ತುಮಕೂರು: ಹನಿಟ್ರ್ಯಾಪ್ ಬಲೆಗೆ ಬಿದ್ದ ಮಾಜಿ ಅಧ್ಯಕ್ಷ, 20 ಲಕ್ಷಕ್ಕೆ ಬೇಡಿಕೆ ಇಟ್ಟ ನಿಶಾ ಗ್ಯಾಂಗ್!

Published : Mar 12, 2025, 12:31 PM ISTUpdated : Mar 12, 2025, 12:34 PM IST
ತುಮಕೂರು: ಹನಿಟ್ರ್ಯಾಪ್ ಬಲೆಗೆ ಬಿದ್ದ ಮಾಜಿ ಅಧ್ಯಕ್ಷ, 20 ಲಕ್ಷಕ್ಕೆ ಬೇಡಿಕೆ ಇಟ್ಟ ನಿಶಾ ಗ್ಯಾಂಗ್!

ಸಾರಾಂಶ

ತುಮಕೂರಿನಲ್ಲಿ ಫೇಸ್‌ಬುಕ್ ಮೂಲಕ ಮಾಜಿ ಪಂಚಾಯಿತಿ ಅಧ್ಯಕ್ಷರನ್ನು ಹನಿಟ್ರ್ಯಾಪ್ ಮಾಡಿ 20 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಯುವತಿ ಮತ್ತು ಆಕೆಯ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿದ್ದಾರೆ. ಹಣ ನೀಡದಿದ್ದರೆ ರೇಪ್ ಕೇಸ್ ಹಾಕಿ ಬೆತ್ತಲೆ ವಿಡಿಯೋ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದರು.

ತುಮಕೂರು (ಮಾ.12): ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರ ತವರು ಜಿಲ್ಲೆಯಲ್ಲಿ ಗುಬ್ಬಿ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷನನ್ನು ಫೇಸ್‌ಬುಕ್ ಮೂಲಕ ಬಲೆಗೆ ಬೀಳಿಸಿಕೊಂಡು ಹನಿಟ್ರ್ಯಾಪ್ ಮಾಡಿ ಬರೋಬ್ಬರಿ 20 ಲಕ್ಷ ಹಣ ವಸೂಲಿಗೆ ಸಂಚು ರೂಪಿಸಿದ್ದ ಯುವತಿ ನಿಶಾ ಹಾಗೂ ಆಕೆಯ ಗ್ಯಾಂಗ್‌ ಅನ್ನು ತುಮಕೂರು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಗುಬ್ಬಿ ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷನಿಗೆ ಹನಿಟ್ರ್ಯಾಪ್ ಮಾಡಿ 20 ಲಕ್ಷ ರೂ. ಹಣಕ್ಕೆ ಡಿಮ್ಯಾಂಡ್ ಮಾಡಲಾಗಿದೆ. ಹಣ ಕೊಡದಿದ್ದರೇ ರೇಪ್ ಕೇಸ್ ಹಾಕಿ, ಸೋಷಿಯಲ್‌ ಮಿಡಿಯಾದಲ್ಲಿ ಬೆತ್ತಲೆ ವಿಡಿಯೋ ಹರಿಬಿಡೋದಾಗಿ ಬೆದರಿಕೆ ಹಾಕಿದ್ದಾರೆ. ಗುಬ್ಬಿ ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷ ಅಣ್ಣಪ್ಪಸ್ಬಾಮಿ ಹನಿಟ್ರ್ಯಾಪ್ ಗ್ಯಾಂಗ್ ಬಲೆಗೆ ಬಿದ್ದ ವ್ಯಕ್ತಿ ಆಗಿದ್ದಾರೆ. ಫೇಸ್‌ಬುಕ್ ಮೂಲಕ ಅಣ್ಣಪ್ಪ ಸ್ವಾಮಿಗೆ ಪ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಪರಿಚಯವಾಗಿದ್ದ ನಿಶಾ, ಅರಂಭದಲ್ಲಿ ಪ್ರತಿದಿನ ಗುಡ್ ಮಾರ್ನಿಂಗ್ ಮೆಸೇಜ್ ಕಳಿಸುತ್ತಿದ್ದಳು. ಆಗಾಗ, ಊಟ ಆಯ್ತಾ ಎಂದು ಕೇಳುವ ಜೊತೆಗೆ ಗುಡ್‌ನೈಟ್ ಎಂದು ಮೆಸೇಜ್ ಮಾಡುತ್ತಿದ್ದಳು.

ಇದಾದ ನಂತರ ತನ್ನ ಬಳಿ ಒಂದಷ್ಟು ಹಣವಿದೆ ರಿಯಲ್ ಎಸ್ಟೇಟ್ ಮಾಡೋಣಾ ಅಂತ ಬುಟ್ಟಿಗೆ ಹಾಕಿಕೊಂಡ ಕಿಲಾಡಿ ಲೇಡಿ ನಿಶಾ, ಬಳಿಕ ಅಣ್ಣಪ್ಪಸ್ವಾಮಿ ಜೊತೆ ಸಲುಗೆ ಬೆಳೆಸಿಕೊಂಡು ಪ್ರೀತಿಸುವ ನಾಟಕವಾಡಿದ್ದಾಳೆ. ಇದಾದ ನಂತರ ನನ್ನ ಗಂಡ ಸರಿಯಿಲ್ಲ ನೀನೆ ನನ್ನನ್ನ ಮದುವೆಯಾಗು ಅಂತ ಹಿಂದೆ ಬಿದ್ದಿದ್ದಾಳೆ. ಅಣ್ಣಪ್ಪಸ್ವಾಮಿ ಜೊತೆ ಹಲವು ಕಡೆಗಳಲ್ಲಿ ಕಾರಿನಲ್ಲಿ ಸುತ್ತಾಡಿದ್ದು, ಕೆಲವು ಲಾಡ್ಜ್‌ಗಳಿಗೆಲ್ಲಾ ಆತನನ್ನು ಕರೆದೊಯ್ದು ಲೈಂಗಿಕವಾಗಿ ಬಳಸಿಕೊಂಡಿದ್ದಾಳೆ. ನಂತರ, ಒಂದು ದಿನ ಪ್ಲಾನ್ ಮಾಡಿ ದೊಡ್ಡಬಳ್ಳಾಪುರ ಬಳಿಯ ಲಾಡ್ಜ್ ವೊಂದಕ್ಕೆ ಕರೆದೊಯ್ದು, ಅಣ್ಣಪ್ಪಸ್ವಾಮಿಯನ್ನ ಬೆತ್ತಲೆ ಮಾಡಿ ಮೊಬೈಲ್ ನಲ್ಲಿ ವಿಡಿಯೋ ಮಾಡಿಟ್ಟುಕೊಂಡು ಬ್ಲಾಕ್ ಮೇಲ್ ಮಾಡಲು ಮುಂದಾಗಿದ್ದಾಳೆ. ಇದಕ್ಕಾಗಿ ಒಂದು ಗ್ಯಾಂಗ್ ಮಾಡಿಕೊಂಡು 20 ಲಕ್ಷ ರೂ. ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾಳೆ.

ಇದನ್ನೂ ಓದಿ: ದೃಶ್ಯಂ ಸಿನೆಮಾ ಸ್ಟೈಲ್‌ನಲ್ಲಿ ಬೆಂಗಳೂರು ಒಂಟಿ ಮಹಿಳೆ ಕೊಲೆ, 4 ತಿಂಗಳ ಬಳಿಕ ರಹಸ್ಯ ಭೇದಿಸಿದ ಪೊಲೀಸರು!

