BREAKING: ವಿಜಯಪುರದಲ್ಲಿ ಮತ್ತೆ ಕಂಪಿಸಿದ ಭೂಮಿ; ಮನೆಗಳಿಂದ ಭಯಭೀತರಾಗಿ ಹೊರಗೆ ಓಡಿಬಂದ ಜನ!

By Ravi JanekalFirst Published Jul 6, 2024, 10:28 PM IST
Highlights

ವಿಜಯಪುರ ಜಿಲ್ಲೆಯ ವಿವಿಧ ಭಾಗಗಳಲ್ಲಿ ಮತ್ತೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಗ್ರಾಮಸ್ಥರು ಆತಂಕಗೊಂಡ ಘಟನೆ ನಡೆದಿದೆ. ಇಂದು ರಾತ್ರಿ 9.30ರ ಸುಮಾರು ಕಂಪಿಸಿದ ಭೂಮಿ. ಭೂಮಿ ಕಂಪಿಸುತ್ತಿದ್ದಂತೆ ಹೊರಗೆ ಓಡಿಬಂದ ಜನರು

ವಿಜಯಪುರ (ಜು.6): ವಿಜಯಪುರ ಜಿಲ್ಲೆಯ ವಿವಿಧ ಭಾಗಗಳಲ್ಲಿ ಮತ್ತೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಗ್ರಾಮಸ್ಥರು ಆತಂಕಗೊಂಡ ಘಟನೆ ನಡೆದಿದೆ.

ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಸೋಮದೇವರಹಟ್ಟಿ, ಘೋಣಸಗಿ, ಕಳ್ಳಕವಟಗಿ, ಹುಬನೂರು, ಟಕ್ಕಳಕಿ ಭಾಗಗಳಲ್ಲಿ ಭೂಮಿ ಕಂಪಿಸಿದೆ. ಇಂದು ರಾತ್ರಿ 9.26 ಕ್ಕೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಭಯಭೀತರಾಗಿ ಮನೆಯಿಂದ ಹೊರಗೆ ಓಡಿ ಬಂದ ಗ್ರಾಮಸ್ಥರು. ಮನೆಯಲ್ಲಿ ಪಾತ್ರೆಗಳು ಕೆಳಗೆ ಬಿದ್ದಿವೆ. 

Latest Videos

ವಿಜಯಪುರದಲ್ಲಿದ್ದಾಳೆ ರಾಜಕಾರಣಿಗಳ ಲಕ್ ಖುಲಾಯಿಸೋ ದೇವಿ! ದೇಶದ ಮೂಲೆ ಮೂಲೆಯಿಂದ ಬರ್ತಾರೆ ಮಂತ್ರಿ, ಧುರೀಣರು!

ಹಲವು ವರ್ಷಗಳಿಂದ ಪದೇಪದೆ ಭೂಮಿ ಕಂಪಿಸುತ್ತಿದೆ ಜೊತೆಗೆ ನಿಗೂಢ ಶಬ್ದಕ್ಕೆ ಸುತ್ತಮುತ್ತಲಿನ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಇದೇ ವರ್ಷದ ಮೊದಲ ತಿಂಗಳಲ್ಲೇ 2.6 ತೀವ್ರತೆಯಲ್ಲಿ ಭೂಮಿ ಕಂಪಿಸಿತ್ತು. ಭೂ ಕಂಪನಕ್ಕೆ ಮನೆಯ ಗೋಡೆ ಬಿರುಕುಬಿಟ್ಟಿದ್ದವು, ಮನೆಯಲ್ಲಿನ ಪಾತ್ರೆಗಳು ಬಿದ್ದಿದ್ದವು. ಕಳೆದ ನಾಲ್ಕೈದು ವರ್ಷಗಳಿಂದ ಭೂಕಂಪನ, ನಿಗೂಢ ಶಬ್ದಕ್ಕೆ ಜಿಲ್ಲೆಯ ಗ್ರಾಮಸ್ಥರಲ್ಲಿ ಭಯ ಹುಟ್ಟಿಸಿದೆ. ಹಿಂದೆ ಕಂಪಿಸಿದ ಘಟನೆಯಿಂದ ಹಲವು ಕುಟುಂಬಗಳು ಊರು ತೊರೆದಿವೆ. ಇದೀಗ ಮತ್ತೆ ಭೂಮಿ ಕಂಪಿಸಿದ ಅನುಭವವಾಗಿದ್ದು ಪದೇಪದೆ ಕಂಪಿಸಲು ಕಾರಣವೇನು ಎಂಬುದೇ ತಿಳಿಯದಾಗಿದೆ ಎನ್ನುತ್ತಿರುವ ಗ್ರಾಮಸ್ಥರು.
 

click me!