ತುಳಸಿಗೌಡ ಪದ್ಮಶ್ರೀ ಪ್ರಶ​ಸ್ತಿ ಸ್ವೀಕರಿಸಲು ದೆಹಲಿಗೆ ಪ್ರಯಾಣ

By Kannadaprabha News  |  First Published Nov 7, 2021, 9:03 AM IST
  • ಜಾನಪದ ಲೋಕ, ಪರಿಸರ ಸಂರಕ್ಷಣೆಗೆ ವಿಶೇಷ ಕೊಡುಗೆ ನೀಡಿದ ಹಾಲಕ್ಕಿ ಸಮುದಾಯದ ಇಬ್ಬ​ರು ಚೇತನಗಳಿಗೆ ಪದ್ಮಶ್ರೀ
  • ಹೊನ್ನಳ್ಳಿಯ ವನದೇವತೆ ತುಳಸಿ ಗೌಡ ಪದ್ಮಶ್ರೀ ಪ್ರಶಸ್ತಿ ಪಡೆದುಕೊಳ್ಳಲು ದೆಹಲಿಗೆ ಪ್ರಯಾಣ

 ಅಂಕೋಲಾ (ನ.07):  ಜಾನಪದ ಲೋಕ (Folk), ಪರಿಸರ ಸಂರಕ್ಷಣೆಗೆ ವಿಶೇಷ ಕೊಡುಗೆ ನೀಡಿದ ಹಾಲಕ್ಕಿ ಸಮುದಾಯದ (Halakki) ಇಬ್ಬ​ರು ಚೇತನಗಳಿಗೆ ಪದ್ಮಶ್ರೀ (Padmshri) ದೊರೆತಿರುವುದಕ್ಕೆ ಹಾಲಕ್ಕಿಗಳ ಮನದಲ್ಲಿ ಸಂಭ್ರಮ ಮನೆ ಮಾಡಿದೆ. ಕೆಲವು ವರ್ಷಗಳ ಹಿಂದೆ ಬಡಗೇರಿಯ ಸುಕ್ರಿಗೌಡ (Sukrigowda) ಜಾನಪದ ಕಣಜವಾಗಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದರೆ, ಎರಡು ವರ್ಷಗಳ ಹಿಂದೆ ಪದ್ಮಶ್ರೀ ಗೌರವ ಮುಡಿಗೇರಿಸಿಕೊಂಡ ಹೊನ್ನಳ್ಳಿಯ ವನದೇವತೆ ತುಳಸಿ ಗೌಡ (Tulasi gowda) ಪದ್ಮಶ್ರೀ ಪ್ರಶಸ್ತಿ ಪಡೆದುಕೊಳ್ಳಲು ಶನಿವಾರ ದೆಹಲಿಗೆ ತೆರಳಿದ್ದಾರೆ.

ಇಂದು ದೆಹಲಿಯಲ್ಲಿ (Delhi) ವೃಕ್ಷಮಾತೆ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸುತ್ತಿದ್ದು, ತಮ್ಮ ಸ್ವಗ್ರಾಮ ಹೊನ್ನಳ್ಳಿಯಿಂದ ಸಕಲ ಗೌರವ, ಆದರದೊಂದಿಗೆ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ತುಳಸಿ ಗೌಡರ ಮನೆಗೆ ಮಂಡ್ಯದ ಮಹಾಸಂಸ್ಥಾನ ಮಠದ ಪ್ರಸನ್ನ ಸ್ವಾಮೀಜಿ ನಿರ್ದೇಶನದಂತೆ ನಿಶ್ಚಲಾನಂದ ಸ್ವಾಮೀಜಿ ಆಗಮಿಸಿ ತುಳಸಿ ಗೌಡ ಅವರಿಗೆ ಶಾಲು ಹೊದಿಸಿ, ಗೌರವಿಸಿದರು. ಪದ್ಮಶ್ರೀ ಪ್ರಶಸ್ತಿಯು ತುಳಸಿ ಗೌಡರ ಪರಿಸರ ಸೇವೆಗೆ ಅರಸಿ ಬಂದ ಗೌರವ ಎಂದು ಅಭಿಪ್ರಾಯಪಟ್ಟರು.

