ಮುರುಘಾ ಶರಣರ ವಿರುದ್ದ ಅಕ್ಟೋಬರ್ 13ರಂದು ಎರಡನೇ ಪೋಕ್ಸೋ ಪ್ರಕರಣ ದಾಖಲಾಗಿದೆ. ಈ ಪ್ರಕರಣವು ಅಪ್ರಾಪ್ತ ಬಾಲಕಿಯರ ಮೇಲೆಯ ಲೈಂಗಿಕ ದೌರ್ಜನ್ಯ ಆರೋಪವಾಗಿತ್ತು. ಇಂದು ಸಂತ್ರಸ್ತರ ಹೇಳಿಕೆ ದಾಖಲಿಸಿಕೊಳ್ಳಲು ಚಿತ್ರದುರ್ಗ ಪೊಲೀಸರು ಮೈಸೂರಿಗೆ ತೆರಳಿದ್ದಾರೆ.
ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ
ಚಿತ್ರದುರ್ಗ (ಅ.17): ಮುರುಘಾ ಶರಣರ ವಿರುದ್ದ ಅಕ್ಟೋಬರ್ 13ರಂದು ಎರಡನೇ ಪೋಕ್ಸೋ ಪ್ರಕರಣ ದಾಖಲಾಗಿದೆ. ಈ ಪ್ರಕರಣವು ಅಪ್ರಾಪ್ತ ಬಾಲಕಿಯರ ಮೇಲೆಯ ಲೈಂಗಿಕ ದೌರ್ಜನ್ಯ ಆರೋಪವಾಗಿತ್ತು. ಇಂದು ಸಂತ್ರಸ್ತರ ಹೇಳಿಕೆ ದಾಖಲಿಸಿಕೊಳ್ಳಲು ಚಿತ್ರದುರ್ಗ ಪೊಲೀಸರು ಮೈಸೂರಿಗೆ ತೆರಳಿದ್ದಾರೆ. ಆದ್ರೆ ಅಲ್ಲಿ ಏನೆಲ್ಲಾ ಬೆಳವಣಿಗೆ ಆಯ್ತು ಅನ್ನೋದ್ರ ವರದಿ ಇಲ್ಲಿದೆ ನೋಡಿ. ಮುರುಘಾ ಶರಣರ ವಿರುದ್ಧ ಆರೋಪ ಮಾಡಿದ್ದ ಮಠದ ಅಡುಗೆ ಸಹಾಯಕಿ ತನ್ನಿಬ್ಬರು ಮಕ್ಕಳೊಂದಿಗೆ ಇಂದು ಚಿತ್ರದುರ್ಗ ನ್ಯಾಯಾಲಯಕ್ಕೆ CRPC 164 ಹೇಳಿಕೆ ದಾಖಲಿಸಲು ಹಾಜರಾಗಬೇಕಿತ್ತು.
undefined
ಆದರೆ ಸಂತ್ರಸ್ತರಿಗೆ ಅನಾರೋಗ್ಯದ ಕಾರಣಕ್ಕೆ ಮೈಸೂರಿನ ಒಡನಾಡಿ ಸಂಸ್ಥೆಯಲ್ಲಿ ಆಶ್ರಯ ಪಡೆದಿರುವ ಆ ಮಹಿಳೆ ಚಿತ್ರದುರ್ಗಕ್ಕೆ ಆರೋಗ್ಯದ ಕಾರಣಕ್ಕೆ ನಿರಾಕರಿಸಿದ್ದರಿಂದ ಚಿತ್ರದುರ್ಗ ಗ್ರಾಮಾಂತರ ಠಾಣೆಯ ಸಿಪಿಐ ಬಾಲಚಂದ್ರನಾಯ್ಕ್ ನೇತೃತ್ವದ ಪೊಲೀಸರೇ ಸಿಆರ್‌ಪಿಸಿ 161 ಹೇಳಿಕೆ ದಾಖಲಿಸಿಕೊಳ್ಳಲು ಮೈಸೂರಿಗೆ ಹೋಗಿದ್ದಾರೆ. ಈಗಾಗಲೇ ಉನ್ನತ ಮೂಲಗಳಿಂದ ಬಂದ ಮಾಹಿತಿ ಪ್ರಕಾರ ಇಬ್ಬರು ಅಪ್ರಾಪ್ತ ಬಾಲಕಿಯರ CRPC 161ಹೇಳಿಕೆ ದಾಖಲು ಮಾಡಲಾಗಿದೆ ಎನ್ನಲಾಗಿದೆ.
