Heavy Fog: 11 ವಾಹನ ನಡುವೆ ಸರಣಿ ಅಪಘಾತ: ಇಬ್ಬರ ದುರ್ಮರಣ

By Kannadaprabha News  |  First Published Dec 31, 2021, 4:52 AM IST

*  ಬಸ್‌-ಲಾರಿ ಡಿಕ್ಕಿ: 20ಕ್ಕೂ ಅಧಿಕ ಜನರಿಗೆ ಗಾಯ
*  ರಸ್ತೆ ಅಪಘಾತದಲ್ಲಿ ಪಿಯು ವಿದ್ಯಾರ್ಥಿ ಸಾವು
*  ಸರಣಿ ಅಪಘಾತ, ಒಬ್ಬರ ಸಾವು


ನೆಲಮಂಗಲ(ಡಿ.31): ದಟ್ಟವಾದ ಮಂಜು ಆವರಿಸಿದ ಹಿನ್ನೆಲೆಯಲ್ಲಿ ಸರಣಿ ಅಪಘಾತ(Serial Accident) ನಡೆದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ(Nelamangala) ಸಮೀಪದ ರಾಷ್ಟ್ರೀಯ ಹೆದ್ದಾರಿಯ ಟಿ.ಬೇಗೂರು ಬಳಿ ಗುರುವಾರ ಬೆಳಗ್ಗೆ ನಡೆದಿದೆ. ದಟ್ಟವಾದ ಮಂಜು ಕವಿದಿದ್ದ ವೇಳೆ ಲಾರಿಯೊಂದು ಬ್ರೇಕ್‌ ಹಾಕಿದ್ದರಿಂದ ಹಿಂಬದಿಯಿಂದ ಬರುತ್ತಿದ್ದ ಎರಡು ಬಸ್‌, ಎರಡು ಕಾರು, ಎರಡು ಲಾರಿ ಮತ್ತು ಒಂದು ಜೀಪ್‌ ಅಪಘಾತಕ್ಕೆ ಒಳಗಾಗಿವೆ. ಈ ಅಪಘಾತದಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಿಲೋ ಮೀಟರ್‌ಗಟ್ಟಲೆ ಸಂಚಾರ ಅಸ್ತವ್ಯಸ್ತವಾಯಿತು(Traffic).

ಸ್ಥಳಕ್ಕೆ ನೆಲಮಂಗಲ ಸಂಚಾರಿ ಪೊಲೀಸರು(Traffic Police) ದೌಡಾಯಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಇನ್ನು ಅಪಘಾತದಲ್ಲಿ 9 ಜನ ಗಾಯಗೊಂಡಿದ್ದು, ಗಾಯಾಳುಗಳನ್ನು ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ(Treatment) ನೀಡಲಾಗುತ್ತಿದೆ. ಬಸ್‌ ಚಾಲಕನೊಬ್ಬ ಅಪಘಾತದ ರಭಸಕ್ಕೆ ತೀವ್ರವಾಗಿ ಗಾಯಗೊಂಡಿದ್ದಾನೆ. ಭೀಕರ ಅಪಘಾತದಿಂದಾಗಿ ಕ್ಯಾಂಟರ್‌ನಲ್ಲಿದ್ದ ಈರುಳ್ಳಿ ಹೆದ್ದಾರಿಯಲ್ಲಿ ಚೆಲ್ಲಾಪಿಲ್ಲಿಯಾಗಿದೆ.

Latest Videos

undefined

Bagalkot Road Accidents: ಎರಡು ಪ್ರತ್ಯೇಕ ಅಪಘಾತ: ಮೂವರ ದುರ್ಮರಣ

ಸರಣಿ ಅಪಘಾತ, ಒಬ್ಬರ ಸಾವು

ಯಲ್ಲಾಪುರ(Yellapura): ಇಲ್ಲಿನ ಹಿಟ್ಟಿನಬೈಲ್‌ ಕ್ರಾಸ್‌ ಬಳಿ ಗುರುವಾರ ರಾತ್ರಿ ಮೂರು ಕಾರುಗಳ ನಡುವೆ ಸರಣಿ ಅಪಘಾತ ಉಂಟಾಗಿ, ಒಬ್ಬರು ಸ್ಥಳದಲ್ಲೆ ಮೃತಪಟ್ಟರೆ(Death), 8 ಜನರು ಗಾಯಗೊಂಡಿದ್ದಾರೆ. ಐವರು ಚಿಕ್ಕಪುಟ್ಟಗಾಯಗೊಂಡಿದ್ದಾರೆ. ಹುಬ್ಬಳ್ಳಿ(Hubballi0 ಬೆಂಗಳೂರು(Bengaluru) ಹಾಗೂ ಹೈದರಾಬಾದ್‌(Hyderabad) ನೋಂದಣಿ ಇರುವ ನಾಲ್ಕು ಕಾರುಗಳಲ್ಲಿ ಜನರು ಪ್ರವಾಸಿ ತಾಣಗಳಿಗೆ ಹೊಸ ವರ್ಷಾಚರಣೆಗೆ ತೆರಳುತ್ತಿದ್ದರು.
ಒವರ್‌ಟೇಕ್‌ ಮಾಡುತ್ತಿರುವಾಗ ಮೂರು ಕಾರುಗಳ ನಡುವೆ ಅಪಘಾತ ಉಂಟಾಗಿದೆ. ಮೃತಪಟ್ಟವರು ಹಾಗೂ ಗಾಯಾಳುಗಳ ಮಾಹಿತಿ ತಿಳಿದುಬರಬೇಕಿದೆ. ಗಾಯಾಳುಗಳನ್ನು ಚಿಕಿತ್ಸೆಗೆ ಹುಬ್ಬಳ್ಳಿಗೆ ಕರೆದೊಯ್ಯಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ರಸ್ತೆ ಅಪಘಾತದಲ್ಲಿ ಪಿಯು ವಿದ್ಯಾರ್ಥಿ ಸಾವು