ಅಣ್ಣಪ್ಪಸ್ವಾಮಿಗೆ ಕರೆ ಮಾಡಿ ನೀನು ರಾಜಕೀಯದಲ್ಲಿ ಸ್ವಲ್ಪ ಹೆಸರು ಮಾಡಿದ್ದೀಯ. ನೀನು ನನಗೆ 20 ಲಕ್ಷ ರೂ. ಹಣ  ಕೊಡದಿದ್ದರೆ ನಿಮ್ಮ ಮೇಲೆ ರೇಪ್ ಕೇಸ್ ಹಾಕಿ, ಬೆತ್ತಲೆ ವಿಡಿಯೋವನ್ನ ಸೋಷಿಯಲ್‌ ಮಿಡಿಯಾದಲ್ಲಿ ಹರಿಬಿಡೋದಾಗಿ ಬೆದರಿಕೆ ಹಾಕಿದ್ದಾರೆ. ಇದರಿಂದ ಮನನೊಂದ ಅಣ್ಣಪ್ಪಸ್ವಾಮಿ ಗುಬ್ಬಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಪ್ರಕರಣ ಸಂಬಂಧ ಹನಿಟ್ರ್ಯಾಪ್ ಮಾಡಿದ್ದ, ತುಮಕೂರಿನ ಕ್ಯಾತಸಂದ್ರ ಮೂಲದ ನಿಶಾ ಹಾಗೂ ಆಕೆಯ ಸ್ನೇಹಿತೆ ಜ್ಯೋತಿಯನ್ನು ಪೊಲೀಸರು ಬಂಧಿಸಿದ್ದಾರೆ. ಜೊತೆಗೆ, ಇದರಲ್ಲಿ ಭಾಗಿಯಾಗಿದ್ದ ಗುಬ್ಬಿ ಮೂಲದ ಬಸವರಾಜು ಹಾಗೂ ಭರತ್‌ಗಾಗಿ ಪೊಲೀಸರಿಂದ ಶೋಧ ಕಾರ್ಯ ಮುಂದುಬರೆದಿದೆ. ಈ ಹಿಂದೆ ಗುಬ್ಬಿ ಪಟ್ಟಣದಲ್ಲಿ ಕೊಲೆಯಾಗಿದ್ದ ಕುರಿಮೂರ್ತಿ ಕೇಸಿನಲ್ಲಿಯೂ ಬಸವರಾಜು ಹಾಗೂ ಭರತ್ ಆರೋಪಿಗಳಾಗಿದ್ದಾರೆ. 

ಈ ಹಿಂದೆ ಬಿಜೆಪಿಯಿಂದ ಪಟ್ಟಣ ಪಂಚಾಯತಿ ಅಧ್ಯಕ್ಷನಾಗಿದ್ದ ಅಣ್ಣಪ್ಪಸ್ವಾಮಿ, ಗುಬ್ಬಿ ತಾಲೂಕಿನಲ್ಲಿ ನಡೆದ ಸಾವಿರಾರು ಎಕರೆ ಸರ್ಕಾರಿ ಜಮೀನು ಗೋಲ್ಮಾಲ್ ಕೇಸಿನಲ್ಲಿ ಎ2 ಆರೋಪಿಯಾಗಿದ್ದಾರೆ. ಅಧ್ಯಕ್ಷನಾಗಿದ್ದ ವೇಳೆ 3 ತಿಂಗಳು ತಲೆಮರಿಸಿಕೊಂಡಿದ್ದನು. ಇದೀಗ ಪ್ರಕರಣ ಸಂಬಂಧ ಗುಬ್ಬಿ ಪೊಲೀಸರಿಂದ ತನಿಖೆ ಮುಂದುವರೆದಿದೆ.

ಇದನ್ನೂ ಓದಿ: ಗೋಲ್ಡ್ ಸ್ಮಗ್ಲಿಂಗ್ ಕೇಸ್‌: ತರುಣ್ ಕಿಂಗ್‌ಪಿನ್, ನಟಿ ರನ್ಯಾ ರಾವ್ ಕೊರಿಯರ್?

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಛಲವಾದಿ ನಾರಾಯಣಸ್ವಾಮಿ
Breaking ಮಂಡ್ಯ ಬಸ್ ಅಪಘಾತದಲ್ಲಿ 23 ಪ್ರಯಾಣಿಕರಿಗೆ ಗಾಯ, ಇಬ್ಬರು ಗಂಭೀರ