ಹೊಂಗಸಂದ್ರ ಸ್ಲಂ ಸೀಲ್‌ಡೌನ್: ಇಡೀ ಘಟನೆಯ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ

Suvarna News   | Asianet News
Published : Apr 23, 2020, 06:18 PM IST
ಹೊಂಗಸಂದ್ರ ಸ್ಲಂ ಸೀಲ್‌ಡೌನ್: ಇಡೀ ಘಟನೆಯ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ

ಸಾರಾಂಶ

ಬೊಮ್ಮನಹಳ್ಳಿಯ ವಿದ್ಯಾಜ್ಯೋತಿ ನಗರದ ಹೊಂಗಸಂದ್ರ ಸ್ಲಂ ಇದೀಗ ಇಡೀ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದೆ. ಓರ್ವ ಕಾರ್ಮಿಕನಿಂದಾಗಿ ಒಂಬತ್ತು ಮಂದಿಗೆ ಕೊರೋನಾ ಸೋಂಕು ತಗುಲಿದೆ> ಈ ಘಟನೆಯ ಜಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.

ಬೆಂಗಳೂರು(ಏ.23) ಬಿಹಾರ ಕೊರೋನಾ ಬಾಂಬಿಗೆ ಬೆಂಗಳೂರು ಬೆಚ್ಚಿಬಿದ್ದಿದೆ. ಹೊಂಗಸಂದ್ರ ಸ್ಲಂ ಇದೀಗ ಖಾಲಿ-ಖಾಲಿಯಾಗಿದ್ದು, ಸ್ಲಂನಲ್ಲಿರುವ ಮುನ್ನೂರು ಮನೆಗಳಿಗೆ ಬಿಬಿಎಂಪಿ ಬೀಗ ಜಡಿದಿದೆ. ಕೊರೋನಾ ಸೋಂಕಿತ ಬಿಹಾರಿ ಕಾರ್ಮಿಕನಿಂದಾಗಿ ಎಲ್ಲರೂ ಭಯದಲ್ಲಿ ಕಾಲ ದೂಡುವಂತಾಗಿದೆ. ವಿದ್ಯಾಜ್ಯೋತಿ ನಗರದಲ್ಲಿರುವಂತ ಹೊಂಗಸಂದ್ರ ಸ್ಲಂ ಇದೀಗ ಬಿಕೋ ಎನ್ನಲಾರಂಭಿಸಿದೆ. 

"

ಇದೀಗ ಎಚ್ಚೆತ್ತುಕೊಂಡ ಬಿಬಿಎಂಪಿ ಇಡೀ ಸ್ಲಂ ಏರಿಯಾಗೆ ಔ‍ಷಧಿ ಸಿಂಪಡಿಸಿದೆ. ಒಬ್ಬ ಬಿಹಾರಿ ಸೋಂಕಿತನಿಂದ 9 ಮಂದಿಗೆ ಕೊರೋನಾ ಸೋಂಕು ತಗುಲಿದೆ. ಏಪ್ರಿಲ್ 18ಕ್ಕೆ ಬೊಮ್ಮನಹಳ್ಳಿಯ ಖಾಸಗಿ ಆಸ್ಪತ್ರೆಗೆ ಭೇಟಿ ಕೊಡುತ್ತಾನೆ. ಇಲ್ಲಿಂದ ಆತನ ಟ್ರಾವೆಲ್ ಹಿಸ್ಟರಿ ಏನು ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.

"

ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಈ ಘಟನೆಯ ಬಗ್ಗೆ ಸುವರ್ಣ ನ್ಯೂಸ್ ಜತೆ ಮಾತನಾಡಿದ್ದು, ಆ ಏರಿಯಾದಲ್ಲಿರುವ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಈ ಘಟನೆಯ ಬಗ್ಗೆ ಶಾಸಕ ಸತೀಶ್ ರೆಡ್ಡಿ ಹೇಳಿದ್ದಿಷ್ಟು...

"

ಒಂದು ಏರಿಯಾದಿಂದ ಇಡೀ ಬೆಂಗಳೂರಿಗೆ ಆಪತ್ತು ಶುರುವಾಗಿದೆಯೇ ಎನ್ನುವ ಅನುಮಾನ ಆರಂಭವಾಗಿದೆ. ಇದರ ಬೆನ್ನಲ್ಲೇ ಇಡೀ ವಿದ್ಯಾಜ್ಯೋತಿ ನಗರ ಸ್ಲಂ ಖಾಲಿ ಮಾಡಿಸಲಾಗಿದೆ. ಕ್ವಾರಂಟೈನ್‌ನಲ್ಲಿದ್ದ 9 ಮಂದಿಗೆ ಕೊರೋನಾ ಸೋಂಕು ತಗುಲಿರುವುದು ಖಚಿತವಾಗಿದೆ. 

"

ಇನ್ನು ವಿದ್ಯಾಜ್ಯೋತಿ ನಗರದ ಇಡೀ ಹೊಂಗಸಂದ್ರ ಸ್ಲಂಗೆ ಬಿಬಿಎಂಪಿ ಔಷಧಿ ಸಿಂಪಡಿಸಿದೆ. 

"

 


 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕೊಡಗಿನ ಇತಿಹಾಸದಲ್ಲೇ ಮೊದಲ ಬಾರಿಗೆ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿದ ಕೋರ್ಟ್! ಏನಿದು ಪ್ರಕರಣ?
ಡೆಲಿವರಿ ಬಾಯ್ಸ್‌ಗೆ ಲಿಫ್ಟ್ ಬಳಸಬೇಡಿ ಎಂದ ಮೇಘನಾ ಫುಡ್ಸ್; ಪೋಸ್ಟರ್ ವೈರಲ್‌ ಆಗ್ತಿದ್ದಂತೆ ಕ್ಷಮೆಯಾಚನೆ