ದಾವಣಗೆರೆ(Davanagere): ದ್ವಿಚಕ್ರ ವಾಹನದಲ್ಲಿ ದಾವಣಗೆರೆ ಕಡೆ ಬರುತ್ತಿದ್ದವರಿಗೆ ಹಿಂದಿನಿಂದ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನ ಹಿಂಬದಿ ಕುಳಿತಿದ್ದ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತಾಲೂಕಿನ ಹೊನ್ನೂರು ಗೊಲ್ಲರಹಟ್ಟಿಬಳಿ ರಾಷ್ಟ್ರೀಯ ಹೆದ್ದಾರಿ-48ರ ಐಓಸಿ ಪೆಟ್ರೋಲ್‌ ಬಂಕ್‌ ಮುಂಭಾಗ ಸಂಭವಿಸಿದೆ.

ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಸಾಸಲು ಗ್ರಾಮದ ಪ್ರಥಮ ವರ್ಷದ ಪಿಯುಸಿ ವಿದ್ಯಾರ್ಥಿ ಎಚ್‌.ದೀಕ್ಷಿತ್‌(17) ಮೃತರು. ಚಿತ್ರದುರ್ಗ ಕಡೆಯಿಂದ ದಾವಣಗೆರೆಗೆ ಉಮೇಶ ಎಂಬುವರ ಜೊತೆಗೆ ದೀಕ್ಷಿತ್‌ ಬರುವಾಗ ಹಿಂದಿನಿಂದ ಬಂದ ಕಾರು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಕಾರು ಚಾಲಕ ಗಾಡ್ವಿನ್‌ನ ದುಡುಕು, ಅಜಾಗರೂಕತೆ ಚಾಲನೆಯಿಂದ ಬೈಕ್‌ಗೆ ಡಿಕ್ಕಿ ಹೊಡೆದಿದ್ದರಿಂದ ಹಿಂಬದಿ ಕುಳಿತಿದ್ದ ಉಮೇಶನ ತಲೆ ಹಿಂಬದಿ, ಬಲಗಾಲು, ಕೈಗಳು ಇತರೆ ಕಡೆಗೆ ಹೊಡೆತ ಬಿದ್ದು ತೀವ್ರ ಗಾಯಗೊಂಡು ಮೃತಪಟ್ಟಿದ್ದಾನೆ. ಈ ಸಂಬಂಧ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಕಾರು ಚಾಲಕ ಗಾಡ್ವಿನ್‌ ವಿರುದ್ಧ ದೂರು ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Bengaluru Road Accident :  ಊಟಕ್ಕೆ ತೆರಳಿದ್ದ ಕೌಶಿಕ್-ಸುಷ್ಮಾಗೆ ಮೃತ್ಯುವಾದ ಟ್ಯಾಂಕರ್

ಬಸ್‌-ಲಾರಿ ಡಿಕ್ಕಿ: 20ಕ್ಕೂ ಅಧಿಕ ಜನರಿಗೆ ಗಾಯ

ಶಿವಮೊಗ್ಗ(Shivamogga): ಸಕ್ರೆಬೈಲು ಮತ್ತು ಮಂಡಗದ್ದೆಯ ರಸ್ತೆ ಮಧ್ಯೆ ಶಿವಮೊಗ್ಗದಿಂದ ತೀರ್ಥಹಳ್ಳಿಗೆ ಹೋಗುತ್ತಿದ್ದ ಖಾಸಗಿ ಮಾಲೀಕತ್ವದ ಸಹ್ಯಾದ್ರಿ ಬಸ್‌ ಮತ್ತು ತೀರ್ಥಹಳ್ಳಿ ಸಮೀಪ ಕುಂಟಹಳ್ಳಿಯಿಂದ ಅಡಕೆ ತುಂಬಿಸಿಕೊಂಡು ಶಿವಮೊಗ್ಗಕ್ಕೆ ಬರುತ್ತಿದ್ದ ಲಾರಿ ನಡುವೆ ಅಪಘಾತ ಸಂಭವಿಸಿದೆ.

ಸಕ್ರೆಬೈಲು ಮತ್ತು ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆಯ ನಡುವೆ 15ನೇ ಮೈಲಿಕಲ್‌ ಸಮೀಪ ಈ ಘಟನೆ ಸಂಭವಿಸಿದೆ. 20ಕ್ಕೂ ಹೆಚ್ಚು ಪ್ರಯಾಣಿಕರಿಗೆ(Passengers) ಗಾಯಗಳಾಗಿವೆ. ಲಾರಿ ಚಾಲಕ ಆದರ್ಶ ಎಂಬವರಿಗೆ ತೀವ್ರ ಗಾಯಗಳಾಗಿದ್ದು, ಮಣಿಪಾಲ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ 10 ಪ್ರಯಾಣಿಕರನ್ನು ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗಾಯಾಳುಗಳೆಲ್ಲ ಶಿವಮೊಗ್ಗದ ನವುಲೆ, ಚನ್ನಗಿರಿ, ಚನ್ನಗಿರಿ ತಾಲೂಕಿನ ಹೆಬ್ಳಿಗೆರೆ, ಗೋಂಧಿ ಚಟ್ನಹಳ್ಳಿಯ ಪ್ರಯಾಣಿಜರು ಎಂದು ತಿಳಿದುಬಂದಿದೆ. ಇವರೆಲ್ಲರಿಗೂ ಸಣ್ಣಪುಟ್ಟಗಾಯಗಳಾಗಿವೆ. ತುಂಗಾ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
 

click me!