ ವೇಳೆ ಅಚಾನಕ್ ಮೂರ್ಛೆ ಹೋದ ಕಳ್ಳನನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ. ಈಗ ಮೂರ್ಛೆ ಹೋಗಿರುವ ಕಳ್ಳ ಚಿಕಿತ್ಸೆ ಪಡೆಯುತ್ತಿದ್ದು, ಮತ್ತೊಬ್ಬ ಕಳ್ಳನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪೊಲೀಸರ ಪ್ರಾಥಮಿಕ ವಿಚಾರಣೆಯಲ್ಲಿ ಇಬ್ಬರೂ ಕಳ್ಳರು ಕೇರಳ ಮೂಲದವರು ಎಂಬುದು ತಿಳಿದು ಬಂದಿದೆ. ಈ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸಲು ಉಡುಪಿ ನಗರ ಠಾಣೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಈ ಹಿಂದೆಯೂ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಇವರು ಕಳ್ಳತನ ಮಾಡಿದ್ದಾರೆಯೇ ಎಂಬ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!
ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!