Latest Videos

undefined

ಅಂಕೋಲಾ ಗೌರವ ರಾಷ್ಟ್ರ ಮಟ್ಟದಲ್ಲಿ ರಾರಾಜಿಸುತ್ತಿದೆ. ತುಳಸಿ ಗೌಡರ ದೆಹಲಿ (Delhi) ಪ್ರಯಾಣ ವೆಚ್ಚವನ್ನು ಆದಿಚುಂಚನಗಿರಿ ಮಹಾಸಂಸ್ಥಾನ ಮಠದಿಂದ ಭರಿಸಲಾಗುವುದು ಎಂದರು.

ತುಳಸಿ ಗೌಡ ಶನಿವಾರ ಮುಂಜಾನೆ ಬಡಗೇರಿಯ ಪದ್ಮಶ್ರೀ ಸುಕ್ರಿ ಗೌಡರ ಆಶೀರ್ವಾದ ಪಡೆದರು. ಬಡಗೇರಿಯಿಂದ ಯುವಕರ ಪಡೆಯು ಬೈಕ್‌ರಾರ‍ಯಲಿ ಮತ್ತು ಗುಮಟೆವಾದನದ ಮೂಲಕ ತುಳಸಿ ಗೌಡರ ಮೆರವಣಿಗೆ ನಡೆಸಿತು. ತುಳಸಿ ಗೌಡ ಬಡಗೇರಿಯಿಂದ ದಿವಗಿ, ಕುಮಟಾ, ಹೊನ್ನಾವರಗಳಲ್ಲಿ ಹಾಲಕ್ಕಿ ಒಕ್ಕಲಿಗರ ಸಂಘದಿಂದ ಸನ್ಮಾನ ಸ್ವೀಕರಿಸಿ ಮಂಡ್ಯ ತಲುಪಲಿದ್ದಾರೆ. ನಂತರ ವಿಮಾನದ ಮೂಲಕ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ ಎಂದು ಪ್ರಮುಖರು ತಿಳಿಸಿದರು.

ಗೌಡ ಪದ್ಮಶ್ರೀ ಪಡೆಯಲು ದೆಹಲಿಗೆ ತೆರಳಿದ ಸಂದರ್ಭದಲ್ಲಿ ಗಾನ ಕೋಗಿಲೆ ಸುಕ್ರಿಗೌಡ ಅನಾರೋಗ್ಯದ ಮಧ್ಯೆಯೂ ತನ್ನ ಜಾನಪದ ಹಾಡು ಹಾಡಿ ಬೀಳ್ಕೊಟ್ಟರು.

ಈ ಸಂದರ್ಭದಲ್ಲಿ ಎಚ್‌.ಎನ್‌.ರಾಜೇಶ ಬೆಂಗಳೂರು, ಬಾಲಚಂದ್ರ ಗೌಡ ಹೊನ್ನಾವರ, ಶ್ರೀಧರ ಗೌಡ ಕುಮಟಾ, ವಿನಾಯಕ ಪಟಗಾರ ಕುಮಟಾ, ಮೋಹನ ಗೌಡ ಅಂಕೋಲಾ, ದತ್ತಾತ್ರೇಯ ಪಟಗಾರ ಕುಮಟಾ ಇನ್ನಿತರರು ಉಪಸ್ಥಿತರಿದ್ದರು.

ನಂತರ ತುಳಸಿ ಗೌಡ ಅವರನ್ನು ತಾಲೂಕು ದಂಡಾಧಿಕಾರಿ ಉದಯ ಕುಂಬಾರ ಗೌರವಿಸಿದರು.

ಪದ್ಮಶ್ರೀಗೆ ಆಯ್ಕೆಯಾದ ತುಳಸಿಗೌಡಗೆ ಸನ್ಮಾನ

 

 ಜಿಲ್ಲೆ​ಯ ವೃಕ್ಷ ಮಾತೆ ತುಳಸಿ ಗೌಡ ಅವರು ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರಗಳಲ್ಲಿ ಒಂದಾದ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದು ಪ್ರಶಸ್ತಿ ಸ್ವೀಕಾರಕ್ಕೆ ದೆಹಲಿಗೆ ತೆರಳುವ ವೇಳೆ ಪಟ್ಟಣದ ಗೇರುಸೊಪ್ಪಾ ಸರ್ಕಲ್‌ ಬಳಿ ಶನಿವಾರ ತಾಲೂಕು ಒಕ್ಕಲಿಗ ಸಂಘದವರು ಹಾಗೂ ಸಾರ್ವಜನಿಕರು ಸನ್ಮಾನಿಸಿ ಬಿಳ್ಕೋಟ್ಟರು.

ಕುಮಟಾದಿಂದ (kumta) ಪಟ್ಟಣಕ್ಕೆ ಆಗಮಿಸುತ್ತಿದ್ದಂತೆ ಪಟಾಕಿ ಸಿಡಿಸಿ ಸಂಭ್ರಮಿಸಿ, ಹೂಗುಚ್ಚ ನೀಡಿ ಸ್ವಾಗತಿಸಿದರು. ಈ ವೇಳೆ ಕುಮಟಾ ಶಾಖಾಮಠದ ಶ್ರೀ ನಿಶ್ಚಲನಂದ ಸ್ವಾಮಿಜಿ, ತಾಲೂಕು ಸಂಘದ ಅಧ್ಯಕ್ಷ ತಿಮ್ಮಪ್ಪ ಗೌಡ, ಉಪಾಧ್ಯಕ್ಷ ಮಹಾಬಲ ಗೌಡ, ಜಿಪಂ ಮಾಜಿ ಸದಸ್ಯ ಕೃಷ್ಣ ಗೌಡ, ತಾಪಂ ಮಾಜಿ ಸದಸ್ಯ ಗಣಪಯ್ಯ ಗೌಡ, ಪಪಂ ಸದಸ್ಯ ಸುಬ್ರಾಯ ಗೌಡ, ಮತ್ತಿತರರು ಉಪಸ್ಥಿತರಿದ್ದರು.

ಮೂಲತ್ವ ವಿಶ್ವಪ್ರಶಸ್ತಿ 2021ಗೆ ಸುಕ್ರಿ ಗೌಡ ಆಯ್ಕೆ

ಕಾರವಾರ :  ಮಂಗಳೂರಿನ ಮೂಲತ್ವ ಫೌಂಡೇಶನ್‌ ಚಾರಿಟೇಬಲ್‌ ಟ್ರಸ್ಟ್‌ನ 7ನೇ ಮೂಲತ್ವ ವಿಶ್ವ ಪ್ರಶಸ್ತಿಗೆ ಅಂಕೋಲಾದ ಹಾಲಕ್ಕಿ ಸಮುದಾಯದ ಜಾನಪದ ಕಣಜ, ಹೋರಾಟಗಾರ್ತಿ ಸುಕ್ರಿ ಬೊಮ್ಮ ಗೌಡ ಆಯ್ಕೆಯಾಗಿದ್ದರು.  ಮೂಲತ್ವ ಟ್ರಸ್ಟ್‌ನ ಅಧ್ಯಕ್ಷ ಪ್ರಕಾಶ್‌ ಮೂಲತ್ವ ಈ ಬಗ್ಗೆ ಪ್ರಕಟಣೆಯಲ್ಲಿ ತಿಳಿಸಿದ್ದರು. ಇದೀಗ ಇನ್ನೋರ್ವ ಪ್ರತಿಭೆ ತುಳಸಿಗೌಡ ಪದ್ಮಶ್ರಿ ಪಡೆಯುತ್ತಿದ್ದಾರೆ. 

click me!