ರಾಯಚೂರು: ಅಕ್ರಮವಾಗಿ ಸಾಗಾಟ ಆರೋಪ, ಭಜರಂಗದಳ ಕಾರ್ಯಕರ್ತರಿಂದ 19 ಗೋವುಗಳ ರಕ್ಷಣೆ

By Ravi Janekal  |  First Published Jul 6, 2024, 11:11 PM IST

ಮಿನಿ ಲಾರಿಯಲ್ಲಿ ಗೋವುಗಳನ್ನ ಸಾಗಾಟ ಮಾಡುತ್ತಿದ್ದ ವೇಳೆ ಭಜರಂಗದಳದ ಕಾರ್ಯಕರ್ತರು ದಾಳಿ ನಡೆಸಿ ವಾಹನ ತಡೆದು ಗೋವುಗಳನ್ನ ರಕ್ಷಣೆ ಮಾಡಿದ ಘಟನೆ ರಾಯಚೂರು ಜಿಲ್ಲೆಯ ಹೊರವಲಯದ ಸಾಥ್ ಮೈಲ್ ಬಳಿ ನಡೆದಿದೆ. 


ರಾಯಚೂರು (ಜು.6): ಮಿನಿ ಲಾರಿಯಲ್ಲಿ ಗೋವುಗಳನ್ನ ಸಾಗಾಟ ಮಾಡುತ್ತಿದ್ದ ವೇಳೆ ಭಜರಂಗದಳದ ಕಾರ್ಯಕರ್ತರು ದಾಳಿ ನಡೆಸಿ ವಾಹನ ತಡೆದು ಗೋವುಗಳನ್ನ ರಕ್ಷಣೆ ಮಾಡಿದ ಘಟನೆ ರಾಯಚೂರು ಜಿಲ್ಲೆಯ ಹೊರವಲಯದ ಸಾಥ್ ಮೈಲ್ ಬಳಿ ನಡೆದಿದೆ. 

ಮಿನಿ ಲಾರಿಯಲ್ಲಿ 19ಕ್ಕೂ ಹೆಚ್ಚು ಗೋವುಗಳನ್ನ ಅಮಾನುಷವಾಗಿ ತುಂಬಿ ಸಾಗಾಟ. ಲಾರಿ ಚಾಲಕ ಮುಸ್ತಾಫ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಭಜರಂಗದಳ ಕಾರ್ಯಕರ್ತರು. ಬಳಿಕ ಲಾರಿ ಸಮೇತ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆ ಮುಂದೆ ತಂದು ನಿಲ್ಲಿಸಿದ ಕಾರ್ಯಕರ್ತರು. 

Latest Videos

undefined

ಅಕ್ರಮ ಗೋವು ಸಾಗಾಟ; ಶ್ರೀರಾಮಸೇನೆ ಕಾರ್ಯಕರ್ತರಿಂದ 11 ಗೋವುಗಳ ರಕ್ಷಣೆ

ದೂರು ದಾಖಲಿಸಿಕೊಳ್ಳಲು ಹಿಂದೇಟು ಆರೋಪ:

ಮಿನಿಲಾರಿಯಲ್ಲಿ ಹಿಂಸಾತ್ಮಕವಾಗಿ ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿರುವ ಭಜರಂಗದಳ ಕಾರ್ಯಕರ್ತರು.  ಗೋಹತ್ಯೆ ಉದ್ದೇಶದಿಂದಲೇ ಸಾಗಾಟ ಮಾಡಲಾಗುತ್ತಿತ್ತು. ಗೋ ಹತ್ಯೆ ಮಾಡುವುದು ಅಪರಾಧವಾಗಿದೆ. ಗೋವುಗಳ ಸಮೇತ ವಾಹನವನ್ನು ಠಾಣೆಗೆ ತಂದರೂ ಪ್ರಕರಣ ದಾಖಲಿಸಿಕೊಳ್ಳು ಪೊಲೀಸರು ಹಿಂದೇಟು ಹಾಕಿದ್ದಾರೆಂಬ ಆರೋಪ ಕೇಳಿಬಂದಿದೆ. 

click me!