ಭೂಸ್ವಾಧೀನ ಪರಿಹಾರ ನೀಡಲು ರೈತನಿಗೆ ಸತಾಯಿಸಿದ ಟೂಡಾ ಕಚೇರಿ ಜಪ್ತಿಗೆ ನ್ಯಾಯಾಲಯ ಆದೇಶ

By Suvarna News  |  First Published Jul 6, 2024, 11:55 PM IST

ರಿಂಗ್ ರಸ್ತೆ ನಿರ್ಮಾಣಕ್ಕೆ ರೈತರ  ಜಮೀನು ಸ್ವಾಧೀನ ಪಡಿಸಿಕೊಂಡು ಪರಿಹಾರ ಹಣ ನೀಡಲು ಸತಾಯಿಸಿದ ತುಮಕೂರು ಟೂಡಾ ಕಚೇರಿಯನ್ನು ಜಪ್ತಿ ಮಾಡಲಾಗಿದೆ. ತುಮಕೂರಿನ 1ನೇ ಅಧಿಕ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಲಯದ ಆದೇಶಂತೆ ಟೂಡಾ ಕಚೇರಿಯ ಪೀಠೋಪಕರಣಗಳನ್ನ ಜಪ್ತಿ ಮಾಡಲಾಗಿದೆ.


ತುಮಕೂರು (ಜು.6) : ರಿಂಗ್ ರಸ್ತೆ ನಿರ್ಮಾಣಕ್ಕೆ ರೈತರ  ಜಮೀನು ಸ್ವಾಧೀನ ಪಡಿಸಿಕೊಂಡು ಪರಿಹಾರ ಹಣ ನೀಡಲು ಸತಾಯಿಸಿದ ತುಮಕೂರು ಟೂಡಾ ಕಚೇರಿಯನ್ನು ಜಪ್ತಿ ಮಾಡಲಾಗಿದೆ. ತುಮಕೂರಿನ 1ನೇ ಅಧಿಕ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಲಯದ ಆದೇಶಂತೆ ಟೂಡಾ ಕಚೇರಿಯ ಪೀಠೋಪಕರಣಗಳನ್ನ ಜಪ್ತಿ ಮಾಡಲಾಗಿದೆ.
  
 ತುಮಕೂರು ನಗರದ ಸುತ್ತಾ ಹೊರವಲಯದ ಸುತ್ತಾ ರಿಂಗ್ ರಸ್ತೆ ನಿರ್ಮಾಣ ಮಾಡಲಾಗಿದ್ದು, ರಿಂಗ್ ರಸ್ತೆಗಾಗಿ ರೈತ ಲೆಂಕಪ್ಪ ಅವರ 36 ಗುಂಟೆ ಜಮೀನನ್ನು ಟೂಡಾ ಭೂಸ್ವಾಧೀನ ಮಾಡಿಕೊಂಡಿತ್ತು. ಭೂ ಸ್ವಾಧೀನದ ವೇಳೆ  ಅಲ್ಪ-ಸ್ವಲ್ಪ ಹಣವನ್ನು ಪರಿಹಾರವಾಗಿ ನೀಡಿ ರೈತನಿಗೆ ಮೋಸ ಮಾಡಲಾಗಿತ್ತು. ಸೂಕ್ತ ಹಾಗೂ ಹೆಚ್ಚಿನ ಪರಿಹಾರ ಮೊತ್ತ ನೀಡುವಂತೆ ಲೆಂಕಪ್ಪ ನ್ಯಾಯಾಲಯದ ಮೊರೆ ಹೋಗಿದ್ದರು, ಪ್ರಕರಣದ ವಿಚಾರಣೆ ನಡೆದಿದ್ದ ನ್ಯಾಯಾಲಯ 2018ರಲ್ಲೇ ಲೆಂಕ್ಕಪ್ಪಗೆ 82 ಲಕ್ಷ ರೂಪಾಯಿ ಹೆಚ್ಚಿನ ಪರಿಹಾರ ನೀಡಲು ಆದೇಶಿಸಿತ್ತು.‌ ನ್ಯಾಯಾಲಯ ಆದೇಶ ನೀಡಿ 5 ವರ್ಷ ಕಳೆದರು ಪರಿಹಾರ ನೀಡದೆ ತುಮಕೂರಿನ ಟೂಡಾ ಅಧಿಕಾರಿಗಳು ಮೊಂಡುತನ ತೋರಿದ್ದರು,

ವಿದ್ಯುತ್ ಟ್ರಾನ್ಸ್ ಫಾಮ್೯ ಏರಿ ಕುಳಿತ ಆಸಾಮಿ; ಬೆಸ್ಕಾಂಗೆ ತಲೆನೋವಾದ ಹುಚ್ಚರು!

Latest Videos

ಕೋರ್ಟ್‌ನ ಆದೇಶಕ್ಕೂ ಡೋಂಟ್ ಕೇರ್ ಎನ್ನದ ತುಮಕೂರು ಟೂಡಾ ಆಯುಕ್ತರ ವಿರುದ್ಧ ಲೆಂಕಪ್ಪ ಮತ್ತೇ ಕೋರ್ಟ್ ಮೆಟ್ಟಿಲೇರಿದ್ರು. ಆದೇಶ ಪಾಲನೆ ಮಾಡದ ಟೂಡಾ ಕಚೇರಿಯನ್ನು ಜಪ್ತಿ ಮಾಡುವಂತೆ ಆದೇಶ ನೀಡಲಾಗಿತ್ತು‌, ಹೀಗಾಗಿ ಇಂದು  ಕಚೇರಿಯ ಖುರ್ಚಿ, ಟೇಬಲ್ ಹಾಗೂ ಸೋಫಾಗಳನ್ನ ಜಪ್ತಿ ಮಾಡಲಾಯ್ತು, ದೂರು ದಾರ ಲೆಂಕಪ್ಪ‌ಹಾಗೂ ನ್ಯಾಯವಾದಿಗಳಾದ  ಪಿ.ಆರ್. ಜಯರಂಗಯ್ಯ ಹಾಗೂ ಕಾಂತರಾಜು ಹೆಚ್.ಆರ್. ನೇತೃತ್ವದಲ್ಲಿ ಜಪ್ತಿ ನಡೆದಿದೆ.‌ ಕೋರ್ಟ್ ಆದೇಶದಂತೆ ಇಂದು ಕಚೇರಿಯ ಎಲ್ಲಾ ಪೀಠೋಪಕರಣಗಳನ್ನ ಹೊತ್ತೊಯ್ದ ಕೋರ್ಟ್‌ನ ಸಿಬ್ಬಂದಿ

click me!