ಮುರುಘಾ ಮಠದ ಪೂಜಾ ಕೈಂಕರ್ಯ ನೆರವೇರಿಸಲು ಬಸವಪ್ರಭು ಶ್ರೀ ನೇಮಕ
ಚಿತ್ರದುರ್ಗದಲ್ಲಿ ಮತ್ತೋರ್ವ ಬಾಲಕಿ ಹಾಗೂ ಅವರ ತಾಯಿಯ 164 ಹೇಳಿಕೆಯನ್ನು ಚಿತ್ರದುರ್ಗ ಒಂದನೇ ಅಪರ ನ್ಯಾಯಾಲಯದಲ್ಲಿ ದಾಖಲಿಸಲಾಯಿತು. ಅದೇ ರೀತಿ ಕೇಳಿ ಬಂದ ಎರಡನೇ ಪೋಕ್ಸೊ ಆರೋಪದಲ್ಲಿ ಮುರುಘಾ ಶರಣರ ಸಹಾಯಕ ಮಹಾಲಿಂಗ ಹಾಗೂ ಅಡುಗೆ ಭಟ್ಟ ಕರಿಬಸಪ್ಪ ಅವರ ಮೇಲೂ ದೂರು ದಾಖಲಾಗಿತ್ತು. ಮಹಾಲಿಂಗ ಎ-06 ಆರೋಪಿಯಾದರೆ, ಕರಿಬಸಪ್ಪ ಈ ಪ್ರಕರಣದಲ್ಲಿ ಎ-07 ಆರೋಪಿಯಾಗಿದ್ದ. ಹೀಗಾಗಿ ಇವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಇಂದು ವಕೀಲ ಪ್ರತಾಪ್ ಜೋಗಿ ಚಿತ್ರದುರ್ಗ ಅಪರ ಮತ್ತು ಜಿಲ್ಲಾ ನ್ಯಾಯಾಲಯಕ್ಕೆ ಸಲ್ಲಿಸಿದರು.
ಮುರುಘಾ ಶ್ರೀ ಜಾಮೀನು ಅರ್ಜಿ: ಸಂತ್ರಸ್ತೆಯರಿಗೆ ಹೈಕೋರ್ಟ್ ನೋಟಿಸ್
ನಂತರ ಮಾತನಾಡಿದ ಅವರು, ಈ ಪ್ರಕರಣದಲ್ಲಿ ನಮ್ಮವರು ಯಾವುದೇ ತಪ್ಪು ಮಾಡಿಲ್ಲ. ಜಿಲ್ಲಾ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದೇವೆ. ವಿಚಾರಣೆ ನಡೆಯಲಿದೆ ಎಂದರು. ಇನ್ನು ಈ ಪ್ರಕರಣದಲ್ಲಿ ಇಂದು ಮಹಿಳೆ ಸಂತ್ರಸ್ತ ಬಾಲಕಿಯರನ್ನು ಕರೆದುಕೊಂಡು ಚಿತ್ರದುರ್ಗ ನ್ಯಾಯಾಲಯಕ್ಕೆ ಹಾಜರಾಗಬೇಕಿತ್ತು. ಆದರೆ ಅನಾರೋಗ್ಯದ ಕಾರಣಕ್ಕೆ ನಿರಾಕರಣೆ ಮಾಡಿದ್ದಾರೆ. ಇನ್ನು ಇತ್ತ ಎ-06 ಹಾಗೂ ಎ-07 ಆರೋಪಿ ಪರ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಕೆಯಾಗಿದ್ದು, ನ್ಯಾಯಾಲಯ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದೆ.