
ಧರ್ಮಸ್ಥಳ/ಬೆಂಗಳೂರು (ಜು.27): ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿರುವ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ಇದೀಗ ಅನಾಮಿಕ ದೂರುದಾರನ ವೈಯಕ್ತಿಕ ಹಿನ್ನೆಲೆಯನ್ನು ಅನಾಮಿಕ ವ್ಯಕ್ತಿಯನ್ನು ತೀವ್ರವಾಗಿ ವಿಚಾರಣೆ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬುದು ಹಾಗೂ ಧರ್ಮಸ್ಥಳದಿಂದ ಕುಟುಂಬದೊಂದಿಗೆ ಓಡಿ ಹೋಗಿದ್ದೆ ಎನ್ನುವುದು ಸೇರಿದಂತೆ ಅನಾಮಿಕನ ವೈಯಕ್ತಿಕ ಮಾಹಿತಿಯನ್ನು ಕೂಡ ಕೆದಕಲಾಗುತ್ತಿದೆ.
2014ರ ಹೊತ್ತಿಗೆ ಮೇಲ್ವಿಚಾರಕರ ಸಂಪರ್ಕದಲ್ಲಿದ್ದ ವ್ಯಕ್ತಿಯೊಬ್ಬನಿಂದ ನನ್ನ ಕುಟುಂಬದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಲಾಗಿತ್ತು ಎಂದು ಅನಾಮಿಕ ವ್ಯಕ್ತಿ ದೂರು ಸಲ್ಲಿಕೆ ಮಾಡಿದ್ದಾನೆ. ಇದರಿಂದಾಗಿ ತಾನು ಡಿಸೆಂಬರ್ 2014ರಲ್ಲಿ ನಾನು ನನ್ನ ಕುಟುಂಬದೊಂದಿಗೆ ಧರ್ಮಸ್ಥಳದಿಂದ ಓಡಿ ಹೋದೆ ಎಂದು ಹೇಳಿದ್ದನು. ಎಸ್ಐಟಿ ಅಧಿಕಾರಿಗಳು ಸಾಲು ಸಾಲು ಗಂಭೀರ ಹಾಗೂ ವೈಯಕ್ತಿಕ ರೀತಿಯ ಪ್ರಶ್ನೆಗಳನ್ನು ಕೇಳಿರುವುದು ಬೆಳಕಿಗೆ ಬಂದಿದೆ. ಪ್ರಕರಣದ ಮೂಲವನ್ನು ತಿಳಿಯುವ ಉದ್ದೇಶದ ಜೊತೆಗೆ, ದೂರುದಾರನ ನೈಜ ಆಸಕ್ತಿಯ ಮೇಲಿರುವ ಅನುಮಾನವನ್ನೂ ತಿಳಿಗೊಳಿಸಿಕೊಳ್ಳುವಂತಹ ಪ್ರಶ್ನೆಗಳನ್ನು ಕೇಳಲಾಗಿದೆ
2014ರ ಡಿಸೆಂಬರ್‌ನಲ್ಲಿ ತನ್ನ ಕುಟುಂಬದೊಂದಿಗೆ ಧರ್ಮಸ್ಥಳದಿಂದ ನಿರ್ಗಮಿಸಿದ್ದಾಗಿ, ಅದಕ್ಕೆ ತನ್ನ ಕುಟುಂಬದ ಯುವತಿಗೆ ಕಿರುಕುಳ ನೀಡಿರುವುದು ಎಂದು ಕಾರಣ ನೀಡಿದ್ದಾನೆ. ಇದೀಗ ವಾಪಸ್ ಬಂದು ಧರ್ಮಸ್ಥಳದ ಮೇಲ್ವಿಚಾರಕರ ಸಂಪರ್ಕದಲ್ಲಿದ್ದ ವ್ಯಕ್ತಿಯೊಬ್ಬನಿಂದ ನನ್ನ ಕುಟುಂಬದ ಬಾಲಕಿಗೆ ಲೈಂಗಿಕ ಕಿರುಕುಳವಾಗಿದೆ' ಎಂದು ದೂರು ನೀಡಿದ್ದಾನೆ. ಈಗ ತನ್ನ ವೈಯಕ್ತಿಕ ಅನುಭವದ ಹಿಂದೆಯಾದ ಸಂಕಷ್ಟಗಳ ಕುರಿತಂತೆ ಮಾತ್ರವಲ್ಲದೆ ತನ್ನ ಹೇಳಿಕೆಗೆ ಸಂಬಂಧಿಸಿದಂತೆ ಎಸ್ಐಟಿ ನೀಡಿದ ಪ್ರತಿ ಪ್ರಶ್ನೆಗಳಿಗೂ ಸತ್ಯವನ್ನು ಹೇಳಲು ಸಹಕಾರ ನೀಡಿದ್ದಾನೆ ಎಂದು ತಿಳಿದುಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